Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಅಧ್ಯಾಯ-46 — ಪಾರುಪತ್ಯಗಾರಿಕೆಗೆ ಹಿತವಚನಗಳು

    ಉದಾರತೆಯೆಂಬ ಶ್ರೇಷ್ಠಗುಣವು ಪರಲೋಕದ ಗುಣಾತಿಶಯವಾಗಿದೆ. ಕ್ರಿಸ್ತನಮಹಾನಿಸ್ವಾರ್ಥ ತ್ಯಾಗ ಹಾಗೂ ಪ್ರೀತಿಯು ಕಲ್ಯಾರಿ ಶಿಲುಬೆಯಲ್ಲಿ ಪ್ರಕಟವಾಯಿತುಮನುಷ್ಯನು ರಕ್ಷಿಸಲ್ಪಡುವುದಕ್ಕಾಗಿ ಆತನು ತನ್ನಲ್ಲಿದ್ದ ಎಲ್ಲವನ್ನೂ ಮಾತಲ್ಲದೆ, ಸ್ವತಃತನ್ನನ್ನೇ ಕೊಟ್ಟನು. ಆಶೀರ್ವಾದ ನಿಧಿಯಾಗಿರುವನಮ್ಮ ರಕ್ಷಕನಾದ ಯೇಸುಕ್ರಿಸ್ತನಪ್ರತಿಯೊಬ್ಬ ಅನುಯಾಯಿಯಯಾಪರತೆ ಹಾಗೂ ಔದಾರ್ಯಕ್ಕೆ ಕ್ರಿಸ್ತನ ಶಿಲುಬೆಯಅರಿಕೆಮಾಡುತ್ತದೆ. ಉದಾರತೆಯಿಂದ ಕೊಡುವುದೇ ಕ್ರೈಸ್ತಧರ್ಮದಮೂಲಸಿದ್ಧಾಂತವಾಗಿದೆ.ಔದಾರ್ಯತೆ ಹಾಗೂ ಒಳ್ಳೆಯ ಕ್ರಿಯೆಗಳು ಕ್ರೈಸ್ತ ಜೀವನದ ಯಥಾರ್ಥವಾದ ಫಲವಾಗಿದೆ.ಲೋಕದ ಮೇಲೆ ಆಸೆಯಿರುವ ಪ್ರಾಪಂಚಿಕ ವ್ಯಕ್ತಿಗಳು ಸಂತೋಷವಾಗಿರುವುದಕ್ಕೆ ಇನ್ನೂಅತ್ಯಧಿಕವಾಗಿ ಹಣಸಂಪಾದಿಸಬೇಕೆಂದು ಬಯಸುತ್ತಾರೆ. ಆದರೆ ಇದರಿಂದಾಗುವ ಫಲವುದುಃಖ ಹಾಗೂ ಮರಣ.KanCCh 330.1

    ಕ್ರಿಸ್ತನ ಶಿಲುಬೆಯಿಂದ ಹೊಳೆಯುವ ಸುವಾರ್ತೆಯ ಬೆಳಕು ಸ್ವಾರ್ಥವನ್ನು ಆಕ್ಷೇಪಿಸುತ್ತದೆಮತ್ತು ಉದಾರತೆ ಹಾಗೂ ದಯಾಪರತೆಯನ್ನು ಉತ್ತೇಜಿಸುತ್ತದೆ. ಇನ್ನೂ ಹೆಚ್ಚಾದಧಾರಾಳತನದಿಂದ ಕೊಡಿರಿ ಎಂದು ಹೇಳುವುದನ್ನು ನಾವು ಕೇಳಿದ್ದೇವೆ. ತನ್ನ ಮಕ್ಕಳುಬಡತನದಲ್ಲಿಯೂ ಉದಾರವಾಗಿ ಕೊಡಬೇಕೆಂದು ದೇವರು ಕೇಳುತ್ತಾನೆ. ನೈತಿಕಅಂಧಕಾರವು ಜಗತ್ತನ್ನು ಆವರಿಸಿಕೊಂಡಿರುವ ಈ ಕಾಲದಲ್ಲಿ ಅಪರಿಮಿತವಾದ ಪ್ರಯತ್ನದಅಗತ್ಯವಿದೆ. ದೇವರ ಮಕ್ಕಳಲ್ಲಿ ಅನೇಕರು ಪ್ರಾಪಂಚಿಕವಾದವ್ಯವಹಾರದಲ್ಲಿ ಮುಳುಗಿದುರಾಸೆ ಎಂಬ ಉರುಲಿನಲ್ಲಿ ಸಿಕ್ಕುವ ಅಪಾಯದಲ್ಲಿದ್ದಾರೆ. ಆತನಕರುಣೆಯಿಂದಲೇತಮ್ಮ ಆದಾಯವು ಹೆಚ್ಚಾಗುತ್ತಿದೆಎಂಬುದನ್ನು ಅವರು ಮನವರಿಕೆ ಮಾಡಿಕೊಳ್ಳಬೇಕು.ನಿಮ್ಮ ಧಾರಾಳತನವನ್ನು ಕಾರ್ಯರೂಪದಲ್ಲಿತೋರಿಸಬೇಕೆಂದು ಅವರಿಗೆ ತಿಳಿಸಿಹೇಳಬೇಕು.ಇಲ್ಲದಿದ್ದಲ್ಲಿ ಅವರು ರಕ್ಷಕನ ಸ್ವಾರ್ಥರಹಿತವಾದ ಮಹಾ ಆದರ್ಶದ ಶ್ರೇಷ್ಠಗುಣವನ್ನುಅನುಸರಿಸಲಾಗದು.KanCCh 330.2

    “ನೀವು ಲೋಕದ ಎಲ್ಲಾ ಕಡೆಗೆ ಹೋಗಿ ಜಗತ್ತಿಗೆಲ್ಲಾ ಸುವಾರ್ತೆಯನ್ನು ಸಾರಿರಿ“ಎಂಬ ಕ್ರಿಸ್ತನ ಆದೇಶದ (ಮಾರ್ಕ 16:15) ಮೂಲಕ ದೇವರ ಕೃಪಾತಿಶಯದ ಜ್ಞಾನವನ್ನುಪ್ರಚುರಪಡಿಸಬೇಕೆಂಬ ಕಾರ್ಯವನ್ನು ಆತನು ಮನುಷ್ಯರಿಗೆ ಒಪ್ಪಿಸಿದ್ದಾನೆ. ಆದರೆಕೆಲವರು ದೇವರ ಸುವಾರ್ತೆ ಸಾರುವುದರಿಂದಲೂ, ಬೇರೆಯವರು ಈ ಲೋಕದಲ್ಲಿ ಆಸುವಾರ್ತೆಯ ಜ್ಞಾನವನ್ನು ಇತರರಿಗೆ ಸಾರುವುದಕ್ಕೆ ಅಗತ್ಯವಾದ ಹಣಸಹಾಯವನ್ನುಕಾಣಿಕೆಯ ಮೂಲಕ ಕೊಡಬೇಕೆಂದು ಕ್ರಿಸ್ತನು ಕರೆನೀಡುತ್ತಾನೆ. ತನ್ನ ದೈವೀಕವರಗಳುಮಾನವರ ಮೂಲಕ ಇತರರ ರಕ್ಷಣೆಗಾಗಿ ಉಪಯೋಗಿಸಲ್ಪಡುವಂತೆ ದೇವರು ಮನುಷ್ಯರಿಗೆ ಸಂಪತ್ತನ್ನು ಅನುಗ್ರಹಿಸುತ್ತಾನೆ. ಮನುಷ್ಯನನ್ನು ಶ್ಲಾಘಿಸುವ ದೇವರವಿಧಾನಗಳಲ್ಲಿ ಇದುಒಂದಾಗಿದೆ. ಇದು ಮನುಷ್ಯನಿಗೆ ಅತ್ಯಗತ್ಯವಾದ ಕಾರ್ಯವಾಗಿದ್ದು, ಅವನ ಹೃದಯದಲ್ಲಿಹೆಚ್ಚಾದ ಅನುಕಂಪವನ್ನು ಹುಟ್ಟಿಸುತ್ತದೆ.KanCCh 330.3

    ಉದಾರತೆಯನ್ನು ಸರಿಯಾಗಿ ಉಪಯೋಗಿಸಿದಾಗ, ಅದು ನಮ್ಮ ಮಾನಸಿಕ ಹಾಗೂನೈತಿಕ ಸಾಮರ್ಥ್ಯಗಳನ್ನು ಪ್ರಭಾವಗೊಳಿಸುತ್ತದೆ. ಅಲ್ಲದೆ ಅತ್ಯಂತ ಆರೋಗ್ಯಕರ ಕ್ರಿಯೆಯಮೂಲಕ ಅಗತ್ಯವಿದ್ದವರಿಗೆಆಶೀರ್ವಾದಕರವಾಗಿ, ದೇವರಸೇವೆಯು ಮುಂದುವರೆಯಲುಕಾರಣವಾಗುತ್ತದೆ. ಅಗತ್ಯವಿರುವ ಸಹೋದರನಿಗೆ ಸಹಾಯ ಮಾಡುವ ಪ್ರತಿಯೊಂದುಅವಕಾಶ ಅಥವಾ ದೇವರ ಸುವಾರ್ತೆಯ ಸತ್ಯವನ್ನು ಸಾರುವುದಕ್ಕೆ ಮಾಡುವ ಸಹಾಯವುಪರಲೋಕದ ಭಂಡಾರದಲ್ಲಿ ಸುರಕ್ಷತೆಯಿಂದ ಮುಂದಾಗಿ ಠೇವಣಿ ಇಡಲು ಕಳುಹಿಸುವಒಂದು ಮುತ್ತಿನಂತಿದೆ.KanCCh 331.1