Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
 • Results
 • Related
 • Featured
No results found for: "".
 • Weighted Relevancy
 • Content Sequence
 • Relevancy
 • Earliest First
 • Latest First
  Larger font
  Smaller font
  Copy
  Print
  Contents

  ದೇವರ ಮಹಿಮೆಗಾಗಿ ಎಲ್ಲವನ್ನೂ ಮಾಡಿರಿ

  ಆಹಾರದ ವಿಷಯದಲ್ಲಿ ಖಚಿತವಾಗಿ ಇಂತದ್ದೇ ತಿನ್ನಬೇಕೆಂದು ನಾವು ಹೇಳುವುದಿಲ್ಲ.ಆದರೆ ಹಣ್ಣುಹಂಪಲುಗಳು, ಧಾನ್ಯಗಳು, ತರಕಾರಿಗಳು ಹೇರಳವಾಗಿ ದೊರೆಯುವದೇಶಗಳಲ್ಲಿ, ಮಾಂಸಾಹಾರವು ದೇವರ ಮಕ್ಕಳಿಗೆ ಯೋಗ್ಯವಾದ ಆಹಾರವಲ್ಲ.ಮಾಂಸಾಹಾರವು ಮೃಗೀಯ ಸ್ವಭಾವ ಉಂಟು ಮಾಡುತ್ತದೆ. ಮನುಷ್ಯರಲ್ಲಿ ಪ್ರೀತಿ,ದಯೆ, ಅನುಕಂಪ ಮುಂತಾದ ಭಾವನೆಗಳು ಕಡಿಮೆಯಾಗುತ್ತದೆ. ಒಂದುವೇಳೆಮಾಂಸಾಹಾರವು ಹಿಂದೆ ಆರೋಗ್ಯಕರವಾಗಿದ್ದರೂ ಈಗ ಅದು ಸುರಕ್ಷಿತವಲ್ಲ. ವಿವಿಧರೀತಿಯ ಕ್ಯಾನ್ಸರ್, ಗಂತಿಗಳು (Tumour), ಶ್ವಾಸಕೋಶಕ್ಕೆ ಸಂಬಂಧಪಟ್ಟ ರೋಗಗಳುಹೆಚ್ಚಾಗಿ ಮಾಂಸಾಹಾರ ಸೇವನೆಯಿಂದ ಉಂಟಾಗುತ್ತದೆ.KanCCh 291.4

  ಮಾಂಸಾಹಾರ ಸೇವನೆಯನ್ನು ಅನ್ಯೋನ್ಯತೆಯ ಒಂದು ಪರೀಕ್ಷೆಯನ್ನಾಗಿಮಾಡಬಾರದು. ಆದರೆ ಅದನ್ನು ತಿನ್ನುವ ವಿಶ್ವಾಸಿಗಳು ಇತರರ ಮೇಲೆ ಎಂತಹಪ್ರಭಾವ ಹೊಂದಿದ್ದಾರೆಂದು ದೇವರ ಸಂದೇಶಕರಾದ ನಾವು ಜನರಿಗೆ “ಹೀಗಿರಲಾಗಿನೀವು ಉಂಡರೂ, ಕುಡಿದರೂ, ಇನ್ನೇನು ಮಾಡಿದರೂ ಎಲ್ಲವನ್ನೂ ದೇವರ ಘನತೆಗಾಗಿಮಾಡಿರಿ” ಎಂದು ಹೇಳಬೇಕಲ್ಲವೇ? ಸ್ವಾಭಾವಿಕವಾದ ಶಾರೀರಿಕ ಅಪೇಕ್ಷೆಗಳನ್ನುತಣಿಸುವುದರಲ್ಲಿಯೇ ಮುಳುಗಿ ಹೋಗಿರುವವರಿಗೆ ನಾವು ಒಂದು ಸಾಕ್ಷಿಯಾಗಿನಿಲ್ಲಬೇಕಲ್ಲವೇ? ಮಾನವರಿಗೆ ಕೊಡಲ್ಪಟ್ಟ ಅತ್ಯಂತ ಗಂಭೀರವಾದ ಸಂದೇಶವನ್ನುKanCCh 292.1

  ಸಾರುವ ಸುವಾರ್ತಾಸೇವಕರು ಮಾಂಸಾಹಾರ ಸೇವಿಸಿದರೆ, ಅವರು ಎಂತಹ ಮಾದರಿತೋರಿಸುತ್ತಾರೆ? ದೇವರ ಭಂಡಾರದ ದಶಾಂಶದಿಂದ ಜೀವಿಸುವವರು ಅನಾರೋಗ್ಯಕರಆಹಾರ ಸೇವನೆಯಿಂದ ತಮ್ಮ ನರಗಳನ್ನು ಮಲಿನಗೊಳಿಸಬಹುದೇ? ದೇವರು ಅವರಿಗೆಕೊಟ್ಟಿರುವ ದೈವೀಕ ಬೆಳಕು ಹಾಗೂ ಎಚ್ಚರಿಕೆಯನ್ನು ಅವರು ಅಸಡ್ಡೆ ಮಾಡಬಹುದೇ?ಕೃಪೆಯಲ್ಲಿ ಬೆಳೆಯುವುದಕ್ಕೆ ಹಾಗೂ ಕೋಪ, ಉದ್ವೇಗ, ಉದ್ರೇಕ ಮುಂತಾದವುಗಳನ್ನುನಿಯಂತ್ರಣದಲ್ಲಿಡುವುದಕ್ಕೆ ಶಾರೀರಿಕ ಆರೋಗ್ಯ ಅಗತ್ಯವೆಂದು ಪರಿಗಣಿಸಬೇಕು. ನಮ್ಮಹೊಟ್ಟೆಯನ್ನು ಸರಿಯಾಗಿ ಆರೈಕೆ ಮಾಡದಿದ್ದಲ್ಲಿ, ನೇರವಾಗಿ ನಡವಳಿಕೆ ಹಾಗೂ ನೈತಿಕಸ್ವಭಾವ ಬೆಳೆಸಿಕೊಳ್ಳುವುದರಲ್ಲಿ ತೊಂದರೆಯಾಗುತ್ತದೆ. ಮೆದುಳು ಹಾಗೂ ನರಗಳುಜಠರದೊಂದಿಗೆ ನೇರ ಸಂಬಂಧ ಹೊಂದಿವೆ. ಹಿತಮಿತವಿಲ್ಲದೆ ತಿನ್ನುವುದು ಹಾಗೂಕುಡಿಯುವುದರಿಂದ ನಮ್ಮ ಆಲೋಚನೆ ಹಾಗೂ ಕ್ರಿಯೆಗಳೂ ಸಹದೋಷಪೂರಿತವಾಗಿರುತ್ತವೆ.KanCCh 292.2

  ನಾವೆಲ್ಲರೂ ಸಹ ಪರೀಕ್ಷಿಸಲ್ಪಟ್ಟಿದ್ದೇವೆ. ನಾವೆಲ್ಲರೂ ಕ್ರಿಸ್ತನಲ್ಲಿ ದೀಕ್ಷಾಸ್ನಾನಹೊಂದಿದ್ದೇವೆ.ಒಂದು ವೇಳೆ ನಾವು ಆರೋಗ್ಯಕ್ಕೆ ಹಾನಿಕರಪದಾರ್ಥಗಳಿಂದ ದೂರವಾಗಿದ್ದಲ್ಲಿ, ಕ್ರಿಸ್ತನಲ್ಲಿಆತ್ಮೀಕವಾಗಿ ಬೆಳೆಯುವುದಕ್ಕೆ ಬಲಕೊಡುತ್ತದೆ ಹಾಗೂ ನಾವು ದೇವರ ರಕ್ಷಣೆಯನ್ನುಕಾಣುವೆವು. ಆರೋಗ್ಯಕರ ಜೀವನ ಶೈಲಿಯ ಸಿದ್ಧಾಂತಗಳ ವಿಷಯದಲ್ಲಿ ನಾವುವಿವೇಕಿಗಳಾಗಿದ್ದಲ್ಲಿ, ದೋಷಪೂರಿತ ಆಹಾರ ಸೇವನೆಯಿಂದ ಉಂಟಾಗುವಕೆಟ್ಟಪರಿಣಾಮಗಳನ್ನು ನಾವು ತಿಳಿದುಕೊಳ್ಳುತ್ತೇವೆ. ತಮ್ಮ ತಪ್ಪುಗಳನ್ನು ತಿಳಿದುಕೊಂಡು,ಆಹಾರ ಸೇವನೆಯ ಅಭ್ಯಾಸದಲ್ಲಿ ಬದಲಾವಣೆ ಮಾಡಿಕೊಳ್ಳುವವರು, ಇಂತಹ ಸುಧಾರಣಾಕಾರ್ಯ ನಡೆಯುವಾಗ ಹೋರಾಟ ಮಾಡಬೇಕಾಗುತ್ತದೆ.KanCCh 292.3

  ತಂದೆತಾಯಿಯರೇ, ಎಚ್ಚರಿಕೆಯಿಂದ ಪ್ರಾರ್ಥಿಸಿ, ಮಿತಿಮೀರಿ ಉಂಡು ತಿಂದು,ಕುಡಿಯುವುದರ ಹಾಗೂ ಎಲ್ಲಾ ವಿಧವಾದ ಭೋಗಾಸಕ್ತಿಯ ವಿರುದ್ಧ ನಿಮ್ಮನ್ನುಕಾಪಾಡಿಕೊಳ್ಳಿ, ನಿಜವಾದ ಆರೋಗ್ಯ ಸುಧಾರಣಾತತ್ವಗಳನ್ನು ನಿಮ್ಮ ಮಕ್ಕಳಿಗೆ ಬೋಧಿಸಿ,ಆರೋಗ್ಯ ಕಾಪಾಡಿಕೊಳ್ಳಲು ಯಾವ ವಸ್ತುಗಳನ್ನು ತಿನ್ನಬಾರದೆಂದು ತಿಳಿಸಿ, ಅವಿಧೇಯರಾದಮಕ್ಕಳ ಮೇಲೆ ದೇವರ ಕೋಪವು ಆಗಲೇ ಕಂಡುಬರುತ್ತಿದೆ. ಎಂತೆಂತಹ ಅಪರಾಧಗಳು,ಪಾಪಗಳು ಹಾಗೂ ಕೆಟ್ಟ ಕೆಲಸಗಳು ಮಕ್ಕಳಿಂದ ನಡೆಯುತ್ತಿದೆಯಲ್ಲವೇ!ತಂದೆತಾಯಿಯರಾದ ನಾವು ಇಂತಹ ಕಾರ್ಯಗಳ ವಿರುದ್ಧ ನಮ್ಮ ಮಕ್ಕಳನ್ನು ಅಪಾರಎಚ್ಚರಿಕೆಯಿಂದ ರಕ್ಷಿಸಿ ಕಾಪಾಡಬೇಕು.KanCCh 293.1

  Larger font
  Smaller font
  Copy
  Print
  Contents