Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ನಮ್ಮ ಅನುಮತಿಯಿಲ್ಲದೆ ಸೈತಾನನು ನಮ್ಮ ಮನಸ್ಸನ್ನು ಪ್ರವೇಶಿಸಲಾರನು

    ಮನುಷ್ಯರು ಸಹಿಸಿಕೊಳ್ಳಬಹುದಾದ ಶೋಧನೆಯೇ ಹೊರತು ಬೇರೆ ಯಾವುದೂ ನಮಗೆ ಸಂಭವಿಸುವುದಿಲ್ಲ. ‘ದೇವರು ನಂಬಿಗಸ್ತನು; ನಿಮ್ಮ ಶಕ್ತಿಯನ್ನು ಮೀರುವ ಶೋಧನೆಯನ್ನು ನಿಮಗೆ ಬರಗೊಡಿಸದೆ, ನೀವು ಅದನ್ನು ಸಹಿಸುವುದಕ್ಕೆ ಶಕ್ತರಾಗುವಂತೆ ಶೋಧನೆಯಾಗುತ್ತಲೇ ತಪ್ಪಿಸಿಕೊಳ್ಳುವ ಮಾರ್ಗವನ್ನು ಸಿದ್ಧ ಮಾಡುವನು” (1 ಕೊರಿಂಥ 10:12, 13). ನಾವು ಸಂಪೂರ್ಣವಾಗಿ ನಮ್ಮನ್ನು ದೇವರಿಗೆ ಒಪ್ಪಿಸಿಕೊಟ್ಟು ಆತನಿಗಾಗಿ ಜೀವಿಸಿದಲ್ಲಿ, ನಮ್ಮ ಮನಸ್ಸು ಸ್ವಾರ್ಥದ ಕಲ್ಪನೆಯಲ್ಲಿ ವಿಹರಿಸುವುದಕ್ಕೆ (ತೊಡಗುವುದಕ್ಕೆ) ನಾವು ಅನುಮತಿ ಕೊಡುವುದಿಲ್ಲ.KanCCh 193.3

    ನಮ್ಮ ಮನಸ್ಸಿನಲ್ಲಿ ಸೈತಾನನು ಯಾವುದೇ ಮಾರ್ಗದಿಂದ ಪ್ರವೇಶಿಸುವಲ್ಲಿ, ಅವನು ಕಳೆಗಳನ್ನು, ಹಣಜಿಗಳನ್ನು ಮೊದಲು ಬಿತ್ತುವನು. ಅನಂತರ ಅವು ಹೇರಳವಾಗಿ ಫಲಕೊಡುವ ತನಕ ಬೆಳೆಯುವಂತೆ ಮಾಡುವನು. ನಾವು ಸ್ವಯಂಪ್ರೇರಣೆಯಿಂದ ನಮ್ಮ ಹೃದಯದ ಬಾಗಿಲನ್ನು ತೆರೆದು ಸೈತಾನನನ್ನು ಆಹ್ವಾನಿಸಿದ ಹೊರತು, ಅವನು ನಮ್ಮ ಆಲೋಚನೆ ಹಾಗೂ ನಡೆನುಡಿಗಳ ಮೇಲೆ ಎಂದೂ ಸಹ ದೊರೆತನ ಮಾಡಲಾರನು. ನಮ್ಮ ಅನುಮತಿಯಿಂದ ಅವನು ಹೃದಯದಲ್ಲಿ ಪ್ರವೇಶಿಸಿದಾಗ, ಅಲ್ಲಿ ಬಿತ್ತಲ್ಪಟ್ಟಿರುವ ಒಳ್ಳೆಯ ಬೀಜಗಳನ್ನು ತೆಗೆದುಹಾಕಿ ಸತ್ಯವಾಕ್ಯವು ನಮ್ಮಲ್ಲಿ ಯಾವುದೇ ಪರಿಣಾಮಬೀರದಂತೆ ಮಾಡುವನು.KanCCh 193.4

    ಸೈತಾನನ ಸಲಹೆ ಸೂಚನೆಗಳನ್ನು ಅನುಸರಿಸುವುದರ ಮೂಲಕ ಉಂಟಾಗುವ ಪ್ರಯೋಜನಗಳ ಬಗ್ಗೆ ಆಲೋಚಿಸುತ್ತಾ ಸಮಯ ಹಾಳುಮಾಡುವುದು ನಮಗೆ ಸುರಕ್ಷಿತವಲ್ಲ. ಪಾಪ ಮಾಡುವ ಪ್ರತಿಯೊಬ್ಬರೂ ಅಗೌರವಕ್ಕೆ ಈಡಾಗಿ ಹಾನಿಗೊಳಗಾಗುವರು. ಆದರೆ ಇದು ನಿಮ್ಮ ಇಂದ್ರಿಯಗಳನ್ನು ಕುರುಡಾಗಿ ವಂಚಿಸುತ್ತದೆ ಹಾಗೂ ಆಕರ್ಷಣೀಯವಾದ ರೀತಿಯಲ್ಲಿ ನಮ್ಮನ್ನು ಬಲೆಗೆ ಬೀಳಿಸುವುದು. ಒಂದು ಸಾರಿ ನಾವು ಸೈತಾನನ ಬಲೆಗೆ ಬೀಳುವ ಹುಚ್ಚು ಸಾಹಸ ಮಾಡಿದಲ್ಲಿ, ಅವನ ಶಕ್ತಿಯಿಂದ ಬಿಡಿಸಿಕೊಳ್ಳುವ ಯಾವುದೇ ಭರವಸೆ ನಮಗಿರುವುದಿಲ್ಲ. ಆದುದರಿಂದ ಅವನು ನಮ್ಮ ಮನಸ್ಸನ್ನು ಪ್ರವೇಶಿಸುವ ಎಲ್ಲಾ ಮಾರ್ಗಗಳನ್ನು ನಾವು ಮುಚ್ಚಬೇಕು ಎಂದರೆ ಇಂದ್ರಿಯಗಳನ್ನು ದೇವರ ಕೃಪೆಯಿಂದ ಹತೋಟಿಯಲ್ಲಿಟ್ಟುಕೊಳ್ಳಬೇಕು.KanCCh 194.1

    ಪ್ರತಿಯೊಬ್ಬ ಕ್ರೈಸ್ತನು ತನ್ನನ್ನು ಸೈತಾನನು ಹತೋಟಿಗೆ ತೆಗೆದುಕೊಳ್ಳದಂತೆ ಯಾವಾಗಲೂ ಎಚ್ಚರಿಕೆಯಾಗಿರಬೇಕು. ದೈವೀಕ ಸಹಾಯಕ್ಕಾಗಿ ನಾವು ಪ್ರಾರ್ಥಿಸಬೇಕು. ಹಾಗೂ ಅದೇ ಸಮಯದಲ್ಲಿ ಪಾಪ ಮಾಡಲು ಬರುವ ಎಲ್ಲಾ ಶೋಧನೆಗಳನ್ನು ದೃಢವಾಗಿ ಎದುರಿಸಬೇಕು. ಕ್ರೈಸ್ತರು ಧೈರ್ಯ, ದೇವರ ಮೇಲಿನ ದೃಢ ವಿಶ್ವಾಸ ಮತ್ತು ನಿರಂತರ ಶ್ರಮದಿಂದ ಸೈತಾನನ ಶೋಧನೆಗಳನ್ನು ಜಯಿಸಬಹುದು. ಆದರೆ ಈ ಜಯವನ್ನು ಹೊಂದಬೇಕಾದಲ್ಲಿ ಕ್ರೈಸ್ತರಾದ ನಾವು ಕ್ರಿಸ್ತನಲ್ಲಿಯೂ ಹಾಗೂ ಆತನು ನಮ್ಮಲ್ಲಿಯೂ ನೆಲೆಗೊಂಡಿರಬೇಕು ಎಂಬುದನ್ನು ಮರೆಯಬಾರದು.KanCCh 194.2

    ಈ ಲೋಕದಲ್ಲಿ ಪಾಪ ಅಧರ್ಮಗಳು ತುಂಬಿ ತುಳುಕುತ್ತಿವೆ. ಆದರೆ ನಾವು ಹಾಗೂ ನಮ್ಮ ಮಕ್ಕಳು ಅವುಗಳಿಂದ ಮಲಿನರಾಗದಂತೆ ಎಲ್ಲಾ ಎಚ್ಚರಿಕೆಗಳನ್ನು ವಹಿಸಬೇಕು. ನಮ್ಮ ಕಣ್ಣುಗಳು ನೋಡಬಾರದ್ದನ್ನು ನೋಡದಂತೆಯೂ ಹಾಗೂ ಕಿವಿಗಳು ಕೇಳಬಾರದನ್ನು ಕೇಳದಂತೆಯೂ ನಮ್ಮನ್ನು ನಾವೇ ಎಚ್ಚರಿಕೆಯಿಂದ ರಕ್ಷಿಸಿಕೊಳ್ಳಬೇಕು.KanCCh 194.3

    ಪಾಪವೆಂಬ ಕಡಿದಾದ ಬಂಡೆಯ ತುತ್ತತುದಿಗೆ ಏರಿ ಪ್ರಪಾತದ ಅಪಾಯದ ಪರಿಸ್ಥಿತಿ ಹೇಗಿರುತ್ತದೆಂದು ನೋಡಬೇಕೆನ್ನುವ ಪ್ರಯತ್ನವನ್ನು ಎಂದಿಗೂ ಮಾಡಬಾರದು. ಅಪಾಯವು ಎದುರಾಗುವುದನ್ನು ಮೊದಲೇ ಎಚ್ಚರಿಕೆಯಿಂದ ತಡೆಗಟ್ಟಬೇಕು. ಆತ್ಮದ ರಕ್ಷಣೆಯನ್ನು ಹಗುರವಾಗಿ ಎಣಿಸಬಾರದು, ನಮ್ಮ ಒಳ್ಳೆಯ ಗುಣಸ್ವಭಾವವೇ ನಮ್ಮ ಮೂಲ ಬಂಡವಾಳವಾಗಿದೆ. ಇದನ್ನು ಬಹು ಅಮೂಲ್ಯವಾದ ಬಂಗಾರದಂತೆ ರಕ್ಷಿಸಿಕೊಳ್ಳಿ. ನೈತಿಕ ಪಾವಿತ್ರತೆ, ಸ್ವ ಗೌರವ, ಶೋಧನೆ ಎದುರಿಸುವ ದೃಢ ಸಾಮರ್ಥ್ಯವನ್ನು ನಿರಂತರವಾಗಿ ಕಾಪಾಡಿಕೊಳ್ಳಬೇಕು. ಉದ್ದೇಶಪೂರ್ವಕವಾಗಿ ಅಚಾತುರ್ಯದಿಂದ ಒಂದುವೇಳೆ ಶೋಧನೆಯನ್ನು ಎದುರಿಸುವುದರಲ್ಲಿ ವಿಫಲರಾದಲ್ಲಿ, ಪಾಪಕ್ಕೆ ಬಾಗಿಲನ್ನು ಮುಕ್ತವಾಗಿ ತೆಗೆದಂತಾಗುತ್ತದೆ. ಇದರಿಂದ ಅದನ್ನು ಎದುರಿಸುವ ನೈತಿಕ ಸಾಮರ್ಥ್ಯ ಬಲಹೀನಗೊಳ್ಳುತ್ತದೆ.KanCCh 194.4

    *****