Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಗಂಭೀರವಾಗಿ ಪುನರಾಲೋಚನೆ ಮಾಡುವ ಸಮಯ

    ದೇವರಿಗೆ ಭಯಭಕ್ತಿಯಿಂದ ನಡೆಯುವವರು ಗಂಭೀರವಾಗಿ ಪುನರಾಲೋಚನೆ ಮಾಡಬೇಕಾದ ಸಮಯವು ಇದಾಗಿದೆ. ‘ನಾನು ಯಾರು? ಈ ಕಾಲದಲ್ಲಿ ನನ್ನ ಕಾರ್ಯ ಮತ್ತು ಸೇವೆ ಯಾವುದು? ನಾನು ಕ್ರಿಸ್ತನು ಅಥವಾ ಸೈತಾನನು ಇವರಿಬ್ಬರಲ್ಲಿ ಯಾರ ಪರವಾಗಿ ಕೆಲಸ ಮಾಡುತ್ತಿದ್ದೇನೆ? ನಾವು ಈಗ ಪರಲೋಕದ ದೇವದರ್ಶನ ಗುಡಾರದಲ್ಲಿ ನಡೆಯುತ್ತಿರುವ ಮಹಾದೋಷ ಪರಿಹಾರಕ ದಿನದ ಸಮಯದಲ್ಲಿ ಖಂಡಿತವಾಗಿಯೂ ಜೀವಿಸುತ್ತಿರುವುದರಿಂದ, ದೇವರ ಮುಂದೆ ತಗ್ಗಿಸಿಕೊಂಡು ವಿಧೇಯರಾಗಿ ನಡೆಯಬೇಕು. ಸ್ವಲ್ಪ ಸಮಯ ಸಮಾಧಿಯಲ್ಲಿ ನಿದ್ರೆ ಮಾಡಬೇಕಾಗಿರುವ, ಆದರೆ ಈಗ ಜೀವಿಸುತ್ತಿರುವವರ ವಿಚಾರಣೆಯು ಪರಲೋಕದಲ್ಲಿ ಈಗ ದೇವರ ಮುಂದೆ ಪುನರ್ ಪರಿಶೀಲಿಸಲ್ಪಡುತ್ತಿದೆ. ಕ್ರಿಸ್ತನಲ್ಲಿ ಶ್ರದ್ಧೆ, ನಿಷ್ಠೆಯಿದೆ ಎಂದು ಹೇಳಿಕೊಳ್ಳುವುದರಿಂದಲ್ಲ, ಬದಲಾಗಿ ನಿಮ್ಮ ಮನೋಭಾವವು ಆ ದಿನದಲ್ಲಿ ನಿಮಗೆ ರಕ್ಷಣೆಯನ್ನು ಖಚಿತಪಡಿಸುತ್ತದೆ. ನಮ್ಮ ದೇಹವೆಂಬ ದೇವಾಲಯವು ತನ್ನ ಮಲಿನತೆಯಿಂದ ಶುದ್ಧಿಗೊಳಿಸಲಟ್ಟಿದೆಯೇ? ನನ್ನ ಪಾಪಗಳು ಅಳಿಸಲ್ಪಡುವಂತೆ ದೇವರ ಮುಂದೆ ಅವುಗಳನ್ನು ನಾನು ಅರಿಕೆ ಮಾಡಿಕೊಂಡು ಪಶ್ಚಾತ್ತಾಪ ಪಡುತ್ತಿದ್ದೇನೆಯೇ? ನನ್ನ ಬಗ್ಗೆ ನಾನು ತಾತ್ಸಾರ ಭಾವನೆ ಹೊಂದಿದ್ದೇನೆಯೇ? ಕ್ರಿಸ್ತನ ಬಗ್ಗೆ ಅತ್ಯುತ್ತಮ ಜ್ಞಾನ ಹೊಂದುವುದಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಲು ನಾನು ಸಿದ್ಧನಾಗಿರುವೆನೇ? ನಾನು ನನ್ನ ಸ್ವಂತ ಸೊತ್ತಲ್ಲ, ಬದಲಾಗಿ ದೇವರಿಗೆ ಸೇರಿದ್ದೇನೆ, ನನ್ನ ಸೇವೆಯು ಆತನಿಗೆ ಮಾತ್ರ ಮೀಸಲಾಗಿದೆ ಎಂದು ಪ್ರತಿಕ್ಷಣವೂ ನಾವು ಭಾವಿಸುತ್ತಿದ್ದೇವೆಯೇ?ಕೊಕಾಘ 42.4

    ‘ನಾವು ಯಾಕೆ ಜೀವಿಸುತ್ತಿದ್ದೇವೆ ಮತ್ತು ಸೇವೆ ಮಾಡುತ್ತಿದ್ದೇವೆ? ಇದರ ಫಲಿತಾಂಶವೇನು?” ಎಂಬ ಪ್ರಶ್ನೆಯನ್ನು ನಮ್ಮಲ್ಲಿ ಕೇಳಿಕೊಳ್ಳಬೇಕು’ (ದಿ ಸೈನ್ಸ್ ಆಫ್ ದಿ ಟೈಮ್, ನವೆಂಬರ್ 21, 1882).ಕೊಕಾಘ 43.1