Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ನಿಸ್ವಾರ್ಥ ಜೀವನದಿಂದ ದೇವರನ್ನು ತೋರಿಸಬೇಕು

    ದೇವರಿಂದ ನಮ್ಮನ್ನು ದೂರಮಾಡಿ ಎಲ್ಲಾ ಕಡೆಯೂ ಪ್ರಬಲವಾಗಿ ವ್ಯಾಪಿಸಿ ಅನೇಕ ವಿಧವಾದ ಆತ್ಮೀಕ ಕಾಯಿಲೆಗಳಿಗೆ ಕಾರಣವಾಗುವ ಪಾಪವೆಂದರೆ ಸ್ವಾರ್ಥ. ನಮ್ಮನ್ನುನಾವೇ ನಿರಾಕರಿಸುವುದರ ಹೊರತಾಗಿ ಕರ್ತನ ಬಳಿಗೆ ಹಿಂದಿರುಗುವುದಕ್ಕೆ ಬೇರೆ ದಾರಿಯಿಲ್ಲ. ಸ್ವತಃ ನಾವು ಏನೂ ಮಾಡಲಾಗದು; ಆದರೆ ದೇವರು ನಮ್ಮನ್ನು ಆತ್ಮೀಕವಾಗಿ ಬಲಪಡಿಸುವ ಮೂಲಕ ಇತರರಿಗೆ ನಾವು ಒಳ್ಳೆಯದನ್ನು ಮಾಡುವುದಕ್ಕಾಗಿ ಜೀವಿಸಬಹುದು. ಈ ವಿಧವಾಗಿ ನಾವು ಸ್ವಾರ್ಥ ಎಂಬ ದುಷ್ಟತ್ವವನ್ನು ದೂರ ಮಾಡಬಹುದು. ನಮ್ಮಲ್ಲಿರುವ ಎಲ್ಲವನ್ನೂ ಉಪಯುಕ್ತವಾಗಿಯೂ ಮತ್ತು ನಿಸ್ವಾರ್ಥ ಜೀವನಕ್ಕೆ ಮುಡಿಪಾಗಿಡುತ್ತೇವೆಂಬ ನಮ್ಮ ಇಚ್ಛೆವ್ಯಕ್ತಪಡಿಸಲು ನಾವು ಅನ್ಯದೇಶಗಳಿಗೆ ಹೋಗುವ ಅಗತ್ಯವಿಲ್ಲ. ಇದನ್ನು ನಾವು ಕುಟುಂಬಗಳಲ್ಲಿ, ಸಭೆ, ಸಮುದಾಯ, ನಮ್ಮೊಂದಿಗೆ ಒಡನಾಟ ಇಟ್ಟುಕೊಂಡಿರುವವರು ಮತ್ತು ಕೆಲಸ ಮಾಡುತ್ತಿರುವ ಸ್ಥಳಗಳಲ್ಲಿ ಮಾಡಬಹುದು. ನಮ್ಮ ದಿನನಿತ್ಯದ ಸಾಮಾನ್ಯಜೀವನದಲ್ಲಿ ಸ್ವಾರ್ಥವನ್ನು ನಿರಾಕರಿಸಬೇಕಾಗಿದೆ. “ನಾನು ದಿನವೂ ಸಾಯುತ್ತಲಿದ್ದೇನೆ” ಎಂದು ಪೌಲನು ಹೇಳಲು ಸಾಧ್ಯವಾಯಿತು. ಜೀವನದಲ್ಲಿ ನಾವು ಮಾಡುವ ಅಲ್ಪ ಕಾರ್ಯ ನಿರ್ವಹಣೆಯಲ್ಲಿ ಪೌಲನು ಹೇಳಿದ ಹಾಗೆ ಪ್ರತಿದಿನವೂ ಸ್ವಾರ್ಥವನ್ನು ಬಿಟ್ಟಾಗ, ನಾವು ಜಯಹೊಂದುತ್ತೇವೆ. ಇತರರಿಗೆ ಒಳ್ಳೆಯದು ಮಾಡುವ ಇಚ್ಛೆ ಇದ್ದಾಗ ಸ್ವಾರ್ಥ ಮರೆಯಬೇಕು. ಅನೇಕರು ಇತರರ ಬಗ್ಗೆ ಪ್ರೀತಿ ತೋರಿಸುವುದಿಲ್ಲವೆಂದು ಮೊದಲೇ ನಿರ್ಧರಿಸಿರುತ್ತಾರೆ. ಅಂತವರು ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದಕ್ಕೆ ಬದಲಾಗಿ, ತಮ್ಮದೇ ಆದ ಸುಖಸಂತೋಷವನ್ನು ಹುಡುಕುತ್ತಾರೆ.KanCCh 65.2

    ಪರಲೋಕದಲ್ಲಿ ಯಾರೂ ಸಹ ಸ್ವಾರ್ಥದ ಬಗ್ಗೆ ಚಿಂತಿಸುವುದಿಲ್ಲ ಅಥವಾ ತಮ್ಮ ಸುಖಸಂತೋಷಗಳಲ್ಲಿ ಮಗ್ನರಾಗಿರುವುದಿಲ್ಲ. ಬದಲಾಗಿ ನಿರ್ಮಲವೂ, ಯಥಾರ್ಥವೂ ಆದ ನಿಸ್ವಾರ್ಥಪ್ರೀತಿಯಿಂದ ಪರಲೋಕದಲ್ಲಿರುವವರು ಸಂತೋಷವನ್ನು ಬಯಸುತ್ತಾರೆ. ನೂತನ ಭೂಮಂಡಲದಲ್ಲಿ ಪರಲೋಕದ ಸಂತೋಷ ಹೊಂದಬೇಕೆಂದು ನಾವು ಬಯಸಿದಲ್ಲಿ, ಈ ಲೋಕದಲ್ಲಿಯೇ ಪರಲೋಕದ ತತ್ವಗಳನ್ನು ಅನುಸರಿಸುವ ಜೀವನ ನಡೆಸಬೇಕು. ಜನರು ತಮ್ಮನ್ನು ಇತರರೊಂದಿಗೆ ಹೆಚ್ಚಾಗಿ ಹೋಲಿಕೆ ಮಾಡಿಕೊಳ್ಳುವುದನ್ನು ಮತ್ತು ಎಂದಿಗೂ ಮನಸ್ಸಿನಲ್ಲಿಯೂ ಪಾಪಮಾಡದ ಕ್ರಿಸ್ತನ ಮಾದರಿಯ ಬದಲಿಗೆಪಾಪಮಾಡುವ ಮನುಷ್ಯರನ್ನು ಮಾದರಿಯನ್ನಾಗಿ ಮಾಡಿಕೊಳ್ಳುವುದನ್ನು ಶ್ರೀಮತಿವೈಟಮ್ಮನವರು ದರ್ಶನದಲ್ಲಿ ಕಂಡರು. ಮನುಷ್ಯರ ಅಭಿಪ್ರಾಯದಿಂದಾಗಲಿ ಅಥವಾಲೋಕದ ದೃಷ್ಟಿಯಿಂದಲ್ಲ, ಇಲ್ಲವೆ ಸತ್ಯವನ್ನು ಅಂಗೀಕರಿಸಿಕೊಳ್ಳುವುದಕ್ಕೆ ಮೊದಲುನಾವು ಏನಾಗಿದ್ದೇವೋ, ಎಂಬುದರ ಮೂಲಕ ನಮ್ಮನ್ನುನಾವೇ ಹೋಲಿಕೆಮಾಡಿಕೊಳ್ಳಬಾರದು. ಆದರೆ ನಮ್ಮ ಈಗಿನ ನಂಬಿಕೆ ಮತ್ತು ಲೋಕದಲ್ಲಿ ನಮ್ಮ ಆತ್ಮೀಕಸ್ಥಿತಿಗತಿಯನ್ನು ನಾವು ಕ್ರಿಸ್ತನನ್ನು ಅಂಗೀಕರಿಸಿಕೊಂಡ ನಂತರ ನಿರಂತರವಾಗಿಮುಂದುವರಿದಿದ್ದಲ್ಲಿ ಹೇಗಿರುತ್ತಿತ್ತೆಂಬುದರೊಂದಿಗೆ ಹೋಲಿಕೆ ಮಾಡಿಕೊಳ್ಳಬೇಕು. ಇದುತಾನೇನಾವು ಮಾಡಬೇಕಾದ ಏಕೈಕ ಸುರಕ್ಷಿತವಾದ ಹೋಲಿಕೆಯಾಗಿದೆ. ಬೇರೆ ವಿಧವಾದಹೋಲಿಕೆಯಲ್ಲಿ ನಾವು ಆತ್ಮವಂಚನೆ ಮಾಡಿಕೊಳ್ಳುತ್ತೇವೆ. ದೇವರ ಮಕ್ಕಳ ನೈತಿಕಗುಣಸ್ವಭಾವ ಮತ್ತು ಆತ್ಮೀಕ ಪರಿಸ್ಥಿತಿಯು ಅವರಿಗೆ ಕೊಡಲ್ಪಟ್ಟಂತ ಆಶೀರ್ವಾದ,ವಿಶೇಷವಾದ ಹಕ್ಕು ಸೌಲಭ್ಯಗಳು ಮತ್ತು ಬೆಳಕಿಗೆ ಅನುಗುಣವಾಗಿರದಿದ್ದಲ್ಲಿ ದೇವದೂತರುಅವರನ್ನು ತಕ್ಕಡಿಯಲ್ಲಿ ತೂಗಿ ಇವರು `ಕಡಿಮೆಯಾಗಿ ಕಂಡುಬಂದಿದ್ದಾರೆ’ ಎಂದುಬರೆಯುವರು.KanCCh 66.1

    Larger font
    Smaller font
    Copy
    Print
    Contents