Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ದೇವರು ತನ್ನ ರಕ್ಷಣೆಯನ್ನು ಹಿಂತೆಗೆದುಕೊಂಡಾಗ, ತೀರ್ಪು ಬರುವುದು

    ದೇವರ ನ್ಯಾಯತೀರ್ಪು ಜನರ ಮೇಲೆ ಆತನಿಂದ ನೇರವಾಗಿ ಬರುವುದಿಲ್ಲ, ಆದರೆ ಈ ರೀತಿಯಲ್ಲಿ ಬರುತ್ತದೆ; ದುಷ್ಟರು ಸ್ವತಃ ತಾವೇ ದೇವರ ರಕ್ಷಣೆಯಿಂದ ದೂರವಿದ್ದಾರೆ. ಆತನು ಅವರಿಗೆ ಎಚ್ಚರಿಕೆ ನೀಡಿ ಗದರಿಸುತ್ತಾನೆ ಹಾಗೂ ಸುರಕ್ಷತೆಯ ಏಕೈಕ ಮಾರ್ಗ ಯಾವುದೆಂದು ತೋರಿಸುತ್ತಾನೆ. ಆದರೆ ಅನೇಕ ಬಾರಿ ಎಚ್ಚರಿಕೆ ನೀಡಿದ್ದರೂ ಸಹ ದೇವರಾತ್ಮನಿಗೆ ವಿರುದ್ಧವಾಗಿ ನಡೆದು ತಮ್ಮದೇ ಆದ ಸ್ವತಂತ್ರ ಮಾರ್ಗ ಆಯ್ಕೆ ಮಾಡಿಕೊಂಡಲ್ಲಿ ದೇವರು ಅವರ ರಕ್ಷಣೆಗೆ ದೇವದೂತರನ್ನು ನೇಮಿಸುವುದಿಲ್ಲ. ಆಗ ದುಷ್ಟರು ಸೈತಾನನ ದಾಳಿಯನ್ನು ತಡೆಯಲು ಶಕ್ತರಾಗುವುದಿಲ್ಲ.ಕೊಕಾಘ 141.4

    ಸಮುದ್ರ ಮತ್ತು ಭೂಮಿಯಲ್ಲಿ ಸೈತಾನನ ಶಕ್ತಿಯು ಕಾರ್ಯಮಾಡುತ್ತಿದೆ. ಇದರಿಂದಾಗಿ ನೈಸರ್ಗಿಕ ವಿಪತ್ತು ತೊಂದರೆಗಳುಂಟಾಗುತ್ತವೆ. ಜನರು ತನ್ನ ಬೇಟೆಯ ಪ್ರಾಣಿಗಳಾಗುವಂತೆ ಸೈತಾನನು ಖಚಿತಪಡಿಸಿಕೊಳ್ಳುತ್ತಾನೆ, ತಮ್ಮದೇ ಆದ ವಿನಾಶಕಾರಿ ಮಾರ್ಗಗಳನ್ನು ಅನುಸರಿಸಿ ದೇವರ ಸತ್ಯವನ್ನು ತಪ್ಪಾಗಿ ತಿಳಿಸುವವರು ತಪ್ಪು ತೀರ್ಮಾನ ಮಾಡುವವರು ಹಾಗೂ ಅಗೌರವಿಸುವವರನ್ನು ಶಿಕ್ಷಿಸಲು ದೇವರು ತನ್ನ ವೈರಿಗಳನ್ನು ಸಾಧನವನ್ನಾಗಿ ಉಪಯೋಗಿಸಿಕೊಳ್ಳುತ್ತಾನೆ (ದಿ ಪಾಲ್‌ಸನ್ ಕಲೆಕ್ಷನ್, ಪುಟ 136).ಕೊಕಾಘ 141.5

    ಅಪಮಾನ, ತಿರಸ್ಕಾರಕ್ಕೆ ಒಳಗಾದ ದೇವರಾತ್ಮನು ಆಗಲೇ ಈ ಲೋಕದಿಂದ ಹಿಂತೆಗೆಯಲ್ಪಟ್ಟಿದ್ದಾನೆ. ಪರಿಶುದ್ಧಾತ್ಮನು ಎಷ್ಟು ಬೇಗನೆ ತೆಗೆಯಲ್ಪಟ್ಟನೋ, ಅಷ್ಟೇ ವೇಗದಲ್ಲಿ ಸೈತಾನನು ಸಮುದ್ರ ಮತ್ತು ಭೂಮಿಯಲ್ಲಿ ವಿಪತ್ತು ಸಂಭವಿಸುವಂತೆ ಮಾಡುವ ತನ್ನ ಕ್ರೂರ ಕಾರ್ಯವನ್ನು ನಡೆಸುವನು. ದುಷ್ಟರು ತಮ್ಮ ಕೃಪಾಕಾಲದ ಗಡಿಯನ್ನು ದಾಟಿದ್ದಾರೆ; ಅವರು ನಿರಂತರವಾಗಿ ಧಿಕ್ಕರಿಸಿದ ಪರಿಶುದ್ಧಾತ್ಮನು ಅಂತಿಮವಾಗಿ ಈ ಲೋಕದಿಂದ ಹಿಂತೆಗೆಯಲ್ಪಟ್ಟಿದ್ದಾನೆ. ದೈವೀಕ ಕೃಪೆಯ ಆಶ್ರಯವಿಲ್ಲದ ಇವರನ್ನು ದುಷ್ಟರಿಂದ ಯಾರೂ ಸಹ ರಕ್ಷಿಸಲಾರರು (ಗ್ರೇಟ್ ಕಾಂಟ್ರೊವರ್ಸಿ, ಪುಟ 614).ಕೊಕಾಘ 141.6

    ಕೆಲವು ಸಮಯದಲ್ಲಿ ದೇವದೂತರು ವಿನಾಶಕಾರಿ ಶಕ್ತಿಯನ್ನು ತೋರಿಸುತ್ತಾರೆ. ದುಷ್ಯನಿಗೆ ಬಂದ ಶಿಕ್ಷೆಗೆ ಅವನೇ ಸಂಪೂರ್ಣ ಹೊಣೆಯಾಗಿದ್ದಾನೆ. ಈ ವಿಷಯವಾಗಿ ಶ್ರೀಮತಿ ವೈಟಮ್ಮನವರು ‘ದೇವರು ಯಾರನ್ನೂ ನಾಶಮಾಡುವುದಿಲ್ಲ; ಆದರೆ ಪಾಪಿಯು ತನ್ನ ಪಾಪದ್ರೋಹಕ್ಕೆ ಪಶ್ಚಾತ್ತಾಪ ಪಡದ ಕಾರಣದಿಂದ ತಾನೇ ನಾಶವಾಗುತ್ತಾನೆ’ ಎಂದು ಹೇಳುತ್ತಾರೆ (ಟೆಸ್ಟಿಮೊನೀಸ್‌ ಸಂಪುಟ 5, ಪುಟ 120).ಕೊಕಾಘ 142.1

    ಯೆರಿಕೋ ಪಟ್ಟಣಕ್ಕೆ ವಿರುದ್ಧವಾಗಿ ದೇವರ ನ್ಯಾಯತೀರ್ಪುಂಟಾಯಿತು. ಅದು ಬಹುಬಲವಾದ ಕೋಟೆ. ಆದರೆ ಸೇನಾಧೀಶ್ವರನಾದ ಕರ್ತನೇ ಪರಲೋಕದಿಂದ ತನ್ನ ಸೈನ್ಯದೊಡನೆ ಇಳಿದುಬಂದನು. ದೇವದೂತರು ಯರಿಕೋ ಪಟ್ಟಣದ ಬಲಿಷ್ಠ ಕೋಟೆಯನ್ನು ಕೆಡವಿ ನೆಲಸಮ ಮಾಡಿದರು (ಟೆಸ್ಟಿಮೊನೀಸ್, ಸಂಪುಟ 3, ಪುಟ 264, 1873).ಕೊಕಾಘ 142.2

    ದೇವರ ಅಧೀನದಲ್ಲಿರುವಾಗ ದೇವದೂತರು ಬಹು ಬಲಶಾಲಿಗಳಾಗಿರುತ್ತಾರೆ. ಕ್ರಿಸ್ತನ ಆಜ್ಞೆಗೆ ವಿಧೇಯರಾದ ಅವರು ಒಂದು ಸಂದರ್ಭದಲ್ಲಿ ಆಶ್ಚರ್ಯ ಸೈನ್ಯದ ಒಂದುಲಕ್ಷದ ಎಂಬತ್ತೈದು ಸಾವಿರ ಸೈನಿಕರನ್ನು ಕೊಂದರು. (ಡಿಸೈರ್‌ ಆಫ್ ಏಜಸ್, ಪುಟ 700), ಸೆರೆಯಲ್ಲಿದ್ದ ಪೇತ್ರನನ್ನು ರಕ್ಷಿಸಲು ಪರಲೋಕದಿಂದ ಬಂದ ಅದೇ ದೇವದೂತನು, ಹೆರೋದನನ್ನು ಸ್ಥಳದಲ್ಲಿಯೇ ನಾಶಮಾಡಿದನು. ನಿದ್ದೆಯಲ್ಲಿದ್ದ ಪೇತ್ರನನ್ನು ದೇವದೂತನು ತಟ್ಟೆ ಎಬ್ಬಿಸಿದನು. ಆದರೆ ಬೇರೆ ರೀತಿಯಾದ ಪೆಟ್ಟಿನಿಂದ ದುಷ್ಟನೂ, ಅಹಂಕಾರಿಯೂ ಆದ ಹೆರೊದನಿಗೆ ಸರ್ವಶಕ್ತನ ದಂಡನೆಯನ್ನು ನೀಡಿ ಕೊಂದನು. ಅರಸನಾದ ಹೆರೋದನು ದೇವರ ನ್ಯಾಯತೀರ್ಪಿನ ಶಿಕ್ಷೆಗೆ ಒಳಗಾಗಿ ಶರೀರ ಹಾಗೂ ಮನಸ್ಸಿನ ಮಹಾವೇದನೆಯಿಂದ ಸತ್ತನು (ಆಕ್ಸ್‌ ಆಫ್‌ ದಿ ಅಪೊಸ್ತಲ್ಸ್, ಪುಟ 152).ಕೊಕಾಘ 142.3

    ಒಬ್ಬನೇ ದೇವದೂತನು ಐಗುಪ್ತದೇಶದ ಎಲ್ಲಾ ಚೊಚ್ಚಲು ಮಕ್ಕಳನ್ನು ಮತ್ತು ಪಶುಗಳನ್ನು ನಾಶಪಡಿಸಿದಾಗ, ದೇಶದಲ್ಲೆಲ್ಲಾ ಮಹಾಗೋಳಾಟವುಂಟಾಯಿತು. ದಾವೀದ ರಾಜನು ದೇವರ ಚಿತ್ರಕ್ಕೆ ವಿರುದ್ಧವಾಗಿ ಖಾನೇಷುಮಾರಿ ಅಂದರೆ ಜನಗಣತಿ ನಡೆಸಿದಾಗ, ಒಬ್ಬ ದೇವದೂತನು ಅವನ ಶಿಕ್ಷೆಗೆ ದಂಡನೆ ನೀಡಿದಾಗ ಎಪ್ಪತ್ತು ಸಾವಿರ ಜನರು ಸತ್ತು ಭಯಂಕರವಾದ ನಾಶವುಂಟಾಯಿತು. ದೇವರ ಆದೇಶದಂತೆ ಪರಿಶುದ್ಧರಾದ ದೇವದೂತರು ತಮ್ಮ ವಿನಾಶಕಾರಿ ಶಕ್ತಿ ಉಪಯೋಗಿಸಿದಂತೆಯೇ, ಆತನು ಅನುಮತಿ ನೀಡಿದಾಗ, ಸೈತಾನನ ದೂತರೂ ಸಹ ಅಂತದ್ದೇ ವಿನಾಶಕಾರಿ ಕಾರ್ಯಗಳನ್ನು ಮಾಡುವರು. ಈ ದುಷ್ಟಶಕ್ತಿಗಳು ಲೋಕದಲ್ಲೆಲ್ಲಾ ನಾಶವುಂಟು ಮಾಡಲು ದೇವರ ಅನುಮತಿಗಾಗಿ ಕಾದುಕೊಂಡು ಸಿದ್ಧರಾಗಿದ್ದಾರೆ (ಗೇಟ್ ಕಾಂಟ್ರೊವರ್ಸಿ, ಪುಟ 614).ಕೊಕಾಘ 142.4