Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಏಳಿರಿ, ನಿದ್ರೆಯಲ್ಲಿರುವವರೇ, ಎಚ್ಚರಗೊಳ್ಳಿ

    ಕ್ರಿಸ್ತನನ್ನು ಆವರಿಸಿಕೊಂಡಿದ್ದ ದಟ್ಟವಾದ ಕಪ್ಪು ಮೋಡಗಳು, ಸುರುಳಿಯಂತೆ ಸುತ್ತಲ್ಪಟ್ಟು, ಮನುಷ್ಯಕುಮಾರನು ಈಗ ಸಷ್ಟವಾಗಿ ಕಂಡುಬರುವನು. ಆ ಮೋಡವು ಏನೆಂದು ದೇವರ ಮಕ್ಕಳಿಗೆ ಚೆನ್ನಾಗಿ ತಿಳಿದಿದೆ. ಮಧುರವಾದ ಸಂಗೀತವು ಕೇಳಿ ಬರುವುದು. ಮೋಡವು ಹತ್ತಿರ ಬರುತ್ತಿದ್ದಂತೆ, ಸಮಾಧಿಗಳು ತೆರೆಯಲ್ಪಟ್ಟು, ಕ್ರಿಸ್ತನಲ್ಲಿ ಸತ್ತವರು ಪುನರುತ್ಥಾನ ಹೊಂದುವರು. ಅದಕ್ಕೆ ಆಶ್ಚರ್ಯಪಡಬೇಡಿರಿ: ಸಮಾಧಿಗಳಲ್ಲಿರುವವರೆಲ್ಲರು ಆತನ (ದೇವಕುಮಾರನ ಧ್ವನಿಯನ್ನು ಕೇಳಿ ಎದ್ದು ಹೊರಗೆ ಬರುವ ಕಾಲ ಬರುತ್ತದೆ... (ಯೋಹಾನ 5:25, 28, 29), ಈ ಧ್ವನಿಯು ಲೋಕದಾದ್ಯಂತ ಕೇಳಿ ಬಂದಾಗ, ಭಕ್ತರಾಗಿ ಕ್ರಿಸ್ತನಲ್ಲಿ ನಿದ್ರೆ ಹೋಗಿರುವ ಪ್ರತಿಯೊಬ್ಬರೂ ಸಮಾಧಿಯಿಂದ ಹೊರಗೆ ಬರುವರು, ಆದಾಮನಿಂದ ಹಿಡಿದು ಕೊನೆಯವನಾಗಿ ಮರಣ ಹೊಂದಿರುವ ಭಕ್ತರು, ದೇವಕುಮಾರನ ಸ್ವರವನ್ನು ಕೇಳಿ ಅಮರತ್ವ ಧರಿಸಿಕೊಳ್ಳಲು ಸಮಾಧಿಯಿಂದ ಎದ್ದುಬರುವರು (ದಿ ಡಿಸೈರ್ ಆಫ್ ಏಜಸ್, ಪುಟ 606).ಕೊಕಾಘ 161.5

    ಲೋಕವು ಅತ್ತಿಂದಿತ್ತ ತೂಗಾಡುತ್ತಿರುವಾಗ, ಮಿಂಚು, ಸಿಡಿಲು, ಗುಡುಗುಗಳು ಅಬ್ಬರಿಸುತ್ತಿರುವಾಗ ದೇವಕುಮಾರನು ತನ್ನಲ್ಲಿ ನಿದ್ರೆ ಹೋಗಿರುವ ಭಕ್ತರನ್ನು ಕರೆಯುತ್ತಾನೆ. ನೀತಿವಂತರ ಸಮಾಧಿಗಳ ನೋಡುತ್ತಾ ಪರಲೋಕದ ಕಡೆಗೆ ತನ್ನ ಕೈಗಳನ್ನೆತ್ತಿ “ಎಚ್ಚರಗೊಳಿ, ಎಚ್ಚರಗೊಳ್ಳಿ, ದೂಳಿನಲ್ಲಿ ನಿದ್ರಿಸುತ್ತಿರುವವರೇ ಎದ್ದೇಳಿ” ಎಂದು ಮಹಾಶಬ್ದದಿಂದ ಕ್ರಿಸ್ತನು ಹೇಳುತ್ತಾನೆ. ಲೋಕದ ಉದ್ದಗಲಕ್ಕೂ ಭಕ್ತರಾಗಿ ಮರಣ ಹೊಂದಿರುವವರು ಆತನ ಸ್ವರವನ್ನು ಕೇಳುವರು, ಕ್ರಿಸ್ತನ ಸ್ವರವನ್ನು ಕೇಳಿದವರು ಬದುಕುವರು. ಸಕಲ, ಜನಾಂಗ, ಕುಲ, ಪ್ರಜೆ, ಭಾಷೆಗಳಿಗೆ ಸೇರಿದ ನೀತಿವಂತರು ಪುನರುತ್ಥಾನಗೊಂಡು ಅತ್ಯಧಿಕವಾಗಿ ಯಾರಿಂದಲೂ ಎಣಿಸಲಾರದಷ್ಟು ಸಂಖ್ಯೆಯಲ್ಲಿರುವರು, ಅವರ ಕಾಲುಗಳ ಶಬ್ದವು ಜಗತ್ತಿನಾದ್ಯಂತ ಮೊಳಗುತ್ತದೆ. ಅವರು ಮರಣದ ಸೆರೆಮನೆಯಿಂದ ಬಂದು ಅಮರತ್ವವನ್ನು ಧರಿಸಿಕೊಂಡು “ಮರಣವೇ, ನಿನ್ನ ಜಯವೆಲ್ಲಿ? ಮರಣವೇ, ನಿನ್ನ ವಿಷದ ಕೊಂಡಿ ಎಲ್ಲಿ?’ ಎಂದು ಕೇಳುವರು (1 ಕೊರಿಂಥ 15:55), ಜೀವಂತರಾಗಿರುವ ನೀತಿವಂತರು ಮಾರ್ಪಟ್ಟು, ಪುನರುತ್ಥಾನಗೊಂಡ ಭಕ್ತರೊಂದಿಗೆ ಸೇರಿ ಒಂದಾಗಿ ಜಯಘೋಷ ಮಾಡುವರು (ಗ್ರೇಟ್ ಕಾಂಟ್ರೊವರ್ಸಿ.644).ಕೊಕಾಘ 162.1