Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಹನೋಕನ ಉದಾಹರಣೆ

    ಹನೂಕನು ಪರಲೋಕಕ್ಕೆ ಒಯ್ಯಲ್ಪಡುವುದಕ್ಕಿಂತ ಮೊದಲು ಮುನ್ನೂರು ವರ್ಷಗಳ ಕಾಲ ದೇವರೊಂದಿಗೆ ಅನ್ಯೋನ್ಯತೆಯಲ್ಲಿ ನಡೆದನು. ಇಂದಿನ ಕಾಲದ ಪರಿಸ್ಥಿತಿಯಂತೆ ಆಗಲೂ ಸಹ ಪರಿಪೂರ್ಣವಾದ ಉತ್ತಮ ಕೈಗುಣಸ್ವಭಾವದ ಬೆಳವಣಿಗೆಗೆ ಪೂರಕವಾದ ಪರಿಸ್ಥಿತಿ ಇರಲಿಲ್ಲ. ಹಾಗಾದರೆ ಹನೋಕನು ಹೇಗೆ ದೇವರೊಂದಿಗೆ ಅನ್ಯೋನ್ಯತೆಯಲ್ಲಿ ನಡೆದನು? ತಾನು ಯಾವಾಗಲೂ ದೇವರ ಸನ್ನಿಧಿಯಲ್ಲಿದ್ದೇನೆಂಬ ಭಾವನೆ ಅವನ ಮನಸ್ಸಿನಲ್ಲಿತ್ತು ಮತ್ತು ಅವನು ಗಲಿಬಿಲಿಗೆ ಒಳಗಾದಾಗ ಮಾಡುತ್ತಿದ್ದ ಪ್ರಾರ್ಥನೆಯು ದೇವರಿಗೆ ಮುಟ್ಟಿ ಅವನಿಗೆ ಸಮಾಧಾನ ಉಂಟುಮಾಡುತ್ತಿತ್ತು,ಕೊಕಾಘ 41.6

    ಹನೋಕನು ದೇವರ ಮನಸ್ಸಿಗೆ ನೋವಾಗುವ ಯಾವುದೇ ಕಾರ್ಯ ಮಾಡಲಿಲ್ಲ. ನಾನು ತಪ್ಪು ಮಾಡದಂತೆ ನಿನ್ನ ಮಾರ್ಗಗಳನ್ನು ನನಗೆ ಬೋಧಿಸು. ನಿನಗೆ ಗೌರವ ಉಂಟಾಗುವಂತೆ ನಾನೇನು ಮಾಡಬೇಕು” ಎಂದು ಅವನು ಪ್ರಾರ್ಥಿಸುತ್ತಿದ್ದನು. ಈ ರೀತಿಯಾಗಿ ಅವನು ನಿರಂತರವಾಗಿ ತನ್ನ ಮಾರ್ಗಗಳನ್ನು ದೇವರ ಆಜ್ಞೆಗಳಿಗೆ ಅನುಸಾರವಾಗಿ ರೂಪಿಸಿಕೊಳ್ಳುತ್ತಿದ್ದನು. ಪರಲೋಕದ ತನ್ನ ತಂದೆಯು ತನಗೆ ಖಂಡಿತವಾಗಿಯೂ ಸಹಾಯ ಮಾಡುತ್ತಾನೆಂಬ ಸಂಪೂರ್ಣ ವಿಶ್ವಾಸ ಹಾಗೂ ಭರವಸೆ ಹನೋಕನಲ್ಲಿತ್ತು. ಅವನಿಗೆ ತನ್ನದೇ ಆದ ಆಲೋಚನೆಗಳಿರಲಿಲ್ಲ. ಅವೆಲ್ಲವೂ ಅವನ ದೇವರಾದ ಯೆಹೋವನ ಚಿತ್ತಕ್ಕೆ ಒಳಪಟ್ಟಿದ್ದವು.ಕೊಕಾಘ 42.1

    ಕ್ರಿಸ್ತನು ಎರಡನೇ ಸಾರಿ ಬಂದಾಗ ಈ ಲೋಕದಲ್ಲಿ ಮರಣವನ್ನು ಅನುಭವಿಸದೆ ಪರಲೋಕಕ್ಕೆ ಎತ್ತಲ್ಪಡುವವರನ್ನು ಹನೂಕನು ಪ್ರತಿನಿಧಿಸುತ್ತಾನೆ (ಸೆರ್ಮನ್ಸ್ ಅಂಡ್ ಟಾಕ್ಸ್, ಸಂಪುಟ 1, ಪುಟ 32 (1886). ನಮಗೆ ಬಂದಂತೆ ಹನೊಕನಿಗೂ ಶೋಧನೆಗಳು ಬಂದವು. ಇಂದಿನ ಸಮಾಜದಂತೆ ಅವನ ಕಾಲದಲ್ಲಿಯೂ ಸಹ ಸಮಾಜದ ಜನರು ನೀತಿವಂತರಿಗೆ ವಿರೋಧಿಗಳಾಗಿದ್ದರು. ಇಂದಿನಂತೆಯೇ ಆಗಲೂ ಸಹ ವಾತಾವರಣವು ಪಾಪ ಮತ್ತು ಭ್ರಷ್ಟತೆಯಿಂದ ಮಲಿನಗೊಂಡಿತ್ತು. ಆದಾಗ್ಯೂ ಹನೋಕನು ಪರಿಶುದ್ದನಾಗಿ ಜೀವಿಸಿದನು. ಆ ಕಾಲದಲ್ಲಿ ಪ್ರಚಲಿತವಾಗಿದ್ದ ಪಾಪಗಳಿಂದ ಅವನು ಕಳಂಕಿತನಾಗಲಿಲ್ಲ. ಅದೇ ರೀತಿಯಾಗಿ ನಾವೂ ಸಹ ಇಂದಿನ ಲೋಕದಲ್ಲಿ ಎಷ್ಟೇ ಪಾಪ ತುಂಬಿದ್ದರೂ, ಕಳಂಕವಿಲ್ಲದೆ ಪರಿಶುದ್ಧರಾಗಿ ಜೀವಿಸಬಹುದು (ಟೆಸ್ಟಿಮೊನೀಸ್, ಸಂಪುಟ 2, ಪುಟ 122, 1868).ಕೊಕಾಘ 42.2