Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ತನ್ನ ಮಕ್ಕಳಲ್ಲಿ ದೇವರ ವೈಯಕ್ತಿಕ ಆಸಕ್ತಿ

    ತಂದೆಯಾದ ದೇವರು ಹಾಗೂ ಕ್ರಿಸ್ತನ ನಡುವಣ ಸಂಬಂಧವನ್ನು ಸತ್ಯವೇದವು ಸ್ಪಷ್ಟವಾಗಿ ಸೂಚಿಸುತ್ತದೆ. ಅವರಿಬ್ಬರ ಪರಸ್ಪರ ವ್ಯಕ್ತಿತ್ವ ಹಾಗೂ ಪ್ರತ್ಯೇಕ ಅಸ್ತಿತ್ವವನ್ನು ಸತ್ಯವೇದವು ನಮ್ಮ ಗಮನಕ್ಕೆ ತರುತ್ತದೆ. ದೇವರು ಕ್ರಿಸ್ತನತಂದೆ ಹಾಗೂ ಕ್ರಿಸ್ತನು ದೇವರಮಗನಾಗಿದ್ದಾನೆ. ಕ್ರಿಸ್ತನಿಗೆ ಅತ್ಯುನ್ನತಸ್ಥಾನ ಕೊಡಲ್ಪಟ್ಟಿದೆ. ಆತನು ತಂದೆಗೆ ಸರಿಸಮಾನನಾಗಿ ಮಾಡಲ್ಪಟ್ಟಿದ್ದಾನೆ. ದೇವರ ಎಲ್ಲಾ ಆಲೋಚನೆಗಳು ಆತನ ಮಗನಾದ ಕ್ರಿಸ್ತನಿಗೆ ತಿಳಿಸಲ್ಪಡುತ್ತವೆ.KanCCh 60.2

    ತಂದೆ ಹಾಗೂ ಮಗನ ನಡುವಣ ಈ ಐಕ್ಯತೆಯು ಕ್ರಿಸ್ತನು ತನ್ನ ಶಿಷ್ಯರಿಗೆ ಮಾಡಿದ ಪ್ರಾರ್ಥನೆಯಲ್ಲಿ ವ್ಯಕ್ತವಾಗಿದೆ (ಯೋಹಾನ 17ನೇ ಅಧ್ಯಾಯ). “ಆದರೆ ಇವರಿಗೋಸ್ಕರ ಮಾತ್ರವಲ್ಲದೆ, ಇವರ ವಾಕ್ಯದಿಂದ ನನ್ನನ್ನು ನಂಬುವವರಿಗೋಸ್ಕರ ಸಹ ಬೇಡಿಕೊಳ್ಳುತ್ತೇನೆ. ನೀನು ನನ್ನನ್ನು ಕಳುಹಿಸಿಕೊಟ್ಟದ್ದೀ ಎಂದು ಲೋಕವು ನಂಬುವುದಕ್ಕಾಗಿ ಅವರೆಲ್ಲರೂ ಒಂದಾಗಿರಬೇಕೆಂತಲೂ ತಂದೆಯೇ, ನೀನು ನನ್ನಲ್ಲಿಯೂ, ನಾನು ನಿನ್ನಲ್ಲಿಯೂ ಇರುವ ಪ್ರಕಾರ ಅವರೂ ಒಂದಾಗಿರಬೇಕೆಂದು ನೀನು ನನಗೆ ಕೊಟ್ಟಿರುವ ಮಹಿಮೆಯನ್ನು ನಾನು ಅವರಿಗೆ ಕೊಟ್ಟಿದ್ದೇನೆ. ನಾನು ಅವರಲ್ಲಿಯೂ, ನೀನು ನನ್ನಲ್ಲಿಯೂ ಇರಲಾಗಿ ಅವರ ಐಕ್ಯವು ಪೂರ್ಣಸಿದ್ಧಿಗೆ ಬರುವುದರಿಂದ ನೀನು ನನ್ನನ್ನು ಕಳುಹಿಸಿಕೊಟ್ಟಿದ್ದೀ ಎಂದೂ, ನೀನು ನನ್ನನ್ನು ಪ್ರೀತಿಸಿದಂತೆ, ಅವರನ್ನೂ ಪ್ರೀತಿಸಿದ್ದೀ ಎಂದೂ ಲೋಕಕ್ಕೆ ತಿಳಿದುಬರುವುದು” ಎಂದು ಕ್ರಿಸ್ತನು ಶಿಷ್ಯರಿಗಾಗಿ ಪ್ರಾರ್ಥಿಸಿದ್ದಾನೆ (17:20-23) ಎಂತಹ ಅದ್ಭುತವಾದ ಹೇಳಿಕೆ! ಕ್ರಿಸ್ತನು ಮತ್ತು ಆತನ ಶಿಷ್ಯರ ನಡುವೆ ಇರುವ ಐಕ್ಯತೆಯು ಅವರಲ್ಲಿ ಯಾರ ವ್ಯಕ್ತಿತ್ವವನ್ನೂ ನಾಶಮಾಡಲಿಲ್ಲ. ಅವರು ಉದ್ದೇಶದಲ್ಲಿ, ಮನಸ್ಸಿನಲ್ಲಿ ಮತ್ತು ಸ್ವಭಾವದಲ್ಲಿ ಒಂದಾಗಿದ್ದಾರೆ. ಆದರೆ ವ್ಯಕ್ತಿಗಳಾಗಿ ಅವರು ಒಂದಾಗಿಲ್ಲ. ಇದೇ ರೀತಿಯಲ್ಲಿ ತಂದೆಯಾದ ದೇವರು ಹಾಗೂ ಕ್ರಿಸ್ತನು ಒಂದಾಗಿದ್ದಾರೆ.KanCCh 60.3

    ನಮ್ಮ ದೇವರು ಭೂ ಪರಲೋಕಗಳ ಒಡೆಯನಾಗಿದ್ದಾನೆ ಮತ್ತು ನಮ್ಮ ಅಗತ್ಯವೇನೆಂದು ಆತನಿಗೆ ತಿಳಿದಿದೆ. ನಮಗೆ ಈಗ ಸ್ವಲ್ಪ ಮಾತ್ರ ತಿಳಿದುಬಂದಿದೆ. “ನಾವು ಯಾವಾತನಿಗೆ ಲೆಕ್ಕ ಒಪ್ಪಿಸಬೇಕಾಗಿದೆಯೇ, ಆತನ ದೃಷ್ಟಿಗೆ ಸಮಸ್ತವೂ ಮುಚ್ಚು ಮರೆಯಿಲ್ಲದ್ದಾಗಿಯೂ, ಬೈಲಾದದ್ದಾಗಿಯೂ ಅದೆ” (ಇಬ್ರಿಯ 4:13). ಪರಲೋಕದಲ್ಲಿ ಆಸೀನನಾಗಿರುವಾತನಿಗೆ ಎಲ್ಲವೂ ಗೋಚರವಾಗಿದೆ. ಯಾವುದು ಆತನ ದೃಷ್ಟಿಯಲ್ಲಿ ಯೋಗ್ಯವಾಗಿಯೂ, ಅತ್ಯುತ್ತಮವಾಗಿಯೂ ಇದೆಯೋ, ಅದನ್ನು ನಡೆಯುವಂತೆ ಮಾಡುತ್ತಾನೆ. KanCCh 61.1

    ಪರಲೋಕದ ತಂದೆಯ ಅಪ್ಪಣೆಯಿಲ್ಲದೆ ಒಂದು ಗುಬ್ಬಿಯೂ ನೆಲಕ್ಕೆ ಬೀಳುವುದಿಲ್ಲ. ದೇವರ ಮೇಲೆ ಸೈತಾನನಿಗೆ ಎಂತಹ ದ್ವೇಷವಿದೆ ಎಂದರೆ, ಮೂಕಪ್ರಾಣಿಗಳನ್ನೂ ಸಹ ನಾಶಮಾಡುವುದರಲ್ಲಿ ಅವನು ಸಂತೋಷ ಪಡುತ್ತಾನೆ. ದೇವರು ಪಕ್ಷಿಪ್ರಾಣಿಗಳನ್ನು ಸಂರಕ್ಷಿಸುತ್ತಿರುವ ಕಾರಣದಿಂದ ಅವು ಉಳಿದುಕೊಂಡು ತಮ್ಮ ಮಧುರವಾದ ಚಿಲಿಪಿಲಿ ಹಾಡುಗಳ ಮೂಲಕ ನಮಗೆ ಹರ್ಷ ಉಂಟುಮಾಡುತ್ತವೆ. ದೇವರು ಗುಬ್ಬಿಗಳನ್ನೂ ಸಹ ಮರೆಯುವುದಿಲ್ಲ. “ಆದುದರಿಂದ ಹೆದರಬೇಡಿರಿ; ಬಹಳ ಗುಬ್ಬಿಗಳಿಗಿಂತ ನೀವು ಹೆಚ್ಚಿನವರು” ಎಂದು ಕ್ರಿಸ್ತನು ಹೇಳುತ್ತಾನೆ (ಮತ್ತಾಯ 10:31).KanCCh 61.2

    *****