Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಅವಿವೇಕತನದಿಂದ ಮಾಡಿದ ನಿಶ್ಚಿತಾರ್ಥ ಮುರಿದುಕೊಳ್ಳುವುದು ಉತ್ತಮ

    ಕ್ರಿಸ್ತನಲ್ಲಿ ಮಾತ್ರ ಮದುವೆ ಸಂಬಂಧವು ಸುರಕ್ಷಿತವಾಗಿರುವುದು. ಮನುಷ್ಯ ಪ್ರೀತಿ ದೈವೀಕ ಪ್ರೀತಿಯಿಂದ ತನ್ನ ನಿಕಟ ಸಂಬಂಧವನ್ನು ಉಳಿಸಿಕೊಳ್ಳಬೇಕು. ಕ್ರಿಸ್ತನು ಎಲ್ಲಿರುತ್ತಾನೋ ಅಲ್ಲಿ ನಿಜವಾದ, ನಿಸ್ವಾರ್ಥವುಳ್ಳ ಗಾಢ ಪ್ರೀತಿ ಇರುತ್ತದೆ.KanCCh 134.2

    ಒಂದುವೇಳೆ ಜೀವನ ಸಂಗಾತಿಯಾಗುವವರ ಸ್ವಭಾವದ ಬಗ್ಗೆ ಸಂಪೂರ್ಣವಾಗಿ ತಿಳಿಯುವ ಮೊದಲೇ ನಿಶ್ಚಿತಾರ್ಥವಾಗಿರಬಹುದು. ಈ ಕಾರಣದಿಂದ ನೀವು ಪ್ರೀತಿಸಲಾರದ ಮತ್ತು ಗೌರವಿಸಲಾರದವರೊಂದಿಗೆ ಮದುವೆಯಾಗಿ ಜೀವಮಾನ ಪರ್ಯಂತ ಜೊತೆಯಾಗಿರಬೇಕಾದದ್ದು ಅಗತ್ಯವೆಂದು ಎಂದೂ ಭಾವಿಸಬಾರದು. ಶರತ್ತಿನಿಂದ ಕೂಡಿದ ನಿಶ್ಚಿತಾರ್ಥ ಮಾಡಿಕೊಳ್ಳುವಾಗ ಬಹಳ ಎಚ್ಚರಿಕೆಯಾಗಿರಬೇಕು. ಆದರೆ ಮದುವೆಯಾದ ನಂತರ ಬೇರ್ಪಡುವುದಕ್ಕಿಂತ, ನಿಶ್ಚಿತಾರ್ಥವನ್ನೇ ಮುರಿದುಕೊಳ್ಳುವುದು ಉತ್ತಮ, ಹೌದು ಅತ್ಯುತ್ತಮ ನಿರ್ಧಾರವಾಗಿದೆ.KanCCh 134.3

    ನಿಶ್ಚಿತಾರ್ಥ ಮಾಡಿಕೊಳ್ಳುವುದರ ಮೂಲಕ ನಾನು ವಾಗ್ದಾನ ಕೊಟ್ಟಿದ್ದೇನೆ. ಈಗ ಅದನ್ನು ಮುರಿಯುವುದು ಹೇಗೆ? ಎಂಬ ಪ್ರಶ್ನೆ ನಿಮ್ಮಲ್ಲಿ ಬರಬಹುದು. ಸತ್ಯವೇದಕ್ಕೆ ವ್ಯತಿರಿಕ್ತವಾದ ವಾಗ್ದಾನವನ್ನು ನೀವು ಮಾಡಿದ್ದಲ್ಲಿ, ತಡಮಾಡದೆ ಅದನ್ನು ರದ್ದುಮಾಡಿ. ದೇವರ ಮುಂದೆ ಕುಗ್ಗದ ಮನಸ್ಸಿನಿಂದ ಪೂರ್ಣವಾಗಿ ಪಶ್ಚಾತ್ತಾಪಪಟ್ಟು, ವಿವೇಚಿಸದೆ ಬುದ್ಧಿಹೀನತೆಯಿಂದ ಮಾಡಿದ ತಪ್ಪಿಗಾಗಿ ಕ್ಷಮೆ ಕೇಳಿ. ಮಾಡಿದ ನಿಶ್ಚಿತಾರ್ಥವನ್ನು ರದ್ದುಮಾಡದೆ, ದೇವರನ್ನು ಅಗೌರವಿಸುವುದಕ್ಕಿಂತ, ಆತನ ಮೇಲಣ ಭಯ ಭಕ್ತಿಯಿಂದ ಅಂತಹ ವಾಗ್ದಾನವನ್ನು ಮುರಿಯುವುದು ಬಹಳ ಒಳ್ಳೆಯದೆಂದು ಶ್ರೀಮತಿ ವೈಟಮ್ಮನವರು ಮೇಲಿನ ಪ್ರಶ್ನೆಗೆ ಉತ್ತರ ಕೊಡುತ್ತಾರೆ.KanCCh 134.4

    ಮದುವೆಯ ಸಂಬಂಧಕ್ಕೆ ಮೊದಲು ದೇವರಿಗೆ ಮೆಚ್ಚಿಕೆಯಾಗಿದ್ದು ಗೌರವ ತರುವಂತಹ ನಮ್ರತೆ, ಸರಳತೆ, ಪ್ರಾಮಾಣಿಕತೆ ಹಾಗೂ ಮನಃಪೂರ್ವಕವಾದ ಶ್ರದ್ಧೆ ಮೊದಲಾದಉತ್ತಮ ಗುಣಗಳು ಭಾವಿಪತಿ ಹಾಗೂ ಪತ್ನಿಯಲ್ಲಿ ಕಂಡು ಬರಬೇಕು, ಮದುವೆಯು ಈ ಲೋಕದಲ್ಲಿ ಮಾತ್ರವಲ್ಲದೆ ಪರಲೋಕದ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಪ್ರಾಮಾಣಿಕವಾದ ಕ್ರೈಸ್ತರು ದೇವರು ಸಮ್ಮತಿಸಲಾಗದಂತ ಯಾವ ಯೋಜನೆಯನ್ನೂ ಮಾಡುವುದಿಲ್ಲ.KanCCh 134.5

    ಹೃದಯ ಮಾನವ ಪ್ರೀತಿಗಾಗಿ ತವಕಿಸುತ್ತದೆ. ಆದರೆ ಈ ಪ್ರೀತಿಯು ಕ್ರಿಸ್ತನ ಪ್ರೀತಿಯ ಸ್ಥಾನ ತುಂಬುವಷ್ಟು ಬಲವಾಗಿಯೂ ಅಥವಾ ಪರಿಶುದ್ಧವಾಗಿಯೂ ಇಲ್ಲವೆ ಅಮೂಲ್ಯವಾಗಿಯೂ ಇರುವುದಿಲ್ಲ. ಕ್ರಿಸ್ತನಲ್ಲಿ ಮಾತ್ರ ಪತ್ನಿಯು ದಿನನಿತ್ಯದ ಜವಾಬ್ದಾರಿಗಳು,ಜೀವನದ ಕಷ್ಟದುಃಖಗಳು, ಚಿಂತೆಗಳನ್ನು ಎದುರಿಸುವಂತಹ ವಿವೇಕ, ಬಲ ಮತ್ತು ಕೃಪೆಯನ್ನು ಪಡೆದುಕೊಳ್ಳುತ್ತಾರೆ. ಕ್ರಿಸ್ತನನ್ನು ಆಕೆಯು ತನ್ನ ಬಲವನ್ನಾಗಿಯೂ ಹಾಗೂ ಮಾರ್ಗದರ್ಶಕನನ್ನಾಗಿಯೂ ಮಾಡಿಕೊಳ್ಳಬೇಕು.KanCCh 135.1

    ಸ್ತ್ರೀಯರು ಲೋಕದ ಸ್ನೇಹಿತರೊಂದಿಗೆ ಸಂಬಂಧ ಹೊಂದುವುದಕ್ಕೆ ತಮ್ಮನ್ನು ಒಪ್ಪಿಸಿಕೊಡುವ ಮೊದಲು ಯೇಸುಸ್ವಾಮಿಗೆ ತಮ್ಮನ್ನು ಒಪ್ಪಿಸಿಕೊಡಬೇಕು. ನಿಜವಾದ ಸಂತೋಷವನ್ನು ಕಂಡುಕೊಳ್ಳುವವರು ತಮ್ಮಲ್ಲಿರುವ ಎಲ್ಲದರ ಮೇಲೆ ಮತ್ತು ತಾವು ಮಾಡುವ ಕಾರ್ಯಗಳ ಮೇಲೆ ಪರಲೋಕದ ಆಶೀರ್ವಾದಗಳನ್ನು ಹೊಂದಿರಬೇಕು. ದೇವರಿಗೆ ಅವಿಧೇಯರಾಗಿರುವುದೇ ಅನೇಕ ಮನೆಗಳು ಮತ್ತು ಹೃದಯಗಳು ದುಃಖಸಂಕಟದಿಂದ ತುಂಬಿರುವುದಕ್ಕೆ ಕಾರಣ. ನನ್ನ ಸಹೋದರಿಯೇ, ಸರ್ವಶಕ್ತನ ಆಶ್ರಯವು ಯಾವಾಗಲೂ ಇರುವಂತ ಮನೆಯು ನಿನಗೆ ದೊರೆಯುವ ತನಕ ದೇವರ ವೈರಿಯಾಗಿರುವವನನ್ನು ಎಂದಿಗೂ ಮದುವೆಯಾಗಬಾರದೆಂದು ಶ್ರೀಮತಿ ವೈಟಮ್ಮನವರು ಎಚ್ಚರಿಸುತ್ತಾರೆ.KanCCh 135.2