Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಭಾನುವಾರ ಕೆಲಸ ಮಾಡಬೇಡಿರಿ

    1880-1890ನೇ ಇಸವಿಗಳಲ್ಲಿ ಅಮೇರಿಕಾ ದೇಶದ ದಕ್ಷಿಣ ಭಾಗದಲ್ಲಿ ಭಾನುವಾರಾಚರಣೆಯನ್ನು ಬಹಳ ತೀವ್ರವಾಗಿ ಆಚರಿಸಬೇಕೆಂದು ಒತ್ತಾಯಿಸಲಾಗುತ್ತಿತ್ತು (ಪೇಟ್ರಿಯಾರ್ಕ್ ಅಂಡ್ ಪ್ರಾಫೆಟ್ಸ್ 517-562). ಅಂ ತಹ ಸ್ಥಳಗಳಲ್ಲಿ ದೇವರ ಸೇವೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ವಿವೇಕದಿಂದಲೂ ಹಾಗೂ ಎಚ್ಚರಿಕೆಯಿಂದಲೂ ಮಾಡಬೇಕು. ಭಾನುವಾರ ಮತ್ತು ಸಬ್ಬತ್ತು ದಿನದ ಬಗ್ಗೆ ನಿಮ್ಮ ನಂಬಿಕೆ ಏನೆಂದು ಜನರು ಶೀಘ್ರವಾಗಿ ತಿಳಿದುಕೊಂಡು ಅದರ ಬಗ್ಗೆ ನಿಮಗೆ ಪ್ರಶ್ನಿಸುವರು. ಆಗ ನೀವು ಜಾಣತನದಿಂದ ಅವರಿಗೆ ಉತ್ತರಿಸಬೇಕು.ಕೊಕಾಘ 79.4

    ಭಾನುವಾರದಂದು ಕೆಲಸ ಮಾಡದಿರುವುದು ಮೃಗದ ಗುರುತನ್ನು ಹೊಂದಿಕೊಂಡಂತೆ ಆಗುವುದಿಲ್ಲ. ಭಾನುವಾರ ಕೆಲಸ ಮಾಡುವುದು ವಿರೋಧತೆಗೆ ಮತ್ತು ಹಿಂಸೆಗೂ ಕಾರಣವಾದಲ್ಲಿ ಅಡ್ವೆಂಟಿಸ್ಟ್ರು ಲೌಕಿಕ ಕಾರ್ಯಮಾಡದೆ, ಯಥಾರ್ಥವಾದ ದೇವರ ಸೇವೆಯಲ್ಲಿ ತೊಡಗಿಸಿಕೊಳ್ಳುವ ಒಂದು ಅವಕಾಶವಾಗಿ ಉಪಯೋಗಿಸಿಕೊಳ್ಳಬೇಕು (ದಿ ಸದರ್ನ್ ವರ್ಕ್, ಪುಟಗಳು 69, 70 (1895).ಕೊಕಾಘ 79.5

    ಶನಿವಾರ ಸಬ್ಬತ್ತಿನ ವಿರೋಧಿಗಳು ಬಂದು ಭಾನುವಾರದಂದು ಕೆಲಸ ಮಾಡಬಾರದೆಂದು ಹೇಳಿದಲ್ಲಿ, ನೀವು ಕೆಲಸ ನಿಲ್ಲಿಸಿ, ಯಾಕೆಂದರೆ ಅದರಿಂದ ನಿಮ್ಮ ಮತ್ತು ದೇವರ ನಡುವೆ ಯಾವುದೇ ಭಿನ್ನಾಭಿಪ್ರಾಯ ಉಂಟಾಗುವುದಿಲ್ಲ (ಮ್ಯಾನುಸ್ಕ್ರಿಪ್ಟ್ ರಿಲೀಸ್, 163, 1898).ಕೊಕಾಘ 79.6

    ನಮಗೆ ಧಾರ್ಮಿಕ ಸ್ವಾತಂತ್ರ್ಯ ವಿದೆ ಎಂದು ಉದ್ದೇಶಪೂರ್ವಕವಾಗಿ ಭಾನುವಾರಾಚರಣೆ ಮಾಡುವವರ ಮುಂದೆ ಆ ದಿನದಲ್ಲಿ ಕೆಲಸ ಮಾಡಿ ಅವರಿಗೆ ಕೋಪವೆಬ್ಬಿಸಬಾರದು, ಅಲ್ಲದೆ ಅಡ್ವೆಂಟಿಸ್ಟ್ ಮಹಿಳೆಯರು ಭಾನುವಾರದಲ್ಲಿ ಬಟ್ಟೆ ಒಗೆಯುವುದನ್ನು ಮಾಡಬಾರದು (ಸೆಲೆಕ್ಟೆಡ್ ಮೆಸೇಜಸ್, ಸಂಪುಟ 3, ಪುಟ 399, 1899).ಕೊಕಾಘ 79.7