Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಆತ್ಮವನ್ನು ಹಾನಿಗೊಳಿಸುವ ಸಾಹಿತ್ಯ

    ಅಸಂಖ್ಯಾತ ಪುಸ್ತಕಗಳು ನಿರಂತರವಾಗಿ ಬಿಡುಗಡೆಯಾಗುತ್ತಲೇ ಇರುತ್ತವೆ. ದೊಡ್ಡವರು ಯೌವನಸ್ಥರೆನ್ನದೆ ಎಲ್ಲರೂ ಸಹ ಇವುಗಳನ್ನು ತರಾತುರಿಯಿಂದ ಓದುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ. ಇದರಿಂದ ಮನಸ್ಸು ಚೈತನ್ಯಶೀಲತೆಯಿಂದ ಆಲೋಚಿಸುವ ಸಾಮರ್ಥ್ಯ ಕಳೆದುಕೊಳ್ಳುತ್ತದೆ. ಎಲ್ಲಾ ಕಡೆಯಲ್ಲಿಯೂ ಕಂಡು ಬರುವ ಪತ್ರಿಕೆ, ಮಾಸಪತ್ರಿಕೆಗಳು ಅಶ್ಲೀಲವಾಗಿದ್ದು ಮನಸ್ಸನ್ನು ಅವನತಿಗೆ ತರುವಂತೆ ಅದರ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತವೆ. ಅವುಗಳ ಪರಿಣಾಮದ ಮನಸ್ಸನ್ನು, ಭಾವಾವೇಶದಿಂದ ಪರವಶಗೊಳಿಸಿ ನಾಶಮಾಡುವುದಲ್ಲದೆ, ಆತ್ಮವನ್ನೂ ಸಹ ಹಾನಿಗೊಳಿಸುತ್ತದೆ ಹಾಗೂ ಭ್ರಷ್ಟಗೊಳಿಸುತ್ತದೆ.KanCCh 197.2

    ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಕಾಲ್ಪನಿಕವಾದ ಹಾಗೂ ರಮ್ಯವಾಗಿ ಮನಸ್ಸಿಗೆ ಕ್ಷಣಿಕವಾದ ಮುದನೀಡುವ ಕಥೆಗಳು, ಅಮಾನುಷವಾದ ಪುರಾಣಕಥೆಗಳು ಹೆಚ್ಚಾಗಿ ಕಂಡುಬರುತ್ತವೆ. ಇಂತಹ ಪುಸ್ತಕಗಳನ್ನು ಶಾಲೆಯಲ್ಲಿ ಪಠ್ಯದವಾಗಿ ಉಪಯೋಗಿಸುವುದಲ್ಲದೆ, ಮನೆಯಲ್ಲಿಯೂ ಇವು ಇರುತ್ತವೆ. ಅಸತ್ಯ ಮತ್ತು ಸುಳ್ಳುತನವೇ ತುಂಬಿಕೊಂಡಿರುವ ಇಂತಹ ಪುಸ್ತಕಗಳನ್ನು ಓದಲು ಕ್ರೈಸ್ತ ತಂದೆ- ತಾಯಿಯರು ತಮ್ಮ ಮಕ್ಕಳಿಗೆ ಹೇಗೆ ಅನುಮತಿ ನೀಡುತ್ತಾರೆ? ಇಂತಹ ಪುಸ್ತಕಗಳಲ್ಲಿರುವ ಅಂಶಗಳು ಯೌವನಸ್ಥರನ್ನು ದಾರಿ ತಪ್ಪಿಸುತ್ತವೆ. ಈ ಕಥೆಗಳು ಸತ್ಯವಲ್ಲ, ಕೇವಲ ಕಾಲ್ಪನಿಕವೆಂದು ನೀವು ಹೇಳಬಹುದು. ಆದರೆ ಅವುಗಳಿಂದಾಗುವ ಕೆಟ್ಟ ಪರಿಣಾಮಗಳು ಮಕ್ಕಳ ಮನಸ್ಸಿನಲ್ಲಿ ಆಗಲೇ ನಾಟಿಕೊಂಡಿರುತ್ತವೆ. ಈ ಕಥೆಗಳು ಜೀವನದ ಬಗ್ಗೆ ತಪ್ಪು ಅಭಿಪ್ರಾಯ ನೀಡುವುದಲ್ಲದೆ, ಅವಾಸ್ತವಿಕವಾದದ್ದನ್ನು ಬಯಸುವಂತೆ ಪ್ರಚೋದಿಸುತ್ತವೆ.KanCCh 197.3

    ಇಂದಿನ ಕಾಲದಲ್ಲಿ ಇಂತಹ ಪುಸ್ತಕಗಳು ವ್ಯಾಪಕವಾಗಿ ಎಲ್ಲೆಡೆಯೂ ಓದಲ್ಪಡುವಂತೆ ಮಾಡುವುದು ಸೈತಾನನ ಕುತಂತ್ರಗಳಲ್ಲಿ ಒಂದಾಗಿದೆ. ಅವನು ದೊಡ್ಡವರು ಚಿಕ್ಕವರೆನ್ನದೆ, ಅವರ ಮನಸ್ಸುಗಳನ್ನು ಉತ್ತಮ ಶೀಲಾ ಸ್ವಭಾವ ಬೆಳೆಸಿಕೊಳ್ಳಬೇಕಾದ ಮಹಾಕಾರ್ಯದಿಂದ ವಿಮುಖವಾಗುವಂತೆ ಮಾಡುವುದಕ್ಕೆ ಪ್ರಯತ್ನಿಸುತ್ತಾನೆ. ಆತ್ಮನಷ್ಟವಾಗುವಂತ ವಂಚನೆಗಳಿಗೆ ಅವರು ಬಲಿಯಾಗಬೇಕೆಂಬುದು ಅವನ ಮುಖ್ಯ ಉದ್ದೇಶವಾಗಿದೆ. ಇದರಿಂದಾಗಿ ಅವರ ಮನಸ್ಸು ದೇವರ ವಾಕ್ಯದಿಂದ ದೂರವಾಗುವಂತೆಯೂ ಹಾಗೂ ಅದರಲ್ಲಿರುವ ಸತ್ಯದ ಜ್ಞಾನದಿಂದ ನಾವು ರಕ್ಷಿಸಲ್ಪಡಬಾರದೆಂದು ಸೈತಾನನು ಬಯಸುತ್ತಾನೆ. ಸತ್ಯವನ್ನು ವಿರೂಪಗೊಳಿಸುವಂತ ಇಂತಹ ಪುಸ್ತಕಗಳನ್ನು ನಮ್ಮ ಯೌವನಸ್ಥರಿಗೆ ಕೊಡಬಾರದು. ಶಿಕ್ಷಣ ಪಡೆದುಕೊಳ್ಳಬೇಕಾದ ಸಮಯದಲ್ಲಿ ನಮ್ಮ ಮಕ್ಕಳು ಪಾಪವೆಂಬ ಬೀಜಗಳನ್ನು ಬಿತ್ತುವ ಇಂತಹ ಮಾದರಿಗಳನ್ನು ಅನುಸರಿಸಬಾರದು.KanCCh 198.1

    ಕ್ರೈಸ್ತಧರ್ಮದಲ್ಲಿ ನಂಬಿಕೆಯಿಲ್ಲದ ನಾಸ್ತಿಕ ಲೇಖಕರು ಬರೆದ ಪುಸ್ತಕಗಳು ಆತ್ಮೀಕಜೀವನಕ್ಕೆ ಅತ್ಯಂತ ಅಪಾಯಕಾರಿಯಾಗಿವೆ. ಆದುದರಿಂದ ಅವುಗಳ ಬಗ್ಗೆ ಯಾವಾಗಲೂ ಎಚ್ಚರಿಕೆಯಿಂದ ನಮ್ಮನ್ನು ರಕ್ಷಿಸಿಕೊಳ್ಳಬೇಕು. ಅವುಗಳು ಸತ್ಯದ ವಿರೋಧಿಯಾಗಿರುವ ಸೈತಾನನಿಂದ ಪ್ರೇರಿತಗೊಂಡು ಬರೆಯಲ್ಪಟ್ಟಿರುವುದರಿಂದ ಅವುಗಳನ್ನು ಓದಿ ಆತ್ಮಿಕವಾಗಿ ಭ್ರಷ್ಟರಾಗಬಾರದು. ಇಂತಹ ಪುಸ್ತಕಗಳ ಪರಿಣಾಮದಿಂದ ಆತ್ಮೀಕವಾಗಿ ಕ್ರಿಸ್ತನಿಂದ ದೂರ ಹೋಗಿರುವ ಅನೇಕರಿಗೆ ತಿರುಗಿ ಸತ್ಯ ಅಂಗೀಕರಿಸಿಕೊಂಡಿರುವುದು ನಿಜ. ಆದರೆ ಅವುಗಳ ಕೆಟ್ಟಪ್ರಭಾವಕ್ಕೆ ಒಳಗಾಗುವವರು ತಾವಾಗಿಯೇ ಸೈತಾನನ ಬಲೆಯಲ್ಲಿ ಸಿಲುಕುವರು. ಅವನ ಶೋಧನೆಗಳನ್ನು ಎದುರಿಸಲು ಅವರಲ್ಲಿ ಆತ್ಮೀಕವಾದ ಬಲವಿರುವುದಿಲ್ಲ.KanCCh 198.2