Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಅಧ್ಯಾಯ-2 — ಅಂತ್ಯಕಾಲದ ಸಮಯ

    ನಾವು ಅಂತ್ಯಕಾಲದ ಸಮಯದಲ್ಲಿ ಜೀವಿಸುತ್ತಿದ್ದೇವೆ. ಶೀಘ್ರವಾಗಿ ನೆರವೇರುತ್ತಿರುವ ಕೊನೆಗಾಲದ ಸೂಚನೆಗಳು ಕ್ರಿಸ್ತನ ಬರೋಣವು ಹತ್ತಿರದಲ್ಲೇ ಇದೆ ಎಂದು ತಿಳಿಸುತ್ತಿವೆ. ನಾವು ಜೀವಿಸುವ ಈ ಕಾಲವು ಅತ್ಯಂತ ಗಂಭೀರವೂ ಹಾಗೂ ಪ್ರಾಮುಖ್ಯವೂ ಆಗಿದೆ. ದೇವರಾತ್ಮನು ಕ್ರಮೇಣವಾಗಿ ಆದರೆ ಖಂಡಿತವಾಗಿಯೂ ಈ ಲೋಕದಿಂದ ಹಿಂತೆಗೆಯಲ್ಪಡುತ್ತಿದ್ದಾನೆ. ದೇವರ ಕೃಪೆಯನ್ನು ತಿರಸ್ಕರಿಸುವವರನ್ನು ಈಗಾಗಲೇ ದೇವರತೀರ್ಪು ಮತ್ತು ಉಪದ್ರವಗಳು ಬಾಧಿಸುತ್ತಿವೆ. ಸಮುದ್ರದಲ್ಲಿ ಮತ್ತು ಲೋಕದಲ್ಲಿ ಉಂಟಾಗುತ್ತಿರುವ ನೈಸರ್ಗಿಕ ವಿಪತ್ತುಗಳು ಸಮಾಜದಲ್ಲಿನ ಅಸ್ಥಿರತೆ ಹಾಗೂ ಅವ್ಯವಸ್ಥೆ, ಯುದ್ಧಗಳಾಗುವ ಸೂಚನೆಗಳು- ಇವೆಲ್ಲವೂ ಮುಂದೆ ಬರಲಿರುವ ಅಶುಭ ಮತ್ತು ಕೇಡಿನ ಸೂಚಕಗಳಾಗಿವೆ. KanCCh 8.1

    ನಾವು ಅಂತ್ಯಕಾಲದ ಸಮಯದಲ್ಲಿ ಜೀವಿಸುತ್ತಿದ್ದೇವೆ. ಶೀಘ್ರವಾಗಿ ನೆರವೇರುತ್ತಿರುವ ಕೊನೆಗಾಲದ ಸೂಚನೆಗಳು ಕ್ರಿಸ್ತನ ಬರೋಣವು ಹತ್ತಿರದಲ್ಲೇ ಇದೆ ಎಂದು ತಿಳಿಸುತ್ತಿವೆ. ನಾವು ಜೀವಿಸುವ ಈ ಕಾಲವು ಅತ್ಯಂತ ಗಂಭೀರವೂ ಹಾಗೂ ಪ್ರಾಮುಖ್ಯವೂ ಆಗಿದೆ. ದೇವರಾತ್ಮನು ಕ್ರಮೇಣವಾಗಿ ಆದರೆ ಖಂಡಿತವಾಗಿಯೂ ಈ ಲೋಕದಿಂದ ಹಿಂತೆಗೆಯಲ್ಪಡುತ್ತಿದ್ದಾನೆ. ದೇವರ ಕೃಪೆಯನ್ನು ತಿರಸ್ಕರಿಸುವವರನ್ನು ಈಗಾಗಲೇ ದೇವರತೀರ್ಪು ಮತ್ತು ಉಪದ್ರವಗಳು ಬಾಧಿಸುತ್ತಿವೆ. ಸಮುದ್ರದಲ್ಲಿ ಮತ್ತು ಲೋಕದಲ್ಲಿ ಉಂಟಾಗುತ್ತಿರುವ ನೈಸರ್ಗಿಕ ವಿಪತ್ತುಗಳು ಸಮಾಜದಲ್ಲಿನ ಅಸ್ಥಿರತೆ ಹಾಗೂ ಅವ್ಯವಸ್ಥೆ, ಯುದ್ಧಗಳಾಗುವ ಸೂಚನೆಗಳು- ಇವೆಲ್ಲವೂ ಮುಂದೆ ಬರಲಿರುವ ಅಶುಭ ಮತ್ತು ಕೇಡಿನ ಸೂಚಕಗಳಾಗಿವೆ.KanCCh 8.2

    ಜಗತ್ತಿನ ಸ್ಥಿತಿಗತಿಗಳು ಸಂಕಟದ ಸಮಯವು ಇನ್ನೇನು ಬರಲಿದೆ ಎಂದು ತಿಳಿಸುತ್ತವೆ. ಹತ್ತಿರದಲ್ಲಿಯೇ ಭಯಂಕರ ಸಂಘರ್ಷವು ಸಂಭವಿಸುವುದೆಂದು ದಿನಪತ್ರಿಕೆಗಳಲ್ಲಿ ಬರುವ ಸಂಗತಿಗಳು ಸೂಚಿಸುತ್ತವೆ. ದರೋಡೆ, ಕೊಲೆ, ಸುಲಿಗೆಗಳು ಯಾವಾಗಲೂ ಸಂಭವಿಸುತ್ತಿವೆ. ಮುಷ್ಕರಗಳು ಸಾಮಾನ್ಯವಾಗಿವೆ. ದೆವ್ವ ಮೈಮೇಲೆ ಬಂದಂತೆ ಆಡುವ ಮನುಷ್ಯರು ಜನರನ್ನು ಹಿಂಸಿಸಿ ಪ್ರಾಣ ತೆಗೆಯುತ್ತಿದ್ದಾರೆ. ವಿವೇಕಹೀನರಾಗಿ ಪಶುಗಳಂತಿರುವ ಮನುಷ್ಯರು ದುರಾಚಾರ, ಅನೀತಿ ಮೊದಲಾದ ಎಲ್ಲಾ ರೀತಿಯ ಕೆಟ್ಟತನದಿಂದ ಕೂಡಿದ್ದಾರೆ. ವೈರಿಯಾದ ಸೈತಾನನು ನ್ಯಾಯವನ್ನು ತಪ್ಪಿಸುವಂತೆ ಮಾಡಿ ಜನರ ಹೃದಯವು ಸ್ವಾರ್ಥದ ಲಾಭವನ್ನು ದೋಚಿಕೊಳ್ಳುವಂತೆ ತಿರುಚಿದ್ದಾನೆ. “ನ್ಯಾಯವು ಹಿಂದಕ್ಕೆ ತಳ್ಳಲ್ಪಟ್ಟಿದೆ. ಧರ್ಮವು ದೂರದಲ್ಲಿ ನಿಂತಿದೆ, ಸತ್ಯವು ಚಾವಡಿಯಲ್ಲಿ ಬಿದ್ದುಹೋಗಿದೆ” ಎಂದು ಪ್ರವಾದಿಯು ಹೇಳುತ್ತಾನೆ (ಯೆಶಾಯ 59:14).KanCCh 8.3

    ಜಗತ್ತಿನ ಮಹಾನಗರಗಳಲ್ಲಿ ಬಹಳಷ್ಟು ಜನರು ಬಡತನದಿಂದ ಊಟ, ಬಟ್ಟೆ ಹಾಗೂ ವಸತಿಯಿಲ್ಲದೆ ದಾರಿದ್ರ್ಯದಿಂದ ದುರವಸ್ಥೆಯಲ್ಲಿದ್ದಾರೆ. ಆದರೆ ಅದೇ ನಗರಗಳಲ್ಲಿ ಬೇರೆ ಕೆಲವರು ಭವ್ಯವಾದ ಮನೆಗಳಲ್ಲಿ ವಾಸಿಸುತ್ತಾ ತಮ್ಮ ಹಣವನ್ನು ಆ ಮನೆಗಳನ್ನು ಶೃಂಗರಿಸುವುದರಲ್ಲಿ ಉಪಯೋಗಿಸುತ್ತಿದ್ದಾರೆ. ಅಲ್ಲದೆ ತಮ್ಮ ಮೆದುಳನ್ನು ಅಸಮತೋಲನಗೊಳಿಸಿ ಅದರ ಶಕ್ತಿಯನ್ನು ನಾಶಮಾಡುವ ಹಾನಿಕರ ವಸ್ತುಗಳಾದ ಮದ್ಯಪಾನ, ಧೂಮಪಾನ ಸೇವನೆಗೂ ಹಾಗೂ ತಮ್ಮ ಶಾರೀರಿಕ ಬಯಕೆಗಳನ್ನು ಈಡೇರಿಸುವಂತಹ ಕೆಟ್ಟ ಚಟಗಳಿಗೂ ವ್ಯರ್ಥವಾಗಿ ಖರ್ಚುಮಾಡುತ್ತಾರೆ. ಹೊಟ್ಟೆಗಿಲ್ಲದೆ ಉಪವಾಸದಿಂದಿರುವವರ ಕರುಳಿನಕೂಗು ದೇವರ ಮುಂದೆ ಬರುತ್ತಿದೆ. ಆದರೆ ಜನರನ್ನು ಶೋಷಣೆ ಮಾಡಿ ಬಲಾತ್ಕಾರದಿಂದ ಜನರಮೇಲೆ ದಬ್ಬಾಳಿಕೆ ಮಾಡಿ ಹಣವಸೂಲಿ ಮಾಡುವವರು ದೇವರ ಕೋಪದದಿನಕ್ಕಾಗಿ ತಮ್ಮ ಪಾಪವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. KanCCh 8.4

    ಶ್ರೀಮತಿ ವೈಟಮ್ಮನವರು ಒಂದು ರಾತ್ರಿಯಲ್ಲಿ ಮಹಾನಗರಗಳಲ್ಲಿರುವ ಆಕಾಶವನ್ನು ಮುಟ್ಟುವಂತೆ ಕಟ್ಟಿರುವ ಬಹು ಎತ್ತರವಾದ ಬಹುಮಹಡಿ ಕಟ್ಟಗಳನ್ನು ದರ್ಶನದಲ್ಲಿಕಂಡರು. ಅವುಗಳು ಬೆಂಕಿ ನಿರೋಧಕಗಳಾಗಿದ್ದು, ಅವುಗಳನ್ನು ಮಾಲಿಕರು ತಮ್ಮ ಪ್ರತಿಷ್ಠೆಗಾಗಿ ಮತ್ತು ಆಡಂಬರಕ್ಕಾಗಿ ಕಟ್ಟಿದ್ದಾರೆ. ಬಹು ಬೆಲೆಬಾಳುವ ವಸ್ತುಗಳನ್ನು ಉಪಯೋಗಿಸಿ ಅವುಗಳನ್ನು ಕಟ್ಟಲಾಗಿದೆ. ಆದರೆ ಇಂತಹ ಗಗನಚುಂಬಿ ಕಟ್ಟಗಳ ಮಾಲಿಕರು “ತಾವು ಹೇಗೆ ಅತ್ಯುತ್ತಮ ರೀತಿಯಲ್ಲಿ ದೇವರನ್ನು ಘನಪಡಿಸುವುದು?” ಎಂದು ತಮ್ಮಲ್ಲಿ ಪ್ರಶ್ನೆ ಹಾಕಿಕೊಳ್ಳುವುದಿಲ್ಲ. ಕರ್ತನಾದ ದೇವರ ಬಗ್ಗೆ ಅವರು ಆಲೋಚಿಸುವುದೇ ಇಲ್ಲ.KanCCh 9.1

    ಇಂತಹ ಬಹು ಎತ್ತರವಾದ ಕಟ್ಟಡಗಳ ಮಾಲಿಕರು ಇತರರು ಅಸೂಯೆ ಪಡುವಂತೆ ಹಣವನ್ನು ಖರ್ಚುಮಾಡಿ ತಮ್ಮ ಮಹತ್ವಾಕಾಂಕ್ಷೆಯ ಅಹಂಕಾರದಿಂದ ಸಂತೋಷಿಸುತ್ತಾರೆ. ಇಂತಹ ಆಡಂಬರದ ಕಟ್ಟಡಗಳನ್ನು ಕಟ್ಟಲು ಅವರು ಉಪಯೋಗಿಸಿದ ಹಣವು ಬಡಜನರನ್ನು ಶೋಷಣೆ ಮಾಡಿ, ಬಲಾತ್ಕಾರದಿಂದ ಅನ್ಯಾಯವಾಗಿ ಸುಲಿಗೆಮಾಡಿ ಬಂದದ್ದು. ಆದರೆ ಪರಲೋಕದಲ್ಲಿ ಅವರ ವ್ಯಾಪಾರ ವ್ಯವಹಾರಗಳ ಲೆಕ್ಕವು ಇಡಲ್ಪಟ್ಟಿದೆ. ಮಾಡಿದ ಅನ್ಯಾಯ, ಮೋಸ, ಬಡಜನರನ್ನು ಹಿಂಸಿಸಿ ಶೋಷಣೆ ಮಾಡಿದ ಒಂದೊಂದು ಕಾರ್ಯವೂ ಬರೆಯಲ್ಪಟ್ಟಿದೆ ಎಂಬುದನ್ನು ಅವರು ಮರೆತಿದ್ದಾರೆ. ಆದರೆ ಯೆಹೋವ ದೇವರ ತಾಳ್ಮೆಗೂ ಒಂದು ಮಿತಿಯಿದೆ; ಆ ಮಿತಿಯು ಮೀರಿದ ನಂತರ ಆತನು ಅವರ ಮೋಸ, ಅನ್ಯಾಯ, ವಂಚನೆಯ ಕೃತ್ಯಗಳನ್ನು ನಿಲ್ಲಿಸುವ ಸಮಯ ಬರಲಿದೆ. KanCCh 9.2

    ಇದಾದ ನಂತರ ಅದೇ ದರ್ಶನದಲ್ಲಿ ಶ್ರೀಮತಿ ವೈಟಮ್ಮನವರು ಬೆಂಕಿಯ ಅಪಾಯದ ಎಚ್ಚರಿಕೆಯನ್ನು ಕಂಡರು. ಬಹು ಎತ್ತರವಾದ ಮತ್ತು ಬೆಂಕಿ ನಿರೋಧಕವಾಗಿರುವ ಈ ಕಟ್ಟಡಗಳು ಸಂಪೂರ್ಣವಾಗಿ ಸುರಕ್ಷಿತವೆಂದು ಜನರು ಹೆಮ್ಮೆಪಡುವರು. ಆದರೆ ಇಂತಹ ಕಟ್ಟಡಗಳೂ ಸಹ ಡಾಂಬರು ಮೇಣದಿಂದ ಕಟ್ಟಲ್ಪಟ್ಟಿವೆಯೋ ಎಂಬಂತೆ ಬೆಂಕಿಯಿಂದ ಸುಟ್ಟುಹೋಗುತ್ತವೆ. ಅಗ್ನಿ ಶಾಮಕದಳವು ಬೆಂಕಿಯ ಈ ವಿನಾಶ ತಡೆಯಲು ಸಾಧ್ಯವಾಗದು. ಅವು ಬೆಂಕಿ ಆರಿಸುವ ತಮ್ಮ ಯಂತ್ರಗಳನ್ನು ಉಪಯೋಗಿಸಲು ಸಾಧ್ಯವಾಗುವುದಿಲ್ಲ.KanCCh 9.3

    ಕರ್ತನ ಎರಡನೇಬರೋಣದ ದಿನವು ಸಮೀಪಿಸುತ್ತಿರುವಾಗ, ಅಹಂಕಾರಿಗಳೂ, ಮಹತ್ವಾಕಾಂಕ್ಷೆಯೂ ಉಳ್ಳ ಜನರಲ್ಲಿ ಬದಲಾವಣೆ ಕಂಡು ಬರದಿದ್ದಲ್ಲಿ, ರಕ್ಷಿಸಲ್ಪಡಲು ಶಕ್ತನಾಗಿರುವ ದೇವರು ಅವರನ್ನು ನಾಶ ಮಾಡುವುದಕ್ಕೂ ಸಹ ಶಕ್ತನಾಗಿದ್ದಾನೆಂದು ಶ್ರೀಮತಿ ವೈಟಮ್ಮನವರಿಗೆ ದರ್ಶನದಲ್ಲಿ ತಿಳಿಸಲಾಯಿತು. ಜಗತ್ತಿನ ಯಾವ ಶಕ್ತಿಯೂ ದೇವರ ಉದ್ದೇಶವನ್ನು ತಡೆಯಲಾಗದು. ಜನರು ದೇವರಾಜ್ಞೆಗಳನ್ನು ನಿರ್ಲಕ್ಷ್ಯ ಮಾಡಿದ ಕಾರಣದಿಂದಲೂ ಮತ್ತು ತಮ್ಮ ಸ್ವಾರ್ಥದ ಬಯಕೆಗಳನ್ನು ತೀರಿಸಿಕೊಂಡ ನಿಮಿತ್ತವಾಗಿಯೂ ಅವರಿಗೆ ಮುಯ್ಯಿಗೆ ಮುಯ್ಯಿ ತೀರಿಸುವ ಕರ್ತನು ನೇಮಿಸಿದ ನಾಶದ ಸಮಯವು ಬಂದಾಗ, ಅತಿ ಎತ್ತರವಾದ ನೂರಾರು ಅಂತಸ್ತಿನ ಕಟ್ಟಡಗಳನ್ನು ಕಟ್ಟಲು ಅವರು ಉಪಯೋಗಿಸಿದ ಯಾವ ವಸ್ತುವೂ ಅವರನ್ನು ರಕ್ಷಿಸಲಾರದು. ಸಮಾಜದ ಇಂದಿನ ಸಮಸ್ಯೆಗಳಿಗೆ ಕಾರಣಗಳೇನು ಎಂಬುದನ್ನು ಶಿಕ್ಷಣ ತಜ್ಞರು ಮತ್ತು ರಾಜಕಾರಣಿಗಳಲ್ಲಿ ಹೆಚ್ಚಿನವರಿಗೆ ಅರ್ಥಮಾಡಿಕೊಂಡು ತಿಳಿದುಕೊಳ್ಳಲು ಆಗಿಲ್ಲ. ಸರ್ಕಾರದ ಆಡಳಿತ ನಡೆಸುವವರು ಸಮಾಜದ ನೈತಿಕ ಭ್ರಷ್ಟತೆ, ಬಡತನ, ದಾರಿದ್ರ್ಯತೆ ಮತ್ತು ಹೆಚ್ಚುತ್ತಿರುವ ಅತ್ಯಾಚಾರ, ಅಪರಾಧಗಳ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುತ್ತಿಲ್ಲ. ವ್ಯಾಪಾರ, ವ್ಯವಹಾರ, ವಾಣಿಜ್ಯ ಹಾಗೂ ದೇಶದ ಹಣಕಾಸಿನ ಪರಿಸ್ಥಿತಿಯನ್ನು ಬಲಗೊಳಿಸಲು ಆಡಳಿತಗಾರರು ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ. ಮನುಷ್ಯರು ದೇವರ ವಾಕ್ಯದ ಬೋಧನೆಗೆ ಹೆಚ್ಚು ಗಮನ ನೀಡಿದಲ್ಲಿ, ತಮ್ಮನ್ನು ಕಾಡುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವರು. KanCCh 9.4

    ಕ್ರಿಸ್ತನು ಎರಡನೇಸಾರಿ ಬರುವುದಕ್ಕೆ ಸ್ವಲ್ಪ ಮೊದಲು ಲೋಕದ ಪರಿಸ್ಥಿತಿ ಹೇಗಿರುತ್ತದೆಂದು ಸತ್ಯವೇದದಲ್ಲಿ ತಿಳಿಸಲಾಗಿದೆ. ಬಲಾತ್ಕಾರ, ಸುಲಿಗೆಯಿಂದ ಹಣವನ್ನು ಅಪಾರವಾಗಿ ಕೂಡಿಟ್ಟುಕೊಂಡಿರುವ ಐಶ್ವರ್ಯವಂತರ ಬಗ್ಗೆ ಯಾಕೋಬನು 5:3-6ನೇ ವಚನಗಳಲ್ಲಿ ದೇವರು ಹೀಗೆ ತಿಳಿಸುತ್ತಾನೆ: “ಅಂತ್ಯದಿವಸಗಳು ಬಂದರೂ, ದ್ರವ್ಯವನ್ನು ಕೂಡಿಸಿ ಇಟ್ಟುಕೊಂಡಿದ್ದೀರಿ. ನಿಮ್ಮ ಹೊಲಗಳನ್ನು ಕೊಯಿದವರ ಕೂಲಿಯನ್ನು ನೀವು ಅನ್ಯಾಯವಾಗಿ ಹಿಡಿದುಕೊಂಡಿದ್ದೀರಿ. ಅಗೋ, ಆ ಕೂಲಿ ನಿಮ್ಮಮೇಲೆ ಕೂಗಿಕೊಳ್ಳುತ್ತದೆ; ಮತ್ತು ಕೊಯಿದವರ ಕೂಗು ಸಕಲ ಸೇನಾಧಿಪತಿಯಾಗಿರುವ ಕರ್ತನ ಕಿವಿಗಳಲ್ಲಿ ಬಿದ್ದಿದೆ. ಭೂಲೋಕದಲ್ಲಿ ನೀವು ಅತಿಭೋಗಿಗಳಾಗಿ ಬದುಕಿ ಮನಸ್ಸು ಬಂದಂತೆ ನಡೆದುಕೊಂಡಿದ್ದೀರಿ. ವಧೆಯ ದಿವಸ ಬಂದರೂ, ನಿಮ್ಮನ್ನು ಕೊಬ್ಬಿಸಿಕೊಂಡಿದ್ದೀರಿ; ನೀತಿವಂತನಿಗೆ ಮರಣದಂಡನೆಯನ್ನು ವಿಧಿಸಿ ಅವನನ್ನು ಕೊಂದು ಹಾಕಿದ್ದೀರಿ; ಅವನು ನಿಮ್ಮನ್ನು ಎದುರಾಯಿಸುವವನಲ್ಲ“. KanCCh 10.1

    ಆದರೆ ಅಂತ್ಯಕಾಲವು ಸಮೀಪಿಸುತ್ತಿದೆ ಎಂದು ತಿಳಿಸುವ ಎಚ್ಚರಿಕೆಗಳನ್ನು ಯಾರು ಗಮನಿಸುತ್ತಿದ್ದಾರೆ? ಲೋಕದ ಭೋಗಗಳಲ್ಲಿ ಮುಳುಗಿರುವವರ ಮೇಲೆ ಇದು ಯಾವ ಪರಿಣಾಮ ಬೀರುತ್ತದೆ? ಅವರ ಗುಣ ನಡತೆಯಲ್ಲಿ ಯಾವ ಬದಲಾವಣೆ ಕಂಡುಬರುತ್ತಿದೆ? ಜಲಪ್ರಳಯಕ್ಕೆ ಮೊದಲು ನೋಹನ ಕಾಲದಲ್ಲಿ ವಾಸಿಸುತ್ತಿದ್ದ ಜನರಲ್ಲಿ ಯಾವುದಾದರೂ ಬದಲಾವಣೆ ಬಂತೇ? ಅದೇ ರೀತಿ ಈ ಜನರಲ್ಲಿಯೂ ಬರುವುದಿಲ್ಲ. ಜಲಪ್ರಳಯಕ್ಕೆ ಮೊದಲು ಜೀವಿಸಿದ್ದ ಜನರು ಲೌಕಿಕ ಭೋಗಗಳಲ್ಲಿ ಮುಳುಗಿ “ಪ್ರಳಯದ ನೀರು ಬಂದು ಎಲ್ಲರನ್ನೂ ಬಡುಕೊಂಡು ಹೋಗುವ ತನಕ ಏನೂ ತಿಳಿಯದೆ ಇದ್ದರಲ್ಲಾ” ಮತ್ತಾಯ 24:39. ಪರಲೋಕದಿಂದ ಬಂದ ಎಚ್ಚರಿಕೆಗಳನ್ನು ಅವರು ಕೇಳಲು ನಿರಾಕರಿಸಿದರು. ಅದೇರೀತಿ ಇಂದೂಸಹ ದೇವರ ಎಚ್ಚರಿಕೆಯ ಧ್ವನಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿರುವ ಈ ಜಗತ್ತು ಸಹ, ಶೀಘ್ರವಾಗಿ ಸಂಪೂರ್ಣ ನಾಶವಾಗಲಿದೆ. KanCCh 10.2

    ಲೋಕದಲ್ಲಿ ಎಲ್ಲೆಲ್ಲಿಯೂ ಯುದ್ಧೋತ್ಸಾಹ ಕಂಡುಬರುತ್ತಿದೆ. ದಾನಿಯೇಲನ ಪುಸ್ತಕದ ಹನ್ನೊಂದನೆಯ ಅಧ್ಯಾಯದಲ್ಲಿ ತಿಳಿಸಿರುವ ಪ್ರವಾದನೆಯು ಇನ್ನೇನು ಸಂಪೂರ್ಣವಾಗಿ ನೆರವೇರುವ ಸಮಯ ಬಂದಿದೆ. ಅದರಲ್ಲಿ ತಿಳಿಸಿರುವ ಕಷ್ಟಸಂಕಟ, ಯುದ್ಧಗಳ ಪರಿಸ್ಥಿತಿಯು ಶೀಘ್ರದಲ್ಲಿಯೇ ನೆರವೇರಲಿದೆ.KanCCh 11.1

    “ಇಗೋ, ಯೆಹೋವನು ಲೋಕವನ್ನು ಬರಿದುಮಾಡಿ ಹಾಳಿಗೆತಂದು ವಿರೂಪಪಡಿಸಿ ಅದರ ನಿವಾಸಿಗಳನ್ನು ಚದುರಿಸಿ ಬಿಡುವವನಾಗಿದ್ದಾನೆ. ಭೂನಿವಾಸಿಗಳು ದೈವಾಜ್ಞೆಗಳನ್ನು ಮೀರಿ ನಿಯಮವನ್ನು ಅತಿಕ್ರಮಿಸಿ ಶಾಶ್ವತವಾದ ಒಡಂಬಡಿಕೆಯನ್ನು ಭಂಗಪಡಿಸಿದ್ದರಿಂದ ಭೂಮಿಯು ಅವರ ಹೆಜ್ಜೆಯಿಂದ ಅಪವಿತ್ರವಾಯಿತು. ಆದಕಾರಣ ಶಾಪವು ಲೋಕವನ್ನು ನುಂಗಿಬಿಟ್ಟಿದೆ. ಅಲ್ಲಿನವರು ದಂಡನೆಗೆ ಒಳಗಾಗಿದ್ದಾರೆ. ದಮ್ಮಡಿಯ ಉತ್ಸಾಹವು ಮುಗಿದಿದೆ. ಉಲ್ಲಾಸಿಗಳ ಕೋಲಾಹಲವು ಕೊನೆಗೊಂಡಿದೆ. ಕಿನ್ನರಿಯ ಆನಂದವು ಅಡಗಿದೆ” (ಯೆಶಾಯ 24:1-8).KanCCh 11.2

    “ಯೆಹೋವನ ದಿನವು ಸಮೀಪಿಸಿತು; ಅಯ್ಯೋ ದಿನವೇ! ಅದು ಸರ್ವಶಕ್ತನಿಂದ ನಾಶದಿನವಾಗಿಯೇ ಬರುವುದು” (ಯೋವೇಲ 1:15).KanCCh 11.3

    “ನಾನು ದಿವ್ಯಜ್ಞಾನದಿಂದ ನೋಡಿದೆನು, ಹಾ! ಭೂಲೋಕವು ಹಾಳು ಪಾಳಾಗಿತ್ತು. ಆಕಾಶವನ್ನು ನೋಡಿದೆನು, ಅದರಲ್ಲಿ ಬೆಳಕೇ ಇರಲಿಲ್ಲ. ಪರ್ವತಗಳನ್ನು ನೋಡಿದೆನು. ಆಹಾ, ನಡುಗುತ್ತಿದ್ದವು, ಎಲ್ಲಾ ಗುಡ್ಡಗಳು ಅಲ್ಲಕಲ್ಲೋಲವಾಗಿದ್ದವು. ನಾನು ನೋಡಲಾಗಿ ಅಯ್ಯೋ, ಜನವೇ ಇರಲಿಲ್ಲ, ಆಕಾಶದ ಪಕ್ಷಿಗಳು ಹಾರಿ ಹೋಗಿದ್ದವು. ನಾನು ನೋಡಲಾಗಿ ಫಲವತ್ತಾದ ಭೂಮಿಯು ಕಾಡಾಗಿತ್ತು. ಅಕಟಾ! ಅಲ್ಲಿನ ಊರುಗಳು ಯೆಹೋವನ ಪ್ರತ್ಯಕ್ಷತೆಯಿಂದ ಬಿದ್ದುಹೋಗಿದ್ದವು” (ಯೆರೆಮೀಯ 4:23-26).KanCCh 11.4

    “ಅಯ್ಯೋ! ಆ ದಿನವು ಘೋರವಾದದ್ದು, ಅದಕ್ಕೆ ಎಣೆಯಿಲ್ಲ. ಅದು ಯಾಕೋಬ್ಯರಿಗೆ ಇಕ್ಕಟ್ಟಿನ ದಿನ; ಆದರೂ ಅದರಿಂದ ಪಾರಾಗುವರು” (ಯೆರೆಮೀಯ 30:7). KanCCh 11.5

    ಆದರೆ ಈ ಲೋಕದ ಎಲ್ಲರೂ ದೇವರ ವೈರಿಯಾದ ಸೈತಾನನ ಪಕ್ಷವನ್ನು ಸೇರುವುದಿಲ್ಲ. ಎಲ್ಲರೂ ದೇವರಿಗೆ ಅವಿಧೇಯರಾಗುವುದಿಲ್ಲ. ದೇವರಿಗೆ ಕೊನೆಯವರೆಗೂ ನಂಬಿಗಸ್ತರಾಗಿರುವ ಕೆಲವರು ಇರುತ್ತಾರೆ. ಅವರ ಬಗ್ಗೆ ಯೆಹೋವನು “ಇದರಲ್ಲಿ ದೇವರ ಆಜ್ಞೆಗಳನ್ನೂ, ಯೇಸುವಿನ ಮೇಲಣನಂಬಿಕೆಯನ್ನೂ ಕೈಕೊಂಡು ನಡೆಯುತ್ತಿರುವ ದೇವಜನರ ತಾಳ್ಮೆಯು ಕಂಡುಬರುತ್ತದೆ” ಎಂದು ಹೇಳುತ್ತಾನೆ (ಪ್ರಕಟನೆ 14:12). ಶೀಘ್ರದಲ್ಲಿಯೇ ದೇವರನ್ನು ಆರಾಧಿಸುವವರು ಮತ್ತು ಆತನನ್ನು ಆರಾಧಿಸದವರ ನಡುವೆ ತೀಕ್ಷ್ಣವಾದ ಮಹಾಹೋರಾಟವು ನಡೆಯಲಿದೆ. ಅತೀ ಬೇಗನೆ ಜರಡಿ ಹಿಡಿಯಲ್ಪಟ್ಟು ಬಿದ್ದುಹೋಗುವವರು ಬಿದ್ದುಹೋಗುತ್ತಾರೆ. ಆದರೆ ದೇವರನ್ನು ದೃಢವಾಗಿ ನಂಬಿರುವವರು ಸಂಕಟ ಬಂದರೂ ಆತನಿಗೆ ವಿಧೇಯರಾಗಿ ನಿಲ್ಲುವರು. ಅವರು ಎಂದಿಗೂ ಬಿದ್ದುಹೋಗರು. (ಆಮೋಸ 9:9).KanCCh 11.6

    ಸೈತಾನನು ಸತ್ಯವೇದವನ್ನು ಬಹಳ ಚೆನ್ನಾಗಿ ಬಲ್ಲವನಾಗಿದ್ದಾನೆ. ತನ್ನ ಕಾಲವು ಸ್ವಲ್ಪವೆಂದು ಅವನಿಗೆ ತಿಳಿದಿದೆ. ಆದುದರಿಂದ ಈ ಲೋಕದಲ್ಲಿ ನಡೆಯುವ ದೇವರ ಎಲ್ಲಾ ಸೇವೆಗೆ ವಿರುದ್ಧವಾಗಿ ಅವನು ಪ್ರತಿಯಾಗಿ ಕೆಲಸ ಮಾಡುವನು. ಪರಲೋಕದ ಮಹಿಮೆ ಮತ್ತು ಅಂಧಕಾರದ ಕಾಲದಲ್ಲಿ ಅಂದರೆ 7-18ನೇ ಶತಮಾನಗಳಲ್ಲಿ ದೇವಜನರಿಗೆ ಕಥೋಲಿಕ್ ಸಭೆಯಿಂದ ಉಂಟಾದ ಮಹಾಹಿಂಸೆಯು ಒಟ್ಟಾದಾಗ, ಈ ಲೋಕದಲ್ಲಿ ವಾಸಿಸುತ್ತಿರುವ ದೇವರ ಮಕ್ಕಳ ಅನುಭವದ ಬಗ್ಗೆ ತಿಳಿಸುವುದು ಅಸಾಧ್ಯ. ಅವರು ದೇವರ ಸಿಂಹಾಸನದಿಂದ ಹೊರಡುವ ಬೆಳಕಿನಲ್ಲಿ ನಡೆಯುವರು. ದೇವದೂತರ ಮೂಲಕ ಅವರಿಗೂ ಪರಲೋಕಕ್ಕೂ ನಡುವೆ ನಿರಂತರವಾದ ಸಂಪರ್ಕವಿರುವುದು. ಸೈತಾನನು ತನ್ನ ದುಷ್ಟದೂತರೊಡನೆ ಸೇರಿ ಎಲ್ಲಾ ರೀತಿಯ ಸೂಚಕ ಕಾರ್ಯಗಳನ್ನೂ, ಅದ್ಭುತಗಳನ್ನು ಮಾಡಿದಾಗ ಅದು ದೇವರಿಂದ ಬಂದದ್ದೆಂದು ಕೆಟ್ಟವರು ತಿಳಿದುಕೊಳ್ಳುವರು. ಇದರ ನಿಮಿತ್ತ ಸೈತಾನನು ಸಾಧ್ಯವಾದರೆ ದೇವರಾದು ಕೊಂಡವರನ್ನೂ ಮರುಳುಗೊಳಿಸುವನು (ಮತ್ತಾಯ 24:24). ದೇವಜನರು ಅದ್ಭುತಕಾರ್ಯಗಳು ಹಾಗೂ ಸೂಚಕಕಾರ್ಯಗಳ ಮೂಲಕ ಸಂರಕ್ಷಿಸಲ್ಪಡುವುದಿಲ್ಲ. ಯಾಕೆಂದರೆ ಸೈತಾನನೂ ಸಹ ಅದೇರೀತಿಯಾಗಿ ಮಾಡುವನು. ಸಂಕಟ, ಹಿಂಸೆ ಹಾಗೂ ಶೋಧನೆಗಳಿಗೆ ಒಳಪಟ್ಟ ದೇವಜನರು ವಿಮೋಚನಕಾಂಡ 31:12-18ನೇ ವಚನಗಳಲ್ಲಿ ತಿಳಿಸಿರುವ ಗುರುತಿನಿಂದ ತಮ್ಮ ಬಲ ಹೊಂದಿಕೊಳ್ಳುವರು. ಅವರು “ಜೀವಸ್ವರೂಪನಾದ ದೇವರ ವಾಕ್ಯದಲ್ಲಿ ಬರೆದಿದೆ” ಎಂಬ ಆಧಾರದ ಮೂಲಕ ದೃಢವಾಗಿ ನಿಲ್ಲಬೇಕಾಗಿದೆ. ದೇವಜನರು ದೃಢವಾಗಿ ನಿಲ್ಲುವ ಏಕೈಕ ಅಸ್ತಿವಾರವು ದೇವರ ವಾಕ್ಯವಾಗಿದೆ. ಆದರೆ ದೇವರೊಂದಿಗಿನ ಒಡಂಬಡಿಕೆಯನ್ನು ಮುರಿದಿರುವವರು ಕ್ರಿಸ್ತನ ಎರಡನೇಬರೋಣದ ಸಮಯದಲ್ಲಿ ದೇವರ ಸಹಾಯವಿಲ್ಲದೆಯೂ ಮತ್ತು ಯಾವ ನಿರೀಕ್ಷೆಯೂ ಇಲ್ಲದೆ ಇರುವರು. KanCCh 12.1

    ನಾಲ್ಕನೇ ಆಜ್ಞೆಯು ದೇವರು ಸೃಷ್ಟಿಕರ್ತನೆಂದು ತಿಳಿಸುವ ಆತನ ಸಾಮಥ್ರ್ಯ ಹಾಗೂ ಸಾಕ್ಷಿಯಾಗಿದೆ. ಈ ಕಾರಣದಿಂದ ಆತನು ಸಮಸ್ತ ಸೃಷ್ಟಿಯ ಗೌರವಕ್ಕೂ, ಆರಾಧನೆಗೂ ಯೋಗ್ಯನಾಗಿಯೂ, ಅರ್ಹನಾಗಿಯೂ ಇದ್ದಾನೆಂದು ತಿಳಿಸುತ್ತದೆ. ಈ ನಾಲ್ಕನೇ ಆಜ್ಞೆಯನ್ನು ಗೌರವಿಸಿ ಸತ್ಯದೇವರನ್ನು ಆರಾಧಿಸುವವರು ವಿಶೇಷವಾಗಿ ಇತರರಿಗಿಂತ ಭಿನ್ನವಾಗಿರುತ್ತಾರೆ. ಆದರೆ ದುಷ್ಟರು ದೇವರ ಸೃಷ್ಟಿಯ ಸ್ಮಾರಕವಾದ ಏಳನೇ ದಿನದ ಸಬ್ಬತ್ತನ್ನು ನಾಶಗೊಳಿಸಲು ಪ್ರಯತ್ನಿಸುವುದರಿಂದ ಮತ್ತು ರೋಮನ್‍ ಕಥೋಲಿಕ್ ಸಭೆಯನ್ನು ಉನ್ನತ ಸ್ಥಾನಕ್ಕೇರಿಸುವುದರ ಮೂಲಕ ದೇವಜನರಿಗಿಂತ ವಿಭಿನ್ನವಾಗಿ ಕಾಣುತ್ತಾರೆ. ಈ ಸಂಘರ್ಷದಲ್ಲಿ ಎಲ್ಲಾ ಕ್ರೈಸ್ತದೇಶಗಳು ದೇವರಾಜ್ಞೆಗಳನ್ನು ಕೈಕೊಂಡು ನಡೆದು ಯೇಸುವಿನ ಮೇಲೆ ನಂಬಿಕೆಯಿಟ್ಟಿರುವವರು ಮತ್ತು ಮೃಗಕ್ಕೂ ಅಂದರೆ ರೋಮನ್ ಕಥೋಲಿಕ್ ಸಭೆಗೂ ಅದರ ವಿಗ್ರಹಕ್ಕೂ ನಮಸ್ಕರಿಸಿ ಅದರ ಗುರುತನ್ನು ಹೊಂದಿರುವವರು ಎಂಬ ಎರಡು ಮಹಾಗುಂಪುಗಳಾಗಿ ವಿಂಗಡಿಸಲ್ಪಡುತ್ತವೆ. ಕಥೋಲಿಕ್ ಸಭೆ ಮತ್ತು ದೇಶದ ಸರ್ಕಾರವು ಒಟ್ಟಾಗಿ ಸೇರಿಕೊಂಡು ದೊಡ್ಡವರು ಚಿಕ್ಕವರು, ಐಶ್ವರ್ಯವಂತರು ಬಡವರು, ಸ್ವತಂತ್ರರು ದಾಸರು ಎಲ್ಲರೂ ತಮ್ಮ ತಮ್ಮ ಬಲಗೈಮೇಲಾಗಲಿ ಅಥವಾ ಹಣೆಯಮೇಲಾಗಲಿ ಮೃಗದ ಮುದ್ರೆ ಹೊಂದಬೇಕೆಂದು ಒತ್ತಾಯಿಸಿದರೂ (ಪ್ರಕಟನೆ 13:16) ದೇವರ ಮಕ್ಕಳು ಅದನ್ನು ಹೊಂದುವುದಿಲ್ಲ. ಪ್ರವಾದಿಯಾದ ಯೋಹಾನನು “ಮೃಗದ ವಿಗ್ರಹಕ್ಕೆ ನಮಸ್ಕರಿಸದೆಯೂ, ಅದರ ಅಂಕೆಯನ್ನು ಮುದ್ರೆಹಾಕಿಸಿಕೊಳ್ಳದೆಯೂ ಅದರ ಮೇಲೆ ಜಯ ಹೊಂದಿದವರು ಬೆಂಕಿಬೆರೆತ ಗಾಜಿನ ಸಮುದ್ರದ ಮೇಲೆ ನಿಂತುಕೊಂಡಿದ್ದರು. ಅವರು ದೇವರದಾಸನಾದ ಮೋಶೆಯಹಾಡನ್ನೂ, ಯಜ್ಞದ ಕುರಿಯಾದಾತನ ಹಾಡನ್ನೂ ಹಾಡಿದರು” ಎಂದು ಹೇಳುತ್ತಾನೆ (ಪ್ರಕಟನೆ 15:2).KanCCh 12.2

    ದೇವಜನರಿಗೆ ಭಯಂಕರವಾದ ಕಷ್ಟಸಂಕಟ, ಶೋಧನೆಗಳು ಕಾದುಕೊಂಡಿವೆ. ಜಗತ್ತಿನೆಲ್ಲಾ ಕಡೆಯಲ್ಲಿಯೂ ಯುದ್ಧದ ದಾಹ ಎಲ್ಲಾ ದೇಶಗಳನ್ನೂ ಪ್ರಚೋದಿಸುತ್ತಿದೆ. ಜಗತ್ತು ಹಿಂದೆಂದೂ ಕಂಡು ಕೇಳಿರದಂತ ಮಹಾಸಂಕಟ ಸಮಯ ಬಂದಿದ್ದು ದೇವರು ಆರಿಸಿಕೊಂಡವರು ನಂಬಿಕೆಯಲ್ಲಿ ದೃಢವಾಗಿರುತ್ತಾರೆ. ಬಲಿಷ್ಠರಾದ ದೇವದೂತರು ಅವರನ್ನು ರಕ್ಷಿಸುವುದರಿಂದ ಸೈತಾನನು, ಅವನ ದುಷ್ಟದೂತರು ಮತ್ತು ಇತರರು ಅವರನ್ನು ನಾಶಮಾಡಲಾರರು.KanCCh 13.1

    *****