Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಕುಟುಂಬದ ಯಜಮಾನನು ಕ್ರಿಸ್ತನನ್ನು ಅನುಸರಿಸಬೇಕು

    ಕುಟುಂಬದ ಎಲ್ಲಾ ಸದಸ್ಯರೂ ತಂದೆಯ ಅಧೀನದಲ್ಲಿರಬೇಕು. ಅವನು ಸದಸ್ಯರು ಅನುಸರಿಸಬೇಕಾದ ನೀತಿ ನಿಯಮಗಳನ್ನು ಜಾರಿಗೊಳಿಸುವನು ಹಾಗೂ ಯಥಾರ್ಥತೆ, ಪ್ರಾಮಾಣಿಕತೆ, ತಾಳ್ಮೆ, ಧೈರ್ಯ, ಕಾರ್ಯಶ್ರದ್ಧತೆ ಮುಂತಾದ ಗುಣಗಳನ್ನು ಅವನು ಅನುಸರಿಸಬೇಕು. ತಂದೆಯು ಒಂದು ವಿಧದಲ್ಲಿ ತನ್ನ ಕುಟುಂಬದ ಯಾಜಕನಂತಿದ್ದು, ಬೆಳಿಗ್ಗೆ ಮತ್ತು ಸಾಯಂಕಾಲದಲ್ಲಿ ಸದಸ್ಯರನ್ನು ಪ್ರಾರ್ಥನೆಯಲ್ಲಿ ನಡೆಸಬೇಕು. ಹೆಂಡತಿ ಮಕ್ಕಳು ಅದರಲ್ಲಿ ತಪ್ಪದೆ ಭಾಗವಹಿಸಬೇಕು ಹಾಡುಗಳ ಮೂಲಕ ದೇವರನ್ನು ಸ್ತುತಿಸಬೇಕು. ಕುಟುಂಬದ ಯಾಜಕನಾದ ತಂದೆಯು ಬೆಳಿಗ್ಗೆ ಮತ್ತು ಸಾಯಂಕಾಲ ಕುಟುಂಬ ಪ್ರಾರ್ಥನೆಯಲ್ಲಿ ತಾನು ಹಾಗೂ ತನ್ನ ಮಕ್ಕಳು ಮಾಡಿದ ತಪ್ಪು ದೋಷಗಳನ್ನು ಅರಿಕೆ ಮಾಡಬೇಕು. ತನ್ನ ಗಮನಕ್ಕೆ ಬಂದ ಪಾಪಗಳಲ್ಲದೆ, ತನ್ನ ಮಕ್ಕಳು ಮಾಡಿರುವ ರಹಸ್ಯವಾದ, ಆದರೆ ದೇವರಿಗೆ ಮಾತ್ರ ತಿಳಿದಿರುವ ಪಾಪಗಳನ್ನೂ ಸಹ ಅರಕೆ ಮಾಡಬೇಕು. ಈ ನಿಯಮಗಳನ್ನು ತಂದೆತಾಯಿಯರು ಕುಟುಂಬ ಪ್ರಾರ್ಥನೆಯಲ್ಲಿ ಉತ್ಸಾಹದಿಂದ ಪಾಲಿಸಿದಲ್ಲಿ, ಎಲ್ಲರಿಗೂ ಆಶೀರ್ವಾದವುಂಟಾಗುವುದು.KanCCh 166.2

    ಗಂಡನೂ, ತಂದೆಯೂ ಹಾಗೂ ಕುಟುಂಬದ ಯಜಮಾನನೂ, ಯಾಜಕನೂ ಆಗಿರುವ ಪುರುಷನ ಮನಸ್ಸು ಹಾಗೂ ಹೃದಯ ನಿಷ್ಕಳಂಕವೂ, ಶುದ್ಧವೂ ಆಗಿರಬೇಕೆಂದು ಶ್ರೀಮತಿ ವೈಟಮ್ಮನವರು ಹೇಳುತ್ತಾರೆ. ಕ್ರಿಸ್ತನಿಂದ ಪ್ರತಿದಿನವೂ ಅವನು ಶಿಕ್ಷಣ ಪಡೆದುಕೊಳ್ಳಬೇಕು. ಮನೆಯಲ್ಲಿ ಎಂದೆಂದಿಗೂ ಅವನು ಸರ್ವಾಧಿಕಾರಿಯಂತೆ ವರ್ತಿಸಬಾರದು. ದಬ್ಬಾಳಿಕೆಯಿಂದ ವರ್ತಿಸುವ ಪುರುಷನು ಸೈತಾನನ ದೂತರ ಸಹವರ್ತಿಯಾಗಿದ್ದಾನೆ. ಅವನು ತನ್ನ ಚಿತ್ತವನ್ನು ದೇವರ ಚಿತ್ತಕ್ಕೆ ಒಪ್ಪಿಸಿಕೊಡಬೇಕು. ನಿಮ್ಮ ಹೆಂಡತಿಯ ಜೀವನವು ಹಿತಕರವಾಗಿಯೂ, ಸಂತೋಷವಾಗಿಯೂ ಇರುವುದಕ್ಕೆ ನೀವು ಎಲ್ಲಾ ಪ್ರಯತ್ನಗಳನ್ನು ಮಾಡಬೇಕು. ದೇವರ ಪರಿಶುದ್ಧ ವಾಕ್ಯವು ನಿಮ್ಮ ಸಲಹೆಗಾರನೂ, ಆಪ್ತಮಿತ್ರನೂ ಆಗಿರಬೇಕು. ಮನೆಯಲ್ಲಿ ದೇವರ ವಾಕ್ಯದ ಬೋಧನೆಗಳನ್ನು ಅನುಸರಿಸಬೇಕು. ಆಗ ನೀವು ಇವುಗಳನ್ನು ಸಭೆಯಲ್ಲಿ ಮಾತ್ರವಲ್ಲದೆ, ನಿಮ್ಮ ಕೆಲಸದ ಸ್ಥಳದಲ್ಲಿಯೂ ಅನುಸರಿಸಿ ನಡೆಯುವಿರಿ. ದೇವದೂತರು ನಿಮ್ಮೊಂದಿಗೆ ಸಹಕರಿಸುವರು ಹಾಗೂ ಜಗತ್ತಿಗೆ ನೀವು ಕ್ರಿಸ್ತನನ್ನು ತಿಳಿಯಪಡಿಸಲು ನಿಮಗೆ ಸಹಾಯ ಮಾಡುವರು.KanCCh 167.1

    ಗಂಡನು ತನ್ನ ಕೆಲಸದ ಸ್ಥಳದಲ್ಲಿ ಅನುಭವಿಸುವ ಕಿರಿಕಿರಿ, ಅಸಹನೆ, ಕೋಪ ಮುಂತಾದವುಗಳನ್ನು ಮನೆಯಲ್ಲಿ ಪ್ರದರ್ಶಿಸಿ ಅಲ್ಲಿನ ಶಾಂತ ವಾತಾವರಣವನ್ನು ಕೆಡಿಸಬಾರದು. ನೀವು ನೆನೆಸದ ರೀತಿಯಲ್ಲಿ ಕೆಲವು ಘಟನೆಗಳು ನಡೆದಾಗ, ನೀವು ತಾಳ್ಮೆ, ದೀರ್ಘಶಾಂತಿ ಕಳೆದುಕೊಂಡು ಕರುಣೆ, ಪ್ರೀತಿ ತೋರಿಸದಿದ್ದಲ್ಲಿ, ನಿಮ್ಮನ್ನು ಅಪಾರವಾಗಿ ಪ್ರೀತಿಸಿ ತನ್ನ ಪ್ರಾಣವನ್ನು ನಿಮಗಾಗಿ ಅರ್ಪಿಸಿದ ಕ್ರಿಸ್ತನನ್ನು ನೀವು ಸ್ನೇಹಿತನನ್ನಾಗಿ ಮಾಡಿಕೊಂಡಿರುವುದಿಲ್ಲ. KanCCh 167.2

    ತಾನು ಕುಟುಂಬದ ಯಜಮಾನನೆಂದು ಯಾವಾಗಲೂ ಸದಸ್ಯರ ಮೇಲೆ ದರ್ಪ ತೋರಿಸುವುದು ಪೌರುಷದ ಲಕ್ಷಣವಲ್ಲ. ತನ್ನ ಅಧಿಕಾರದ ಸಮರ್ಥನೆಗಾಗಿ ದೇವರ ವಾಕ್ಯದ ಆಧಾರ ತೋರಿಸುವುದರಿಂದ ತಂದೆಯ ಗೌರವ ಹೆಚ್ಚಾಗುವುದಿಲ್ಲ. ಪುರುಷನು ತನ್ನ ಹೆಂಡತಿಯನ್ನು ರಕ್ಷಿಸುವುದಕ್ಕಾಗಿ ದೇವರು ಅವನನ್ನು ಆಕೆಗೆ ಯಜಮಾನನನ್ನಾಗಿ ನೇಮಿಸಿದ್ದಾನೆ. ಕ್ರಿಸ್ತನು ಹೇಗೆ ಸಭೆಯೆಂಬ ದೇಹಕ್ಕೆ ತಲೆಯಾಗಿದ್ದು ಅದನ್ನು ರಕ್ಷಿಸುತ್ತಾನೋ, ಹಾಗೆಯೇ ಪುರುಷನು ಕುಟುಂಬದ ಸದಸ್ಯರನ್ನು ಒಟ್ಟಾಗಿಸುವ ಬಂಧಕವಾಗಿದ್ದಾನೆ. ಕ್ರಿಸ್ತನನ್ನು ಪ್ರೀತಿಸುತ್ತೇನೆಂದು ಹೇಳಿಕೊಳ್ಳುವ ಪ್ರತಿಯೊಬ್ಬ ಗಂಡನು, ಕುಟುಂಬದ ಯಜಮಾನನಾಗಿ ದೇವರು ತನ್ನಿಂದ ಏನನ್ನು ಬಯಸುತ್ತಾನೆ ಎಂಬುದನ್ನು ಎಚ್ಚರಿಕೆಯಿಂದ ಸತ್ಯವೇದ ಅಧ್ಯಯನ ಮಾಡುವ ಮೂಲಕ ತಿಳಿದುಕೊಳ್ಳಬೇಕು. ಕ್ರಿಸ್ತನು ತನ್ನ ಅಧಿಕಾರವನ್ನು ವಿವೇಕ, ಕರುಣೆ ಹಾಗೂ ಸೌಮ್ಯತೆಯಿಂದ ಚಲಾಯಿಸಿದನು. ಅದರಂತೆಯೇ ಕುಟುಂಬದ ಯಜಮಾನನೂ ಸಹ ತನ್ನ ಅಧಿಕಾರ ಉಪಯೋಗಿಸುವುದರಲ್ಲಿ ಸಭೆಯ ಮಹಾಶಿರಸ್ಸಾದ ಕ್ರಿಸ್ತನನ್ನು ಅನುಸರಿಸಬೇಕು.KanCCh 167.3