Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಭಾನುವಾರಾಚರಣೆ ಜಾರಿಗೆ ಬರುವುದು ಒಂದು ಪರೀಕ್ಷೆಯಾಗಿದೆ

    ದೈವೀಕ ಬೆಳಕನ್ನು ತಿಳಿದುಕೊಳ್ಳುವ ತನಕ ಮತ್ತು ನಾಲ್ಕನೇ ಆಜ್ಞೆಯು ಅನಿವಾರ್ಯವಾಗಿ ಅನುಸರಿಸಿ ನಡೆಯಬೇಕಾದ ಕರ್ತವ್ಯವಾಗಿದೆ ಎಂದು ಅರಿತುಕೊಳ್ಳುವವರೆಗೆ ಯಾರೂ ಸಹ ಅಪರಾಧಿಗಳೆಂದು ನಿರ್ಣಯಿಸಲ್ಪಡುವುದಿಲ್ಲ, ಆದರೆ ನಕಲಿಯಾದ ಭಾನುವಾರದ ಸಬ್ಬತ್ತನ್ನು ಕಡ್ಡಾಯವಾಗಿ ಆಚರಿಸಬೇಕೆಂಬ ಕಾಯ್ದೆ ಜಾರಿಗೆ ಬಂದಾಗ, ಮೂರನೇ ದೂತನು ಮಹಾಶಬ್ದದಿಂದ ಮೃಗಕ್ಕೂ ಹಾಗೂ ಅದರ ವಿಗ್ರಹಕ್ಕೂ ನಮಸ್ಕರಿಸುವುದರ ವಿರುದ್ಧ ಮನುಷ್ಯರಿಗೆ ಎಚ್ಚರಿಕೆಯ ಸಂದೇಶ ನೀಡಿದಾಗ, ಸುಳ್ಳು ಮತ್ತು ಸತ್ಯದ ನಡುವೆ ಒಂದು ಸ್ಪಷ್ಟವಾದ ವ್ಯತ್ಯಾಸ ಕಂಡುಬರುವುದು. ಆಗ ಇನ್ನೂ ಸಹ ದೇವರಾಜ್ಞೆ ಮೀರಿ ನಡೆಯುವವರು ಮೃಗದ ಗುರುತು ಹೊಂದುವರು (ಎವಾಂಜಲಿಸಮ್, ಪುಟಗಳು 24, 23, 1899).ಕೊಕಾಘ 131.3

    ಕಾನೂನಿನ ಮೂಲಕ ಭಾನುವಾರಾಚರಣೆಯು ಕಡಾಯವಾಗಿ ಜಾರಿಗೆ ಬಂದಾಗ ಮತ್ತು ನಿಜವಾದ ಸಬ್ಬತ್ತನ್ನು ಕೈಕೊಳ್ಳುವುದು ದೇವರಾಜ್ಞೆಯ ಪ್ರಕಾರ ಮನುಷ್ಯರ ಕರ್ತವ್ಯವಾಗಿದೆ ಎಂಬ ಸತ್ಯಸಂದೇಶದ ಬೆಳಕು ಜಗತ್ತಿಗೆ ಕೊಡಲ್ಪಟ್ಟಾಗ, ಯಾರು ದೇವರಾಜ್ಞೆಗೆ ಅವಿಧೇಯರಾಗಿ, ರೋಮನ್ ಕಥೋಲಿಕ್ ಸಭೆಯ ಅಧಿಕಾರಕ್ಕೆ ವಿಧೇಯರಾಗುವರೋ, ಅವರು ಅದಕ್ಕೆ ದೇವರಿಗಿಂತ ಹೆಚ್ಚಾಗಿ ಗೌರವ ಕೊಡುವರು. ಅಂತವರು ಆ ಸಭೆಗೆ ಗೌರವ ಸಲ್ಲಿಸುವರು, ಈ ಕಾರಣದಿಂದ ಅವರು ಮೃಗಕ್ಕೂ ಹಾಗೂ ಅದರ ವಿಗ್ರಹಕ್ಕೂ ನಮಸ್ಕರಿಸುವರು. ಕೊಕಾಘ 131.4

    ದೇವರು ತನ್ನ ದೈವೀಕ ಅಧಿಕಾರದ ಗುರುತೆಂದು ಹೇಳಿರುವ ಶನಿವಾರದ ಸಬ್ಬತ್ತನ್ನು ತಿರಸ್ಕರಿಸಿ, ಅದಕ್ಕೆ ಬದಲಾಗಿ ಕಥೋಲಿಕ್ ಸಭೆಯು ತನ್ನ ಪರಮಾಧಿಕಾರದ ಸಂಕೇತವಾಗಿ ಆರಿಸಿಕೊಂಡ ಭಾನುವಾರವನ್ನು ಅಂಗೀಕರಿಸುವುದು ಆ ಸಭೆಗೆ ನಿಷ್ಠೆ ತೋರಿಸುವ ಗುರುತಾಗಿದೆ ಹಾಗೂ ಮೃಗದ ಗುರುತನ್ನು ಹೊಂದಿಕೊಳ್ಳುವುದಾಗಿದೆ. ಜನರ ಮುಂದೆ ಕಾನೂನು ಪ್ರಕಾರವಾಗಿ ದೇವರ ಆಜ್ಞೆ ಮತ್ತು ಮನುಷ್ಯರ ಆಕ್ಷೆ ಇವುಗಳ ನಡುವೆ ಆರಿಸಿಕೊಳ್ಳುವ ಅವಕಾಶ ಕೊಡಲ್ಪಡುವುದು. ಆದರೆ ದೇವರಾಜ್ಞೆಯನ್ನು ಯಾರು ಉಲ್ಲಂಘಿಸುವರೋ, ಅವರು ಮೃಗದ ಗುರುತು ಹೊಂದುವರು (ಗ್ರೇಟ್ ಕಾಂಟ್ರೊವರ್ಸಿ, ಪುಟ 449, 1911).ಕೊಕಾಘ 131.5

    *****