Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಸ್ಥಳೀಯ ಸಭೆಗಳ ಅಧಿಕಾರಿಗಳ ಆಯ್ಕೆ ಹಾಗೂ ಪ್ರತಿಷ್ಠೆ

    ಆಪೋಸ್ತಲನಾದ ಪೌಲನು ತೀತನಿಗೆ “ನೀನು ಕ್ರೇತದ್ವೀಪದಲ್ಲಿ ಇನ್ನೂ ಕ್ರಮಕ್ಕೆಬಾರದಿರುವ ಕಾರ್ಯಗಳನ್ನು ಕ್ರಮಪಡಿಸಿ ಪಟ್ಟಣಪಟ್ಟಣಗಳಲ್ಲೂ ಸಭೆಯ ಹಿರಿಯರನ್ನುನೇಮಿಸಬೇಕು... ಸಭೆಯಹಿರಿಯನು ನಿಂದಾರಹಿತನೂ, ಏಕಪತ್ನಿಯುಳ್ಳವನೂ ಆಗಿರಬೇಕು.ಅವನ ಮಕ್ಕಳು ಕರ್ತನನ್ನುನಂಬಿದವರಾಗಿರಬೇಕು; ಅವರುದುರ್ಮಾಗಸ್ಥರೆನಿಸಿಕೊಂಡವರಾಗಲಿ, ಅಧಿಕಾರಕ್ಕೆಒಳಗಾಗದವರಾಗಿರಲಿಆಗಿರಬಾರದು,ಯಾಕೆಂದರೆ ಸಭಾಧ್ಯಕ್ಷನುಮನೆವಾರ್ತೆಯವನಾಗಿರುವುದರಿಂದ ನಿಂದಾರಹಿತನಾಗಿರಬೇಕು“ಎಂದು ಹೇಳುತ್ತಾನೆ (ತೀತನಿಗೆ 1:5-7), ಅಲ್ಲದೆ ಅವಸರದಿಂದ ಯಾರ ತಲೆಯಮೇಲೆಯಾದರೂ ಹಸ್ತವನ್ನಿಟ್ಟು ಸಭೆಯ ಉದ್ಯೋಗಕ್ಕೆನೇಮಿಸಬೇಡ” ಎಂದೂ ಸಹಪೌಲನು ತಿಮೊಥೆಯನಿಗೆ ಹೇಳುತ್ತಾನೆ (1 ತಿಮೊಥೆ 5:22).KanCCh 309.3

    ಕೆಲವು ಅಡ್ವೆಂಟಿಸ್ಟ್ ಸಭೆಗಳಲ್ಲಿ ಸಭೆಯನ್ನು ಸುಸಂಘಟಿಸುವ ಕೆಲಸ ಮತ್ತು ಹಿರಿಯರನ್ನುದೇವರಿಗೆ ಪ್ರತಿಷ್ಟಿಸುವುದು ಅತಿ ಆತುರದಿಂದ ಮಾಡುವ ಕಾರ್ಯವಾಗಿದೆ. ಸತ್ಯವೇದವುಪೌಲನ ಮೂಲಕ ತಿಳಿಸಿರುವ ನಿಯಮಗಳನ್ನು ನಿರ್ಲಕ್ಷಿಸುವುದರಿಂದ ಸಭೆಗೆ ಮುಂದೆಬಹಳ ಕಷ್ಟವುಂಟು ಮಾಡುವ ಸಮಸ್ಯೆಗಳು ಸಂಭವಿಸುತ್ತವೆ. ತಮಗೆ ಕೊಟ್ಟಿರುವಸಭೆಯ ಜವಾಬ್ದಾರಿಗಳನ್ನು ಯೋಗ್ಯವಾದ ರೀತಿಯಲ್ಲಿ ನಿರ್ವಹಿಸಲಾಗದವರನ್ನುನಾಯಕರನ್ನಾಗಿ ಆರಿಸುವುದಕ್ಕೆ ಆತುರ ಪಡಬಾರದು. ದೇವರಸೇವೆಯಲ್ಲಿ ಎಂತದ್ದೇಕಾರ್ಯನಿರ್ವಹಿಸುವ ಮುನ್ನ ಅವರಲ್ಲಿ ಸಂಪೂರ್ಣ ಬದಲಾವಣೆ ಕಂಡು ಬರಬೇಕುಹಾಗೂ ಗುಣಸ್ವಭಾವವು ಶ್ರೇಷ್ಠವಾಗಿರಬೇಕು ಹಾಗೂ ಸುಸಂಸ್ಕೃತವಾದ ನಡವಳಿಕೆಹೊಂದಿರಬೇಕು.KanCCh 309.4