Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಏನೂ ಮಾಡದೆ ಶಾಂತರಾಗಿ ಕುಳಿತಿರಬಾರದು

    ಬರಲಿರುವ ಅಪಾಯವನ್ನು ತಡೆಯಲು ನಮ್ಮೆಲ್ಲಾ ಪ್ರಯತ್ನಗಳನ್ನು ಮಾಡುವುದು ನಮ್ಮ ಕರ್ತವ್ಯವಾಗಿದೆ. ಈ ದುಷ್ಟ ಆಲೋಚನೆಯನ್ನು ದೇವರು ತಡೆಹಿಡಿದು ಆತನಿಗಾಗಿ ಇನ್ನೂ ಕೆಲವರು ಸೇವೆ ಮಾಡಲು ಕೃಪೆ ನೀಡುವಂತೆ ಬೇಡಿಕೊಳ್ಳುವ ದೊಡ್ಡ ಜವಾಬ್ದಾರಿಯು ಜಗತ್ತಿನಾದ್ಯಂತ ಇರುವ ದೇವಜನರ ಮೇಲಿದೆ (ರಿವ್ಯೂ ಆಂಡ್ ಹೆರಾಲ್ಡ್, ಡಿಸೆಂಬರ್ 11, 1888).ಕೊಕಾಘ 72.3

    ಈಗ ದೇವರಾಜ್ಞೆಗಳನ್ನು ಕೈಕೊಂಡು ನಡೆಯುವವರು ದೇವರು ಮಾತ್ರ ಕೊಡುವಂತ ವಿಶೇಷ ಸಹಾಯ ಪಡೆದುಕೊಳ್ಳಲು ತಾವಾಗಿಯೇ ಎಚ್ಚರಗೊಳ್ಳಬೇಕಾದ ಅಗತ್ಯವಿದೆ. ಬರಲಿರುವ ಅನಾಹುತವು ಸಾಧ್ಯವಾದಷ್ಟು ಮಟ್ಟಿಗೆ ತಡವಾಗಲಿ ಎಂದು ಅವರು ಹೆಚ್ಚು ಪ್ರಾಮಾಣಿಕವಾಗಿ ಕಾರ್ಯಮಾಡಬೇಕಾಗಿದೆ (ರಿವ್ಯೂ ಅಂಡ್ ಹೆರಾಲ್ಡ್, ಡಿಸೆಂಬರ್ 18, 1888).ಕೊಕಾಘ 72.4

    ಭಾನುವಾರಾಚರಣೆ ಜಾರಿಗೆ ತರಲು ಸರ್ಕಾರ ಪ್ರಯತ್ನಿಸುತ್ತಿರುವಾಗ, ಮನಸ್ಸಾಕ್ಷಿಯ ಸ್ವಾತಂತ್ರ್ಯವನ್ನು ರಕ್ಷಿಸಿಕೊಳ್ಳಲು ನಾವು ಏನೂ ಮಾಡದೆ ಸುಮ್ಮನೆ ಕುಳಿತಿದ್ದಲ್ಲಿ, ನಾವು ದೇವರ ಚಿತ್ರ ನೆರವೇರಿಸುವುದಿಲ್ಲ. ದೀರ್ಘಕಾಲದಿಂದ ನಿರ್ಲಕ್ಷಿಸಲ್ಪಟ್ಟಿದ್ದ ಈ ಸೇವೆಯನ್ನು ನಾವು ಪೂರೈಸುವ ತನಕ, ಈ ಅನಾಹುತವು ತಡೆಹಿಡಿಯಲ್ಪಡಬೇಕೆಂದು ನಾವು ಉತ್ಸಾಹದಿಂದ ಪರಿಣಾಮಕಾರಿಯಾಗಿ ಪ್ರಾರ್ಥಿಸಬೇಕು. ನಮ್ಮ ಪ್ರಾರ್ಥನೆಗಳಿಗೆ ತಕ್ಕಂತೆ ಸಾಮರಸ್ಯವಾಗಿ ಕೆಲಸ ಮಾಡಬೇಕು (ಟೆಸ್ಟಿಮೊನೀಸ್, ಸಂಪುಟ 5, ಪುಟ 714 (1889).ಕೊಕಾಘ 72.5

    ಅನೇಕರು ಆರಾಮವಾಗಿ ನಿದ್ರಿಸುವವರಂತಿರುತ್ತಾರೆ. ‘ಭಾನುವಾರಾಚರಣೆಯ ಕಾನೂನು ಜಾರಿಗೆ ಬರುತ್ತದೆಂದು ಪ್ರವಾದನೆಯು ಮುಂದಾಗಿ ತಿಳಿಸಿದ್ದಲ್ಲಿ, ಅದು ಖಂಡಿತವಾಗಿಯೂ ನೆರವೇರುತ್ತದೆ’ ಎಂದು ನಿರ್ಧಾರ ಮಾಡುವ ಅವರು ಮುಂದೆ ಬರಲಿರುವ ಘಟನೆಗಳ ಬಗ್ಗೆ ಶಾಂತವಾಗಿ ನಿರೀಕ್ಷಿಸುತ್ತಾ, ದೇವರು ಆ ಸಂಕಟದ ದಿನದಲ್ಲಿ ತನ್ನ ಜನರನ್ನು ರಕ್ಷಿಸುತ್ತಾನೆಂದು ಎದುರು ನೋಡುತ್ತಾರೆ. ನಂಬಿಗಸ್ತರಾದ ಕಾವಲುಗಾರರಂತೆ ನಾವು ಮುಂದೆ ಬರಲಿರುವ ಅಪಾಯದ ಬಗ್ಗೆ ಜನರನ್ನು ಎಚ್ಚರಿಸಬೇಕು. ಕೊಕಾಘ 72.6