Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಅಧ್ಯಾಯ-60 — ಜರಡಿ ಹಿಡಿಯುವ ಸಮಯ

    “ಸಹೋದರರೇ, ಕಡೇಮಾತೇನೆಂದರೆ, ನೀವು ಕರ್ತನನ್ನೂ, ಆತನ ಅತ್ಯಧಿಕವಾದ ಶಕ್ತಿಯನ್ನೂ ಆಶ್ರಯಿಸಿಕೊಂಡವರಾಗಿ ಬಲಗೊಳ್ಳಿರಿ. ಸೈತಾನನ ತಂತ್ರೋಪಾಯಗಳನ್ನು ನೀವು ಎದುರಿಸಿ ನಿಲ್ಲುವುದಕ್ಕೆ ಶಕ್ತರಾಗುವಂತೆ ದೇವರು ದಯಪಾಲಿಸುವ ಸರ್ವಾಯುಧಗಳನ್ನು ಧರಿಸಿಕೊಳ್ಳಿರಿ” (ಎಫೆಸ 6:10-12) ಎಂದು ಅಪೋಸ್ತಲನಾದ ಪೌಲನು ನಮಗೆ ಬಹಳ ಕಳಕಳಿಯಿಂದಲೂ, ಆಸಕ್ತಿಯಿಂದಲೂ ಬುದ್ಧಿಹೇಳಿ ಎಚ್ಚರಿಕೆಕೊಡುತ್ತಾನೆ. ದೇವರ ಮಕ್ಕಳೆಂದು ಹೇಳಿಕೊಳ್ಳುವವರಿಗೆ ಸಾಕ್ಷ್ಯ, ಸತ್ಯಾಂಶಗಳನ್ನು ಪರಿಶೀಲಿಸಿ ಜರಡಿ ಹಿಡಿಯುವ ಇಂತಹ ಸಮಯ ಮುಂದೆ ಇದೆಯಲ್ಲವೇ! ಅನ್ಯಾಯಗಾರರು ನ್ಯಾಯವಂತರೊಂದಿಗೆ ಒಟ್ಟಾಗಿ ಇರುತ್ತಾರೆ, ಸತ್ಯದ ಬೆಳಕನ್ನು ಹೊಂದಿದ್ದರೂ, ಅದರಂತೆ ನಡೆಯದವರಿಗೆ, ಅವರು ತಿರಸ್ಕರಿಸಿದ ಬೆಳಕಿಗೆ ಅನುಗುಣವಾಗಿ ಆತ್ಮೀಕಕತ್ತಲು ತುಂಬಿರುತ್ತದೆ. “ಇತರರನ್ನು ಹೋರಾಟಕ್ಕೆ ಕರೆದ ಮೇಲೆ ನಾನೇ ಅಯೋಗ್ಯ ನೆನಿಸಿಕೊಂಡೇನೋ ಎಂಬ ಭಯದಿಂದ ನನ್ನ ಮೈಯನ್ನು ಜಜ್ಜಿ ಸ್ವಾಧೀನ ಪಡಿಸಿಕೊಳ್ಳುತ್ತೇನೆ” ಎಂಬ ಅಪೋಸ್ತಲನಾದ ಪೌಲನು ತಿಳಿಸಿರುವ ಮಾತುಗಳಲ್ಲಿರುವ ಎಚ್ಚರಿಕೆಯ ಪಾಠಕ್ಕೆ ನಾವು ಗಮನ ನೀಡಬೇಕು (1 ಕೊರಿಂಥ 9:27). ಸೈತಾನನು ಬಹಳ ಶ್ರದ್ಧೆಯಿಂದ ಯಾರನ್ನು ಧರ್ಮಭ್ರಷ್ಟರನ್ನಾಗಿ ಮಾಡಬೇಕೆಂದು ಸಿಂಹದಂತೆ ಗರ್ಜಿಸುತ್ತಿದ್ದಾನೆ. ಆದರೆ ಕರ್ತನು ಶೀಘ್ರವಾಗಿ ಬರಲಿದ್ದಾನೆ ಹಾಗೂ ಪ್ರತಿಯೊಬ್ಬರ ಸಂಗತಿಯು ನಿತ್ಯಜೀವಕ್ಕೆ ಅಥವಾ ನಿತ್ಯ ಮರಣಕ್ಕೆ ನಿರ್ಧರಿತವಾಗುತ್ತದೆ. ದೇವರು ಕೃಪೆಯಿಂದಲೇ ಕೊಟ್ಟ ಬೆಳಕಿಗೆ ಅನುಗುಣವಾಗಿ ಕೆಲಸ ಮಾಡುವವರು ಕರ್ತನ ಮಕ್ಕಳೆಂದು ಎಣಿಸಲ್ಪಡುವರು.KanCCh 432.1

    ಆದರೆ ಸಭೆಯ ಶುದ್ಧೀಕರಣದ ದಿನಗಳು ಬೇಗನೆಬರಲಿವೆ. ಸತ್ಯಕ್ಕಾಗಿ ದೃಢವಾಗಿ ನಿಂತಿರುವ ಹಾಗೂ ಪರಿಶುದ್ಧರಾಗಿರುವ ತನ್ನದೇ ಆದ ಜನರು ದೇವರಿಗಿದ್ದಾರೆ. ಶೀಘ್ರದಲ್ಲಿಯೇ ನಡೆಯಲಿರುವ ಬಲವಾದ ಜರಡಿಹಿಡಿಯುವ ಕಾರ್ಯದ ಸಮಯದಲ್ಲಿ ಆತ್ಮೀಕ ಇಸ್ರಾಯೇಲ್ಯರ ಸಾಮರ್ಥ್ಯವನ್ನು ಅಳತೆ ಮಾಡಲು ನಮಗೆ ಚೆನ್ನಾಗಿ ಸಾಧ್ಯವಾಗುತ್ತದೆ. ಸಂಭವಿಸುತ್ತಿರುವ ಸೂಚನೆಗಳನ್ನು ನೋಡಿದಾಗ, ದೇವರು ತನ್ನ ಕೈಯಲ್ಲಿ ಮೊರವನ್ನು ಹಿಡಿದುಕೊಂಡು ಧಾನ್ಯ ಮತ್ತು ಹೊಟ್ಟನ್ನು ಪ್ರತ್ಯೇಕಿಸುವ ಸಮಯ ಹತ್ತಿರವಾಗಿದೆ ಎಂದು ತಿಳಿದುಬರುತ್ತದೆ.KanCCh 432.2