Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಆರನೇ ಉಪದ್ರವ

    ಸೈತಾನನ ದೆವ್ವಗಳ ದುರಾತ್ಮಗಳು ಭೂಲೋಕದ ರಾಜರುಗಳು ಹಾಗೂ ಸಮಸ್ತ ಲೋಕಕ್ಕೆ ಹೋಗಿ ಅವರನ್ನು ವಂಚಿಸುತ್ತವೆ ಹಾಗೂ ಪರಲೋಕದ ಸರ್ಕಾರದ ವಿರುದ್ಧವಾದ ಸೈತಾನನ ಕೊನೆಯ ಹೋರಾಟದಲ್ಲಿ ಅವನೊಂದಿಗೆ ಸೇರುವಂತೆ ಅವರನ್ನು ಒತ್ತಾಯಿಸುತ್ತವೆ (ಗ್ರೇಟ್ ಕಾಂಟ್ರೊವರ್ಸಿ 624),ಕೊಕಾಘ 145.4

    ದೇವರ ಆತನು ಕ್ರಮೇಣವಾಗಿ ಈ ಲೋಕದಿಂದ ತೆಗೆಯಲ್ಪಡುವರು. ಸೈತಾನನೂ ಸಹ ಭೂಲೋಕದಲ್ಲಿರುವ ರಾಜರ ಬಳಿಗೆ ಹೋಗಿ ಸರ್ವಶಕ್ತನಾದ ದೇವರ ಮಹಾದಿನದಲ್ಲಾಗುವ ಯುದ್ದಕ್ಕೆ ಅವರನ್ನು ಕೂಡಿಸುವನು (ಪ್ರಕಟನೆ 16:14). ಈ ವಾಕ್ಯದಲ್ಲಿ ಮಹತ್ಕಾರ್ಯಗಳನ್ನು ಮಾಡುವ ದೆವ್ವಗಳು ಮಹಾ ಹೋರಾಟಕ್ಕೆ ಜನರನ್ನು ಕೂಡಿಸುತ್ತವೆಂದು ಯೋಹಾನನು ವಿವರಿಸಿದ ನಂತರ ‘ಇಗೋ ಕಳ್ಳನು ಬರುವಂತೆ ಬರುತ್ತೇನೆ. ತಾನು ನಿರ್ವಾಣನಾಗಿ ತಿರುಗಾಡಿ ಅವಮಾನಕ್ಕೆ ಗುರಿಯಾದೇನೆಂದು ಎಚ್ಚರವಾಗಿದ್ದು ತನ್ನ ವಸ್ತ್ರಗಳನ್ನು ಕಾಪಾಡಿಕೊಳ್ಳುವವನು ಧನ್ಯನು’ ಎಂದು ಕ್ರಿಸ್ತನ ಎರಡನೇ ಬರೋಣದ ವಿಷಯ ತಿಳಿಸಲ್ಪಟ್ಟಿದೆ. ಆದಾಮ ಹವ್ವಳು ಪಾಪ ಮಾಡಿದ ನಂತರ, ಅವರನ್ನು ಆವರಿಸಿಕೊಂಡಿದ್ದ ಬೆಳಕು ಮತ್ತು ಭದ್ರತೆಯ ಮಹಿಮೆಯ ಬೆಳಕು ಬಿಟ್ಟು ಹೋದದ್ದರಿಂದ ಅವರು ಬೆತ್ತಲೆಯಾದರು.ಕೊಕಾಘ 145.5

    ನೋಹನ ಕಾಲದಲ್ಲಿದ್ದವರು ಮತ್ತು ಸೊದೋಮ್ ಪಟ್ಟಣದ ಜನರು ದೇವರ ಬುದ್ದಿವಾದ ಹಾಗೂ ಎಚ್ಚರಿಕೆಗಳನ್ನು ತಿರಸ್ಕರಿಸಿದಂತೆ, ಈ ಲೋಕವೂ ಸಹ ಅವುಗಳನ್ನು ಮರೆಯುತ್ತದೆ. ಅವರು ತಮ್ಮೆಲ್ಲಾ ದುಷ್ಟಯೋಜನೆಯನ್ನು ಜಾರಿಗೆ ತರಲು ಪ್ರಯತ್ನಿಸುತ್ತಿರುವಾಗ, ತಕ್ಷಣದಲ್ಲಿಯೇ ಪರಲೋಕದಿಂದ ಬೆಂಕಿಯ ಮಳೆಯು ಸುರಿದು ಭಕ್ತಿಹೀನರಾದ ಅವರನ್ನು ದಹಿಸಿಬಿಡುವುದು. ‘ಮನುಷ್ಯಕುಮಾರನು ಪ್ರತ್ಯಕ್ಷನಾಗುವಾಗ ಅದೇ ರೀತಿಯಾಗಿ ಇರುವುದು’ (ಲೂಕ 17:30).ಕೊಕಾಘ 146.1