Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
 • Results
 • Related
 • Featured
No results found for: "".
 • Weighted Relevancy
 • Content Sequence
 • Relevancy
 • Earliest First
 • Latest First
  Larger font
  Smaller font
  Copy
  Print
  Contents

  ಮರಣಕ್ಕೆ ಮೊದಲು ಶ್ರೀಮತಿ ವೈಟಮ್ಮನವರು ಹೇಳಿದ ಧೈರ್ಯ ಹಾಗೂ ಭರವಸೆಯ ನುಡಿಗಳು

  “ನಾನು ಇನ್ನು ಹೆಚ್ಚುಕಾಲ ಬದುಕುವುದಿಲ್ಲ. ನನ್ನ ಸೇವೆಯು ಹೆಚ್ಚು ಕಡಿಮೆ ಮುಕ್ತಾಯವಾಗಿದೆ... ನನ್ನ ಅಡ್ವೆಂಟಿಸ್ಟ್ ಜನರಿಗೆ ಇನ್ನು ಹೇಳಬೇಕಾದ ಯಾವುದೇ ಸಾಕ್ಷ್ಯ ಪ್ರಮಾಣಗಳು (Testimonies) ಇನ್ನ್ಯಾವುದು ಇಲ್ಲ. ದೇವರ ಸೇವೆಯನ್ನು ಮುಂದುವರಿಸಲು ಯಾವುದು ಒಳ್ಳೆಯದೆಂದು ದೃಢ ಮನಸ್ಸಿನ ನನ್ನ ಸಹೋದರರಿಗೆ ತಿಳಿದಿದೆ. ಆದರೆ ತಮ್ಮ ಹೃದಯದಲ್ಲಿ ದೇವರ ಪ್ರೀತಿಯನ್ನು ಹೊಂದಿ ಅವರು ದೇವರ ವಿಷಯಗಳ ಬಗ್ಗೆ ಇನ್ನೂ ಆಳವಾಗಿ ಅಧ್ಯಯನ ಮಾಡಬೇಕಾಗಿದೆ.KanCCh 467.2

  ನಮ್ಮ ಸಭೆಯ ಹಿಂದಿನ ಚರಿತ್ರೆಯನ್ನು ಪುನರ್ ವಿಮರ್ಶೆ ಮಾಡಿದಾಗ, ಇಂದಿನವರೆಗೆ ದೇವರು ಹೇಗೆ ಹಂತಹಂತವಾಗಿ ನಮ್ಮನ್ನು ನಡೆಸಿದ್ದಾನೆಂದು ನೋಡಿದಾಗ, ನಾನು ದೇವರಿಗೆ ಕೃತಜ್ಞತೆಯಿಂದ ಸ್ತೋತ್ರ ಸಲ್ಲಿಸುತ್ತೇನೆ. ದೇವರು ಮಾಡಿದ ಕಾರ್ಯಗಳನ್ನು ನೋಡುವಾಗ, ನಾನು ವಿಸ್ಮಯಗೊಳ್ಳುತ್ತೇನೆ ಹಾಗೂ ಕ್ರಿಸ್ತನ ನಾಯಕತ್ವದಲ್ಲಿ ಭರವಸೆ ಹೆಚ್ಚಾಗುತ್ತದೆ. ದೇವರು ಹಿಂದೆ ನಮ್ಮನ್ನು ಹೇಗೆ ನಡೆಸಿದ್ದಾನೆಂಬುದನ್ನೂ ಹಾಗೂ ನಮ್ಮ ಅಡ್ವೆಂಟಿಸ್ಟ್ ಚಳುವಳಿಯಲ್ಲಿ ನಮಗೆ ಮಾರ್ಗದರ್ಶನ ನೀಡಿದ ಆತನ ಬೋಧನೆಗಳನ್ನು ಮರೆತಲ್ಲಿ ಮಾತ್ರ ನಮಗೆ ಭವಿಷ್ಯದ ಬಗ್ಗೆ ಭಯವಿರುತ್ತದೆ. ದೇವರ ಮಾರ್ಗದರ್ಶನವನ್ನು ನಾವು ಮರೆಯದಿದ್ದಲ್ಲಿ ಮುಂದಿನ ಭವಿಷ್ಯದ ಬಗ್ಗೆ ದಿಗಿಲು ಪಡುವ ಅಗತ್ಯವಿಲ್ಲ. KanCCh 467.3

  *****

  Larger font
  Smaller font
  Copy
  Print
  Contents