Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಅಧ್ಯಾಯ-15 — ಮನುಷ್ಯನೊಂದಿಗೆ ದೇವರ ಸಂಬಂಧವು ನಿರ್ಮಲವಾಗಿರಬೇಕು

    ನಮ್ಮ ಅಂಗಾಂಗ ವ್ಯವಸ್ಥೆಯೊಂದಿಗೆ ಮೆದುಳಿನ ನರಗಳು ಸಂಪರ್ಕ ಹೊಂದಿವೆ. ಈ ಮಾಧ್ಯಮದ ಮೂಲಕ ಮಾತ್ರ ದೇವರು ಮನುಷ್ಯರೊಂದಿಗೆ ಸಂಪರ್ಕಿಸಿ, ಆತನ ಅಂತರಾಳ ಜೀವನದಲ್ಲಿ ಪರಿಣಾಮವುಂಟು ಮಾಡುತ್ತಾನೆ. ನರವ್ಯೂಹ ವ್ಯವಸ್ಥೆಯ ವಿದ್ಯುತ್ ಹರಿವೆಗೆ (Electric Current) ಏನಾದರೂ ತೊಂದರೆಯಾದಾಗ, ಪ್ರಮುಖ ಅಂಗಗಳ ಸಾಮಥ್ರ್ಯವು ಕುಂದಿಹೋಗುತ್ತದೆ. ಇದರ ಫಲಿತಾಂಶವಾಗಿ ಮನಸ್ಸಿನ ಸಂವೇದನೆಯು (ಶಕ್ತಿ ಸಾಮಥ್ರ್ಯ) ನಿಶ್ಚೇತಗೊಳ್ಳುತ್ತದೆ.KanCCh 98.1

    ಮನುಷ್ಯನಿಗೆ ಯಾವ ವಿಷಯದಲ್ಲಿಯೂ ಮಿತಸಂಯಮವಿಲ್ಲದಿದ್ದಲ್ಲಿ, ಶರೀರದ ಇಂದ್ರಿಯಗಳು ನಿಸ್ಸತ್ವಗೊಳ್ಳುತ್ತವೆ ಹಾಗೂ ಮೆದುಳಿನ ನರಗಳ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತವೆ. ಇದರಿಂದ ಅವನಿಗೆ ಪರಲೋಕದ ವಿಷಯಗಳ ಬಗ್ಗೆ ಆಸಕ್ತಿ ಇಲ್ಲದಾಗುತ್ತದೆ. ಉನ್ನತ ಉದ್ದೇಶಗಳಿಗಾಗಿ ರೂಪಿಸಲ್ಪಟ್ಟ ಮನಸ್ಸಿನ ಅತ್ಯುನ್ನತ ಸಾಮರ್ಥ್ಯವು ಕುಂದಿ, ಲೌಕಿಕ ಆಶಾಪಾಶಗಳಲ್ಲಿ ಸಿಲುಕಿ ನೀಚವಾದ ಭಾವನೆಗಳಿಗೂ ದಾಸನಾಗುತ್ತದೆ. ನಮ್ಮ ಶಾರೀರಿಕ ಅಭ್ಯಾಸಗಳು ಸರಿಯಾಗಿಲ್ಲದಿದ್ದಲ್ಲಿ, ನಮ್ಮ ಮಾನಸಿಕ ಹಾಗೂ ನೈತಿಕ ಸಾಮಥ್ರ್ಯವು ಬಲಿಷ್ಠವಾಗಿರುವುದಿಲ್ಲ. ಯಾಕೆಂದರೆ ಶಾರೀರಿಕ ಮತ್ತು ನೈತಿಕತೆಯ ನಡುವೆ ಒಂದು ಬಲವಾದ ಸಂವೇದನಾ ಸಂಬಂಧವಿದೆ.KanCCh 98.2

    ಮಾನವರು ಹೆಚ್ಚು ಕಷ್ಟ ಸಂಕಟ, ದುಃಖಗಳಿಗೆ ಒಳಗಾದಂತೆ, ಸೈತಾನನು ಅತ್ಯಧಿಕವಾಗಿ ಸಂತೋಷಿಸುತ್ತಾನೆ. ಕೆಟ್ಟ ಅಭ್ಯಾಸಗಳಿರುವವರು ಮತ್ತು ಅನಾರೋಗ್ಯವಂತರು, ಆರೋಗ್ಯಕರವಾದ ವ್ಯಕ್ತಿಗಳಂತೆ ದೇವರನ್ನು ಶ್ರದ್ಧೆಯಿಂದಲೂ, ಭಕ್ತಿಯಿಂದಲೂ ಮತ್ತು ದೃಢನಂಬಿಕೆಯಿಂದಲೂ ಸೇವಿಸುವುದಿಲ್ಲವೆಂದು ಅವನಿಗೆ ಚೆನ್ನಾಗಿ ತಿಳಿದಿದೆ. ರೋಗಗ್ರಸ್ತ ಶರೀರವು ಮೆದುಳಿನಲ್ಲಿ ಪರಿಣಾಮ ಬೀರುತ್ತದೆ. ಮನಸ್ಸಿನಿಂದ ನಾವು ಕರ್ತನನ್ನು ಆರಾಧಿಸುತ್ತೇವೆ. ಶರೀರಕ್ಕೆ ತಲೆಯು ಅತ್ಯಂತ ಪ್ರಾಮುಖ್ಯ ಅಂಗವಾಗಿದೆ. ಮನುಷ್ಯರು ದುರಭ್ಯಾಸಗಳನ್ನು ಬೆಳೆಸಿಕೊಳ್ಳುವಂತೆ ಸೈತಾನನು ಪ್ರೇರಿಸುವುದಲ್ಲದೆ, ಅವುಗಳಿಂದ ಅವರು ಮಾತ್ರವಲ್ಲದೆ, ಇತರರೂ ಹಾಳಾದಾಗ, ಅವನು ಜಯಹೊಂದುತ್ತಾನೆ. ಈ ವಿಧವಾಗಿ ಮನುಷ್ಯರು ದೇವರಿಂದ ದೂರವಾಗುವಂತೆ ಮಾಡುತ್ತಾನೆ. KanCCh 98.3

    ಮಾನವ ಜನಾಂಗವು ಸಂಪೂರ್ಣವಾಗಿ ತನ್ನ ಹತೋಟಿಗೆ ಬರಬೇಕೆಂದು ಸೈತಾನನು ನಿರಂತರವಾಗಿ ಎಚ್ಚರಿಕೆ ವಹಿಸುತ್ತಾನೆ. ಅವರಲ್ಲಿ ಆಹಾರ ಮತ್ತು ಲೈಂಗಿಕ ಕಾಮನೆಗಳನ್ನು ಪೂರೈಸಿಕೊಳ್ಳುವ ಅಪೇಕ್ಷೆಯ ಮೂಲಕ ಅವರ ಮೇಲೆ ಬಲವಾದ ಹಿಡಿತ ಹೊಂದುತ್ತಾನೆ. ಸಾಧ್ಯವಾದ ಎಲ್ಲಾ ಮಾರ್ಗಗಳ ಮೂಲಕ ಸೈತಾನನು ಅವರನ್ನು ಪ್ರಚೋದಿಸುತ್ತಾನೆ.KanCCh 98.4