Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ವಿಧೇಯತೆಯು ವೈಯಕ್ತಿಕ ಕರ್ತವ್ಯವಾಗಿದೆ

    ಸೃಷ್ಟಿಕರ್ತನಾದ ದೇವರು ನಮ್ಮ ಶರೀರದ ಎಲ್ಲಾ ಜೀವಂತ ಅಂಗಗಳನ್ನು ವ್ಯವಸ್ಥಿತವಾಗಿರಚಿಸಿದ್ದಾನೆ. ಅವುಗಳ ಒಂದೊಂದು ಕಾರ್ಯಗಳು ಅದ್ಭುತವಾಗಿಯೂ, ವಿವೇಕದಿಂದಲೂಮಾಡಲ್ಪಟ್ಟಿವೆ. ಮಾನವರು ದೇವರಾಜ್ಞೆಗಳನ್ನು ಕೈಕೊಂಡು ಆತನೊಂದಿಗೆ ಸಹಕರಿಸಿದರೆ,ನಮ್ಮ ಶರೀರವನ್ನು ಆರೋಗ್ಯಕರ ಸ್ಥಿತಿಯಲ್ಲಿರಿಸುವುದಾಗಿ ದೇವರು ವಾಗ್ದಾನ ಮಾಡಿದ್ದಾನೆ.ಮಾನವ ಅಂಗಗಳನ್ನು ನಿಯಂತ್ರಿಸುವ ಪ್ರತಿಯೊಂದು ನಿಯಮಗಳೂ ಸಹ ನಿಜವಾಗಿಯೂದೇವರಿಂದಲೇ ನೇಮಿಸಲ್ಪಟ್ಟಿದ್ದು, ದೇವರ ವಾಕ್ಯದಷ್ಟೇ ಪ್ರಾಮುಖ್ಯವಾಗಿವೆ ಎಂದುತಿಳಿದುಕೊಳ್ಳಬೇಕು. ದೇವರು ತಿಳಿಸಿದ ನಿಯಮಗಳನ್ನು ನಿರ್ಲಕ್ಷಿಸಿ, ಆತನು ಅದ್ಭುತವಾಗಿರಚಿಸಿದ ಈ ದೇಹವನ್ನು ತಾತ್ಸಾರಮಾಡಿ, ದುರುಪಯೋಗ ಪಡಿಸುವುದು ಆತನಆಜ್ಞೆಗಳನ್ನು ಮೀರಿ ನಡೆದಂತಾಗುತ್ತದೆ.KanCCh 265.2

    ಪ್ರಕೃತಿಯ ನಿಯಮಗಳೂ ಸಹ ದೇವರ ನಿಯಮಗಳೇ ಆಗಿರುವುದರಿಂದ, ಇವುಗಳನ್ನುಎಚ್ಚರಿಕೆಯಿಂದ ಅಧ್ಯಯನ ಮಾಡುವುದು ನಮ್ಮ ಕರ್ತವ್ಯವಾಗಿದೆ. ಇವುಗಳ ಬಗ್ಗೆತಿಳಿಯದಿರುವುದು ಪಾಪ, ಸ್ತ್ರೀ ಪುರುಷರು ನಿಜವಾಗಿಯೂ ಬದಲಾವಣೆ ಹೊಂದಿದಲ್ಲಿ,ದೇವರು ಅವರಿಗಾಗಿ ಕೊಟ್ಟಿರುವ ಜೀವನದ ನಿಯಮಗಳನ್ನು ನಿಷ್ಠೆಯಿಂದ ಅನುಸರಿಸುವರು.ಇದರಿಂದ ಅವರಲ್ಲಿ ಶಾರೀರಿಕ, ಮಾನಸಿಕ ಹಾಗೂ ನೈತಿಕ ಬಲಹೀನತೆಯನ್ನುತಡೆಗಟ್ಟಬಹುದು. ಈ ನಿಯಮಗಳಿಗೆ ವಿಧೇಯತೆ ತೋರುವುದನ್ನು ನಮ್ಮ ವೈಯಕ್ತಿಕಕರ್ತವ್ಯವನ್ನಾಗಿ ಮಾಡಿಕೊಳ್ಳಬೇಕು. ಇವುಗಳನ್ನು ಮೀರಿ ನಡೆದಾಗ, ಅದರ ಕೆಟ್ಟಪರಿಣಾಮಗಳನ್ನು ನಾವೇ ಅನುಭವಿಸಬೇಕು. ನಮ್ಮೆಲ್ಲಾ ಅಭ್ಯಾಸ, ಆಚರಣೆಗಳ ಬಗ್ಗೆನಾವು ದೇವರಿಗೆ ಉತ್ತರ ಕೊಡಬೇಕಾಗಿದೆ. ದೇವರು ಕೊಟ್ಟಿರುವ ಈ ಶರೀರವನ್ನುಪವಿತ್ರಾತ್ಮನು ವಾಸಿಸುವ ಗರ್ಭಗುಡಿಯನ್ನಾಗಿ ಮಾಡುವುದು ಹೇಗೆ? ಎಂಬುದು ನಮ್ಮಮುಂದಿರುವ ಪ್ರಶ್ನೆಯಾಗಿದೆಯೇ ಹೊರತು, ಲೋಕವು ಅದರ ಬಗ್ಗೆ ಏನು ಹೇಳುತ್ತದೆ?ಎಂಬುದರ ಬಗ್ಗೆ ನಾವು ಗಮನಕೊಡಬಾರದು.KanCCh 265.3

    Larger font
    Smaller font
    Copy
    Print
    Contents