Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಸಾರ್ವಜನಿಕಪ್ರಾರ್ಥನೆಗಳು ದೀರ್ಘವಾಗಿರಬಾರದು

    ಕ್ರಿಸ್ತನು ತನ್ನ ಶಿಷ್ಯರು ಮಾಡುವ ಪ್ರಾರ್ಥನೆಗಳು ಚಿಕ್ಕದಾಗಿಯೂ, ಹಾಗೂ ಅವರಿಗೆಅಗತ್ಯವಾದದ್ದನ್ನು ಕೇಳಿಕೊಳ್ಳುವಂತಿರಬೇಕೇ ಹೊರತು, ಅನವಶ್ಯಕವಾಗಿಉದ್ದವಾಗಿರಬಾರದೆಂದು ತಿಳಿಸಿಕೊಟ್ಟನು. ಲೌಕಿಕವಾದ ಮತ್ತು ಆತ್ಮೀಕವಾದಆಶೀರ್ವಾದಗಳಿಗಾಗಿಯೂ ಹಾಗೂ ಅವುಗಳಿಗೆ ಕೃತಜ್ಞತೆ ಹೇಗೆ ಸಲ್ಲಿಸಬೇಕೆಂದು ಆತನುಅವರಿಗೆ ಕಲಿಸಿಕೊಟ್ಟನು. ಕ್ರಿಸ್ತನು ಕಲಿಸಿಕೊಟ್ಟ ಈ ಪ್ರಾರ್ಥನೆಯು ಹೇಗೆ ಸ್ಪಷ್ಟವಾಗಿತಿಳಿದುಕೊಳ್ಳುವಂತೆ ಎಲ್ಲವನ್ನೂ ಒಳಗೊಂಡಿದೆಯಲ್ಲವೇ? ಅದು ನಮ್ಮೆಲ್ಲರ ಸಹಜವಾದಅಗತ್ಯಗಳನ್ನು ಒಳಗೊಂಡಿದೆ. ಸಾಮಾನ್ಯವಾದ ಪ್ರಾರ್ಥನೆಯು ಒಂದೆರಡು ನಿಮಿಷಗಳಿಗಿಂತ ಹೆಚ್ಚಾಗಿರಬಾರದು. ವಿಶೇಷ ರೀತಿಯಲ್ಲಿ ಪವಿತ್ರಾತ್ಮನಿಂದ ಪ್ರೇರಿಸಲ್ಪಟ್ಟು ಮಾಡಿದ ಪ್ರಾರ್ಥನೆಗಳಉದಾಹರಣೆಗಳಿವೆ. ದುಃಖಿತರಾದವ್ಯಕ್ತಿಗಳು ದೇವರಮುಂದೆ ಕಣ್ಣೀರಿಟ್ಟು ತಮ್ಮ ವೇದನೆಅರಿಕೆಮಾಡಬಹುದು. ಯಾಕೋಬನೊಂದಿಗೆ ದೇವರಾತ್ಮನು ಹೋರಾಡಿದಂತೆ,ದೇವರಾಶೀರ್ವಾದವನ್ನು ಪಡೆದುಕೊಳ್ಳುವ ತನಕ ಅವರು ಪ್ರಾರ್ಥಿಸಬಹುದು (ಆದಿಕಾಂಡ32:24,26, ಹೋಶೇಯ 12:3,4).KanCCh 353.3

    ಆದರೆ ಅನೇಕರ ಪ್ರಾರ್ಥನೆಗಳು ಬಹಳ ನೀರಸವಾಗಿಯೂ, ಶುಷ್ಕವಾಗಿಯೂಇದ್ದು ಉಪದೇಶ ಮಾಡುವಂತಿರುತ್ತವೆ. ಇವರು ದೇವರಿಗಲ್ಲ, ಬದಲಾಗಿ ಜನರಿಗೆಪ್ರಾರ್ಥಿಸುತ್ತಾರೆ. ಇಂತವರು ದೇವರಿಗೆ ಪ್ರಾರ್ಥಿಸುತ್ತಿದ್ದಲ್ಲಿ ಹಾಗೂ ತಾವು ಏನುಮಾಡುತ್ತಿದ್ದೇವೆಂದು ನಿಜವಾಗಿಯೂ ಅರಿತುಕೊಂಡಿದ್ದಲ್ಲಿ ತಮ್ಮ ಸೊಕ್ಕಿನ ಬಗ್ಗೆದಿಗಿಲುಗೊಳ್ಳುತ್ತಿದ್ದರು. ಅವರು ಮಾಡುವುದು ಪ್ರಾರ್ಥನೆಯಲ್ಲ. ಈ ಲೋಕದಲ್ಲಿನಡೆಯುತ್ತಿರುವ ವಿಷಯಗಳ ಬಗ್ಗೆ ಸೃಷ್ಟಿಕರ್ತನಾದ ದೇವರಿಗೆ ವಿಶೇಷಮಾಹಿತಿಬೇಕಾಗಿದೆಯೇ ಎಂಬಂತೆ ಅವರು ಪ್ರಾರ್ಥನೆಯಲ್ಲಿ ಕರ್ತನೊಂದಿಗೆ ದೀರ್ಘವಾದಸಂವಾದ ಮಾಡುತ್ತಾರೆ. ಇಂತಹ ಪ್ರಾರ್ಥನೆಗಳು “..... ನಾದಕೊಡುವ ಕಂಚೂ,ಗಣಗಣಿಸುವತಾಳವೂ ಆಗಿರುತ್ತವೆ” (1 ಕೊರಿಂಥ 13:1). ಅವು ಪರಲೋಕಕ್ಕೆಮುಟ್ಟುವುದಿಲ್ಲ. ಸಭೆಯಲ್ಲಿ ಕೂಡಿರುವ ಇತರ ವಿಶ್ವಾಸಿಗಳಲ್ಲದೆ, ದೇವದೂತರೂ ಸಹಅಂತವರ ಬಗ್ಗೆ ಬೇಸರ ಹಾಗೂ ಜಿಗುಪ್ಪೆಗೊಳ್ಳುವರು.KanCCh 354.1

    ಯೇಸುಸ್ವಾಮಿಯು ಯಾವಾಗಲೂ ಪ್ರಾರ್ಥಿಸುತ್ತಿದ್ದನು. ಬೆಟ್ಟಗುಡ್ಡಗಳಿಗೆ ಹೋಗಿತನ್ನೆಲ್ಲಾ ಬೇಡಿಕೆಗಳನ್ನು ತನ್ನ ತಂದೆಯಮುಂದೆ ಅರಿಕೆಮಾಡಿಕೊಳ್ಳುತ್ತಿದ್ದನು. ದಿನದಎಲ್ಲಾ ಕೆಲಸಗಳು ಮುಗಿದು, ಆಯಾಸಗೊಂಡ ಶಿಷ್ಯರು ವಿಶ್ರಾಂತಿ ತೆಗೆದುಕೊಳ್ಳುವಾಗ,ಯೇಸು ಪ್ರಾರ್ಥಿಸುವ ಸಮಯವಾಗಿತ್ತು. ಉತ್ಸಾಹಪೂರಿತ ಹಾಗೂ ಪರಿಣಾಮಕಾರಿಪ್ರಾರ್ಥನೆಗೆ ಯಾವಾಗಲೂ ಉತ್ತರದೊರೆಯುತ್ತದೆ ಮತ್ತು ಅದು ಬೇಸರತರುವುದಿಲ್ಲ.ಪ್ರಾರ್ಥನಾಕೂಟಗಳಲ್ಲಿ ಪ್ರೀತಿಯಿಂದ ಭಾಗವಹಿಸುವವರಿಗೆ ಅಂತಹ ಪ್ರಾರ್ಥನೆಯುಆಸಕ್ತಿ ತರುವುದು ಮಾತ್ರವಲ್ಲ, ಚೈತನ್ಯನೀಡುತ್ತದೆ.KanCCh 354.2

    ಏಕಾಂತ ಪ್ರಾರ್ಥನೆಯನ್ನು ನಿರ್ಲಕ್ಷಿಸಲಾಗಿದೆ. ಈ ಕಾರಣದಿಂದಲೇ ಅನೇಕರುದೇವಾರಾಧನೆಗಾಗಿ ಕೂಡಿಬಂದಿರುವಾಗ ಅಂತಹ ದೀರ್ಘವಾದ, ಬೇಸರ ಹುಟ್ಟಿಸುವಪ್ರಾರ್ಥನೆ ಮಾಡುತ್ತಾರೆ. ವಾರವೆಲ್ಲಾ ತಮ್ಮ ಕರ್ತವ್ಯಗಳನ್ನು ಅಲಕ್ಷಿಸಿದ್ದನ್ನು ಪದೇಪದೇಪ್ರಾರ್ಥನೆಯಲ್ಲಿ ನೆನಪಿಸಿಕೊಂಡು, ಹೇಳಿದ್ದನ್ನೇ ಹೇಳುತ್ತಾ ತಾವು ತೋರಿಸಿದನಿರ್ಲಕ್ಷತೆಗಾಗಿ ಮನಸ್ಸಾಕ್ಷಿಯನ್ನು ಸಮಾಧಾನ ಪಡಿಸುತ್ತೇವೆಂದು ನಿರೀಕ್ಷಿಸುವರು.ದೇವರ ದಯೆಗೆ ತಾವು ಪಾತ್ರರಾಗಿದ್ದೇವೆಂಬ ನಿರೀಕ್ಷೆಯಿಂದ ಪ್ರಾರ್ಥಿಸುವರು. ಆದರೆಇಂತಹ ಪ್ರಾರ್ಥನೆಗಳು ಇತರರ ಮುಂದೆ ಅವರ ಆತ್ಮೀಕ ಬಡತನವನ್ನು ಎತ್ತಿ ತೋರಿಸುವುದು. ಎಚ್ಚರವಾಗಿದ್ದು ಪ್ರಾರ್ಥಿಸಿ ಎಂದು ಯೇಸು ಶಿಷ್ಯರಿಗೆ ಹೇಳಿದ ಮಾತನ್ನುಕ್ರೈಸ್ತರು ಗಮನದಲ್ಲಿಟ್ಟು ಕೊಂಡಾಗ ಅವರ ಪ್ರಾರ್ಥನೆಯು ಪರಿಣಾಮಕಾರಿಯಾಗಿರುವುದು.KanCCh 354.3