Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
 • Results
 • Related
 • Featured
No results found for: "".
 • Weighted Relevancy
 • Content Sequence
 • Relevancy
 • Earliest First
 • Latest First
  Larger font
  Smaller font
  Copy
  Print
  Contents

  ಹಸಿವು ಮತ್ತು ಹೊಟ್ಟೆಬಾಕತನ

  ಮಾನವರು ಎದುರಿಸಬೇಕಾದ ಬಲವಾದ ಶೋಧನೆಗಳಲ್ಲಿ ಹಸಿವೆಯ ಅಪೇಕ್ಷೆಯೂಒಂದಾಗಿದೆ. ಮನಸ್ಸು ಹಾಗೂ ಶರೀರದ ನಡುವೆ ಒಂದು ನಿಗೂಢವಾದ ಮತ್ತುಅದ್ಭುತವಾದ ಸಂಬಂಧವಿದೆ. ಅವು ಪರಸ್ಪರ ಪ್ರತಿಕ್ರಯಿಸುತ್ತವೆ. ಶರೀರದ ಎಲ್ಲಾ ಅಂಗಗಳುಸಾಮರಸ್ಯದಿಂದ ಕಾರ್ಯನಿರ್ವಹಿಸಲು ಹಾಗೂ ಬಲಿಷ್ಟವಾಗಿ ಬೆಳವಣಿಗೆ ಹೊಂದಲುಅದನ್ನು ಆರೋಗ್ಯಕರ ಸ್ಥಿತಿಯಲ್ಲಿರಿಸುವುದು ಜೀವನದ ಮೊದಲ ಕರ್ತವ್ಯವಾಗಿದೆ.ಶರೀರವನ್ನು ನಿರ್ಲಕ್ಷಿಸಿದರೆ, ಮನಸ್ಸನ್ನು ಸಹ ನಿರ್ಲಕ್ಷಿಸಿದಂತಾಗುತ್ತದೆ. ದೇವರ ಮಕ್ಕಳುರೋಗಿಗಳಾಗಿರುವುದು ಹಾಗೂ ಅವರ ಮನಸ್ಸಿನ ಬೆಳವಣಿಗೆ ಇಲ್ಲದಿರುವುದು. ಆತನಿಗೆಮಹಿಮೆ ತರುವುದಿಲ್ಲ. ಆರೋಗ್ಯವನ್ನು ಕೆಡಿಸಿಕೊಂಡು ಮನಸ್ಸಿಗೆ ಬಂದಂತೆ ಮಿತಿಮೀರಿತಿನ್ನುವುದು ಶರೀರದ ಇಂದ್ರಿಯಗಳ ದುರುಪಯೋಗ ಪಡಿಸಿಕೊಂಡಂತೆ. ಆಹಾರದವಿಷಯದಲ್ಲಿ ಯಾರು ಮಿತಸಂಯಮದಿಂದ ವರ್ತಿಸದೆ, ಹೊಟ್ಟೆಬಾಕರಂತೆ ತಿನ್ನುವುದಾಗಲಿಅಥವಾ ಕುಡಿಯುವುದಾಗಲಿ ಮಾಡಿದಲ್ಲಿ, ಅವರು ತಮ್ಮ ಶಾರೀರಿಕಸಾಮರ್ಥ್ಯ ಮತ್ತುನೈತಿಕಶಕ್ತಿಯನ್ನು ದುರ್ಬಲಗೊಳಿಸುತ್ತಾರೆ. ಶಾರೀರಿಕ ನೀತಿನಿಯಮಗಳನ್ನು ಮೀರಿದ್ದರಪರಿಣಾಮಅವರು ಅದಕ್ಕೆ ತಕ್ಕಂತೆ ಪ್ರತಿಫಲ ಅನುಭವಿಸುವರು.KanCCh 280.2

  ಅನೇಕರು ಮಿತಿಮೀರಿ ತಿನ್ನುವುದರಿಂದ ಮತ್ತು ತಮ್ಮ ತೀವ್ರಾಸಕ್ತಿಯಮನೋಕಾಮನೆಗಳನ್ನು ತೃಪ್ತಿ ಪಡಿಸಿಕೊಳ್ಳುವುದರಿಂದ ತಮ್ಮ ಮಾನಸಿಕ ಹಾಗೂ ಶಾರೀರಿಕಸಾಮರ್ಥ್ಯವನ್ನು ದುರ್ಬಲಗೊಳಿಸುತ್ತಾರೆ. ಅವರಲ್ಲಿ ಮೃಗೀಯ ಪ್ರವೃತ್ತಿ ಬಲಗೊಳ್ಳುತ್ತದೆ.ಆದರೆ ನೈತಿಕ ಮತ್ತು ಆತ್ಮೀಕ ಸ್ವಭಾವವು ದುರ್ಬಲಗೊಳ್ಳುತ್ತದೆ. ನಾವು ದೇವರಮಹಾಸಿಂಹಾಸನದ ಮುಂದೆ ನಿಂತಾಗ, ಅನೇಕರ ಜೀವಿತದ ಬಗ್ಗೆ ಅಂತಹ ದಾಖಲೆಗಳುಪ್ರದರ್ಶಿಸಲ್ಪಡುತ್ತವೆ. ಆಗ ಅವರು ದೇವರು ತಮಗೆ ಕೊಟ್ಟಿದ್ದ ಸಾಮರ್ಥ್ಯವನ್ನುದುರುಪಯೋಗ ಪಡಿಸಿಕೊಳ್ಳದಿದ್ದಲ್ಲಿ, ಎಂತಹ ಕಾರ್ಯ ಮಾಡಬಹುದಾಗಿತ್ತೆಂದು ತಿಳಿದುಕೊಳ್ಳುವರು. ದೇವರು ತಮಗೆ ಒಪ್ಪಿಸಿಕೊಟ್ಟಿದ್ದ ಎಲ್ಲಾ ಶಾರೀರಿಕ ಮತ್ತು ಮಾನಸಿಕಶಕ್ತಿಯನ್ನು ಆತನ ಸೇವೆಗಾಗಿ ಕೊಟ್ಟಿದ್ದಲ್ಲಿ, ತಾವು ಬೌದ್ಧಿಕ ಮಟ್ಟದಲ್ಲಿ ಎಂತಹ ಉನ್ನತಸ್ಥಾನಹೊಂದಿರುತ್ತಿದ್ದೇವೆಂದು ಅರಿತುಕೊಳ್ಳುವರು. ಪಶ್ಚಾತ್ತಾಪದ ಬೇಗೆಯಲ್ಲಿ ಬೆಂದು ಹೋಗುವಅವರು ತಿರುಗಿ ತಮ್ಮ ಜೀವನವನ್ನು ನಡೆಸಲು ಕಾತರದಿಂದ ಬಯಸುವರು.KanCCh 280.3

  ಪ್ರತಿಯೊಬ್ಬ ನಿಜ ಕ್ರಿಸ್ತನು ತನ್ನ ದೈಹಿಕ ಕಾಮನೆಗಳು ಹಾಗೂ ಅಪೇಕ್ಷೆಗಳನ್ನು ತನ್ನಹತೋಟಿಯಲ್ಲಿಟ್ಟುಕೊಂಡಿರುವನು. ಅವನು ಇವುಗಳ ದಾಸ್ಯದ ಸಂಕೋಲೆಯಿಂದಮುಕ್ತನಾಗದಿದ್ದಲ್ಲಿ, ಎಂದಿಗೂ ಸಹ ಕ್ರಿಸ್ತನ ನಿಜವಾದ ವಿಧೇಯ ಸೇವಕನಾಗಲುಸಾಧ್ಯವಿಲ್ಲ. ಯಾರು ತಮ್ಮ ದೈಹಿಕ ಅಪೇಕ್ಷೆ ಹಾಗೂ ಮನೋಕಾಮನೆಗಳ ಆಸೆಗಳನ್ನುಪೂರೈಸಿಕೊಳ್ಳುವುದರಲ್ಲಿಯೇ ಮುಳುಗಿರುತ್ತಾರೋ, ಅಂತವರ ಹೃದಯಗಳಲ್ಲಿ ಸತ್ಯವುಯಾವ ಪರಿಣಾಮವನ್ನೂ ಉಂಟುಮಾಡುವುದಿಲ್ಲ. ಒಬ್ಬ ವ್ಯಕ್ತಿಯು ಇವುಗಳಿಗೆದಾಸನಾಗಿರುವನೋ, ಅಂತವನ ಪ್ರಾಣ, ಆತ್ಮ ಶರೀರಗಳನ್ನು ಸತ್ಯದ ಶಕ್ತಿ ಮತ್ತುಪವಿತ್ರಾತ್ಮನು ಪರಿಶುದ್ಧಗೊಳಿಸುವುದು ಅಸಾಧ್ಯ.KanCCh 281.1

  ಯೇಸುಕ್ರಿಸ್ತನು ಅಡವಿಯಲ್ಲಿ ನಲ್ವತ್ತುದಿನಗಳ ಕಾಲ ಉಪವಾಸ ಮಾಡಿದ್ದು ನಮಗೆಮಿತಸಂಯಮ ಹಾಗೂ ಸ್ವಾರ್ಥತ್ಯಾಗದ ಪ್ರಾಮುಖ್ಯತೆಯನ್ನು ತಿಳಿಸುತ್ತದೆ. ಇದುನಾವು ಸೇವಿಸುವ ಆಹಾರದಿಂದ ಆರಂಭವಾಗಿ, ಜೀವನಕ್ಕೆ ಸಂಬಂಧಿಸಿದ ಎಲ್ಲಾವಿಷಯಗಳಲ್ಲಿಯೂ ಮಿತಸಂಯಮ ಅನುಸರಿಸಬೇಕು. ಮಾನವರ ವಿಮೋಚಕನಾದಕ್ರಿಸ್ತನು ನಮ್ಮ ಬಲಹೀನತೆಯಲ್ಲಿ ಸಹಾಯಮಾಡಲು ಪರಲೋಕದಿಂದ ಇಲ್ಲಿಗೆ ಬಂದನು.ಆತನು ಕೊಡುವ ಶಕ್ತಿಯಿಂದ ನಾವು ನಮ್ಮ ದೈಹಿಕ ಮನೋಕಾಮನೆ ಹಾಗೂ ಅಪೇಕ್ಷೆಗಳನ್ನುಜಯಿಸಲು ಸಾಧ್ಯವಾಗುವಂತೆ ಆತನು ಬಲವನ್ನು ನೀಡುವನು.KanCCh 281.2

  *****

  Larger font
  Smaller font
  Copy
  Print
  Contents