Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ದೇವರಾದುಕೊಂಡವರನ್ನೂ ವಂಚಿಸುವ ಪ್ರಯತ್ನ

    ದೇವರ ಅಸ್ತಿತ್ವದ ಬಗ್ಗೆ ಕುತರ್ಕಗಳು ಹಾಗೂ ಆತನನ್ನು ಮತ್ತು ಕ್ರೈಸ್ತ ಧರ್ಮದ ವಿಶ್ವಾಸಿಗಳನ್ನು ಸಂದೇಹಿಸುವ ಸಿನಿಕತನವು (Scepticism) ಜಗತ್ತಿನೆಲ್ಲೆಡೆ ಧಾರಾಳವಾಗಿ ಕಂಡುಬರುತ್ತವೆ. ಸತ್ಯವೇದವನ್ನು ಬಹಳ ಚೆನ್ನಾಗಿ ತಿಳಿದುಕೊಂಡಿರುವ, ಕ್ರಿಸ್ತನೊಂದಿಗಿನ ಹೋರಾಟದಲ್ಲಿ ಸೋತುಹೋಗಿರುವ ವೈರಿಯಾದ ಸೈತಾನನಿಗೆ ಕುತರ್ಕ ಮತ್ತು ಸಿನಿಕತನವು ಪ್ರೇರಣೆ ಕೊಡುತ್ತವೆ. ಮನಸ್ಸನ್ನು ಸತ್ಯದಿಂದ ದೂರಮಾಡಿ ಲೋಕದಮೇಲೆ ಬರಲಿರುವ ಮಹಾ ಉಪದ್ರವಗಳಿಗೆ ಮತ್ತು ಕ್ರಿಸ್ತನ ಎರಡನೇಬರೋಣಕ್ಕೆ ಅವರು ಸಿದ್ಧರಾಗದಂತೆಮಾಡುತ್ತಾನೆ.KanCCh 409.1

    1844ನೇಇಸವಿ ಅಕ್ಟೋಬರ್ 22ರಂದು ಕ್ರಿಸ್ತನು ಈ ಲೋಕಕ್ಕೆ ಎರಡನೇಸಾರಿ ಬರುತ್ತಾನೆಂದು ಸುಮಾರು 50ಸಾವಿರ ಅಡ್ವೆಂಟಿಸ್ಟರು ಎದುರು ನೋಡುತ್ತಿದ್ದರು. ಆದರೆ ಕ್ರಿಸ್ತನು ಆ ದಿನ ಬರಲಿಲ್ಲ. ಅದಾದನಂತರ ಎಲ್ಲಾ ರೀತಿಯ ಮತಾಂಧತೆ ಅಂದರೆ ಧರ್ಮದ ಬಗ್ಗೆ ದುರಭಿಮಾನ (Fanaticism) ವನ್ನು ಅಡ್ವೆಂಟಿಸ್ಟರು ಎದುರಿಸಬೇಕಾಯಿತು. ಪ್ರೇತಸಂಪರ್ಕ ಹೊಂದಿರುವವರ ನಿಂದನೆಯನ್ನು ಸಹಿಸಿಕೊಳ್ಳಬೇಕೆಂದು ಶ್ರೀಮತಿ ವೈಟಮ್ಮನವರಿಗೆ ದರ್ಶನದಲ್ಲಿ ತಿಳಿಸಲಾಯಿತು.KanCCh 409.2

    ದೈವಭಕ್ತಿಯಿಲ್ಲದ ಬೋಧನೆ ಕೇಳುವವರು, ನಂತರ ಪಾಪಮಯ ಜೀವಿತವನ್ನು ಜೀವಿಸುವರು. ಇದು ಸುಳ್ಳಿನ ತಂದೆಯಾಗಿರುವ ಸೈತಾನನು ತಪ್ಪುದಾರಿಗೆ ಜನರನ್ನು ಸೆಳೆಯುವ ಒಂದು ಆಕರ್ಷಣೆಯಾಗಿದ್ದು, ಅದರ ಪರಿಣಾಮವಾಗಿ ಅವನ ಆಕರ್ಷಣೆಗೆ ಒಳಗಾದವರು ಎಂದಿಗೂ ಪಶ್ಚಾತ್ತಾಪಪಡದೆ ತಮ್ಮ ದೋಷಾಪರಾಧಗಳಲ್ಲಿಯೇ ಸ್ವಯಂ ತೃಪ್ತಿಹೊಂದುತ್ತಾರೆ. KanCCh 409.3

    ಹಿಂದಿನ ಅನುಭವಗಳು ಪುನರಾವರ್ತನೆಗೊಳ್ಳುವವು. ಮುಂದೆ ಸೈತಾನನ ಮೂಢನಂಬಿಕೆಗಳೆಲ್ಲವೂ ಹೊಸರೂಪ ತಳೆಯುವವು. ತಪ್ಪುದೋಷಗಳನ್ನು ಮನಸ್ಸಿಗೆ ಹಿತವುಂಟು ಮಾಡುವ ಹಾಗೂ ಭ್ರಾಂತಿ ಹುಟ್ಟಿಸುವಂತ ನಮ್ರತೆಯಿಂದ ಪರಿಚಯಿಸಲಾಗುವುದು. ಸತ್ಯವೆಂದು ತೋರಿಸಲ್ಪಡುವಂತ ತಪ್ಪು ಸಿದ್ಧಾಂತಗಳನ್ನು ದೇವಜನರಿಗೆ ತಿಳಿಸಲಾಗುವುದು. ಈ ರೀತಿಯಲ್ಲಿ ಸೈತಾನನು ಸಾಧ್ಯವಾದರೆ ದೇವರಾದುಕೊಂಡವರನ್ನೂ ವಂಚಿಸಲು ಪ್ರಯತ್ನಿಸುವನು ಹೆಚ್ಚುಸೆಳೆತಕ್ಕೆ ಆಕರ್ಷಿಸುವಂತ ವಿಷಯಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಲಾಗುವುದು. ಮನಸ್ಸು ಸಂಮೋಹನಗೊಳಿಸಲ್ಪಡುವುದು. (Hypnotize, ಸಂಮೋಹನಕಾರನ ಸೂಚನೆಗಳಿಗೆ ಮಾತ್ರ ಪ್ರತಿಕ್ರಿಯೆತೋರಿಸುವ, ಗಾಢನಿದ್ರೆಯನ್ನು ಹೋಲುವ ಸ್ಥಿತಿ).KanCCh 410.1

    ಜಲಪ್ರಳಯಕ್ಕೆ ಮೊದಲು ಜೀವಿಸಿದ್ದ ವ್ಯಕ್ತಿಗಳ ಕಾಲದಲ್ಲಿದ್ದಂತ ಎಲ್ಲಾ ರೀತಿಯ ನೀತಿಭ್ರಷ್ಟತೆಯು ಜನರ ಮನಸ್ಸನ್ನು ಹತೋಟಿಯಲ್ಲಿಡುವ ಸಲುವಾಗಿ ಎಲ್ಲೆಡೆಯೂ ಕಂಡುಬರುವುದು. ಪ್ರಕೃತಿಯನ್ನೇ ದೇವರೆಂದು ಅತಿಯಾಗಿ ಸ್ತುತಿಸುವುದು, ಮಾನವರು ತಮ್ಮ ಆಸೆ, ಆಕಾಂಕ್ಷೆ ಮೊದಲಾದವುಗಳನ್ನು ಮನಸ್ಸಿಗೆ ಬಂದ ರೀತಿಯಲ್ಲಿ ಯಾವುದೇ ಅಡೆತಡೆಯಿಲ್ಲದೆ ಪೂರೈಸಿಕೊಳ್ಳುವುದು, ದೈವಭಕ್ತಿಯಿಲ್ಲದವರಿಂದ ಸಲಹೆ ಸೂಚನೆ ಪಡೆದುಕೊಳ್ಳುವುದು - ಇವು ಸೈತಾನನು ತನ್ನ ಉದ್ದೇಶಗಳನ್ನು ಪೂರೈಸಿಕೊಳ್ಳಲು ಉಪಯೋಗಿಸುವ ಕೆಲವು ಸಾಧನಗಳಾಗಿವೆ. ಅವನು ತನ್ನ ಕುತಂತ್ರಗಳನ್ನು ಈಡೇರಿಸಲು ಅಂತವರ ಮನಸ್ಸಿನಲ್ಲಿ ತನ್ನ ಮನಸ್ಸಿನಸಾಮರ್ಥ್ಯ ಉಪಯೋಗಿಸುವನು. ಸೈತಾನನ ಇಂತಹ ವಂಚನೆಯ ಪ್ರಭಾವಕ್ಕೆ ಒಳಗಾದವರು ದೇವರೊಂದಿಗೆ ಯಾವುದೇ ಸಂಬಂಧವಿಲ್ಲದಿದ್ದರೂ, ಭಕ್ತಿಯವೇಷವನ್ನು ಧರಿಸಿಕೊಂಡಿರುತ್ತಾರೆ. ಇದು ನಿಜಕ್ಕೂ ಅತ್ಯಂತ ದುಃಖದಾಯಕ ಸಂಗತಿಯಾಗಿದೆ. ಒಳ್ಳೇದರ ಮತ್ತು ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರದ ಹಣ್ಣನ್ನು ತಿಂದ ಆದಾಮ ಹವ್ವಳಂತೆ ಅನೇಕರು ತಪ್ಪುದೋಷಗಳಿಂದ ಕೂಡಿದ ಸೈತಾನನ ವಂಚನೆಗೆ ಬಲಿಯಾಗುತ್ತಿದ್ದಾರೆ.KanCCh 410.2

    ಏದೆನ್‍ತೋಟದಲ್ಲಿ ಸೈತಾನನು ನಮ್ಮ ಆದಿತಂದೆತಾಯಿಯರೊಡನೆ ಸರ್ಪದ ಮೂಲಕ ಮಾತಾಡುವಾಗ ತನ್ನ ನಿಜಸ್ವರೂಪವನ್ನು ಮರೆ ಮಾಡಿಕೊಂಡಿದ್ದನು. ಅದೇ ರೀತಿಯಲ್ಲಿ ಇಂದೂಸಹ ಸೈತಾನನ ಅನುಯಾಯಿಗಳು ಸುಳ್ಳು ಹಾಗೂ ತಪ್ಪಾದ ತತ್ವಗಳನ್ನು ಆಕರ್ಷಕವಾದ ರೀತಿಯಲ್ಲಿ ಪ್ರಕಟಿಸುತ್ತಿದ್ದಾರೆ. ಈ ಅನುಯಾಯಿಗಳು ಯಥಾರ್ಥವಾಗಿ ಮಾರಣಾಂತಿಕವಾದ ತಪ್ಪುಗಳನ್ನು ನಿಧಾನವಾಗಿ ಮನುಷ್ಯರ ಮನಸ್ಸಿನಲ್ಲಿ ತುಂಬುತ್ತಾರೆ. ದೇವರ ಸತ್ಯವಾಕ್ಯಗಳಿಂದ ದೂರವಾಗಿ ಮನಸ್ಸನ್ನು ಮುದಗೊಳಿಸುವ ಕಾಲ್ಪನಿಕ ಕತೆಗಳಿಗೆ ಕಿವಿಗೊಡುವವರ ಮೇಲೆ ಸೈತಾನನ ಸಂಮೋಹನಗೊಳಿಸುವ ಪ್ರಭಾವ ಇರುತ್ತದೆ.KanCCh 410.3

    ದೇವರಸತ್ಯದ ಬಗ್ಗೆ ಹೆಚ್ಚುಬೆಳಕನ್ನು ಹೊಂದಿರುವಂತವರನ್ನು ತನ್ನ ಬಲೆಯಲ್ಲಿ ಬೀಳಿಸಲು ಸೈತಾನನು ಬಹಳ ಶ್ರದ್ಧೆಯಿಂದ ಸತತವಾಗಿ ಪ್ರಯತ್ನಿಸುತ್ತಾನೆ. ಇಂತವರನ್ನು ತಾನು ಮರುಳುಗೊಳಿಸಿದಲ್ಲಿ, ಅವರು ತನ್ನ ನಿಯಂತ್ರಣದಲ್ಲಿದ್ದು ಪಾಪವನ್ನು ನೀತಿಯಂತೆ ಕಂಡುಬರುವ ಹಾಗೆ ಮಾಡಿ, ಬೇರೆ ಅನೇಕರನ್ನು ಕ್ರೈಸ್ತ ಮಾರ್ಗದಿಂದ ದೂರಮಾಡಿ ಭ್ರಷ್ಟಗೊಳಿಸುತ್ತಾರೆಂದು ಸೈತಾನನಿಗೆ ಚೆನ್ನಾಗಿ ತಿಳಿದಿದೆ.KanCCh 411.1

    ಎಚ್ಚರಿಕೆಯಾಗಿರ್ರಿ, ಸೈತಾನನು ಬೆಳಕಿನವೇಷವನ್ನು ಧರಿಸಿ ಪ್ರತಿಯೊಂದು ಸಭೆಯಲ್ಲಿ, ಕ್ರೈಸ್ತ ಸೇವಕರು ಸೇರುವ ಪ್ರತಿಯೊಂದು ಕೂಟದಲ್ಲಿ ತಾನೂ ಸ್ವತಃ ಅಲ್ಲಿದ್ದುಕೊಂಡು, ವಿಶ್ವಾಸಿಗಳನ್ನು ತನ್ನ ಕಡೆಗೆ ಸೆಳೆದುಕೊಳ್ಳಲು ಪ್ರಯತ್ನಿಸುತ್ತಾನೆಂದು ಎಲ್ಲರಿಗೂ ಹೇಳಲು ಬಯಸುತ್ತೇನೆಂದು ಶ್ರೀಮತಿ ವೈಟಮ್ಮನವರು ತಿಳಿಸುತ್ತಾರೆ. ಅಲ್ಲದೆ “ಮೋಸಹೋಗಬೇಡಿರಿ; ದೇವರು ತಿರಸ್ಕಾರ ಸಹಿಸುವವನಲ್ಲ...” (ಗಲಾತ್ಯ 6:7) ಎಂಬ ಎಚ್ಚರಿಕೆಯನ್ನು ದೇವಜನರಿಗೆ ಕೊಡಬೇಕೆಂದು ದೇವರು ಹೇಳಿದ್ದಾನೆಂದೂ ಅವರು ತಿಳಿಸುತ್ತಾರೆ.KanCCh 411.2