Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ನಮ್ಮನ್ನು ಬೆರಗುಗೊಳಿಸುವ ಸಾಧನಗಳನ್ನು ದೇವರು ಉಪಯೋಗಿಸುತ್ತಾನೆ

    ಕರ್ತನಾದ ದೇವರು ಈ ಕೊನೆಯ ಕಾರ್ಯದಲ್ಲಿ ಸಾಮಾನ್ಯವಾದ ರೀತಿಯಲ್ಲಿ ಹಾಗೂ ಮನುಷ್ಯರ ಯೋಜನೆಗೆ ಸಂಪೂರ್ಣವಾಗಿ ವ್ಯತಿರಿಕ್ತವಾಗಿರುವ ರೀತಿಯಲ್ಲಿ ಕಾರ್ಯ ಮಾಡುತ್ತಾನೆ. ನಮ್ಮಲ್ಲಿ ಕೆಲವರು ದೇವರ ಕೆಲಸವನ್ನು ಯಾವಾಗಲೂ ನಿಯಂತ್ರಿಸಬೇಕೆಂದು ಬಯಸುತ್ತಾರೆ. ಅಲ್ಲದೆ ಲೋಕಕ್ಕೆ ಕೊಡಬೇಕಾದ ಸಂದೇಶದಲ್ಲಿ ಮೂರನೇ ದೂತನೊಂದಿಗೆ ಸೇರಿದ ದೇವದೂತನ ಮಾರ್ಗದರ್ಶನದಲ್ಲಿ ಮುಂದುವರಿಯುತ್ತಿರುವ ಸೇವೆಯನ್ನೂ ಸಹ ನಿರ್ದೇಶಿಸಬೇಕೆಂದು ಅವರು ಇಚ್ಛಿಸುತ್ತಾರೆ. ದೇವರು ತನ್ನದೆ ಆದ ವಿಧಾನಗಳು ಹಾಗೂ ಸಾಧನಗಳನ್ನು ಉಪಯೋಗಿಸಿ, ಸುವಾರ್ತೆಯ ಸೇವೆಯನ್ನು ತನ್ನ ಅಧೀನಕ್ಕೆ ತೆಗೆದುಕೊಂಡಿದ್ದೇನೆಂದು ತೋರಿಸುತ್ತಾನೆ. ಆತನು ತನ್ನ ನೀತಿಯ ಕಾರ್ಯವನ್ನು ಪರಿಪೂರ್ಣಗೊಳಿಸಲು ಉಪಯೋಗಿಸುವ ಸರಳ ವಿಧಾನಗಳನ್ನು ಕಂಡು ದೇವರ ಸೇವಕರು ಆಶ್ಚರ್ಯಗೊಳ್ಳುವರು (ಟೆಸ್ಟಿಮೊನೀಸ್‌ ಟು ಮಿನಿಸ್ಟರ್ಸ್, ಪುಟ 300, 1885).ಕೊಕಾಘ 117.5

    ಭವಿಷ್ಯಕ್ಕಾಗಿ ಯೋಜನೆ ಹಾಕಿಕೊಳ್ಳುವುದು ಸಾಧ್ಯವೆಂದು ಊಹಿಸಿಕೊಳ್ಳಬೇಡಿ. ಎಲ್ಲಾ ಸಮಯದಲ್ಲಿಯೂ ಹಾಗೂ ಎಲ್ಲಾ ಸನ್ನಿವೇಶಗಳಲ್ಲಿಯೂ ದೇವರು ಹತೋಟಿ ಹೊಂದಿದ್ದಾನೆಂದು ನೆನಪಿಡಿ. ಆತನು ಸೂಕ್ತವಾದ ಸಾಧನಗಳ ಮೂಲಕ ಕಾರ್ಯ ಮಾಡುತ್ತಾನೆ, ಹಾಗೂ ಅದನ್ನು ಅಭಿವೃದ್ಧಿಪಡಿಸಿ ತನ್ನ ಜನರನ್ನು ಉನ್ನತ ಸ್ಥಿತಿಗೆ ತರುವನು (ಕೌನ್ಸೆಲ್ ಟು ರೈಟರ್ಸ್, ಪುಟ 71, 1885).ಕೊಕಾಘ 118.1

    ದೇವರು ಕಳುಹಿಸಿಕೊಡುವ ಸಹಾಯಕನು ಅಂದರೆ ಸತ್ಯದ ಆತ್ಮನು ಮನುಷ್ಯನು ಅರಿತುಕೊಳ್ಳುವಂತ ನಿರ್ದಿಷ್ಟವಾದ ರೀತಿಯಲ್ಲಿ ತನ್ನನ್ನು ಪ್ರಕಟಪಡಿಸಿಕೊಳ್ಳುವುದಿಲ್ಲ, ಬದಲಾಗಿ ದೇವರ ಕ್ರಮದ ಪ್ರಕಾರ, ಅನಿರೀಕ್ಷಿತವಾದ ರೀತಿಯಲ್ಲಿ ಹಾಗೂ ಸಮಯದಲ್ಲಿ ತನ್ನ ಹೆಸರಿಗೆ ಗೌರವ ಬರುವಂತೆ ಕಾಣಿಸಿಕೊಳ್ಳುವನು. ಹೊಸ ಒಡಂಬಡಿಕೆಯ ಕಾಲದಲ್ಲಿ ಬೆಸ್ತರನ್ನು ತನ್ನ ಶಿಷ್ಯರನ್ನಾಗಿ ಮಾಡಿಕೊಂಡಂತೆ, ಕ್ರಿಸ್ತನು ತನ್ನ ಸೇವೆ ಮಾಡಲು ಸಾಮಾನ್ಯರಾದ ಸ್ತ್ರೀ ಪುರುಷರನ್ನು ಜನರ ನಡುವೆಯಿಂದ ಆರಿಸಿಕೊಳ್ಳುವನು. ಅನೇಕರನ್ನು ಆಶ್ಚರ್ಯಗೊಳಿಸುವಂತ ಒಂದು ಧಾರ್ಮಿಕ ಜಾಗೃತಿಯು ಶೀಘ್ರದಲ್ಲಿಯೇ ಉಂಟಾಗುವುದು. ಇದಕ್ಕೆ ಕಿವಿಗೊಡದವರು ನಾಶವಾಗುವರು. ಪರಲೋಕದ ಸಂದೇಶಕರು ಸಾಮಾನ್ಯಜನರೆಂದು ಕರೆಸಿಕೊಳ್ಳುವವರನ್ನು ಅನೇಕ ಸ್ಥಳಗಳಿಗೆ ಸತ್ಯವನ್ನು ಸಾರುವುದಕ್ಕೆ ಯೋಗ್ಯರನ್ನಾಗಿ ಮಾಡುವರು (ಮ್ಯಾನುಸ್ಕ್ರಿಪ್ಟ್ ರಿಲೀಸ್ 15, ಪುಟ 312, 1905).ಕೊಕಾಘ 118.2