Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಅಧ್ಯಾಯ-18 — ಕ್ರೈಸ್ತ ವಿಶ್ವಾಸಿಗಳಲ್ಲದವರನ್ನು ಮದುವೆಯಾಗಬಾರದು

    ಕ್ರೈಸ್ತರು ವಿಶ್ವಾಸಿಗಳಲ್ಲದವರನ್ನು ಮದುವೆಯಾಗಬಾರದೆಂಬ ದೇವರ ವಾಕ್ಯದ ಬೋಧನೆಗೆ ಸ್ವತಃ ಕ್ರೈಸ್ತರು ತಾತ್ಸಾರ ಮಾಡುತ್ತಿರುವುದು ವಿಸ್ಮಯಕಾರಿಯಾಗಿದೆ. ದೇವರನ್ನು ಪ್ರೀತಿಸಿ, ಆತನಿಗೆ ಭಯಪಡುತ್ತೇವೆಂದು ಹೇಳಿಕೊಳ್ಳುವ ಅನೇಕರು ಸತ್ಯವೇದದ ವಿವೇಕದ ಮಾತುಗಳಿಗೆ ಕಿವಿಗೊಡುವುದಕ್ಕೆ ಬದಲಾಗಿ ತಮ್ಮ ಮನಸ್ಸಿನ ಇಚ್ಚೆಯಂತೆ ನಡೆಯುತ್ತಿದ್ದಾರೆ. ಈ ಲೋಕದಲ್ಲಿ ಮಾತ್ರವಲ್ಲ, ಮುಂದಿನ ಲೋಕದಲ್ಲಿಯೂ ದಂಪತಿಗಳ ಸಂತೋಷ. ಯೋಗಕ್ಷೇಮದ ಬಗ್ಗೆ ಕಾಳಜಿ ಹೊಂದಿರುವ ಮದುವೆಯಂತಹ ಪ್ರಾಮುಖ್ಯ ವಿಷಯದಲ್ಲಿ ವಿವೇಚನಾಶಕ್ತಿ, ಉತ್ತಮನಿರ್ಣಯ ಮತ್ತು ದೇವರ ಭಯವನ್ನು ನಿರ್ಲಕ್ಷಿಸಲಾಗಿದೆ. ಬದಲಾಗಿ ಹಠಮಾರಿತನದ ನಿರ್ಧಾರ ಮತ್ತು ಸರಿಯಾದ ವಿವೇಚನೆಯಿಲ್ಲದ ಪ್ರಚೋದನೆಯು ದಂಪತಿಗಳ ಮನಸ್ಸನ್ನು ನಿಯಂತ್ರಿಸುತ್ತದೆ.KanCCh 129.1

    ಎಲ್ಲಾ ವಿಷಯಗಳಲ್ಲಿ ವಿವೇಕಿಗಳೂ, ಮನಸ್ಸಾಕ್ಷಿಗೆ ತಕ್ಕಂತೆ ನ್ಯಾಯನಿಷ್ಠರಾಗಿರುವ ಮಹಿಳೆಯರು ಮತ್ತು ಪುರುಷರು ಒಳ್ಳೆಯ ಬುದ್ಧಿವಾದಕ್ಕೆ ಕಿವಿಗೊಡುವುದಿಲ್ಲ. ಅವರು ತಮ್ಮ ಗೆಳೆಯರು, ಬಂಧು ಬಾಂಧವರು ಮತ್ತು ದೇವರ ಸೇವಕರ ಮನವಿ ಹಾಗೂ ವಿಜ್ಞಾಪನೆಗಳಿಗೆ ಅಲಕ್ಷ್ಯ ಮಾಡುತ್ತಾರೆ. ಯಾರಾದರೂ ಅವರಿಗೆ ಎಚ್ಚರಿಕೆ ನೀಡಿದರೆ, ಅಂತವರನ್ನು ಸಂಬಂಧಪಡದ ವಿಷಯದಲ್ಲಿ ತಲೆ ಹಾಕುವ ಅಧಿಕ ಪ್ರಸಂಗಿ ಎಂದು ತಿಳಿಯುತ್ತಾರೆ. ನಂಬಿಗಸ್ತನಾದ ಪ್ರಾಮಾಣಿಕ ಸ್ನೇಹಿತನು ವಿನಯದಿಂದ ಅವರನ್ನು ಆಕ್ಷೇಪಿಸಿದಲ್ಲಿ, ಅಂತವನನ್ನು ಅವರು ವೈರಿಯೆಂದು ಎಣಿಸುತ್ತಾರೆ. ಇದು ಸೈತಾನನ ಆಶಯಕ್ಕೆ ತಕ್ಕಂತೆ ಇರುತ್ತದೆ. ಅವನು ಬಯಸುವುದೂ ಸಹ ಇದನ್ನೇ. ಅವನು ಒಬ್ಬ ವ್ಯಕ್ತಿಯನ್ನು ತನ್ನ ಬಲೆಯಲ್ಲಿ ಬೀಳಿಸುತ್ತಾನೆ. ಅದು ಅವನನ್ನು ಮರಳುಗೊಳಿಸಿ ಮತಿಗೆಡಿಸುತ್ತದೆ. ವಿವೇಚನಾಶಕ್ತಿಯು ಲೈಂಗಿಕ ವ್ಯಾಮೋಹದ ಮುಂದೆ ತನ್ನ ನಿಯಂತ್ರಣ ಕಳೆದುಕೊಳ್ಳುತ್ತದೆ. ಅತಿಪರಿಶುದ್ಧವಾದ ತೀವ್ರಾಸಕ್ತಿ ಹುಟ್ಟಿಸುವ ಕಾಮೋದ್ರೇಕ ಅವನಲ್ಲುಂಟಾಗುತ್ತದೆ. ಅಂತ ವ್ಯಕ್ತಿಯು ಜೀವನದಲ್ಲಿ ದುರವಸ್ಥೆ ಉಂಟಾಗಿರುವುದನ್ನು ಮತ್ತು ಸೈತಾನನ ದಾಸತ್ವದಲ್ಲಿ ಬಿದ್ದಿರುವುದನ್ನು ತಿಳಿದುಕೊಳ್ಳುವ ಹೊತ್ತಿಗೆ ಸಮಯ ಮೀರಿರುತ್ತದೆ. ಇದು ಕಾಲ್ಪನಿಕವಾದ ಅಥವಾ ಊಹಾಪೋಹದ ವಿಷಯವಲ್ಲ. ಬದಲಾಗಿ ವಾಸ್ತವಾಂಶವಾಗಿದೆ. ದೇವರು ಯಾವುದೇ ಸಂಶಯಕ್ಕೆ ಎಡೆಗೊಡದಂತೆ ಖಚಿತವಾಗಿ ನಿಷೇಧಿಸಿರುವ ಮದುವೆಗಳಿಗೆ ಆತನ ಸಮ್ಮತಿ ಇರುವುದಿಲ್ಲ.KanCCh 129.2

    ಕರ್ತನಾದ ಯೆಹೋವನು ಪುರಾತನ ಇಸ್ರಾಯೇಲ್ಯರು ಕಾನಾನ್‌ದೇಶದಲ್ಲಿ ತಮ್ಮ ಸುತ್ತಲಿರುವ ವಿಗ್ರಹಾರಾಧಕ ಅನ್ಯಜನರೊಂದಿಗೆ ಮದುವೆ ಮಾಡಿ ಕೊಳ್ಳಬಾರದೆಂದು ಆಜ್ಞಾಪಿಸಿದನು.”...ನೀವು ನಿಮ್ಮ ಗಂಡುಮಕ್ಕಳಿಗೆ ಅವರಲ್ಲಿ ಕನ್ನಿಕೆಗಳನ್ನು ತೆಗೆದುಕೊಳ್ಳುವುದಕ್ಕೆ ಆಸ್ಪದವುಂಟಾಗುವುದು; ತರುವಾಯ ಆ ಸೊಸೆಯರು ತವರುಮನೆಯ ದೇವತೆಗಳನ್ನು ಪೂಜಿಸುವವರಾಗಿ ನಿಮ್ಮ ಮಕ್ಕಳನ್ನು ಅನ್ಯದೇವರುಗಳ ಪೂಜೆ ಎಂಬ ವ್ಯಭಿಚಾರಕ್ಕೆ ಎಳೆದಾರು, ಎಚ್ಚರ” (ವಿಮೋಚನಕಾಂಡ 34:16). “ಯಾಕೆಂದರೆ ನೀವು ನಿಮ್ಮ ದೇವರಾದ ಯೆಹೋವನಿಗೆ ಮೀಸಲಾದ ಜನರಾಗಿದ್ದೀರಲ್ಲವೇ? ಆತನು ಭೂಲೋಕದಲ್ಲಿರುವ ಸಮಸ್ತ ಜನರುಗಳಲ್ಲಿ ನಿಮ್ಮನ್ನೇ ಸ್ವಕೀಯ ಜನವಾಗುವುದಕ್ಕೆ ಆದುಕೊಂಡನು” (ಧರ್ಮೋಪದೇಶಕಾಂಡ 7:6).KanCCh 129.3

    ಹೊಸ ಒಡಂಬಡಿಕೆಯಲ್ಲಿಯೂ ಸಹ ಕ್ರೈಸ್ತರು ವಿಶ್ವಾಸಿಗಳಲ್ಲದ ಅನ್ಯರೊಂದಿಗೆ ಮದುವೆ ಆಗುವುದಕ್ಕೆ ಇದೇ ರೀತಿಯ ವಿರೋಧ ಹೇರಲಾಗಿದೆ. “ಮುತ್ತೈದೆಯು ತನ್ನ ಗಂಡನು ಜೀವದಿಂದಿರುವ ತನಕ ಅವರಿಗೆ ಬದ್ಧಳಾಗಿದ್ದಾಳೆ. ಗಂಡನು ಸತ್ತಿದ್ದರೆ ಆಕೆಯು ಬೇಕಾದವನನ್ನು ಮದುವೆ ಮಾಡಿಕೊಳ್ಳುವುದಕ್ಕೆ ಸ್ವತಂತ್ರಳಾಗಿದ್ದಾಳೆ” (1 ಕೊರಿಂಥ 7:39), ಆದರೆ ಈ ಕಾರ್ಯವು ಕರ್ತನ ಶಿಷ್ಯಂದಿರಿಗೆ ತಕ್ಕ ಹಾಗೆ ನಡೆಯಬೇಕೆಂದು ಪೌಲನು 40ನೇ ವಚನದಲ್ಲಿ ತಿಳಿಸುತ್ತಾನೆ. ಪೌಲನು ಮುಂದುವರಿದು “ನೀವು ಕ್ರಿಸ್ತನಂಬಿಕೆಯಿಲ್ಲದವರೊಂದಿಗೆ ಸೇರಿ ಇಜ್ಜೋಡಾಗಬೇಡಿರಿ; ಧರ್ಮಕ್ಕೂ ಅಧರ್ಮಕ್ಕೂ ಜೊತೆಯೇನು? ಬೆಳಕಿಗೂ ಕತ್ತಲೆಗೂ ಐಕ್ಯವೇನು? ಕ್ರಿಸ್ತನಿಗೂ ಸೈತಾನಿಗೂ ಒಡನಾಟವೇನು? ನಂಬುವವನಿಗೂ ನಂಬದೆ ಇರುವವನಿಗೂ ಪಾಲುಗಾರಿಕೆ ಏನು? ದೇವರ ಮಂದಿರಕ್ಕೂ ವಿಗ್ರಹಕ್ಕೂ ಒಪ್ಪಿಗೆ ಏನು? ನಾವು ಜೀವ ಸ್ವರೂಪನಾದ ದೇವರು ಮಂದಿರವಾಗಿದ್ದೇವಲ್ಲಾ. ಇದರ ಸಂಬಂಧವಾಗಿ ದೇವರು- ನಾನು ಅವರಲ್ಲಿ ವಾಸಿಸುತ್ತಾ ತಿರುಗಾಡುವೆನು. ನಾನು ಅವರಿಗೆ ದೇವರಾಗಿರುವೆನು. ಅವರು ನನಗೆ ಪ್ರಜೆಯಾಗಿರುವರು ಎಂದು ಹೇಳಿದ್ದಾನೆ. ಆದುದರಿಂದ ಅನ್ಯಜನರ ಮಧ್ಯದಲ್ಲಿಂದ ಹೊರಟುಬಂದು ಪ್ರತ್ಯೇಕವಾಗಿರಿ; ಅಶುದ್ಧವಾದ ಯಾವುದನ್ನೂ ಮುಟ್ಟದಿರಿ ಎಂದು ಕರ್ತನು ಹೇಳುತ್ತಾನೆ. ಇದಲ್ಲದೆ ನಾನು ನಿಮ್ಮನ್ನು ಸೇರಿಸಿಕೊಂಡು ನಿಮಗೆ ತಂದೆಯಾಗಿರುವೆನು. ನೀವು ನನಗೆ ಕುಮಾರ ಕುಮಾರಿಯರು ಆಗಿರುವಿರೆಂದು ಸರ್ವಶಕ್ತನಾದ ಕರ್ತನು ಹೇಳುತ್ತಾನೆ” ಎಂದು ಪೌಲನು ತಿಳಿಸುತ್ತಾನೆ (2 ಕೊರಿಂಥ 6:14-18).KanCCh 130.1

    ದೇವರ ಮಕ್ಕಳು ಎಂದಿಗೂ ಸಹ ಆತನು ಮಾಡಬಾರದೆಂದು ಹೇಳಿರುವುದನ್ನು ಮಾಡಬಾರದು. ಕ್ರೈಸ್ತ ವಿಶ್ವಾಸಿಗಳು ಮತ್ತು ಅವಿಶ್ವಾಸಿಗಳು ನಡುವೆ ಮದುವೆ ನಿಷೇಧಿಸಲ್ಪಟ್ಟಿದೆ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಹೃದಯ ಪರಿವರ್ತನೆ ಹೊಂದಿರುವ ಕ್ರೈಸ್ತರು ತಮ್ಮದೇ ಆದ ಆಲೋಚನೆಯಂತೆ ನಡೆದು ಕ್ರೈಸ್ತರಲ್ಲದವರನ್ನು ಮದುವೆಯಾಗುತ್ತಾರೆ. ಇದಕ್ಕೆ ದೇವರ ಸಮ್ಮತಿ ಇರುವುದಿಲ್ಲ. ಈ ಕಾರಣದಿಂದಲೇ ಅನೇಕ ಸ್ತ್ರೀ ಪುರುಷರು ಈ ಲೋಕದಲ್ಲಿ ದೇವರನ್ನು ಬಿಟ್ಟು ಯಾವುದೇ ನಿರೀಕ್ಷೆಯಿಲ್ಲದೆ ಜೀವಿಸುತ್ತಾರೆ. ಅವರ ಉದಾತ್ತವಾದ ಮಹತ್ವಾಕಾಂಕ್ಷೆಯು ಕಮರಿಹೋಗುತ್ತದೆ ಹಾಗೂ ವಿವಿಧ ರೀತಿಯ ಸನ್ನಿವೇಶ ಗಳೆಂಬ ಸರಪಣಿಯಿಂದ ಅವರು ಕಟ್ಟಲ್ಪಟ್ಟು ಸೈತಾನನ ಬಲೆಗೆಬೀಳುತ್ತಾರೆ. ಲೈಂಗಿಕ ವ್ಯಾಮೋಹ ಜೀವನದಲ್ಲಿ ಕಹಿಯಾದ ಅನುಭವ ಹೊಂದುವರು. ಅಲ್ಲದೆ ಅವರು ರಕ್ಷಣೆ ಕಳೆದುಕೊಳ್ಳುವ ಸಾಧ್ಯತೆಯೂ ಇದೆ.KanCCh 130.2

    ಸತ್ಯದ ಬೆಳಕಿನಲ್ಲಿ ನಡೆಯುತ್ತೇವೆಂದು ಹೇಳಿಕೊಳ್ಳುವವರು ಕ್ರೈಸ್ತರಲ್ಲಿ ಅವಿಶ್ವಾಸಿಗಳನ್ನು ಮದುವೆಯಾದಲ್ಲಿ, ದೇವರ ಇಚ್ಛೆಗೆ ವಿರುದ್ಧವಾಗಿ ನಡೆಯುತ್ತಾರೆ. ಅವರು ದೇವರ ದಯೆಯನ್ನು ಕಳೆದುಕೊಳ್ಳುತ್ತಾರೆ ಮತ್ತು ಕಹಿಯಾದ ಅನುಭವದ ಮೂಲಕ ಪಶ್ಚಾತ್ತಾಪ ಪಡಬೇಕಾಗುತ್ತದೆ. ಕ್ರೈಸ್ತರಲ್ಲದ ನಿಮ್ಮ ಸಂಗಾತಿಯು ಅತ್ಯುತ್ತಮವಾದ ನೈತಿಕ ಸ್ವಭಾವ ಹೊಂದಿರಬಹುದು, ಆದರೆ ಅವನು ಅಥವಾ ಅವಳು ದೇವರ ಕರೆಯುವಿಕೆಗೆ ಉತ್ತರಿಸಿಲ್ಲ. ಆತನ ಮಹಾರಕ್ಷಣೆಯನ್ನು ಅಲಕ್ಷಿಸುವುದು ಯಾಕೆ ಕ್ರೈಸ್ತರಲ್ಲದವರು ಅನ್ಯರನ್ನು ಮದುವೆಯಾಗಬಾರದು ಎಂಬುದಕ್ಕೆ ಸಕಾರಣವಾಗಿದೆ. ಐಶ್ವರ್ಯವಂತನಾದ ಯೌವನಸ್ಥನಿಗೆ ಯೇಸುವು “ನಿನಗೆ ಒಂದು ಕಡಿಮೆಯಾಗಿದೆ” ಎಂದು ಹೇಳಿದನು (ಮಾರ್ಕ 10:21). ಅದೇ ರೀತಿ ಅವಿಶ್ವಾಸಿಯಾದ ಸಂಗಾತಿಯು ಎಷ್ಟೇ ಉತ್ತಮ ಸ್ವಭಾವ ಹೊಂದಿದ್ದರೂ ಅವರಲ್ಲಿ ಒಂದು ಕಡಿಮೆಯಾಗಿರುತ್ತದೆ. ಅಂದರೆ ರಕ್ಷಣೆ ಕಳೆದುಕೊಂಡಿರುತ್ತಾರೆ. ಅದು ತಾನೇ ಅವರಿಗೆ ಅಗತ್ಯವಾಗಿ ಬೇಕಾಗಿರುತ್ತದೆ.KanCCh 131.1