Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
 • Results
 • Related
 • Featured
No results found for: "".
 • Weighted Relevancy
 • Content Sequence
 • Relevancy
 • Earliest First
 • Latest First

  ಅಧ್ಯಾಯ-9 — ದೇವರಲ್ಲಿ ವೈಯಕ್ತಿಕ ನಂಬಿಕೆ

  ದೇವರು ಅಂತಿಮವಾಗಿ ನ್ಯಾಯತೀರಿಸುವ ದಿನದಲ್ಲಿ ಪ್ರತಿಯೊಬ್ಬರ ಹೆಸರುಗಳು ಆತನಿಗೆ ತಿಳಿದಿರುತ್ತವೆ. ನಮ್ಮ ಜೀವನದಲ್ಲಿ ಮಾಡುವ ಪ್ರತಿಯೊಂದು ಕೆಲಸಗಳಿಗೂ ಕಣ್ಣಿಗೆ ಕಾಣದಿರುವ ಅದೃಶ್ಯ ಸಾಕ್ಷಿಯಿರುತ್ತದೆ. “ನಿನ್ನ ಕೃತ್ಯಗಳನ್ನು ನಾನು ಬಲ್ಲೆನೆಂದು ಏಳು ಚಿನ್ನದದೀಪಸ್ತಂಭಗಳ ಮಧ್ಯದಲ್ಲಿ ತಿರುಗಾಡುವಾತನು ಹೇಳುತ್ತಾನೆ” (ಪ್ರಕಟನೆ 2:1). ದೊರೆತ ಯಾವ ಅವಕಾಶಗಳನ್ನು ತಾತ್ಸಾರದಿಂದ ಕಡೆಗಣಿಸಲಾಯಿತು, ತನ್ನ ಮಾರ್ಗವನ್ನು ಬಿಟ್ಟು ಕೆಟ್ಟಮಾರ್ಗದಲ್ಲಿ ನಡೆಯುತ್ತಿರುವವರನ್ನು ಪುನಃ ಶಾಂತಿ, ಸಮಾಧಾನ, ಸುರಕ್ಷತೆಯ ಮಾರ್ಗಕ್ಕೆ ತರಲು ಒಳ್ಳೇ ಕುರುಬನು ಹೇಗೆ ಹಗಲಿರುಳು ಆಯಾಸಗೊಳ್ಳದೆ ಪ್ರಯತ್ನಿಸಿದನು- ಇವೆಲ್ಲವೂ ಆ ದಿನದಲ್ಲಿ ತಿಳಿದುಬರುವುದು. ಲೌಕಿಕ ಸುಖಭೋಗಗಳಲ್ಲಿ ಲೋಲುಪ್ತರಾಗಿರುವವರನ್ನು ದೇವರು ಮತ್ತೆ ಮತ್ತೆ ಕರೆದಿದ್ದಾನೆ ಹಾಗೂ ಆ ಮಾರ್ಗದಲ್ಲಿ ಮುಂದೆ ಬರಲಿರುವ ವಿಪತ್ತುಗಳಿಂದ ತಪ್ಪಿಸಿಕೊಳ್ಳುವಂತೆ ದೇವರ ವಾಕ್ಯವೆಂಬ ಬೆಳಕನ್ನು ಅವರ ದಾರಿಯಲ್ಲಿ ಪ್ರಕಾಶಿಸಿದ್ದಾನೆ. ಆದರೆ ಅವರು ದೇವರ ಈ ಎಚ್ಚರಿಕೆಯನ್ನು ಅಪಹಾಸ್ಯಮಾಡಿ ತಿರಸ್ಕರಿಸಿ, ಕೃಪೆಯಕಾಲದ ಮುಕ್ತಾಯವರೆಗೂ ತಮ್ಮ ಕೆಟ್ಟಮಾರ್ಗಗಳಲ್ಲಿಯೇ ನಡೆದಿದ್ದಾರೆ. ದೇವರ ಮಾರ್ಗಗಳು ನ್ಯಾಯಯುತವೂ ಮತ್ತು ಸಮರ್ಥವೂ ಆಗಿವೆ. ದೇವರ ನ್ಯಾಯವೆಂಬ ತಕ್ಕಡಿಯಲ್ಲಿ ತೂಗಲ್ಪಟ್ಟು ಕಡಿಮೆಯಾಗಿ ಕಂಡುಬಂದ ದುಷ್ಟರ ವಿರುದ್ಧವಾಗಿ ದಂಡನೆಯ ತೀರ್ಪುಕೊಡಲ್ಪಟ್ಟಾಗ ಎಲ್ಲರ ಬಾಯಿ ಮೌನವಾಗುವುದು.KanCCh 56.1

  ಪ್ರಕೃತಿಯ ಮೂಲಕ ಕಾರ್ಯಮಾಡುವ ಹಾಗೂ ವಿಶ್ವದಲ್ಲಿರುವ ಎಲ್ಲವನ್ನೂ ಪರಿಪಾಲಿಸುತ್ತಿರುವವನು ಮಹಾಸಾಮರ್ಥ್ಯವುಳ್ಳ ದೇವರು. ಹೆಚ್ಚಿನ ವಿಜ್ಞಾನಿಗಳು ಹೇಳುವಂತೆ ಈ ಮಹಾಶಕ್ತಿಯು ಎಲ್ಲಾ ಕಡೆಯಲ್ಲಿಯೂ ವ್ಯಾಪಿಸಿರುವ ಒಂದು ಸಿದ್ಧಾಂತವೂ ಅಲ್ಲ ಅಥವಾ ಪ್ರಚೋದಿಸುವ ಶಕ್ತಿಯೂ ಅಲ್ಲ. ದೇವರು ಆತ್ಮ ಸ್ವರೂಪಿಯಾಗಿದ್ದರೂ, ಸಾಕಾರನಾದ ವ್ಯಕ್ತಿಯಾಗಿದ್ದಾನೆ. ಯಾಕೆಂದರೆ ಆತನು ಮನುಷ್ಯರಾದ ನಮ್ಮನ್ನು ತನ್ನ ಸ್ವರೂಪದಲ್ಲಿ ಉಂಟುಮಾಡಿದ್ದಾನೆ.KanCCh 56.2

  ಪ್ರಕೃತಿಯು ದೇವರ ಕೈಕೆಲಸವಾಗಿದೆ. ಆದರೆ ದೇವರು ಸ್ವತಃ ಪ್ರಕೃತಿಯಲ್ಲಿದ್ದಾನೆಂದು ಇದರ ಅರ್ಥವಲ್ಲ. ನಿಸರ್ಗದಲ್ಲಿರುವ ಎಲ್ಲಾ ವಸ್ತುಗಳು ದೇವರ ಗುಣಾತಿಶಯಗಳನ್ನು ವ್ಯಕ್ತಪಡಿಸುತ್ತವೆ ಅವುಗಳ ಮೂಲಕ ನಾವು ಆತನ ಪ್ರೀತಿ, ಸಾಮರ್ಥ್ಯಹಾಗೂ ಮಹಿಮೆಯನ್ನು ಅರ್ಥಮಾಡಿಕೊಳ್ಳಬಹುದು. ಆದರೆ ಪ್ರಕೃತಿಯೇ ದೇವರೆಂದು ನಾವು ಎಂದಿಗೂ ಪರಿಗಣಿಸಬಾರದು. ಮಾನವನು ತನ್ನ ಕಲಾಕೌಶಲ್ಯದಿಂದ ಕಣ್ಣುಗಳಿಗೆ ಆಹ್ಲಾದಕರವಾದ (ಸಂತೋಷ ತರುವ) ಅತ್ಯಂತ ಸುಂದರ ವಸ್ತುಗಳನ್ನು ಮಾಡಬಹುದು. ಈ ವಸ್ತುಗಳು ಇವುಗಳನ್ನು ರೂಪಿಸಿದ ಶಿಲ್ಪಿಯ ಬಗ್ಗೆ ಒಂದು ವಿಧವಾದ ಪರಿಕಲ್ಪನೆ ನೀಡುತ್ತದೆ. ಆದರೆ ಈ ಸುಂದರ ವಸ್ತುಗಳಿಗೆ ಬದಲಾಗಿ ಇದನ್ನು ತಯಾರಿಸಿದ ಕುಶಲ ಶಿಲ್ಪಿಗೆ ಹೆಚ್ಚಿನ ಗೌರವ ದೊರೆಯುತ್ತದೆ. ಅದೇ ರೀತಿಯಾಗಿ ನಿಸರ್ಗವು ದೇವರ ಆಲೋಚನೆಗಳ ಅಭಿವ್ಯಕ್ತಿಯಾಗಿದೆ. ಆದುದರಿಂದ ಪ್ರಕೃತಿಯನ್ನಲ್ಲ, ಬದಲಾಗಿ ಅದನ್ನು ಸೃಷ್ಟಿಸಿದ ದೇವರ ಮಹೋನ್ನತನಾಮಕ್ಕೆ ನಾವು ಗೌರವ, ಮಹಿಮೆ ಸಲ್ಲಿಸಬೇಕು.KanCCh 56.3

  ಮಾನವನನ್ನು ಉಂಟುಮಾಡುವಾಗ ಸಾಕಾರವಾದ (Personal) ದೇವರ ಕರ್ತೃತ್ವವು ಪ್ರಕಟವಾಯಿತು. ದೇವರು ಮನುಷ್ಯನನ್ನು ತನ್ನ ಸ್ವರೂಪದಲ್ಲಿ ಉಂಟುಮಾಡಿದಾಗ, ಮನುಷ್ಯನು ಪರಿಪೂರ್ಣನಾಗಿದ್ದನು. ಆದರೆ ಜೀವವಿರಲಿಲ್ಲ. ಆಗ ಸಾಕಾರನಾದ, ಸ್ವಯಂಭು ದೇವರು (ಅಂದರೆ ಯಾರಿಂದಲೂ ಸೃಷ್ಟಿಸಲ್ಪಡದೆ, ಸ್ವತಂತ್ರವಾಗಿ ಅಸ್ತಿತ್ವದಲ್ಲಿರುವಾತನು) ಮನುಷ್ಯನ ದೇಹಕ್ಕೆ ಜೀವಶ್ವಾಸ ಊದಿದನು. ಆಗ ಆ ದೇಹವು ಜೀವಂತವಾಗಿ ಉಸಿರಾಡುವ ಮತ್ತು ಬುದ್ಧಿವಂತ ಮನುಷ್ಯನಾಯಿತು. ಅವನ ದೇಹದ ಎಲ್ಲಾ ಅಂಗಾಂಗಗಳೂ ಕಾರ್ಯನಿರ್ವಹಿಸಲಿಕ್ಕೆ ಆರಂಭಿಸಿದವು. ಮನುಷ್ಯನ ಹೃದಯ, ರಕ್ತನಾಳಗಳು, ನರನಾಡಿಗಳು, ನಾಲಿಗೆ, ಕೈಕಾಲುಗಳು, ಪಂಚೇಂದ್ರಿಯಗಳು - ಇವೆಲ್ಲವೂ ತಮ್ಮ ಕಾರ್ಯ ಆರಂಭಿಸಿದವು. ಆದರೆ ಅವೆಲ್ಲವೂ ನಿಯಮಗಳಿಗೆ ಅಧೀನವಾಗಿದ್ದವು. ಮನುಷ್ಯನು ಬದುಕುವ ಪ್ರಾಣಿಯಾದನು. ಸಾಕಾರನಾದ ದೇವರು ಯೇಸುಕ್ರಿಸ್ತನ ಮೂಲಕ ಮಾನವನನ್ನು ಉಂಟುಮಾಡಿ ಅವನಿಗೆ ಬುದ್ಧಿವಂತಿಕೆ ಹಾಗೂ ಸಾಮರ್ಥ್ಯಕೊಟ್ಟನು.KanCCh 57.1

  ನಮ್ಮ ವಾಸ್ತವವಾದ ಭೌತಿಕವಸ್ತುಗಳು (Substance) ಇನ್ನೂಅಪರಿಪೂರ್ಣವಾಗಿರುವಾಗಲೇ, ನಮ್ಮ ಶರೀರದ ಅಂಗಾಂಗಗಳು ಇನ್ನೂ ಉಂಟುಮಾಡಲ್ಪಡದಿರುವಾಗಲೇ, ಅವೆಲ್ಲವೂ ದೇವರಪುಸ್ತಕದಲ್ಲಿ ಬರೆಯಲ್ಪಟ್ಟವು. ದೇವರುಉಂಟುಮಾಡಿದ ಎಲ್ಲಾ ಸಜೀವಪ್ರಾಣಿ, ಪಕ್ಷಿಗಳಲ್ಲಿ ಮನುಷ್ಯನೇ ಅತ್ಯಂತ ಉತ್ಕೃಷ್ಟಸೃಷ್ಟಿಯಾಗಿದ್ದಾನೆ. ಆದುದರಿಂದ ಅವನು ದೇವರ ಆಲೋಚನೆಗಳನ್ನು ವ್ಯಕ್ತಪಡಿಸಿ,ಆತನ ಮಹಿಮೆಯನ್ನು ಪ್ರಕಟಪಡಿಸಬೇಕು. ಆದರೆ ಮನುಷ್ಯನು ತನ್ನನ್ನು ದೇವರಿಗಿಂತಮಿಗಿಲಾಗಿ ಎಣಿಸಿಕೊಳ್ಳಬಾರದು.KanCCh 57.2