Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ತಂದೆ-ತಾಯಿಯರು ತಮ್ಮ ಮಕ್ಕಳ ನಿತ್ಯಜೀವಕ್ಕಾಗಿ ಒಟ್ಟಾಗಿ ಶ್ರಮಪಡಬೇಕು

    ದೇವರು ತನ್ನ ಮಿತಿಯಿಲ್ಲದ ಜ್ಞಾನದಿಂದ ಒಬ್ಬರ ಕಾರ್ಯವನ್ನು ಮತ್ತೊಬ್ಬರ ಕಾರ್ಯದೊಂದಿಗೆ ಹೋಲಿಕೆ ಮಾಡುವನು. ತಂದೆ-ತಾಯಿಯರು ತಮ್ಮ ಆತ್ಮೀಕ ಕಣ್ಣುಗಳಿಂದ ಇದನ್ನು ಅರಿತುಕೊಂಡಾಗ, ಪರಲೋಕದಿಂದ ಬರುವ ಫಲಿತಾಂಶವನ್ನು ಕಂಡು ವಿಸ್ಮಯಗೊಳ್ಳುವರು. ತಂದೆಯು ತನ್ನ ಕಾರ್ಯವನ್ನು ಸಾಧಾರಣವಾಗಿ ಎಣಿಸುವನು, ಆದರೆ ತಾಯಿ ಹೊಸದಾದ ಧೈರ್ಯ ಮತ್ತು ಸಾಮರ್ಥ್ಯ ಪಡೆದುಕೊಂಡು, ವಿವೇಕ, ದೂರದೃಷ್ಟಿ ಮತ್ತು ತಾಳ್ಮೆಯಿಂದ ತನ್ನ ಸೇವೆ ಮುಂದುವರಿಸುವಳು. ಈಗ ಅವಳಿಗೆ ತನ್ನ ಶ್ರಮದ ಬೆಲೆ ಅರ್ಥವಾಗುತ್ತದೆ. ಹೊರಗೆ ಕೆಲಸ ಮಾಡುವ ತಂದೆಯು ನಾಶವಾಗಿ ಅಳಿದು ಹೋಗುವ ವಸ್ತುಗಳು ಮತ್ತು ವಿಷಯಗಳೊಂದಿಗೆ ವ್ಯವಹರಿಸುತ್ತಾನೆ. ಆದರೆ, ತಾಯಿ ಎಳೆಯ ಮಕ್ಕಳ ಮನಸ್ಸು ಮತ್ತು ಗುಣಸ್ವಭಾವಗಳ ಬೆಳವಣಿಗೆಯಲ್ಲಿ ಭಾಗವಹಿಸಿ, ಆ ಸಮಯಕ್ಕೆ ಮಾತ್ರವಲ್ಲ, ನಿತ್ಯಜೀವಕ್ಕೆ ಬಾಧ್ಯರಾಗುವಂತೆಯೂ ಮಕ್ಕಳ ಸೇವೆಯಲ್ಲಿ ನಿರತಳಾಗಿರುತ್ತಾಳೆ.KanCCh 168.1

    ತಂದೆಯು ತನ್ನ ಮಕ್ಕಳಿಗೆ ಮಾಡಬೇಕಾದ ಕರ್ತವ್ಯವನ್ನು ತಾಯಿಗೆ ವರ್ಗಾಯಿಸಲಾಗದು. ಆಕೆಯು ತನ್ನ ಕೆಲಸ ಮಾಡುವುದರಲ್ಲಿಯೇ, ಸಾಕಷ್ಟು ಭಾರಹೊರುತ್ತಾಳೆ. ತಂದೆ-ತಾಯಿಯರಿಬ್ಬರೂ ಒಟ್ಟಾಗಿ ಸಾಮರಸ್ಯದಿಂದ ಮಾಡಿದಾಗ ಮಾತ್ರ, ದೇವರು ಅವರಿಗೆ ವಹಿಸಿರುವ ಕಾರ್ಯವನ್ನು ಸಾಧಿಸಲು ಸಾಧ್ಯವಾಗುತ್ತದೆ. ಮಕ್ಕಳನ್ನು ನಿತ್ಯಜೀವಕ್ಕೂ ಹಾಗೂ ಅಮರತ್ವಕ್ಕೂ ಸಿದ್ಧ ಮಾಡುವ ಶಿಕ್ಷಣ ನೀಡುವ ಕಾರ್ಯದಲ್ಲಿ ತಂದೆ ತನ್ನ ಕರ್ತವ್ಯವನ್ನು ತಪ್ಪಿಸಿಕೊಳ್ಳಬಾರದು. ಅವನು ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು. ತಂದೆ-ತಾಯಿಯರಿಬ್ಬರೂ ಅನಿವಾರ್ಯವಾಗಿ ಮಾಡಬೇಕಾದ ಕರ್ತವ್ಯಗಳು ಹಾಗೂ ಜವಾಬ್ದಾರಿಗಳೂ ಇವೆ. ತಂದೆ-ತಾಯಿಯರು ತಮ್ಮ ಮಕ್ಕಳಲ್ಲಿ ಗೌರವ ಮತ್ತು ಪ್ರೀತಿ ಮುಂತಾದ ಗುಣಗಳು ಬೆಳೆಯಬೇಕಾದರೆ ಮೊದಲು ಅವರಲ್ಲಿ ಇಂತಹ ಗುಣಗಳು ಕಂಡು ಬರಬೇಕು.KanCCh 168.2

    ತಂದೆಯು ಗಂಡುಮಕ್ಕಳೊಂದಿಗೆ ನಿಕಟ ಸಂಬಂಧಹೊಂದಿರಬೇಕು. ಅವನು ತನ್ನ ವಿಶಾಲವಾದ ಅನುಭವದಿಂದ ಅವರು ನನ್ನ ಹೃದಯಕ್ಕೆ ವಿಶೇಷವಾಗಿ, ಆಪ್ತರಾಗುವ ರೀತಿಯಲ್ಲಿ ಮಾಡಲು ಸರಳವಾಗಿಯೂ ಮತ್ತು ಸೌಮ್ಯವಾಗಿಯೂ ಅವರೊಂದಿಗೆ ಮಾತಾಡಬೇಕು. ಎಲ್ಲಾ ಸಮಯದಲ್ಲಿ ತಂದೆಯು ತಮ್ಮ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದು ನಮ್ಮ ಸಂತೋಷವನ್ನು ಬಯಸುತ್ತಾರೆಂದು ಗಂಡುಮಕ್ಕಳು ತಿಳಿದುಕೊಳ್ಳುವಂತೆ ತಂದೆ ವರ್ತಿಸಬೇಕು.KanCCh 168.3

    ಗಂಡುಮಕ್ಕಳು ಮಾತ್ರವಿರುವ ತಂದೆಯು ತನ್ನ ಪಾಲನೆ, ಪೋಷಣೆಗೆ ಕೊಡಲ್ಪಟ್ಟವರನ್ನು ಎಂದಿಗೂ ನಿರ್ಲಕ್ಷಿಸಬಾರದು. ಅವನು ಅವರಿಗೆ ಜನ್ಮ ಕೊಟ್ಟಿದ್ದಾನೆ. ಅವರನ್ನು ಕೆಟ್ಟವರ ಸಹವಾಸದಿಂದ, ಮತ್ತು ಧರ್ಮಸಮ್ಮತವಲ್ಲದವರ ಸ್ನೇಹದಿಂದ ದೂರವಿರಿಸಲು ತನ್ನೆಲ್ಲಾ ಸಾಮರ್ಥ್ಯವನ್ನು ಉಪಯೋಗಿಸಬೇಕು. ಅಲ್ಲದೆ ತಂದೆ ಈ ವಿಷಯದಲ್ಲಿ ದೇವರಿಗೆ ಹೊಣೆಯಾಗಿದ್ದು ಲೆಕ್ಕ ಕೊಡಬೇಕಾಗಿದೆ. ಅವರು ತಾಳ್ಮೆಯಿಲ್ಲದ ಮತ್ತು ಚಂಚಲ ಸ್ವಭಾವದ ಗಂಡು ಮಕ್ಕಳನ್ನು ಸಂಪೂರ್ಣವಾಗಿ ತಾಯಿಯ ಪಾಲನೆಗೆ ಬಿಡಬಾರದು. ಇದು ತಾಯಿಗೆ ಬಹಳ ಭಾರವಾದ ಜವಾಬ್ದಾರಿಯಾಗುತ್ತದೆ. ತಾಯಿ ಹಾಗೂ ಮಕ್ಕಳ ಸಂಪೂರ್ಣ ಯೋಗಕ್ಷೇಮಕ್ಕಾಗಿ ತಂದೆಯು ಯೋಜನೆ ಹಾಕಿಕೊಳ್ಳಬೇಕು. ಆಕೆಗೆ ತನ್ನನ್ನು ನಿಯಂತ್ರಿಸಿಕೊಂಡು ಮಕ್ಕಳಿಗೆ ವಿವೇಚನೆಯಿಂದ ಶಿಕ್ಷಣ ನೀಡುವ ಕಾರ್ಯವು ಬಹಳ ಕಠಿಣವಾಗಿರುತ್ತದೆ. ಒಂದು ಕುಟುಂಬದಲ್ಲಿ ಇಂತಹ ಪರಿಸ್ಥಿತಿಯಿದ್ದಲ್ಲಿ, ತಂದೆಯು ತಾನೇ ಹೆಚ್ಚಿನ ಭಾರಹೊರಬೇಕು. ತನ್ನ ಮಕ್ಕಳನ್ನು ಕಾಪಾಡಲು ಅವನು ಹೆಚ್ಚಿನ ಪ್ರಯತ್ನ ಮಾಡಬೇಕು. ಮಕ್ಕಳು ದೇವರಿಂದ ಕೊಡಲ್ಪಟ್ಟ ಸ್ವಾಸ್ತ್ಯವಾಗಿದ್ದಾರೆ. ತಂದೆ ತಾಯಿಯರಾದ ನಾವು ದೇವರ ಆಸ್ತಿಯನ್ನು ನಿರ್ವಹಿಸುವುದರ ಲೆಕ್ಕ ಕೊಡಬೇಕಾಗಿದೆ. ಅವರು ದೇವರಿಗೆ “ಇಗೋ, ನೀನು ನನಗೆ ಕೊಟ್ಟ ಮಕ್ಕಳು” ಎಂದು ಹರ್ಷದಿಂದ ಹೇಳುವ ದಿನದವರೆಗೆ ಪ್ರೀತಿ, ನಂಬಿಕೆ ಮತ್ತು ಪ್ರಾರ್ಥನಾ ಪೂರ್ವಕವಾಗಿ ಅವರಿಗಾಗಿ ಸೇವೆ ಮಾಡಬೇಕು.KanCCh 169.1

    ತಂದೆ-ತಾಯಿಯರು ವಿವೇಚನೆಯಿಂದ ವರ್ತಿಸಿ, ಪ್ರತಿಯೊಂದು ಮಗುವಿಗೂ ಉತ್ತಮ ಶಿಕ್ಷಣ ನೀಡುವಂತೆಯೂ, ತಾಯಿ ತನ್ನ ಮಾನಸಿಕ ಸಾಮರ್ಥ್ಯ ಉಪಯೋಗಿಸಿ ಬಲಗೊಂಡು ತನ್ನ ಮಕ್ಕಳನ್ನು ದೇವದೂತರೊಂದಿಗೆ ಒಟ್ಟಿಗೆ ಬಾಳುವಂತೆ ಶಿಸ್ತಿನಿಂದ ಬೆಳೆಸಬೇಕೆಂಬುದು ದೇವರ ಚಿತ್ತವಾಗಿದೆ. ಆಕೆ ಧೈರ್ಯದಿಂದ, ದೇವರ ಮೇಲಿನ ಭಯ ಭಕ್ತಿಯಿಂದ, ತನ್ನ ಕರ್ತವ್ಯವನ್ನು ನಿರ್ವಹಿಸಬೇಕು. ಆಗ ಆಕೆಯ ಮಕ್ಕಳು ಕುಟುಂಬಕ್ಕೂ ಮತ್ತು ಸಮಾಜಕ್ಕೂ ಆಶೀರ್ವಾದ ಉಂಟುಮಾಡುತ್ತಾರೆ. ಹೆಂಡತಿ ಹಾಗೂ ತಾಯಿ ಮಕ್ಕಳ ಲಾಲನೆ ಪಾಲನೆಯ ಭರದಿಂದ ಹತಾಶೆಗೊಳ್ಳದ ಹಾಗೆ ಗಂಡನೂ, ತಂದೆಯೂ ಆದವನು ಇವುಗಳನ್ನು ನೆನಪಿನಲ್ಲಿಡಬೇಕು.KanCCh 169.2

    ವಿವೇಚನೆಯಿಲ್ಲದೆ ಮನೆತುಂಬಾ ಮಕ್ಕಳನ್ನು ಹೊಂದಿರುವ ತಂದೆ ತಾಯಿಯರೂ ಇದ್ದಾರೆ. ಈ ಮಕ್ಕಳು ತಮ್ಮ ಲಾಲನೆ, ಪಾಲನೆ, ಆರೈಕೆ ಸಲಹೆಗಾಗಿ ಪೋಷಕರ ಮೇಲೆ ಸಂಪೂರ್ಣ ಆತುಕೊಂಡಿರುತ್ತಾರೆ. ಆದರೆ ತಂದೆ-ತಾಯಿಯರು ಎಲ್ಲಾ ಮಕ್ಕಳಿಗೂ ಒಂದೇ ರೀತಿಯಾದ ನ್ಯಾಯ ಕೊಡಲಾಗದು. ಇದು ತಾಯಿಗೆ ಮಾತ್ರವಲ್ಲ, ಆಕೆಯ ಮಕ್ಕಳಿಗೂ ಮತ್ತು ಸಮಾಜಕ್ಕೂ ಘೋರವಾದ ತಪ್ಪಾಗಿದೆ. ಮಕ್ಕಳು ದೊಡ್ಡವರಾದಾಗ್ಯೂ, ತಾಯಿ ಅವರನ್ನು ತನ್ನ ಕೈಗಳಲ್ಲೇ ಎತ್ತಿಕೊಂಡು ಸಲಹುವುದು ಆಕೆಗೆ ಒಂದು ಮಹಾ ಅನ್ಯಾಯವಾಗಿದೆ. ಇದರಿಂದಾಗಿ ಮಕ್ಕಳು ಸಾಮಾಜಿಕ ಸಂತೋಷದಿಂದ ವಂಚಿತರಾಗುತ್ತಾರೆ.ತಮ್ಮಮಕ್ಕಳಿಗೆ ಯಾವ ರೀತಿಯಲ್ಲಿ ಪೂರ್ವಸಿದ್ಧತೆ ಮಾಡಬೇಕು ಎಂಬುದನ್ನು ತಂದೆ-ತಾಯಿಯ ಶಾಂತಚಿತ್ತರಾಗಿ ಕುಳಿತು ನಿರ್ಧರಿಸಬೇಕು. ಇತರರಿಗೆ ಹೊರೆಯಾಗುವ ರೀತಿಯಲ್ಲಿ ಮಕ್ಕಳಿಗೆ ಜನ್ಮ ನೀಡುವುದಕ್ಕೆ ಅವರಿಗೆ ಹಕ್ಕಿಲ್ಲ. ಮಗುವಿನ ಭವಿಷ್ಯದ ಬಗ್ಗೆ ತಂದೆ-ತಾಯಿಯರು ಎಷ್ಟೊಂದು ಅಲ್ಪಗಮನ ನೀಡುತ್ತಿದ್ದಾರಲ್ಲವೇ! ತಾಯಿ ತನ್ನ ಆರೋಗ್ಯದ ಕಡೆ ಗಮನ ನೀಡದಿದ್ದಲ್ಲಿ, ಮಕ್ಕಳೆಂಬ ಮಂದೆಯನ್ನು ಆಕೆ ಸರಿಯಾಗಿ ನೋಡಿಕೊಳ್ಳಲಾಗದು. ಅವರಿಗೆ ಕೊಡಬೇಕಾದ ಅಗತ್ಯ ದೈವೀಕ ಶಿಕ್ಷಣ ಮತ್ತು ಸಲಹೆ ನೀಡುವುದರಲ್ಲಿ ತಾಯಿ ವಿಫಲಳಾದರೆ, ಮಕ್ಕಳ ಆರೈಕೆ ಮಾಡಲು ಅವಳಿಂದಾಗುವುದಿಲ್ಲ. ಇದರಿಂದಾಗಿ ಅವರು ದೇವರಿಗೆ ಅಗೌರವ ಕೊಡುವವರಾಗಿ ಬೆಳೆದು, ಕೆಟ್ಟವರ ಸಹವಾಸ ಮಾಡುವರು. ಅಲ್ಲದೆ ತಮ್ಮ ಕೆಟ್ಟತನವನ್ನು ಇತರರಿಗೂ ತಿಳಿಸಿ, ಅವರನ್ನೂ ಸಹ ಕೆಟ್ಟವರನ್ನಾಗಿ ಮಾಡುವರು. ಇಂತಹ ದುಷ್ಟ ಕೂಟವನ್ನು ಸೈತಾನನು ತನ್ನ ಇಷ್ಟದಂತೆ ಉಪಯೋಗಿಸಿಕೊಳ್ಳುವನು. KanCCh 169.3

    *****