Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ನಗರಗಳಲ್ಲಿರುವ ಕಾರ್ಮಿಕ ಸಂಘಟನೆಗಳು

    ಕಾರ್ಮಿಕ ಸಂಘಟನೆಗಳು ಈ ಜಗತ್ತು ಉಂಟು ಮಾಡಲ್ಪಟ್ಟ ದಿನದಿಂದ ಕಂಡುಬರದಿದ್ದಂತ ಸಂಕಟದ ಸಮಯವನ್ನು ಲೋಕಕ್ಕೆ ತರುವ ಸಂಸ್ಥೆಗಳಲ್ಲಿ ಒಂದಾಗಿದೆ. ಕೆಲವು ಜನರು ಒಟ್ಟಾಗಿ ಒಂದು ನಿರ್ದಿಷ್ಟವಾದ ವ್ಯಾಪಾರ ವ್ಯವಹಾರಗಳನ್ನು ತಮ್ಮ ಕೈಗೆ ತೆಗೆದುಕೊಳ್ಳುವರು, ಕಾರ್ಮಿಕ ಸಂಘಟನೆಗಳನ್ನು ಮಾಡಿಕೊಳ್ಳುವರು. ಈ ಸಂಘಟನೆಗಳನ್ನು ಸೇರಲು ನಿರಾಕರಿಸುವವರನ್ನು ಸ್ಪಷ್ಟವಾಗಿ ಗುರುತಿಸಬಹುದಾದ ವ್ಯಕ್ತಿಗಳೆಂದು ಎಣಿಸಲ್ಪಡುವರು. ಈ ಕಾರ್ಮಿಕ ಸಂಘಟನೆಗಳು ಹಾಗೂ ಒಕ್ಕೂಟಗಳ ಕಾರಣದಿಂದ ನಗರಗಳಲ್ಲಿ ನಮ್ಮ ಸಂಸ್ಥೆಗಳು ತಮ್ಮ ಕಾರ್ಯನಿರ್ವಹಿಸಲು ಶೀಘ್ರದಲ್ಲಿಯೇ ಬಹಳ ಕಷ್ಟವಾಗುವುದು. ನಗರಗಳಿಂದ ದೂರ ಹೋಗಿರಿ ಹಾಗೂ ಅಲ್ಲಿ ಆಸ್ಪತ್ರೆಗಳನ್ನು ಕಟ್ಟಬಾರದು ಎಂಬುದೇ ನಾನು ಕೊಡುವ ಎಚ್ಚರಿಕೆಯಾಗಿದೆ ಎಂದು ಶ್ರೀಮತಿ ವೈಟಮ್ಮನವರು ಹೇಳಿದ್ದಾರೆ (ಸೆಲೆಕ್ಟೆಡ್ ಮೆಸೇಜಸ್, ಸಂಪುಟ 2, ಪುಟ 142, 1903). ಕಾರ್ಮಿಕ ಸಂಘಟನೆಗಳ ಶಕ್ತಿಯು ಬಹಳ ಕ್ರೂರವಾಗಿ ದಬ್ಬಾಳಿಕೆ ನಡೆಸುವ ಸಮಯವು ಶೀಘ್ರವಾಗಿ ಬರಲಿದೆ (ಪುಟ 141).ಕೊಕಾಘ 67.1