Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
 • Results
 • Related
 • Featured
No results found for: "".
 • Weighted Relevancy
 • Content Sequence
 • Relevancy
 • Earliest First
 • Latest First
  Larger font
  Smaller font
  Copy
  Print
  Contents

  ಅಧ್ಯಾಯ-38 — ಶುಚಿತ್ವದ ಪ್ರಾಮುಖ್ಯತೆಗಳು

  ರಕ್ತವು ಜೀವಧಾರೆಯಾಗಿದೆ. ಆದುದರಿಂದ ಉತ್ತಮ ಆರೋಗ್ಯ ಬೇಕಾದಲ್ಲಿ ನಮ್ಮಲ್ಲಿಒಳ್ಳೆಯ ರಕ್ತವಿರಬೇಕು. ಅದು ಅಂಗಾಂಶಗಳು ಹಾಗೂ ದೇಹಬಲವನ್ನು ಸರಿಪಡಿಸಿಮೊದಲಿನಸ್ಥಿತಿಗೆ ತರುತ್ತದೆ ಹಾಗೂ ದೇಹವನ್ನು ಪೋಷಿಸುತ್ತದೆ. ರಕ್ತಕ್ಕೆ ಉತ್ತಮವಾದಆಹಾರದ ಅಂಶಗಳು ಸರಬರಾಜುಗೊಂಡಾಗ ಮತ್ತು ನಿರ್ಮಲವಾದ ಗಾಳಿಯಸಂಪರ್ಕದಿಂದ ಶುದ್ಧಿಗೊಳಿಸಲ್ಪಟ್ಟು ಚೈತನ್ಯಗೊಂಡಾಗ, ಅದು ಶರೀರದ ವ್ಯವಸ್ಥೆಯಎಲ್ಲಾ ಅಂಗಾಂಗಗಳಿಗೆ ಜೀವ ನೀಡಿ ಕ್ರಿಯಾಶೀಲತೆ ಉಂಟುಮಾಡುತ್ತದೆ. ರಕ್ತಸಂಚಾರಪರಿಪೂರ್ಣವಾಗಿದ್ದಷ್ಟೂ, ಈ ಕಾರ್ಯವು ಅತ್ಯುತ್ತಮವಾಗಿರುತ್ತದೆ.KanCCh 269.1

  ತಂಪಾದ ಅಥವಾ ತಣ್ಣೀರಿನಸ್ನಾನವು ಒಂದು ಅತ್ಯುತ್ತಮ ಟಾನಿಕ್ ಅಂದರೆಉತ್ತೇಜಕವಾಗಿದ್ದು, ರಕ್ತಪರಿಚಲನೆಯನ್ನು ನಿಯಂತ್ರಿಸುವ ಅತ್ಯಂತ ಸುಲಭವಾದ ಮತ್ತುತೃಪ್ತಿಕರವಾದ ಮಾರ್ಗಗಳಲ್ಲಿ ಒಂದಾಗಿದೆ. ಬೆಚ್ಚಗಿನ ನೀರಿನಿಂದ ಸ್ನಾನ ಮಾಡುವಾಗಚರ್ಮದ ಸೂಕ್ಷ್ಮರಂಧ್ರಗಳು (Pores) ತೆರೆಯಲ್ಪಡುವುದರಿಂದ ಶರೀರದ ಕೊಳೆಯುನಿವಾರಣೆಯಾಗುವುದಕ್ಕೆ ಸಹಾಯವಾಗುತ್ತದೆ. ಬೆಚ್ಚಗಿನ ಹಾಗೂ ತಣ್ಣನೆನೀರಿನ ಸ್ನಾನವುನರಗಳನ್ನು ಶಮನಗೊಳಿಸಿ ರಕ್ತಪರಿಚಲನೆಯನ್ನು ಸಮೀಕರಿಸುತ್ತದೆ. ಅಂದರೆ ಒಂದೇರೀತಿಇರುವಂತೆ ಮಾಡುತ್ತದೆ.KanCCh 269.2

  ವ್ಯಾಯಾಮವು ರಕ್ತಪರಿಚಲನೆಯನ್ನು ಶೀಘ್ರವಾಗುವಂತೆಯೂ ಹಾಗೂ ಒಂದೇರೀತಿಯಾಗಿಯೂ ಇರುವಂತೆ ಮಾಡುತ್ತದೆ. ಆದರೆ ಸೋಮಾರಿತನವು ರಕ್ತವನ್ನುಸರಾಗವಾಗಿ ಹರಿಯುವಂತೆ ಮಾಡದಿರುವುದರಿಂದ ಉತ್ತಮ ಆರೋಗ್ಯ ಮತ್ತುಚಟುವಟಿಕೆಯ ಜೀವನಕ್ಕೆ ಅಗತ್ಯವಾದ ಅಂಶಗಳು ದೊರೆಯುವುದಿಲ್ಲ. ಚರ್ಮವೂಸಹ ನಿಷ್ಕ್ರಿಯಗೊಳ್ಳುತ್ತದೆ. ಇದರಿಂದ ಶರೀರದ ಕಲ್ಮಶಗಳು ಹೊರದೂಡಲ್ಪಡುವುದಿಲ್ಲ.ಕ್ರಿಯಾಶೀಲವಾದ ವ್ಯಾಯಾಮದಿಂದ ರಕ್ತಸಂಚಾರವು ವೇಗವಾಗಿ ನಡೆದುಚರ್ಮವುಆರೋಗ್ಯಕರ ಸ್ಥಿತಿಯಲ್ಲಿರುತ್ತದೆ ಮತ್ತು ಶ್ವಾಸಕೋಶಗಳಿಗೆ ಶುದ್ಧವಾದ ತಾಜಾ ಆಮ್ಲಜನಕವುಸಾಕಷ್ಟು ಪ್ರಮಾಣದಲ್ಲಿ ಒದಗುತ್ತದೆ.KanCCh 269.3

  ಶ್ವಾಸಕೋಶಗಳಿಗೆ ಸಾಧ್ಯವಾದಷ್ಟು ಸ್ವಾತಂತ್ರವಿರಬೇಕು. ಮುಕ್ತವಾದ ಚಟುವಟಿಕೆಯಿಂದಅವುಗಳ ಸಾಮರ್ಥ್ಯವು ವೃದ್ಧಿಯಾಗುತ್ತದೆ, ಆದರೆ ಅವು ಸೆಟೆದುಕೊಂಡಲ್ಲಿ ಹಾಗೂಸಂಕುಚಿತಗೊಂಡಲ್ಲಿ, ಅವುಗಳ ಸಾಮರ್ಥ್ಯ ಕಡಿಮೆಯಾಗುತ್ತದೆ. ಈ ಕಾರಣದಿಂದವ್ಯಾಯಾಮ, ಚಟುವಟಿಕೆಯಿಲ್ಲದವರಲ್ಲಿ ಅದರ ಅನಾರೋಗ್ಯಕರ ಪರಿಣಾಮಗಳುಕಂಡುಬರುತ್ತವೆ. ಇದರಿಂದ ದೀರ್ಘವಾಗಿ ಉಸಿರಾಡುವುದಕ್ಕೂ ಬಹಳ ಕಷ್ಟವಾಗುತ್ತದೆಇಲ್ಲವೆ ಅಸಾಧ್ಯವಾಗುತ್ತದೆ. ಆಗ ಕೃತಕವಾಗಿ ಉಸಿರಾಡಬೇಕಾಗುತ್ತದೆ. ಇದು ಶೀಘ್ರದಲ್ಲಿಯೇ ಒಂದು ಅಭ್ಯಾಸವಾಗಿ ಮಾರ್ಪಟ್ಟು, ಶ್ವಾಸಕೋಶಗಳು ವಿಸ್ತಾರಗೊಳ್ಳುವ ತಮ್ಮ ಶಕ್ತಿಯನ್ನುಕಳೆದುಕೊಳ್ಳುತ್ತವೆ.KanCCh 269.4

  ಈ ರೀತಿಯಾಗಿ ಶರೀರಕ್ಕೆ ಸಾಕಷ್ಟು ಪ್ರಮಾಣದಲ್ಲಿ ಆಮ್ಲಜನಕವು ದೊರೆಯುವುದಿಲ್ಲ.ರಕ್ತವು ನಿಧಾನವಾಗಿ ಚಲಿಸುವುದರಿಂದ, ಶ್ವಾಸಕೋಶಗಳ ನಿಶ್ವಾಸದಿಂದಹೊರದೂಡಲ್ಪಡಬೇಕಾದ ವ್ಯರ್ಥ ಹಾಗೂ ವಿಷಕಾರಿ ಪದಾರ್ಥಗಳು ಅಲ್ಲಿಯೇಉಳಿಯಲ್ಪಡುವುದರಿಂದ ರಕ್ತವು ಮಲಿನಗೊಳ್ಳುತ್ತದೆ. ಶ್ವಾಸಕೋಶಗಳು ಮಾತ್ರವಲ್ಲದೆ,ಜಠರ, ಪಿತ್ತಜನಕಾಂಗ (ಲಿವರ್) ಮತ್ತು ಮೆದುಳೂ ಸಹ ಹಾನಿಗೊಳ್ಳುತ್ತವೆ. ಚರ್ಮವುಕಂದುಹಳದಿ ಬಣ್ಣಕ್ಕೆ ತಿರುಗುತ್ತದೆ. ಜೀರ್ಣಕ್ರಿಯೆ ನಿಧಾನಗೊಳ್ಳುತ್ತದೆ. ಅಲ್ಲದೆ ಹೃದಯವುನಿರುತ್ಸಾಹಗೊಂಡು ಮೆದುಳಿಗೆ ಮಂಕು ಬಡಿದಂತಾಗುತ್ತದೆ ಹಾಗೂ ಆಲೋಚನೆಗಳುಗಲಿಬಿಲಿಗೊಂಡು ವ್ಯಕ್ತಿಯು ಸಂಪೂರ್ಣವಾಗಿ ಖಿನ್ನತೆಗೊಳಗಾಗದಂತೆ ಕಂಡುಬರುವನು.ಶರೀರದ ಸಂಪೂರ್ಣ ವ್ಯವಸ್ಥೆಯು ನಿರುತ್ಸಾಹದಿಂದ ನಿಷ್ಕ್ರಿಯಗೊಂಡು, ರೋಗಕ್ಕೆತುತ್ತಾಗುವ ಸಾಧ್ಯತೆ ಹೆಚ್ಚಾಗುತ್ತದೆ.KanCCh 270.1

  ಶ್ವಾಸಕೋಶಗಳು ನಿರಂತರವಾಗಿ ಶರೀರದಿಂದ ಕಲ್ಮಶಗಳನ್ನುಹೊರದೂಡುತ್ತಿರುವುದರಿಂದ, ಅವುಗಳಿಗೆ ಶುದ್ಧವಾದ ಗಾಳಿ ಯಾವಾಗಲೂಸರಬರಾಜಾಗುತ್ತಿರಬೇಕು. ಅಶುದ್ಧವಾದ ಗಾಳಿಯಿಂದ ಶರೀರಕ್ಕೆ ಅಗತ್ಯವಾದ ಆಮ್ಲಜನಕಸಿಕ್ಕುವುದಿಲ್ಲ. ಆದುದರಿಂದ ರಕ್ತವು ಯಾವುದೇರೀತಿಯಲ್ಲಿಚೈತನ್ಯಗೊಳ್ಳದೆ ಮೆದುಳುಹಾಗೂ ಇತರ ಅಂಗಗಳಿಗೆ ಸಂಚರಿಸುವುದು. ಈ ಕಾರಣದಿಂದಲೇ ಮನೆಗಳಲ್ಲಿ ಶುದ್ಧವಾದಗಾಳಿಬೆಳಕು ಬರುವಂತ ವ್ಯವಸ್ಥೆ ಇರಬೇಕು. ಉತ್ತಮವಾದ ಗಾಳಿಬೆಳಕು ಬಾರದಿರುವಂತಮನೆಗಳಲ್ಲಿ ವಾಸಿಸುವುದರಿಂದ ಅಲ್ಲಿನ ಆಮ್ಲಜನಕವು ಜಡ ವಾಗಿದ್ದುಮಲಿನವಾಗಿರುವುದರಿಂದ ಶರೀರದ ಸಂಪೂರ್ಣ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ.ಇದರಿಂದ ಅಂತಹ ವ್ಯಕ್ತಿಗಳು ಶೀಘ್ರವಾಗಿ ಶೀತದ ಪರಿಣಾಮಕ್ಕೆ ತುತ್ತಾಗುವುದಲ್ಲದೆ,ರೋಗಗಳಿಗೂ ಒಳಗಾಗುತ್ತಾರೆ. ಮನೆಯ ಒಳಗೆ ಯಾವಾಗಲೂ ಇರುವಂತ ಮಹಿಳೆಯರುದುರ್ಬಲರಾಗಿ ಬಿಳಿಚಿಕೊಂಡಿರುತ್ತಾರೆ. ಅವರುತಮ್ಮ ನಿಶ್ವಾಸದಿಂದ ಬಿಟ್ಟ ಅದೇಗಾಳಿಯನ್ನುಪುನಃ ಸೇವಿಸುವುದರಿಂದ ಶ್ವಾಸಕೋಶಗಳು ಹಾಗೂ ಶರೀರದ ಸೂಕ್ಷ್ಮರಂಧ್ರಗಳಿಂದಹೊರಗೆಬಂದ ಅದೇ ವಿಷಕಾರಿವಸ್ತುಗಳು ತಿರುಗಿ ರಕ್ತಕ್ಕೆ ಸೇರುತ್ತವೆ. ರಾತ್ರಿಯಲ್ಲಿನಿರ್ಮಲವಾದ ಗಾಳಿಯ ವ್ಯವಸ್ಥೆಯಿಲ್ಲದಿರುವುದರಿಂದ ಅನೇಕರು ರೋಗಕ್ಕೆ ತುತ್ತಾಗುತ್ತಾರೆ.ಪ್ರಕೃತಿಯಲ್ಲಿ ದೊರೆಯುವ ಶುದ್ಧವಾದ ಗಾಳಿಯು ನಮಗೆ ದೇವರು ಕೊಟ್ಟಆಶೀರ್ವಾದವಾಗಿದೆ.KanCCh 270.2

  ಶುಚಿತ್ವವು ಶಾರೀರಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಅಗತ್ಯವಾಗಿದೆ. ಶರೀರವುಚರ್ಮದ ಮೂಲಕ ಕಲ್ಮಶವನ್ನು ನಿರಂತರವಾಗಿ ಹೊರಹಾಕುತ್ತದೆ. ದಿನನಿತ್ಯವೂ ಸ್ನಾನಮಾಡದೆ ಶರೀರವನ್ನು ಶುಚಿಯಾಗಿಟ್ಟುಕೊಳ್ಳದಿದ್ದಲ್ಲಿ, ಚರ್ಮದಲ್ಲಿರುವ ಲಕ್ಷಾಂತರಸೂಕ್ಷ್ಮರಂಧ್ರಗಳು ಬೇಗನೆ ಕಟ್ಟಿಕೊಳ್ಳುತ್ತವೆ (Clogged). ಆಗ ದೇಹದ ಇತರವಿಸರ್ಜನಾಅಂಗಗಳು ಚರ್ಮದ ಕೆಲಸವನ್ನು ನಿರ್ವಹಿಸಿ ಕಲ್ಮಶಗಳನ್ನು ಹೊರದೂಡಬೇಕು.ಇದರಿಂದ ಅವುಗಳಿಗೆ ಹೆಚ್ಚಿನ ಒತ್ತಡ ಉಂಟಾಗುತ್ತದೆ.KanCCh 270.3

  ಅನೇಕರು ದಿನಕ್ಕೆರಡು ಬಾರಿ ತಣ್ಣೀರು ಅಥವಾ ಉಗುರು ಬೆಚ್ಚಗಿನ ನೀರಿನಲ್ಲಿಮಿಂದು ಅದರ ಪ್ರಯೋಜನ ಹೊಂದುತ್ತಾರೆ. ತಣ್ಣೀರಿನಸ್ನಾನವು ಶೀತಕ್ಕೆ ವಿರುದ್ಧವಾಗಿರಕ್ಷಣೆ ನೀಡುತ್ತದೆ. ಅಲ್ಲದೆ ರಕ್ತಪರಿಚಲನೆಯು ವೃದ್ಧಿಗೊಂಡು, ರಕ್ತವು ಹೊರಮೈಗೆ(Surface) ಬರುವುದರಿಂದ, ಅದು ಸುಲಭವಾಗಿಯೂ, ಕ್ರಮಬದ್ಧವಾಗಿಯೂಸಂಚರಿಸುತ್ತದೆ. ಶರೀರ ಮನಸ್ಸುಗಳೆರಡೂಚೈತನ್ಯಗೊಳ್ಳುತ್ತವೆ. ಸ್ನಾಯುಗಳು ಸಂದರ್ಭಕ್ಕೆಸರಿಯಾಗಿ ಬಾಗುವಂತಾಗುತ್ತವೆ ಮತ್ತು ಬುದ್ಧಿಶಕ್ತಿ ತೀಕ್ಷ್ಣಗೊಳ್ಳುತ್ತದೆ. ಸ್ನಾನವು ನರಗಳನ್ನುಶಮನಗೊಳಿಸುತ್ತದೆ. ಸ್ನಾನವು ಕರುಳುಗಳು, ಜಠರ ಹಾಗೂ ಪಿತ್ತಜನಕಾಂಗಗಳಿಗೆ ಆರೋಗ್ಯಮತ್ತು ಶಕ್ತಿ ನೀಡುವುದಲ್ಲದೆ, ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ.KanCCh 271.1

  ನಾವು ಹಾಕುವ ಬಟ್ಟೆಗಳೂ ಸಹ ಶುಚಿಯಾಗಿರಬೇಕು. ಬಟ್ಟೆಗಳು ಅವುಗಳ ರಂಧ್ರಗಳಿಂದಬರುವ ಅಶುಚಿಯಾದ ವಸ್ತುಗಳನ್ನು ಹೀರಿಕೊಳ್ಳುತ್ತವೆ. ಅವುಗಳನ್ನು ಪ್ರತಿನಿತ್ಯವೂಬದಲಿಸದಿದ್ದಲ್ಲಿ, ಅವುಗಳಲ್ಲಿರುವ ಕಲ್ಮಶವನ್ನು ಪುನಃ ಶರೀರವು ಹೀರಿಕೊಳ್ಳುತ್ತದೆ.KanCCh 271.2

  ಎಲ್ಲಾ ರೀತಿಯಾದ ಅಶುದ್ಧವು ರೋಗಕ್ಕೆ ಕಾರಣವಾಗುತ್ತವೆ. ಮರಣಕ್ಕೆ ಕಾರಣವಾಗುವಸೂಕ್ಷ್ಮ ಜೀವಿಗಳು ಕತ್ತಲೆಯಾದ ಮನೆಯಲ್ಲಿನ ಮೂಲೆಗಳಲ್ಲಿ ಕೊಳೆಯುತ್ತಿರುವ ವ್ಯರ್ಥಪದಾರ್ಥಗಳು, ತೇವವಾದ ಸ್ಥಳ, ಸಂಪೂರ್ಣವಾಗಿ ಹುಳಿಗಟ್ಟಿಲ್ಲದ ವಸ್ತುಗಳ ಹಾಗೂತೇವದ ಬೆಚ್ಚನೆಯ ಗಾಳಿಯಲ್ಲಿ ಸ್ವಲ್ಪಕಾಲ ಇರುವ ವಸ್ತುಗಳ ಮೇಲೆ ಕಟ್ಟುವ ಶಿಲೀಂಧ್ರದಬೂಷ್ಟುಗಳಲ್ಲಿ ಹೇರಳವಾಗಿ ಕಂಡುಬರುತ್ತವೆ. ಕೊಳೆತ ತರಕಾರಿಗಳು ಅಥವಾ ಉದುರಿದಕೊಳೆತ ಎಲೆಗಳು ಗಾಳಿಯನ್ನು ಮಲಿನಗೊಳಿಸುತ್ತವೆ. ಅಶುದ್ಧವಾದ ಅಥವಾ ಕೊಳೆಯುವವಸ್ತುಗಳನ್ನು ಶೀಘ್ರವಾಗಿ ಮನೆಯಿಂದ ಹೊರದೂಡಬೇಕು. ಇವುಗಳಿಂದ ಸಾಂಕ್ರಾಮಿಕರೋಗಗಳು ಹರಡುತ್ತವೆ. ಸಂಪೂರ್ಣ ಸ್ವಚ್ಛತೆ, ಸಾಕಷ್ಟು ಸೂರ್ಯನ ಬೆಳಕು, ಮನೆಯಲ್ಲಿನೈರ್ಮಲ್ಯ ಇವುಗಳು ರೋಗಗಳನ್ನು ದೂರವಿಡುತ್ತವೆ ಹಾಗೂ ಮನೆಯಲ್ಲಿ ವಾಸಿಸುವವರಿಗೆಹರ್ಷಾನಂದ ಹಾಗೂ ಚೈತನ್ಯ ಕೊಡುತ್ತವೆ.KanCCh 271.3

  ಸ್ನಾನಮಾಡದೆ ಅಶುದ್ಧವಾಗಿರುವುದು, ಕೊಳಕಾದ ಹರಿದಬಟ್ಟೆಗಳನ್ನು ಹಾಕಿಕೊಳ್ಳುವುದುದೇವರಿಗೆ ಇಷ್ಟವಿಲ್ಲವೆಂದು ಚಿಕ್ಕವರಿಗೆ ತಿಳಿಸಿ ಹೇಳಬೇಕು. ಶುಭ್ರವಾದ ಬಟ್ಟೆಗಳನ್ನುಧರಿಸುವುದು ನಮ್ಮ ಆಲೋಚನೆಗಳನ್ನು ಶುದ್ಧವಾಗಿಯೂ ಹಾಗೂ ಉಲ್ಲಾಸದಿಂದಇರುವಂತೆ ಮಾಡುವ ವಿಧಾನಗಳಲ್ಲಿ ಒಂದಾಗಿದೆ. ಚರ್ಮದೊಂದಿಗೆ ಸಂಪರ್ಕವುಳ್ಳಎಲ್ಲಾ ವಸ್ತುಗಳೂ ಶುದ್ಧವಾಗಿರಬೇಕು. ಇಸ್ರಾಯೇಲ್ಯರು ಎಲ್ಲಾ ವಿಧದಲ್ಲಿಯೂ ಶುದ್ಧರಾಗಿರಬೇಕು ಹಾಗೂ ಶುಚಿಯಾದ ಅಭ್ಯಾಸಗಳನ್ನು ಬೆಳೆಸಿಕೊಳ್ಳಬೇಕೆಂದುಖಂಡಿತವಾಗಿ ಹೇಳಿದ ಯೆಹೋವ ದೇವರು ಇಂದು ತನ್ನ ಮಕ್ಕಳೂ ಸಹ ಅದೇ ರೀತಿಶುಚಿತ್ವ ಕಾಪಾಡಿಕೊಳ್ಳಬೇಕೆಂದು ಬಯಸುತ್ತಾನೆ. ಯಾವುದೇ ವಿಧವಾದ ಅಶುಚಿತ್ವವುದೇವರಿಗೆ ಇಷ್ಟವಾಗುವುದಿಲ್ಲ. ಮನೆಯ ಮೂಲೆಗಳನ್ನು ಗುಡಿಸುವಾಗ ಅಲಕ್ಷ್ಯಮಾಡಿಅಶುದ್ಧವಾಗಿರಿಸುವುದು ನಮ್ಮ ಮನಸ್ಸನ್ನೂ ಸಹ ಮಲಿನವಾಗಿರುವಂತೆ ಮಾಡುತ್ತವೆ.KanCCh 271.4

  ಪರಲೋಕವು ಪವಿತ್ರವಾಗಿಯೂ, ನಿರ್ಮಲವಾಗಿಯೂ ಇದೆ. ದೇವರ ಆ ಪರಿಶುದ್ಧಪಟ್ಟಣದೊಳಕ್ಕೆ ಪ್ರವೇಶಿಸುವವರ ಒಳ ಹಾಗೂ ಹೊರಗಿನ ಭಾಗಗಳೂ ಸಹಪರಿಶುದ್ಧವಾಗಿರಬೇಕು.KanCCh 272.1

  *****

  Larger font
  Smaller font
  Copy
  Print
  Contents