Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
 • Results
 • Related
 • Featured
No results found for: "".
 • Weighted Relevancy
 • Content Sequence
 • Relevancy
 • Earliest First
 • Latest First

  ಇಂದ್ರಜಾಲ ಹಾಗೂ ಮೂಢನಂಬಿಕೆ

  ಅನ್ಯಧರ್ಮದಿಂದ ಕ್ರೈಸ್ತಧರ್ಮಕ್ಕೆ ಮತಾಂತರಗೊಂಡಿದ್ದ ಎಫೆಸ ಸಭೆಯವರು ಮಾಟಮಂತ್ರದ (Magic, ಇಂದ್ರಜಾಲ, ಯಕ್ಷಿಣಿ) ಪುಸ್ತಕಗಳನ್ನು ಸುಟ್ಟು ಹಾಕುವುದರ ಮೂಲಕ ಒಂದು ಸಮಯದಲ್ಲಿ ತಮಗೆ ಪ್ರಿಯವಾಗಿದ್ದ ಪುಸ್ತಕಗಳು ಈಗ ತಮಗೆ ಅಸಹ್ಯವಾಗಿದೆ ಎಂದು ತೋರಿಸಿಕೊಟ್ಟರು. ಇಂದ್ರಜಾಲ ಅಥವಾ ಯಕ್ಷಿಣಿವಿದ್ಯೆಯಿಂದ ಹಾಗೂ ಅದರಮೂಲಕ ವಿಶೇಷವಾಗಿ ದೇವರನ್ನು ಮನನೋಯಿಸಿ ತಮ್ಮಆತ್ಮಗಳನ್ನು ಎಫೆಸದವರು ಅಪಾಯಕ್ಕೆ ಈಡು ಮಾಡಿಕೊಂಡಿದ್ದರು. ಅವರು ಮಾಟಮಂತ್ರವಿದ್ಯೆಯ ವಿರುದ್ಧವಾಗಿ ಅಂತಹ ರೋಷ ಹಾಗೂ ಕ್ರೋಧ ವ್ಯಕ್ತಪಡಿಸಿ ತಮ್ಮ ಯಥಾರ್ಥವಾದ ಬದಲಾವಣೆಯ ಸಾಕ್ಷ್ಯಾಧಾರವಾಗಿ ತೋರಿಸಿದರು.KanCCh 421.2

  ಅನ್ಯಜನರ ಮೂಢನಂಬಿಕೆಗಳು ಇಪ್ಪತ್ತನೇಶತಮಾನದಲ್ಲಿ ಇಲ್ಲದಂತಾಗಿದೆ ಎಂಬ ಮುಗ್ಧ ನಿರೀಕ್ಷೆ ಮತ್ತು ಭರವಸೆಯಿತ್ತು. ಆದರೆ ದೇವರವಾಕ್ಯ ಮತ್ತು ವಾಸ್ತವಾಂಶಗಳ ಸಾಕ್ಷ್ಯಾಧಾರವು ಪುರಾತನಕಾಲದ ಮಂತ್ರವಾದಿಗಳಂತೆ ಇಂದಿನದಿನಗಳಲ್ಲಿಯೂ ಮಾಟಗಾರಿಕೆ, ವಾಮಚಾರವು (Sorcery, ದುಷ್ಟದೇವತೆಗಳ ಉಪಾಸನಬಲದಿಂದ ಮಾಟಶೂನ್ಯ ಮಾಡುವ ಶಕ್ತಿ) ನಿಜವಾಗಿಯೂ ಆಚರಣೆಯಲ್ಲಿದೆ. ವಾಸ್ತವವಾಗಿ ಪುರಾತನ ಇಂದ್ರಜಾಲ ಅಥವಾ ಮಾಟಮಂತ್ರ ವಿಧಾನವೇ ಇಂದಿನ ಆಧುನಿಕಕಾಲದಲ್ಲಿ ಪ್ರೇತಸಂಪರ್ಕ ಸಿದ್ಧಾಂತವೆಂದು ಕರೆಯಲಾಗುತ್ತಿದೆ. ಸೈತಾನನು ಸ್ವತಃ ಮರಣಹೊಂದಿರುವ ಸ್ನೇಹಿತರವೇಷದಲ್ಲಿ ಕಾಣಿಸಿಕೊಂಡು ಲಕ್ಷಾಂತರಜನರ ಮನಸ್ಸನ್ನು ಆಕ್ರಮಿಸುತ್ತಿದ್ದಾನೆ. “ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ....” ಎಂದು ಸತ್ಯವೇದವು ತಿಳಿಸುತ್ತದೆ (ಪ್ರಸಂಗ 9:5,6). “ಅವರು ಸತ್ತಾಗಲೇ ಅವರ ಪ್ರೀತಿಯೂ, ಹಗೆತನವೂ, ಹೊಟ್ಟೆಕಿಚ್ಚು ಅಳಿದುಹೋದವು; ಲೋಕದೊಳಗೆ ನಡೆಯುವ ಯಾವಕೆಲಸದಲ್ಲಿಯೂ ಅವರಿಗೆ ಇನ್ನೆಂದಿಗೂ ಪಾಲೇಇಲ್ಲ“. ಸತ್ತವರು ಬದುಕಿರುವವರೊಂದಿಗೆ ಯಾವ ಸಂಪರ್ಕವನ್ನೂ ಹೊಂದಿರುವುದಿಲ್ಲ. ಆದರೆ ಏದೆನ್‍ತೋಟದಲ್ಲಿಯೇ ತೋರಿಸಿದ ಕುಯುಕ್ತಿಯನ್ನೇ ಸೈತಾನನು ಈಗಲೂ ಸಹ ಉಪಯೋಗಿಸುತ್ತಾ, ಜನರ ಮನಸ್ಸಿನ ಮೇಲೆ ಹಿಡಿತ ಸಾಧಿಸುತ್ತಾನೆ.KanCCh 421.3

  ಪ್ರೇತಸಂಪರ್ಕದ ಮೂಲಕ ಅನೇಕ ರೋಗಿಗಳು, ಪ್ರೀತಿಪಾತ್ರರನ್ನು ಕಳೆದುಕೊಂಡವರು ಮಾತ್ರವಲ್ಲದೆ, ಕೆಟ್ಟ ಕುತೂಹಲದಿಂದಲೂ ಸಹ ಅನೇಕರು ದುಷ್ಟಶಕ್ತಿಗಳು ಅಥವಾ ದುರಾತ್ಮಗಳೊಂದಿಗೆ ಸಂಪರ್ಕ ಹೊಂದಿದ್ದಾರೆ. ಇಂತಹ ಹುಚ್ಚು ಸಾಹಸಮಾಡುವವರು ಬಹಳ ಅಪಾಯದ ಪರಿಸ್ಥಿತಿಯಲ್ಲಿದ್ದಾರೆ. ದೇವರು ಅಂತವರ ವಿಷಯದಲ್ಲಿ ಯಾವ ಭಾವನೆ ಹೊಂದಿದ್ದಾನೆಂದು ಸತ್ಯವೇದವು ತಿಳಿಸಿದ್ದಾನೆ. ಪುರಾತನಕಾಲದಲ್ಲಿ ಅನ್ಯದೇವತೆಯ ಸಲಹೆಕೇಳುವುದಕ್ಕಾಗಿ ಫಿಲಿಷ್ಟಿಯ ದೇಶದ ಎಕ್ರೋನಿಗೆ ಕಳುಹಿಸಿದ್ದ ಅಹಜ್ಯರಾಜನಿಗೆ ದೇವರು ಖಡಕ್ಕಾದ ಎಚ್ಚರಿಕೆ ಹೇಗೆಕೊಟ್ಟನೆಂದು ಗಮನಿಸಿ : “ನೀನು ಎಕ್ರೋನಿನದೇವರಾದ ಬಾಳ್ಜೆಬೂಬನನ್ನು ವಿಚಾರಿಸುವುದಕ್ಕೆ ಹೋಗುವುದೇನು? ಇಸ್ರಾಯೇಲ್ಯರಲ್ಲಿ ದೇವರಿಲ್ಲವೋ? ಅಹಜ್ಯನು ತಾನು ಹತ್ತಿದ ಮಂಚದಿಂದಿಳಿಯದೆ ಸಾಯಲೇಬೇಕು” (ಅರಸುಗಳು 1:3,4). ಪುರಾತನ ಕಾಲದಲ್ಲಿನ ಇಂದ್ರಜಾಲಕರು/ ಮಾಟಗಾರರು ಪ್ರೇತಸಂಪರ್ಕ ಮಾಧ್ಯಮದ ಮೂಲಕ ದುರಾತ್ಮಗಳೊಂದಿಗೆ ಮಾತಾಡುತ್ತಿದ್ದರು. ಈ ಕಾಲದಲ್ಲಿ ಅತೀಂದ್ರಿಯದೃಷ್ಟಿ (Clairvoyant, ಕಣ್ಣಿಗೆಕಾಣದ ವಸ್ತು ಅಥವಾ ಘಟನೆಗಳನ್ನು, ಕಂಡಷ್ಟೇ ಸ್ಪಷ್ಟವಾಗಿ ಮನಸ್ಸಿನಮೂಲಕ ಗ್ರಹಿಸುವ ಶಕ್ತಿ) ಉಳ್ಳವರು ಹಾಗೂ ಕಣಿ ಅಥವಾ ಭವಿಷ್ಯಹೇಳುವವರು ಹಳೆಯಕಾಲದ ಇಂದ್ರಜಾಲಕರ ಆಧುನಿಕ ರೂಪವಾಗಿದ್ದಾರೆ. ಅತೀಂದ್ರಿಯ ಶಕ್ತಿಯಿಂದ ಏಂದೋರಿನಲ್ಲಿ (1 ಅರಸು 28:7-15) ಹಾಗೂ ಎಫೆಸದಲ್ಲಿ ಮಾತಾಡಿದ ದುರಾತ್ಮಶಕ್ತಿಗಳು ಇಂದೂಸಹ ತಮ್ಮ ಸುಳ್ಳುಮಾತುಗಳಿಂದ ಜನರನ್ನು ಮರುಳುಗೊಳಿಸುತ್ತಾನೆ. ಭ್ರಮೆಯಿಂದ ಮಬ್ಬಾಗಿರುವ ಕಣ್ಣುಗಳನ್ನು ತೆರೆದಾಗ, ಸೈತಾನನದೂತರು ಜನರನ್ನು ಮರುಳುಗೊಳಿಸುವುದಕ್ಕೂ ಮತ್ತು ನಾಶ ಮಾಡುವುದಕ್ಕೂ ತಮ್ಮೆಲ್ಲಾ ಮೋಸಗಾರಿಕೆ ಹಾಗೂ ಕುಯುಕ್ತಿಗಳನ್ನು ಉಪಯೋಗಿಸುವುದನ್ನು ನಾವು ನೋಡಬಹುದು. ಮನುಷ್ಯರು ದೇವರನ್ನು ಮರೆಯುವಂತೆ ಮಾಡುವ ವಂಚನೆಯು ಎಲ್ಲೆಲ್ಲಿ ಪರಿಣಾಮಕಾರಿಯಾಗಿ ಪ್ರಯೋಗಿಸಲ್ಪಡುವುದೋ, ಅಲ್ಲಿ ಸೈತಾನನು ತನ್ನ ಮರುಳು ಗೊಳಿಸುವ ಸಮ್ಮೋಹಕ ಶಕ್ತಿ ಉಪಯೋಗಿಸುತ್ತಿದ್ದಾನೆಂದು ಅರ್ಥ. ಮನುಷ್ಯರು ಅವನ ಪ್ರಭಾವಕ್ಕೆ ಒಳಗಾಗುವುದಕ್ಕೆಮುಂಚೆ ತಮ್ಮಮನಸ್ಸು ಭೀತಿಯಿಂದ ದಿಗ್ಭ್ರಮೆಗೊಂಡಿದೆ ಹಾಗೂ ತಮ್ಮಆತ್ಮವು ಕಲುಷಿತಗೊಂಡಿದೆ ಎಂದು ಅವರಿಗೆ ಚೆನ್ನಾಗಿ ತಿಳಿದಿರುತ್ತದೆ. “ಕತ್ತಲೆಗೆ ಸಂಬಂಧವಾದ ಕೃತ್ಯಗಳಿಂದ ಯಾವ ಪ್ರಯೋಜನವೂ ಬರಲಾರದು; ಅವುಗಳಲ್ಲಿ ಪಾಲುಗಾರರಾಗಿರದೆ ಅವುಗಳನ್ನು ಬೈಲಿಗೆ ತಂದು ಖಂಡಿಸಿರಿ” ಎಂದು ಅಪೋಸ್ತಲನಾದ ಪೌಲನು ಎಫೆಸಸಭೆಗೆ ಕೊಟ್ಟ ಎಚ್ಚರಿಕೆಯನ್ನು ಇಂದು ದೇವರ ಮಕ್ಕಳು ಗಮನದಲ್ಲಿಡಬೇಕು (ಎಫೆಸ 5:11).KanCCh 422.1