Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಕ್ರಿಸ್ತನಂತ ಗುಣಸ್ವಭಾವ ರೂಪಿಸಿಕೊಳ್ಳುವುದು

    ಕ್ರಿಸ್ತನ ಧರ್ಮವು ಆತನ ಬಳಿಗೆ ಬರುವವರನ್ನು ಎಂದಿಗೂ ತಳ್ಳಿ ಬಿಡುವುದಿಲ್ಲ ಅಥವಾ ಕೀಳಾಗಿ ಕಾಣುವುದಿಲ್ಲ. ಅಲ್ಲದೆ ಅಂತವರನ್ನು ಒರಟರನ್ನಾಗಿ, ಮರ್ಯಾದೆ ಗೆಟ್ಟವರನ್ನಾಗಿ, ಸ್ವಾರ್ಥಿಗಳನ್ನಾಗಿ, ಶೀಘ್ರ ಕೋಪಿಷ್ಠರನ್ನಾಗಲಿ ಇಲ್ಲವೆ ಕಠಿಣ ಹೃದಯಿಗಳನ್ನಾಗಿ ಮಾಡುವುದಿಲ್ಲ. ಬದಲಾಗಿ ಅಂತವರ ಅಭಿರುಚಿಯನ್ನು ಉತ್ತಮಗೊಳಿಸುತ್ತದೆ. ಅವರ ನಿರ್ಣಯಗಳನ್ನು ಶುದ್ಧೀಗೊಳಿಸುವುದಲ್ಲದೆ, ಅವರ ಆಲೋಚನೆಗಳನ್ನು ಶ್ರೇಷ್ಠಗೊಳಿಸಿ ಕ್ರಿಸ್ತನಿಗೆ ತಮ್ಮನ್ನು ಸಂಪೂರ್ಣವಾಗಿ ಶರಣಾಗುವಂತೆ ಮಾಡುತ್ತದೆ. ದೇವರ ಹತ್ತು ಆಜ್ಞೆಗಳು ಆತನ ಗುಣಸ್ವಭಾವದ ಪ್ರತಿರೂಪವಾಗಿವೆ. KanCCh 62.4

    ಕ್ರೈಸ್ತರ ಗುಣಸ್ವಭಾವವು ಕ್ರಿಸ್ತನಂತೆ ಆದರ್ಶಪ್ರಾಯವಾಗಿರಬೇಕು. ನಾವು ನಿರಂತರವಾಗಿ ಆತನ ಗುಣಸ್ವಭಾವವನ್ನು ರೂಪಿಸಿಕೊಳ್ಳುವುದರಲ್ಲಿ ಬೆಳವಣಿಗೆ ಹೊಂದುವಂತ ಒಂದು ಮಾರ್ಗವು ನಮಗೆ ತೆರೆದಿದೆ. ನಾವು ಉತ್ತಮವಾದ, ಪರಿಶುದ್ಧವಾದ, ಉದಾತ್ತವೂ ಶ್ರೇಷ್ಠವೂ ಆದ ಎಲ್ಲವನ್ನೂ ಒಳಗೊಂಡಿರುವ ಒಂದು ಉದ್ದೇಶ ಸಾಧಿಸಬೇಕಾಗಿದೆ ಹಾಗೂ ಅತ್ಯುತ್ತಮ ಗುರಿಮುಟ್ಟಬೇಕಾಗಿದೆ.KanCCh 63.1

    ನಮ್ಮ ಅಭ್ಯಾಸಗಳು ನಮ್ಮನ್ನು ವ್ಯಕ್ತಿಗತವಾಗಿ ಈಗಿನ ಸಮಯಕ್ಕೂ ಮತ್ತು ಮುಂದಿನ ಕಾಲಕ್ಕೂ ಅರ್ಹರನ್ನಾಗಿಯೂ ಅಥವಾ ಅನರ್ಹರನ್ನಾಗಿ ಮಾಡುತ್ತವೆ. ಉತ್ತಮ ಅಭ್ಯಾಸ ರೂಪಿಸಿಕೊಂಡು ತಮ್ಮ ಪ್ರತಿಯೊಂದು ಕರ್ತವ್ಯದಲ್ಲಿ ಪ್ರಾಮಾಣಿಕರಾಗಿರುವವರ ಜೀವನವು ಹೊಳೆಯುವ ಬೆಳಕಿನಂತಿದ್ದು, ಇತರರ ದಾರಿಯಲ್ಲಿ ಆ ಬೆಳಕನ್ನು ಚೆಲ್ಲುತ್ತದೆ. ಆದರೆ ಒಬ್ಬನು ಅಪ್ರಮಾಣಿಕವಾದ ಮತ್ತು ಸೋಮಾರಿತನದಲ್ಲಿ ಮುಳುಗಿ ಯಾವುದೇ ಕಟ್ಟುನಿಟ್ಟಿಲ್ಲದ ಅಭ್ಯಾಸಗಳನ್ನು ರೂಪಿಸಿಕೊಂಡಲ್ಲಿ, ಅವನ ಜೀವನವು ಮಧ್ಯರಾತ್ರಿಯ ಕತ್ತಲಿನಂತಿದ್ದು, ನಿತ್ಯಜೀವ ಕಳೆದುಕೊಳ್ಳುವನು.KanCCh 63.2

    ನಿತ್ಯಜೀವಕೊಡುವ ವಾಕ್ಯಗಳನ್ನು ಗಮನಿಸಿ ಅದರಂತೆ ನಡೆಯುವವನು ಧನ್ಯನು. ಸತ್ಯದ ಆತ್ಮನು ಅವನನ್ನು ಸಕಲ ಸತ್ಯಕ್ಕೆ ನಡೆಸುವನು. ಅವನಿಗೆ ಈ ಲೋಕದಲ್ಲಿ ಯಾವುದೇ ಗೌರವ, ಹೊಗಳಿಕೆ, ಪ್ರೀತಿ ದೊರೆಯುವುದಿಲ್ಲ. ಆದರೆ ಅವನು ಪರಲೋಕದ ದೃಷ್ಟಿಯಲ್ಲಿ ಅಮೂಲ್ಯನಾಗಿರುವನು: “ದೇವರ ಮಕ್ಕಳೆಂಬ ಹೆಸರನ್ನು ನಮಗೆ ಕೊಡುವುದರಲ್ಲಿ ತಂದೆಯು ಎಂಥಾ ಪ್ರೀತಿಯನ್ನು ನಮ್ಮ ಮೇಲೆ ಇಟ್ಟಿದ್ದಾನೆ ನೋಡಿರಿ; ನಾವು ಆತನ ಮಕ್ಕಳಾಗಿದ್ದೇವೆ. ಈ ಕಾರಣದಿಂದ ಲೋಕವು ನಮ್ಮನ್ನು ತಿಳಿದುಕೊಳ್ಳುವುದಿಲ್ಲ, ಅದು ಆತನನ್ನು ತಿಳಿದುಕೊಳ್ಳಲಿಲ್ಲವಲ್ಲ” (1 ಯೋಹಾನನು 3:1).KanCCh 63.3