Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ದೇವರ ನ್ಯಾಯತೀರ್ಪು ಬರುವುದು ನಿಶ್ಚಯ

    ದೇವರು ಎಷ್ಟೊಂದು ಪ್ರೀತಿ ಸ್ವರೂಪಿ ಎಂದರೆ, ಪಾಪಿಗಳನ್ನು ನಾಶ ಮಾಡುವುದು ಆತನ ಸ್ವಭಾವಕ್ಕೆ ವಿರುದ್ಧವಾಗಿದೆ ಎಂದು ಜನರು ತಿಳಿದುಕೊಳ್ಳುತ್ತಾರೆ. ಮನುಷ್ಯರು ತಮ್ಮ ಬುದ್ಧಿಮಟ್ಟಕ್ಕೆ ತಕ್ಕಂತೆ ಅಭಿಪ್ರಾಯಕ್ಕೆ ಬರುತ್ತಾರೆ. ಈ ವಿಷಯವಾಗಿ ಆಸಾಫನು ಕೀರ್ತನೆ 50:22ನೇ ವಚನದಲ್ಲಿ ಜನರು ದೇವರನ್ನು ನಮ್ಮಂತವನೆಂದು ನೆನಸಿಕೊಳ್ಳುತ್ತಾರೆಂದು ಹೇಳುತ್ತಾನೆ. ಅವರು ಕರ್ತನನ್ನು ತಮ್ಮಂತೆಯೇ ಎಂದು ಎಣಿಸಿಕೊಳ್ಳುತ್ತಾರೆ.ಕೊಕಾಘ 141.1

    ದೇಶದ ಕಾನೂನು ಕಟ್ಟಳೆಗಳನ್ನು ಮೀರಿದವರಿಗೆ ಎಂತಹ ಶಿಕ್ಷೆ ಕೊಡಬೇಕೆಂಬುದನ್ನು ಅಪರಾಧಿಗಳೇ ನಿರ್ಧರಿಸುವುದಿಲ್ಲ. ನಮ್ಮಲ್ಲಿರುವುದೆಲ್ಲವೂ ದೇವರ ಕೃಪೆಯಿಂದಲೇ ನಮಗೆ ಕೊಡಲ್ಪಟ್ಟಿದೆ. ಅಂತಹ ದೇವರ ವಿರುದ್ಧವಾಗಿ ಪಾಪದ ತೀವ್ರತೆಯ ಸ್ವಭಾವವನ್ನು ನಾವು ತಿಳಿದುಕೊಳ್ಳಲಾಗುವುದಿಲ್ಲ. ದೇವರು ನಮ್ಮ ತಂದೆಯಾಗಿರುವಂತೆ, ನೈತಿಕವಾದ ಅಧಿಪತಿಯೂ ಆಗಿದ್ದಾನೆ ಆಜ್ಞೆಗಳನ್ನು ಕೊಟ್ಟವನೂ ಸಹ ಆತನೇ, ಕಾನೂನುಗಳನ್ನು ರೂಪಿಸುವವನೂ ಹಾಗೂ ಜಾರಿಗೆ ತರುವವನೂ ಸಹ ದೇವರೇ ಆಗಿದ್ದಾನೆ. ದಂಡನೆಯಿಲ್ಲದ ಆಜ್ಞೆಗಳಿಗೆ ಯಾವುದೇ ಶಕ್ತಿಯಿರುವುದಿಲ್ಲ.ಕೊಕಾಘ 141.2

    ಪ್ರೀತಿಸ್ವರೂಪನಾದ ತಂದೆಯು ತನ್ನ ಮಕ್ಕಳು ಬೆಂಕಿಯ ಶಿಕ್ಷೆ ಅನುಭವಿಸುವುದನ್ನು ನೋಡುವುದಿಲ್ಲವೆಂದು ನಾವು ವಾದ ಮಾಡಬಹುದು. ಆದರೆ ದೇವರು ತನ್ನ ಪ್ರಜೆಗಳಿಗೂ ಹಾಗೂ ಅವರ ಸುರಕ್ಷತೆಗೂ ಆಜ್ಞೆಯನ್ನು ಮೀರಿದವರನ್ನು ದಂಡಿಸುವನು. ಆತನು ಮನುಷ್ಯರ ಯೋಜನೆಯಂತೆ ಕಾರ್ಯಮಾಡುವುದಿಲ್ಲ. ಮನುಷ್ಯರು ಇತರರ ಮುಂದೆ ಮಾಡಲಾಗದಂತ, ಅಪರಿಮಿತವಾದ ನ್ಯಾಯವನ್ನು ದೇವರು ತೀರಿಸಬಲ್ಲನು, ತಾನು ಮಾಡುತ್ತೇನೆಂದು ಹೇಳಿದ್ದನ್ನು ದೇವರು ಮಾಡುವುದಿಲ್ಲವೆಂದು ಯಾರು ತಾನೇ ಹೇಳುವರು?ಕೊಕಾಘ 141.3