Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ದೇವರೊಂದಿಗೆ ಸಹ ಕೆಲಸಗಾರರಾಗುವ ಭಾಗ್ಯ

    ತನ್ನ ಸುವಾರ್ತಾಸೇವೆಗಾಗಿ ದೇವರು ಮನುಷ್ಯನ ಸಹಾಯಕ್ಕಾಗಿ ಆತುಕೊಂಡಿಲ್ಲ.ಆತನು ತನ್ನ ಕೃಪೆಯಿಂದ ಮನುಷ್ಯನಿಗೆ ಇದು ಅತ್ಯುತ್ತಮವಾಗಿದೆ ಎಂದು ಕಂಡಿದ್ದಲ್ಲಿ, ಪರಲೋಕದಿಂದಲೇ ನೇರವಾಗಿ ತನ್ನ ಖಜಾನೆಗೆ ಹಣ ಹಾಗೂ ಇತರ ಸಂಪನ್ಮೂಲಗಳನ್ನುಕಳುಹಿಸಬಹುದಾಗಿತ್ತು. ಮನುಷ್ಯರ ಸಹಾಯವಿಲ್ಲದೆ ಈ ಲೋಕಕ್ಕೆ ಸತ್ಯವನ್ನು ಸಾರಲುದೇವದೂತರನ್ನೇ ಕಳುಹಿಸುವ ಮಾರ್ಗವನ್ನು ದೇವರು ರೂಪಿಸಿರಬಹುದಾಗಿತ್ತು. ದೇವರುಆಕಾಶದಲ್ಲಿಯೇ ಸತ್ಯವನ್ನು ಬರೆದು ತನ್ನ ಉದ್ದೇಶವೇನೆಂದು ಅದರಮೂಲಕ ಸಾರಿಹೇಳಬಹುದಾಗಿತ್ತು. ದೇವರು ನಮ್ಮ ಚಿನ್ನಬೆಳ್ಳಿಯ ಮೇಲೆ ಆತುಕೊಂಡಿಲ್ಲ. “ಕಾಡಿನಲ್ಲಿರುವಸರ್ವಮೃಗಗಳೂ, ಗುಡ್ಡಗಳಲ್ಲಿರುವ ಸಾವಿರಾರು ಪಶುಗಳೂ ನನ್ನವೇ”, “ನನಗೆಹಸಿವೆಯಿದ್ದರೆ, ನಿಮಗೆ ತಿಳಿಸುವುದಿಲ್ಲ; ಲೋಕವೂ ಅದರಲ್ಲಿರುವುದೆಲ್ಲವೂ ನನ್ನದಲ್ಲವೇ?“ಎಂದು ದೇವರು ಹೇಳುತ್ತಾನೆ (ಕೀರ್ತನೆ 50:10,12). ಎಲ್ಲವೂಸಹ ದೇವರಸೇವೆಯಅಭಿವೃದ್ಧಿಗೋಸ್ಕರ ನಮಗೆ ಕೊಡಲ್ಪಟ್ಟಿದ್ದು, ಅದನ್ನು ನಮ್ಮ ಒಳ್ಳೆಯದಕ್ಕಾಗಿಉದ್ದೇಶಪೂರ್ವಕವಾಗಿ ಯೋಜಿಸಿದ್ದಾನೆ. ತನ್ನ ಜೊತೆಕೆಲಸಗಾರರನ್ನಾಗಿ ಮಾಡಿಕೊಂಡುನಮ್ಮನ್ನು ಆತನು ಗೌರವಿಸಿದ್ದಾನೆ. ಮನುಷ್ಯರು ತಮ್ಮ ಉದಾರತೆಯನ್ನು ತೋರಿಸಲುಅವರ ಸಹಕಾರದ ಅಗತ್ಯವನ್ನು ದೇವರು ತಿಳಿಯಪಡಿಸಿದ್ದಾನೆ.KanCCh 334.3

    ನೀತಿಸಮ್ಮತವಾದ ನೈತಿಕಆಜ್ಞೆಗಳು ಸಬ್ಬತ್‌ದಿನವನ್ನು ಪರಿಶುದ್ಧವಾಗಿಆಚರಿಸಬೇಕೆಂದುಆದೇಶಿಸುತ್ತವೆ. ಈ ಆಜ್ಞೆಯನ್ನು ಮೀರಿ, ಅದರ ಪರಿಣಾಮವಾಗಿ ಬರುವ ದಂಡನೆಗಳಿಗೆಒಳಗಾದಾಗ ಮಾತ್ರ ಇದು ಹೊರೆಯಾಗುತ್ತದೆ. ಅದೇ ರೀತಿ ದಶಾಂಶ ಕೊಡುವವ್ಯವಸ್ಥೆಯು, ಈ ಯೋಜನೆಯನ್ನು ನಿರಾಕರಿಸದವರಿಗೆ ಒಂದು ಭಾರವಲ್ಲ. ದೇವರಿಗೆಸಲ್ಲಿಸಬೇಕಾದ ದಶಮಭಾಗವನ್ನು ಕೊಡಬೇಕೆಂದು ಇಸ್ರಾಯೇಲ್ಯರಿಗೆ ನೀಡಿದ ಈಆದೇಶವು, ಅನಂತರದಲ್ಲಿ ದೇವರಿಂದ ರದ್ದುಮಾಡಲ್ಪಟ್ಟಿಲ್ಲ ಅಥವಾ ದುರ್ಬಲಗೊಳಿಸಲ್ಪಟ್ಟಿಲ್ಲ.ಬದಲಾಗಿ ಇಂದಿನ ಕ್ರೈಸ್ತಯುಗದಲ್ಲಿ ಕ್ರಿಸ್ತನಿಂದ ಮಾತ್ರ ರಕ್ಷಣೆ ಎಂಬ ಸಂದೇಶವನ್ನುಇನ್ನೂ ಹೆಚ್ಚಾಗಿ ಸಾರಬೇಕಾಗಿದೆ.KanCCh 335.1

    ಸುವಾರ್ತೆಯನ್ನು ಇನ್ನೂ ಹೆಚ್ಚಾಗಿ ಜಗತ್ತಿನ ಎಲ್ಲಾ ಕಡೆಯಲ್ಲಿಂಸಾರಬೇಕಾಗಿರುವುದರಿಂದ, ಕ್ರಿಸ್ತನಮರಣದ ನಂತರ ಈ ಹೋರಾಟವನ್ನುಮುಂದುವರೆಸಲು ಹೆಚ್ಚಿನ ಪೂರ್ವಸಿದ್ಧತೆಗಳ ಅಗತ್ಯವಿದೆ. ಈ ಕಾರಣದಿಂದ ಇಸ್ರಾಯೇಲ್ಯರಕಾಲಕ್ಕಿಂತಲೂ ಈಗ ದಶಮಭಾಗ ಹಾಗೂ ಕಾಣಿಕೆ ಕೊಡಬೇಕಾದ ತುರ್ತು ಅಗತ್ಯವಿದೆ.ಹಿಂದಿಗಿಂತಲೂ ಹೆಚ್ಚಾಗಿ ಈಗ ಆತನ ಸೇವೆಗೆ ಧಾರಾಳವಾಗಿ ಕಾಣಿಕೆ, ದಶಾಂಶಕೊಡಬೇಕೆಂದು ದೇವರು ಬಯಸುತ್ತಾನೆ. ನಾವು ಕೊಡಬೇಕಾದ ಕಾಣಿಕೆ, ದಶಮಭಾಗಗಳುನಮಗೆ ದೊರೆತ ಬೆಳಕು ಹಾಗೂ ಆಶೀರ್ವಾದಗಳಿಗೆ ಅನುಗುಣವಾಗಿರಬೇಕೆಂಬಸಿದ್ಧಾಂತವನ್ನು ಕ್ರಿಸ್ತನು ಸ್ಥಾಪಿಸಿದ್ದಾನೆ. “ಯಾವನಿಗೆ ಬಹಳವಾಗಿ ಕೊಟ್ಟಿದೆಯೇ, ಅವನಕಡೆಯಿಂದ ಬಹಳವಾಗಿನಿರೀಕ್ಷಿಸಲ್ಪಡುವುದು” ಎಂದು ಕ್ರಿಸ್ತನು ಹೇಳಿದ್ದಾನೆ (ಲೂಕ12:48),KanCCh 335.2

    ದೇವರವಾಕ್ಯದಿಂದ ಹೇರಳವಾದ ಬೆಳಕು ಪ್ರಕಾಶಿಸುತ್ತಿದೆ. ಆದುದರಿಂದ ನಾವುನಿರ್ಲಕ್ಷಿಸಿದ ಅವಕಾಶಗಳನ್ನು ನೆನಪಿಗೆ ತಂದುಕೊಂಡು ಎಚ್ಚರಗೊಳ್ಳಬೇಕಾಗಿದೆ. ಎಲ್ಲರೂದೇವರ ದಶಾಂಶ ಹಾಗೂ ಕಾಣಿಕೆಗಳನ್ನು ಆತನಿಗೆ ಹಿಂತಿರುಗಿಸುವಲ್ಲಿ ಪ್ರಾಮಾಣಿಕರಾಗಿದ್ದಲ್ಲಿ,ಅಂತ್ಯಕಾಲದ ಸಂದೇಶವನ್ನು ಜಗತ್ತು ಕೇಳುವುದಕ್ಕೆ ಬೇಕಾದ ಮಾರ್ಗವು ತೆರೆಯಲ್ಪಡುವುದು.ದೇವಜನರ ಹೃದಯವು ಕ್ರಿಸ್ತನಿಗಾಗಿ ಪ್ರೀತಿಹೊಂದಿದ್ದಲ್ಲಿ, ಕ್ರೈಸ್ತಸಭೆಯ ಪ್ರತಿಯೊಬ್ಬವಿಶ್ವಾಸಿಯೂ ನಿಸ್ವಾರ್ಥ ಹಾಗೂ ತ್ಯಾಗ ಮನೋಭಾವದಿಂದ ಸಂಪೂರ್ಣವಾಗಿ ಕೂಡಿದ್ದಲ್ಲಿ,ಹಾಗೂ ಎಲ್ಲರೂ ಸಹ ಪರಿಪೂರ್ಣವಾಗಿ ಆಸಕ್ತಿ, ಶ್ರದ್ಧೆ ತೋರಿಸಿದಲ್ಲಿ ದೇಶ ವಿದೇಶಗಳಲ್ಲಿನಡೆಯುವ ಸುವಾರ್ತಾ ಸೇವೆಗೆ ಯಾವುದೇ ರೀತಿಯ ಹಣದ ಕೊರತೆ ಕಂಡುಬರುವುದಿಲ್ಲ.ನಮ್ಮ ಸಂಪನ್ಮೂಲಗಳು ಅನೇಕ ಪಟ್ಟು ಹೆಚ್ಚಾಗುವವು, ಸಾವಿರಾರು ಬಾಗಿಲುಗಳುತೆರೆಯಲ್ಪಟ್ಟು, ಅದರಲ್ಲಿ ಪ್ರವೇಶಿಸಲು ನಮಗೆ ಆಹ್ವಾನ ಬರುವುದು. ಜಗತ್ತಿಗೆ ಕರುಣೆಯಸಂದೇಶ ಸಾರಬೇಕೆಂಬ ದೇವರ ಉದ್ದೇಶವು ಆತನ ಜನರಿಂದ ನೆರವೇರಿದ್ದಲ್ಲಿ, ಇದಕ್ಕೆಮುಂಚೆಯೇ ಕ್ರಿಸ್ತನು ಈ ಲೋಕಕ್ಕೆ ಬಂದಿರುತ್ತಿದ್ದನು ಹಾಗೂ ದೇವಭಕ್ತರೆಲ್ಲರೂ ಹೊಸಯೆರೂಸಲೇಮಿಗೆ ಸೇರಿರುತ್ತಿದ್ದರು.KanCCh 336.1