Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
 • Results
 • Related
 • Featured
No results found for: "".
 • Weighted Relevancy
 • Content Sequence
 • Relevancy
 • Earliest First
 • Latest First

  ದೇವರಿಗೆ ಮಾಡಿದ ಹರಕೆಯು ಪವಿತ್ರವೂ, ಖಂಡಿತವಾಗಿ ನೆರವೇರಿಸಬೇಕಾದದ್ದೂ ಆಗಿದೆ

  ಪ್ರತಿಯೊಬ್ಬರೂ ತಮ್ಮನ್ನು ತಾವೇ ನಿರ್ಧರಿಸಿಕೊಳ್ಳುವವರಾಗಿರುವುದರಿಂದ, ತಮ್ಮಹೃದಯದಲ್ಲಿ ಉದ್ದೇಶಿಸಿದಂತೆ ದೇವರಿಗೆ ಕೊಡಬೇಕು. ಆದರೆ ಕೆಲವರು ಅನನೀಯಹಾಗೂ ಸಪ್ಪೆರಳಂತೆ ಅಪರಾಧಿಗಳಾಗಿ ಕೊಡಬೇಕಾದ ದಶಾಂಶದಲ್ಲಿ ಒಂದುಭಾಗವನ್ನುಹಿಡಿದುಕೊಂಡರೂ, ಇತರರಿಗೆ ತಿಳಿಯುವುದಿಲ್ಲವೆಂದು ನೆನಸುತ್ತಾರೆ. ಈ ದಂಪತಿಗಳೂಸಹ ಅದರಂತೆ ಭಾವಿಸಿದರು. ಅವರ ಉದಾಹರಣೆಯು ನಮಗೆ ಎಚ್ಚರಿಕೆಯಾಗಿಕೊಡಲ್ಪಟ್ಟಿದೆ (ಅ.ಕೃತ್ಯಗಳು 5:1-11). ದೇವರುಹೃದಯಗಳನ್ನು ಪರಿಶೋಧಿಸುತ್ತಾನೆಂದುಈ ಪ್ರಕರಣದಿಂದ ತಿಳಿದುಬರುತ್ತದೆ. ಮನುಷ್ಯರ ಉದ್ದೇಶ ಹಾಗೂ ಪ್ರೇರಣೆಯನ್ನುದೇವರಿಂದ ಮರೆಮಾಡಲಾಗದು. ಇಂತಪಾಪದ ವಿರುದ್ಧವಾಗಿ ದೇವರು ಎಲ್ಲಾಕಾಲದ ಕ್ರೈಸ್ತರಿಗೂ ಎಚ್ಚರಿಕೆನೀಡಿದ್ದಾನೆ.KanCCh 342.1

  ಸಭೆಯಲ್ಲಿ ವಿಶ್ವಾಸಿಗಳ ಮುಂದೆ ಇಷ್ಟು ಹಣವನ್ನು ಕೊಡುತ್ತೇನೆಂದು ಬಾಯಿಮಾತಿನಲ್ಲಿ ಅಥವಾ ಬರವಣಿಗೆಯಲ್ಲಿ ಕೊಟ್ಟಾಗ, ನಮಗೂ ದೇವರಿಗೂ ನಡುವೆ ಆದಒಪ್ಪಂದಕ್ಕೆ ಅವರು ಪ್ರತ್ಯಕ್ಷ ಸಾಕ್ಷಿಗಳಾಗಿದ್ದಾರೆ. ಇದು ಮನುಷ್ಯರಿಗೆ ಮಾಡಿದ ಹರಕೆಅಥವಾ ಒಪ್ಪಂದವಲ್ಲ, ಬದಲಾಗಿ ದೇವರೊಂದಿಗೆ ಮಾಡಿಕೊಂಡದ್ದಾಗಿದೆ. ಇದು ನಮ್ಮನೆರೆಯವನಿಗೆ ಬರೆದುಕೊಟ್ಟ ಪ್ರಾಮಿಸರಿನೋಟಿನಂತಿದೆ. ದೇವರೊಂದಿಗೆ ಮಾಡಿಕೊಂಡಈ ಕರಾರು ಪವಿತ್ರವಾಗಿದ್ದು, ಅದನ್ನುಖಂಡಿತವಾಗಿಯೂ ನೆರವೇರಿಸಲೇಬೇಕು.KanCCh 342.2

  ಮನುಷ್ಯರೊಂದಿಗೆ ಮಾಡಿಕೊಂಡ ಇಂತಹ ಕರಾರು ಅಥವಾ ಹರಕೆಯನ್ನುಮುರಿಯಲು ಯಾರೂ ಇಷ್ಟಪಡಲಾರರು. ಅಂದಮೇಲೆ ಎಲ್ಲಾ ಒಳ್ಳೇ ದಾನಗಳಮೂಲಕರ್ತನಾದ ದೇವರೊಂದಿಗೆ ಮಾಡಿಕೊಂಡ ಹರಕೆಯು ಬಹಳ ಪ್ರಾಮುಖ್ಯವಾಗಿದೆ.ಆದುದರಿಂದ ಅದನ್ನು ಮುರಿಯಲು ನಾವು ಎಂದೂ ಪ್ರಯತ್ನಿಸಬಾರದು.ಕಾನೂನುಬದ್ಧವಾದ ನ್ಯಾಯಾಲಯದಲ್ಲಿ ಇಂತಹ ಹರಕೆಯನ್ನು ಪ್ರಶ್ನೆ ಮಾಡಲಾಗದ್ದರಿಂದ,ಇದು ನ್ಯಾಯಸಮ್ಮತವಲ್ಲವೇ?KanCCh 342.3

  ಯೇಸುಕ್ರಿಸ್ತನ ಮಹಾತ್ಯಾಗ, ಬಲಿದಾನದ ರಕ್ತದಿಂದ ರಕ್ಷಿಸಲ್ಪಡಬೇಕಾದ ಮನುಷ್ಯನುದೇವರಿಂದಕದ್ದುಕೊಳ್ಳಬಹುದೇ? ಅವನ ಕ್ರಿಯೆಗಳು ಹಾಗೂ ಹರಕೆಗಳು ಪರಲೋಕದನ್ಯಾಯಾಲಯದ ನ್ಯಾಯವೆಂಬ ತಕ್ಕಡಿಗಳಲ್ಲಿ ತೂಗಲ್ಪಡುವುದಿಲ್ಲವೇ?KanCCh 342.4

  ಸದಸ್ಯರು ಮಾಡಿದ ಹರಕೆಗೆ ಕ್ರೈಸ್ತಸಭೆಯು ಹೊಣೆಯಾಗಿದೆ. ಯಾವಸದಸ್ಯನಾದರೂಮಾಡಿಕೊಂಡ ಹರಕೆ ತೀರಿಸಲು ಅಲಕ್ಷ ಮಾಡಿದಲ್ಲಿ, ಸಭೆಯು ಈ ವಿಷಯವಾಗಿಅವನೊಂದಿಗೆ ಪ್ರೀತಿಯಿಂದಲೂ, ಕರುಣೆಯಿಂದಲೂ ಆದರೆ ನೇರವಾಗಿ ಮಾತಾಡಬೇಕು. ಆದರೆ ಈ ಸದಸ್ಯನು ಮಾಡಿದ ಹರಕೆ ತೀರಿಸಲು ಮನಸ್ಸಿದ್ದರೂ ಸಾಧ್ಯವಾಗದಿದ್ದಲ್ಲಿಹಾಗೂ ಅವನು ದೈವಭಕ್ತಿಯುಳ್ಳವನಾಗಿದ್ದಲ್ಲಿ, ಸಭೆಯ ಇತರ ಸದಸ್ಯರು ಅನುಕಂಪದಿಂದಅವನಿಗೆಸಹಾಯಮಾಡಬೇಕು. ಈ ರೀತಿಯಾಗಿ ಅವರೂ ಸಹ ದೇವರಾಶೀರ್ವಾದಹೊಂದುವರು.KanCCh 342.5