Loading...
Larger font
Smaller font
Copy
Print
Contents
ಕ್ರಿಸ್ತನು ಮತ್ತು ಆತನ ದೂತರಿಗೂ ಹಾಗೂ ಸೈತಾನ ಮತ್ತು ಆತನ ದೂತರಿಗೂ ನಡುವಣ - Contents
 • Results
 • Related
 • Featured
No results found for: "".
 • Weighted Relevancy
 • Content Sequence
 • Relevancy
 • Earliest First
 • Latest First
  Larger font
  Smaller font
  Copy
  Print
  Contents

  ಅಧ್ಯಾಯ 39. - ಭೂಮಿಯು ಶೂನ್ಯವಾದದ್ದು

  ಆನಂತರ ನಾನು ಭೂಮಿಯನ್ನು ನೋಡಿದೆನು. ದುಷ್ಟರೆಲ್ಲಾ ಮರಣಿಸಿದ್ದರು, ಅವರ ದೇಹಗಳೆಲ್ಲಾ ಭೂಮಿಯ ಮೇಲೆ ಬಿದ್ದಿದ್ದವು. ಅವರು ದೇವರ ಕಡೆಯ ಏಳು ಉಪದ್ರವಗಳ ಕೋಪವನ್ನು ಅನುಭವಿಸಿದರು. ನಾಲಿಗೆಯನ್ನು ಕಚ್ಚಿಕೊಳ್ಳುತಾ ನೋವಿನಲ್ಲಿ ದೇವರನ್ನು ಶಪಿಸಿದರು. ಯೆಹೋವನ ಕೋಪಕ್ಕೆ ಪ್ರಮುಖ ಗುರಿಯಾದರು ಸುಳ್ಳು ಕುರುಬರು, ಅವರು ತಮ್ಮ ಕಾಲ ಮೇಲೆ ನಿಂತಾಗ ಕಣ್ಣುಗಳಲ್ಲಿ ಆಳವಾದ ಕುಳಿಗಳಿದ್ದವು, ನಾಲಗೆಯು ಸೇದಿಹೋಗಿತು. ದೇವರ ಧ್ವನಿಯಿಂದ ಭಕ್ತರೆಲ್ಲಾ ರಕ್ಷಿಸಲ್ಪಟ್ಟ ನಂತರ ದುಷ್ಟರ ಕೋಪವು ಅವರ ತಂಡದಲ್ಲೇ ಒಬ್ಬರಿನ್ನೊಬ್ಬರ ಮೇಲೆ ಹರಿಯಿತು. ಇಡೀ ಭೂಮಿಯು ರಕ್ತದ ಸುರಿಮಳೆಯಲ್ಲಿ ತೊಯ್ದಿದ್ದು ಸತ್ತದೇಹಗಳು ಒಂದು ಕಡೆಯಿಂದ ಮತ್ತೊಂದು ಕಡೆಯವರೆಗೆ ಚಲ್ಲಾಪಿಲ್ಲಿಯಾಗಿದ್ದವು.GCKn 287.1

  ಭೂಮಿಯು ಶೂನ್ಯಸ್ಥಿತಿಯಲ್ಲಿತು. ಭೂಕಂಪದಿಂದ ಪಟ್ಟಣ ಹಳ್ಳಿಗಳು ಕಂಪಿಸಿ ಗುಡ್ಡೆಯಂತೆ ಬದ್ದಿದ್ದವು. ಪರ್ವತವು ಸ್ಥಳಾಂತರಿಸಲ್ಪಟ್ಟಿದು ದೊಡ್ಡ ಡೊಂಗರಗಳಿದ್ದವು. ಸಮುದ್ರವು ದೊಡ್ಡ ಒರಟ ಕಲ್ಲುಗಳನ್ನು ಎಸೆದಿದ್ದು, ಭೂಮಿಯಿಂದಲೂ ಬಂಡೆಗಳು ಸೀಳಿಬಂದು ಎಲ್ಲಾ ಕಡೆಗೆ ಎರೆಚ್ಲ್ಪಟ್ಟಿದ್ದವು. ಭೂಮಿಯು ಶೂನ್ಯ ಮರುಭೂಮಿಯುಂತ್ತಿತ್ತು. ದೊಡ್ಡ ದೊಡ್ಡ ಮರಗಳು ಬುಡಸಮೇತ ಉರುಳಿಬಿದ್ದು ಹರಡಿಕೊಂಡಿತ್ತು. ಇದೇ ಸೈತಾನನ ಮನೆ, ತನ್ನ ದುಷ್ಟದೂತರೊಂದಿಗೆ ಸಾವಿರ ವರ್ಷ ನೆಲೆಸಬೇಕಾದ ಸ್ಥಳ, ದೇವರ ಆಜ್ಞೆಗಳ ವಿರುದ್ದ ಪ್ರತಿಭಟಿಸಿದುದರ ಪರಿಣಾಮ ನೋಡುತ್ತಾ ಛಿದ್ರಗೊಂಡ ಭೂಮಿಯ ಮೇಲಷ್ಟೇ ಅತ್ತಿಂದಿತ್ತ ಅವರೋ ಸುತ್ತಾಡುವರು. ಸೈತಾನನು, ಈ ಸಾವಿರ ವರ್ಷಗಳು ತಾನೇ ಮಾಡಿದ ಈ ಶಾಪದ ಪ್ರತಿಫಲವನ್ನು ಅನುಭವಿಸುವನು. ಅವನು ಭೂಮಿಗೆ ಮಾತ್ರ ಸೀಮಿತನಾಗಿದ್ದು ಪಾಪಕ್ಕೆ ಬೀಳದ ಇತರ ಲೋಕದವರನ್ನು ಪೀಡಿಸಲು ಅವಕಾಶವಿಲ್ಲದವನಾಗಿರುವನು. ಈ ಕಾಲಾಅವಧಿಯಲ್ಲಿ ಸೈತಾನನು ತೀವ್ರವಾಗಿ ಯಾತನೆ ಪಡುವನು. ಅವನು ಭೂಮಿಗೆ ಬಿದ್ದಾಗಿನಿಂದ ದುಷ್ಟ ಸ್ವಭಾವಗಳು ಸತತ ಕ್ರಿಯಾಶೀಲವಾಗಿದ್ದವು. ನಂತರ ತನ್ನೆಲ್ಲಾ ಶಕ್ತಿಸಾಮರ್ಥ್ಯದಿಂದ ವಂಚಿತನಾಗಿ ತಾನು ಬಿದ್ದಾಗಿನಿಂದ ನಡೆಸಿದ ಕಾರ್ಯಗಳನ್ನು ಮನಗಾಣುವನು ಮತ್ತು ನಡೆಸಿದ ದುಷ್ಟತನಕ್ಕೆ ಯಾತನೆ ಪಡುವನು, ನಡೆಸಿದ ಎಲ್ಲಾ ಪಾಪಗಳಿಗೆ ಶಿಕ್ಷಿಸಲ್ಪಡುವ ತನ್ನ ಭಯಂಕರ ಭವಿಷ್ಯವನ್ನು ಯೋಚಿಸಿ ನಡುಗುವನು.GCKn 287.2

  ಆನಂತರ ದೇವದೂತರು ಹಾಗೂ ವಿಮೋಚನೆಗೊಂಡ ಭಕ್ತರ ವಿಜಯೋತ್ಸವನ್ನು ನಾನು ಕಂಡೆನು. ಅದು ಹತ್ತು ಸಾವಿರ ವಾಧ್ಯಗಳನ್ನು ಝೇಂಕಾರದಂತ್ತಿತ್ತು ಏಕೆಂದರೆ ಇನ್ನು ಮುಂದೆ ಪಿಶಾಚನಿಂದ ಅವರಿಗೆ ಯಾವ ಶೋಧನೆಯಾಗಲಿ ತೊಂದರೆಯಾಗಲೀ ಆಗದು. ಅವನ ಸಮಕ್ಷಮ ಮತ್ತು ಶೋಧನೆಗಳಿಂದ ಇತರ ಲೋಕದ ನಿವಾಸಿಗಳು ದೂರವಿರುವರು’ GCKn 288.1

  ಆನಂತರ ನಾನು ಯೇಸು ಮತ್ತು ವಿಮೋಚನೆಗೊಂಡ ಭಕ್ತರೂ ಸಿಂಹಸನಗಳಲ್ಲಿ ಕುಳಿತಿರುವುದನ್ನು ಕಂಡೆನು. ಭಕ್ತರು ರಾಜರಂತೆ ಅಧಿಪತಿಮಾಡುತ್ತಾ ದೇವರಿಗೆ ಯಾಜಕರಾಗಿದ್ದರು. ಸತ್ತ ದುಷ್ಟರಿಗೆ ನ್ಯಾಯವಿಚಾರಣೆಯಾಯಿತು. ಅವರಕ್ರಿಯಾಗಳು ದೇವರ ವಾಕ್ಯದ ಪಟ್ಟಿಗೆ ಅನುಸಾರಾವಾಗಿ ಅವರವರ ನಡೆತೆಯ ಪ್ರಕಾರ ಪ್ರತಿಫಲವು ಕೊಟ್ಟಿಲ್ಪಟ್ಟಿತು. ಯೇಸು ಭಕ್ತರೊಡಗೂಡಿ ಮರಣದ ಪುಸ್ತಕದಲ್ಲಿ ಅವರ ಹೆಸರಿನ ಮುಂದೆ ದಾಖಲೆಗೊಂಡ ಪ್ರಕಾರ ಶಿಕ್ಷಿಯು ವಿಧಿಸಲ್ಪಟ್ಟಿತು. ಸೈತಾನನು ಹಾಗೂ ಆತನ ದೂತರಿಗೂ ಸಹ ಯೇಸು ಹಾಗೂ ಭಕ್ತರು ತೀರ್ಪು ಜಾರಿಗೊಳಿಸಿದರು. ಸೈತಾನನ ಶಿಕ್ಷೆಯು, ಆತನು ವಂಚಿಸಿದವಗಿಂತ ಹೋಲಿಸಲಾಗದಷ್ಟು ಹೆಚ್ಚಾಗಿತ್ತು. ಆತನ ವಂಚನೆಗೊಳಗಾದವರೆಲ್ಲಾ ನಾಶವಾದ ಮೇಲೂ ಸಹ ಸೈತಾನನು ಜೀವಿಸಿ ಸಂಕಟಪಡುತ್ತಲೇ ಇರಬೇಕಾಯಿತು.GCKn 289.1

  ಸತ್ತ ದುಷರ ತೀರ್ಪಾದ ಮೇಲೆ, ಸಾವಿರ ವರ್ಷದ ಅಂತ್ಯದಲ್ಲಿ ಯೇಸುವು ಪರಲೋಕವನ್ನು ಬಿಟ್ಟು ದೂತಗಣಗಳ ದೊಡ್ಡ ಸಮೂಹದೊಂದಿಗೆ ಭಕ್ತರೊಡಗೂಡಿ ಮಹಾ ಪರ್ವತದ ಮೇಲೆ ಇಳಿದು ಬಂದಾಗ, ಆತನ ಕಾಲು ಗಳು ತಾಕಿದ್ದೇ ತಡ ಪರ್ವತವು ಇಬ್ಬಾಗವಾಗಿ ಮಹಾಬಯಾಲಯಿತು. ನಂತರ ಕಣ್ಣುಗಳನ್ನೆತ್ತಿ ನೋಡಲು ಸುಂದರವಾದ ಮಹಾಪಟ್ಟನವು, ಹನೆರಡು ಹಸ್ಥಿತಿವಾರವು, ಹನ್ನೆರಡು ಬಾಗಿಲುಗಳೂ ಪ್ರತಿದಿಕ್ಕಿನಲ್ಲೂ ಮೂರು ಮೂರರಂತೆ ಇದ್ದು ಒರ್ವ ದೂತನು ಪ್ರತಿ ಬಾಗಿಲಿನಲ್ಲೂ ಇದ್ದನು. ನಾವೆಲ್ಲಾ, ಪಟ್ಟಣ!! ಮಹಾಪಟ್ಟಣ!! ಪರಲೋಕದಿಂದ ಇಳಿದು ಬರುತ್ತದೆ!! ಎಂದು ಕೂಗಿದವು. ಅದು ತನ್ನಲ್ಲಾ ರಾಜವೈಭವದಿಂದ ಪ್ರಕಾಶಿಸುವ ಮಹಿಮೆಯಿಂದ ಯೇಸುವಿ ಸಿದ್ದಪಡಿಸಿದ್ದ ಆ ಮಹಾ ಬಯಾಲಿಗೆ ಬಂದು ಇಳಿಯಿತು.GCKn 289.2

  ಓದಿ: ಜಕರ್ಯ 14: 4-12 ಪ್ರಕಟನೆ 20:2-6, 12; 21:10-27GCKn 290.1

  Larger font
  Smaller font
  Copy
  Print
  Contents