Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಅಮಲು ಬರಿಸುವ ಮದ್ಯ

    ಕಾನಾ ಊರಲ್ಲಿ ನಡೆದ ಮದುವೆಯಲ್ಲಿ ಕ್ರಿಸ್ತನು ನೀರನ್ನು ದ್ರಾಕ್ಷಾರಸವನಾಗಿ ಮಾಡಿದ್ದುತಾಜಾ ದ್ರಾಕ್ಷಾರಸ. ಅದೇತಾನೇ ದ್ರಾಕ್ಷೆಯ ಗೊಂಚಲಿನಿಂದ ಕಿತ್ತು ಮಾಡಿದಂತ ಹೊಸದ್ರಾಕ್ಷಾರಸದಂತಿತ್ತು. ಇದರ ವಿಷಯವಾಗಿ ಸತ್ಯವೇದದಲ್ಲಿ “..... ರಸದೊರೆಯ ಬಹುದಾದದ್ರಾಕ್ಷೆಯ ಗೊಂಚಲನ್ನು ಹಾಳುಮಾಡಬೇಡ. ಅದರಲ್ಲಿ ಪ್ರಯೋಜನವಿದೆ...” ಎಂದುತಿಳಿಸುತ್ತದೆ (ಯೆಶಾಯ 65:8). ಆದರೆ ಅಮಲು ಬರಿಸುವ ಮದ್ಯಪಾನದ ವಿಷಯದಲ್ಲಿಸತ್ಯವೇದವು ಹೀಗೆ ತಿಳಿಸುತ್ತದೆ.KanCCh 100.2

    “ದ್ರಾಕ್ಷಾರಸವು ಪರಿಹಾಸ್ಯ, ಮದ್ಯವು ಕೂಗಾಟ;
    ಇವುಗಳಿಂದ ಓಲಾಡುವವನು ಜ್ಞಾನಿಯಲ್ಲ
    KanCCh 100.3

    (ಜ್ಞಾನೋಕ್ತಿ 20:1).

    “ಅಯ್ಯಯ್ಯೋ ಎನ್ನುವವರು ಯಾರು?
    ಅಕಟಾ ಎಂದು ಕೂಗಿಕೊಳ್ಳುವವರು ಯಾರು?
    ಯಾರು ಜಗಳವಾಡುತ್ತಾರೆ? ಯಾರು ಗೋಳಾಡುತ್ತಾರೆ?
    ಕೆಂಪೇರಿದ ಕಣ್ಣುಳ್ಳವರು ಯಾರು?
    ಮಿಶ್ರಮದ್ಯಪಾನಾಸಕ್ತರಾಗಿ,
    ದ್ರಾಕ್ಷಾರಸವನ್ನು ಕುಡಿಯುತ್ತಾ, ಕಾಲಹರಣ ಮಾಡುವವರೇ,
    ಪಾತ್ರೆಯಲ್ಲಿ ಕೆಂಪಗೆ ಥಳಥಳಿಸುವ
    ದ್ರಾಕ್ಷಾರಸದ ಮೇಲೆ ಕಣ್ಣಿಡಬೇಡ
    ಅದು ಗಂಟಲಿನೊಳಗೆ ಮೆಲ್ಲಗೆ ಇಳಿದುಹೋಗಿ ಆಮೇಲೆಹಾವಿನಂತೆಕಚ್ಚುತ್ತದೆ,
    ಹೌದು, ನಾಗದಹಾಗೆಕಡಿಯುತ್ತದೆ
    KanCCh 100.4

    (ಜ್ಞಾನೋಕ್ತಿ 23:29-32)

    ಅಮಲೇರಿಸುವ ಮದ್ಯಪಾನದ ದಾಸರಾಗುವವರು ಎಂತಹ ಕೀಳುಮಟ್ಟಕ್ಕೆ ಇಳಿಯುತ್ತಾರೆಂಬುದಕ್ಕೆ ಸತ್ಯವೇದದಲ್ಲಿ ಕೊಡಲ್ಪಟ್ಟಿರುವ ಈ ಚಿತ್ರಕ್ಕೆ ಮಿಗಿಲಾದದ್ದನ್ನು ಮಾನವರು ಯಾರೂ ಬರೆದು ಚಿತ್ರಿಸಿಲ್ಲ. ಮದ್ಯಪಾನ ನಿಮಿತ್ತ ತಮ್ಮನ್ನು ತಾವೇ ಗುಲಾಮರನ್ನಾಗಿ ಮಾಡಿಕೊಂಡು ಕೀಳುಮಟ್ಟದ ತಿರಸ್ಕಾರಕ್ಕೆ ಒಳಗಾದ ಕುಡುಕರು, ಅಮಲಿಳಿದ ನಂತರ ಎಚ್ಚೆತ್ತು ತಮ್ಮ ದುರವಸ್ಥೆಯನ್ನು ತಿಳಿದುಕೊಂಡರೂ, ಮದ್ಯಪಾನವೆಂಬ ಉರುಲಿನ ದಾಸತ್ವದಿಂದ ತಮ್ಮನ್ನು ತಾವೇ ಬಿಡಿಸಿಕೊಳ್ಳಲು ಅವರಿಗೆ ಶಕ್ತಿಯಿರುವುದಿಲ್ಲ. ಬದಲಾಗಿ “.... ಪುನಃ ಅದನ್ನೇ ಹುಡುಕೇನು” ಎಂದುಕೊಳ್ಳುವರು (ಜ್ಞಾನೋಕ್ತಿ 23:35).KanCCh 101.1

    ತೀಕ್ಷ್ಣವಾದ ಅಮಲೇರಿಸುವ ವಿಸ್ಕಿ, ರಮ್, ಜಿನ್, ಬ್ರಾಂದಿ ಮುಂತಾದ ಮದ್ಯ ಗಳಂತೆಯೇ ವೈನ್, ಮೊಳಕೆ ಕಟ್ಟಿದ ಧಾನ್ಯ ದಿಂದ ತೆಗೆದ ಕಹಿ ರುಚಿಕಟ್ಟಿಸಿದ ಬಿಯರ್ ಮತ್ತು ಸೇಬಿನ ರಸದಿಂದ ತಯಾರಿಸಿದ ತೀಕ್ಷ್ಣವಲ್ಲವೆಂದು ಜನರು ನಂಬಿರುವ ಮದ್ಯಗಳೂ ಸಹ ಅಮಲು ತರುತ್ತವೆ. ತೀಕ್ಷ್ಣವಲ್ಲದ ಈ ಮದ್ಯ ಕುಡಿಯುವ ಅಭ್ಯಾಸ ಮಾಡಿಕೊಂಡಾಗ, ಇದಕ್ಕಿಂತಲೂ ತೀಕ್ಷ್ಣವಾದ ರಮ್, ವಿಸ್ಕಿ, ಬ್ರಾಂದಿಯತಹ ಮದ್ಯ ಗಳನ್ನು ಕುಡಿಯಬೇಕೆಂಬ ಪ್ರಚೋದನೆ ಉಂಟಾಗುತ್ತದೆ. ಈ ರೀತಿಯಾಗಿ ಕುಡಿಯುವ ಅಭ್ಯಾಸ ದೃಢವಾಗುತ್ತದೆ. ಮೊದಲು ಅಲ್ಪಪ್ರಮಾಣದಲ್ಲಿ ಕುಡಿಯಲು ಆರಂಭಿಸುವವರು ಕೊನೆಯಲ್ಲಿ ಕುಡುಕರಾಗಿ ಹೆಚ್ಚಾಗಿ ತೆಗೆದುಕೊಳ್ಳುತ್ತಾರೆ. ಇವುಗಳ ವಂಚನೆಯು ಎಷ್ಟಾಗಿರುತ್ತದೆಂದರೆ ಗುಪ್ತವಾಗಿ ಬೆಳೆಯುವ ಈ ರೋಗದಿಂದಾಗುವ ಅಪಾಯದ ಅರಿವು ಕುಡುಕರಿಗೆ ಇರುವುದಿಲ್ಲ.KanCCh 101.2

    ಕುಡುಕರಿಗೆ ಅಮಲೇರಿಸುವ ಈ ಮದ್ಯಗಳ ಹಾನಿಕಾರಕ ಮತ್ತು ಕೆಟ್ಟ ಪರಿಣಾಮಗಳ ಬಗ್ಗೆ ಯಾವ ಸಂದೇಹವೂ ಇಲ್ಲ. ಕುಡಿತಕ್ಕೆ ದಾಸನಾಗಿ ದೃಷ್ಟಿ ಮನಸ್ಸುಗಳೆರಡೂ ಮಂಜಾಗಿರುವ, ಅಮಲಿನ ಗೀಳಿನಿಂದ ನಾಶವಾಗಿರುವವರನ್ನು ಎಲ್ಲೆಲ್ಲಿಯೂ ಕಾಣುತ್ತವೆ. ಇವರಿಗಾಗಿಯೂ ಕ್ರಿಸ್ತನು ತನ್ನ ಪ್ರಾಣಕೊಟ್ಟನು ಹಾಗೂ ದೇವದೂತರು ಕಣ್ಣೀರಿಡುವರು. ಆಧುನಿಕತೆಯೆಂದು ಹೊಗಳಿಕೊಳ್ಳುವ ನಮ್ಮ ನಾಗರೀಕತೆಗೆ ಇದೊಂದು ದೊಡ್ಡ ಕಳಂಕವಾಗಿದೆ. ಕುಡುಕರು ಜಗತ್ತಿನ ಎಲ್ಲಾ ಕಡೆಗಳಲ್ಲಿಯೂ ನಾಚಿಕೆ ತರುವುದು ಮಾತ್ರವಲ್ಲದೆ, ಶಾಪಗ್ರಸ್ತವೂ ಆಗಿದ್ದಾರೆ.KanCCh 101.3