Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಮುಂದೆ ಬರಲಿರುವ ಘಟನೆಗಳು ದೇವರ ಹತೋಟಿಯಲ್ಲಿವೆ

    ದೇವರು ಈ ಲೋಕದ ಅಧಿಪತಿಯಾಗಿದ್ದಾನೆ ಹಾಗೂ ಮುಂದೆ ಬರಲಿರುವ ಘಟನೆಗಳು ಆತನ ಹತೋಟಿಯಲ್ಲಿವೆ. ಪರಲೋಕದ ರಾಜಾಧಿರಾಜನು ದೇಶದೇಶಗಳ ಅಂತಿಮಸ್ಥಿತಿಯ ಬಗ್ಗೆ ತಿಳಿದಿದ್ದಾನೆ ಹಾಗೂ ತನ್ನ ಸಭೆಯ ಬಗ್ಗೆ ಕಾಳಜಿ ಹೊಂದಿದ್ದಾನೆ (ಟೆಸ್ಟಿಮೊನೀಸ್ ಫಾರ್ ದಿ ಚರ್ಚ್ ಸಂಪುಟ 5, ಪುಟ 753 (1889).ಕೊಕಾಘ 16.3

    ಇಸ್ರಾಯೇಲ್ಯರಿಗೆ ಮರಣ ತಂದ ವಿಷಪೂರಿತ ಸರ್ಪಗಳಂತ ಮನಸ್ಸಿಗೆ ಅಥವಾ ಕಲ್ಪನೆಗಳಿಗೆ ಸ್ಪಷ್ಟವಾಗಿ ಕಾಣುವಂತ ಈ ಸಂದೇಶಗಳು ಎರಡು ಉದ್ದೇಶಗಳನ್ನು ಹೊಂದಿವೆ. ಇವುಗಳಿಂದ ದೇವರ ಮಕ್ಕಳು ಈ ಲೋಕದ ಭೌತಿಕ (Physical) ಶಕ್ತಿಗಳು ಸೃಷ್ಟಿಕರ್ತನ ಅಧೀನದಲ್ಲಿವೆ ಎಂಬುದನ್ನು ಮಾತ್ರವಲ್ಲದೆ, ಜಗತ್ತಿನ ಧಾರ್ಮಿಕ ಚಳುವಳಿಗಳೂ ಸಹ ಆತನ ಹತೋಟಿಯಲ್ಲಿವೆ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಅದರಲ್ಲಿಯೂ ವಿಶೇಷವಾಗಿ ಕಡ್ಡಾಯವಾಗಿ ಭಾನುವಾರಾಚರಣೆ ಜಾರಿಯಾಗುವ ವಿಷಯದಲ್ಲಿ ಇದು ಸತ್ಯವಾಗಿದೆ (1902). ಕ್ರಿಸ್ತನ ಬರೋಣದ ಸಮಯದಲ್ಲಿ ಸಂಭವಿಸುವ ಕಾರ್ಯಗಳು ನಮಗೆ ದಿಗ್ಭ್ರಮೆ ಹುಟ್ಟಿಸುತ್ತವೆ ಹಾಗೂ ಅವುಗಳನ್ನು ಹೇಗೆ ಎದುರಿಸಬೇಕೆಂದು ತಿಳಿಯುವುದಿಲ್ಲ. ಆದರೆ ಪರಲೋಕದ ತ್ರೈಯೇಕದೇವರ ದೈವೀಕ ಹಸ್ತವು ಎಲ್ಲವುಗಳ ಮೇಲೆ ಹತೋಟಿ ಹೊಂದಿದೆ ಹಾಗೂ ಆತನ ಉದ್ದೇಶಗಳು ನೆರವೇರುತ್ತವೆಂಬುದನ್ನು ನಾವು ಮರೆಯಬಾರದು (ಎವಾಂಜಲಿಸು ಪುಟ 65, 1902), ಜನಾಂಗಗಳು ಹಾಗೂ ದೇಶಗಳ ನಡುವೆ ಎಂತಹ ಗಲಭೆ, ಕಚ್ಚಾಟಗಳು, ಉದ್ರಿಕ ಪರಿಸ್ಥಿತಿ ಇದ್ದಾಗ್ಯೂ, ಕೆರೂಬಿಗಳ ಮೇಲೆ ಆಸೀನನಾಗಿರುವಾತನು, ಈ ಲೋಕದ ಎಲ್ಲ ಘಟನೆಗಳನ್ನು ನಿಯಂತ್ರಿಸುತ್ತಾನೆ (ಎಜುಕೇಷನ್ ಪುಟ 178 (1903).ಕೊಕಾಘ 16.4

    ಮಾನವ ಇತಿಹಾಸದ ಘಟನಾವಳಿಗಳಲ್ಲಿ ದೇಶಗಳ ಬೆಳವಣಿಗೆ, ಸಾಮ್ರಾಜ್ಯಗಳ ಉದಯ ಹಾಗೂ ಪತನ ಮನುಷ್ಯನ ಶೌರ್ಯದ ಮೇಲೆ ಆಧಾರಗೊಂಡಿದೆ ಎಂಬಂತೆ ಕಂಡುಬರಬಹುದು. ಆದರೆ ದೇವರ ವಾಕ್ಯದಲ್ಲಿ ಸ್ಪಷ್ಟವಾಗಿ ತಿಳಿಸಲ್ಪಟ್ಟಿರುವಂತೆ ಮನುಷ್ಯನ ಇತಿಹಾಸದ ಒಂದೊಂದು ಘಟ್ಟದಲ್ಲಿಯೂ, ಕರುಣಾಮಯನಾದ ದೇವರು, ತಾಳ್ಮೆಯಿಂದಲೂ ಹಾಗೂ ಮೌನವಾಗಿಯೂ ತನ್ನ ಚಿತ್ರದಂತೆ ಎಲ್ಲವನ್ನೂ ನಿರ್ಧರಿಸಿದ್ದಾನೆ.ಕೊಕಾಘ 16.5