Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
 • Results
 • Related
 • Featured
No results found for: "".
 • Weighted Relevancy
 • Content Sequence
 • Relevancy
 • Earliest First
 • Latest First
  Larger font
  Smaller font
  Copy
  Print
  Contents

  ಅಧ್ಯಾಯ-22 — ತಾಯಿ ಹಾಗೂ ಆಕೆಯ ಮಗು

  ಹೆಂಡತಿಯೂ ಹಾಗೂ ತಾಯಿಯೂ ಆದ ಮಹಿಳೆ ಮನೆಯ ಕೆಲಸ ಕಾರ್ಯಗಳಲ್ಲಿ ಕತ್ತೆಯಂತೆ ಚಾಕರಿ ಮಾಡುತ್ತಾ ಮುಳುಗಿ ಹೋಗಬಾರದು. ಬದಲಾಗಿ ಆಕೆಯು ತನ್ನ ಗಂಡನಿಗೆ ಒಳ್ಳೆಯ ಸಂಗಾತಿಯೂ ಮತ್ತು ತನ್ನ ಮಕ್ಕಳ ಮನಸ್ಸಿನ ಬೆಳವಣಿಗೆಗೆ ಪೂರಕವಾಗುವಂತೆ ಪುಸ್ತಕಗಳನ್ನು ಓದಿ ಹೆಚ್ಚಿನ ಮಾಹಿತಿ ಪಡೆದುಕೊಂಡಿರಬೇಕು. ತನಗಿರುವ ಅವಕಾಶಗಳನ್ನು ತಾಯಿಯು ತನ್ನ ಮಕ್ಕಳು ಜೀವನದಲ್ಲಿ ಉನ್ನತ ಮಟ್ಟಕ್ಕೇರುವಂತೆ ಪ್ರಭಾವ ಬೀರಲು ವಿವೇಚನೆಯಿಂದಲೂ, ವಿವೇಕತನದಿಂದಲೂ ಉಪಯೋಗಿಸಬೇಕು. ಪ್ರೀತಿಯುಳ್ಳ ರಕ್ಷಕನಾದ ಕ್ರಿಸ್ತನು ಪ್ರತಿದಿನವೂ ಆಕೆಗೆ ಸಂಗಾತಿಯಾಗಿಯೂ ಹಾಗೂ ಉತ್ತಮವಾದ ಸ್ನೇಹಿತನೂ ಆಗಿರುವಂತೆ ದೇವರ ವಾಕ್ಯ ಓದಿ ಪ್ರಾರ್ಥನೆಯಲ್ಲಿ ಸಮಯ ಕಳೆಯಬೇಕು. ಅಲ್ಲದೆ ಮಕ್ಕಳನ್ನು ಕರೆದುಕೊಂಡು ಹೊಲಗದ್ದೆ, ಬೆಟ್ಟಗುಡ್ಡ ನದಿಗಳ ಕಡೆಗೆ ಹೋಗಿ ದೇವರ ರಮಣೀಯವಾದ ಸೃಷ್ಟಿ ಕಾರ್ಯಗಳ ಮೂಲಕ ಆತನ ಬಗ್ಗೆ ಮಕ್ಕಳಿಗೆ ಶಿಕ್ಷಣ ನೀಡಬೇಕು.KanCCh 154.1

  ತಾಯಿಯು ಯಾವಾಗಲೂ ಹರ್ಷಚಿತ್ತದಿಂದ, ಲವಲವಿಕೆಯಿಂದ ಇರಬೇಕು. ದಿನದ ಪ್ರತಿಯೊಂದು ಸಮಯವನ್ನು ಬಿಡುವಿಲ್ಲದ ಮನೆ ಕೆಲಸದಲ್ಲಿ ತೊಡಗಿಸಿಕೊಂಡು ಸುಸ್ತಾಗುವುದಕ್ಕೆ ಬದಲಾಗಿ, ಸಾಯಂಕಾಲವು ಹಿತಕರವಾದ ಸಾಮಾಜಿಕ ಸಮಯವಾಗಿರಲಿ. ದಿನನಿತ್ಯದ ಕೆಲಸ ಕಾರ್ಯಗಳನ್ನು ಮುಗಿಸಿದ ನಂತರ ಕುಟುಂಬದವರೆಲ್ಲರೂ ಒಟ್ಟಾಗಿ ಸೇರಿ ಸಂತೋಷದಿಂದ ಸಮಯ ಕಳೆಯಲಿ. ಕುಟುಂಬದಲ್ಲಿ ಮನಸ್ಸಿಗೆ ಮುದನೀಡುವ ಇಂತಹ ಆಹ್ಲಾದಕರ ವಾತಾವರಣವಿದ್ದಲ್ಲಿ, ಗಂಡಂದಿರು ಕ್ಲಬ್‌ನಲ್ಲಿ ಅಥವಾ ಹೋಟಲ್ಲುಗಳಲ್ಲಿ ಸಮಯ ವ್ಯರ್ಥ ಮಾಡದೆ ಕುಟುಂಬದೊಡನೆ ಉಲ್ಲಾಸದಿಂದ ಕಾಲಕಳೆಯುವರು, ಗಂಡುಹೆಣ್ಣು ಮಕ್ಕಳು ಬೀದಿಯಲ್ಲಿಯೇ ಇಲ್ಲವೆ ಬೇರೆಲ್ಲೋ ಕೆಟ್ಟ ಸ್ನೇಹಿತರೊಂದಿಗೆ ಸೇರಿ ಕಾಲಹರಣ ಮಾಡದೆ ಮನೆಯಲ್ಲಿಯೇ ಕಾಲಕಳೆಯುವರು. ಮನೆಯ ಪ್ರಭಾವವು ತಂದೆ ತಾಯಿಯರಿಗೂ ಹಾಗೂ ಮಕ್ಕಳಿಗೂ ಜೀವನಪರ್ಯಂತ ಆಶೀರ್ವಾದಕರವಾಗಬೇಕೆಂದು ದೇವರ ಉದ್ದೇಶವಾಗಿದೆ.KanCCh 154.2

  ಹಾಗಾದರೆ ಹೆಂಡತಿಗೆ ತನ್ನದೇ ಆದ ಆಸೆ ಆಕಾಂಕ್ಷೆಗಳಿಲ್ಲವೇ? ಎಂಬ ಪ್ರಶ್ನೆಯನ್ನು ಆಗಾಗ ಕೇಳಲಾಗುತ್ತದೆ. ಪುರುಷನು ಕುಟುಂಬದ ಯಜಮಾನನೆಂದು ಸತ್ಯವೇದವು ಸ್ಪಷ್ಟವಾಗಿ ತಿಳಿಯುತ್ತದೆ. “... ಹಾಗೆಯೇ ಸ್ತ್ರೀಯರು ತಮ್ಮ ತಮ್ಮ ಗಂಡಂದಿರಿಗೆ ಎಲ್ಲಾ ವಿಷಯಗಳಲ್ಲಿ ಅಧೀನರಾಗಿರಬೇಕು” (ಎಫೆಸ 5:24ನೇ ವಚನ ಕೊನೆಯ ಭಾಗ). ದೇವರ ಈ ಆದೇಶವು ಇಲ್ಲಿಗೆ ಮುಕ್ತಾಯವಾಗಿದ್ದಲ್ಲಿ ಹೆಂಡತಿಗೆ ಯಾವುದೇ ಸ್ಥಾನಮಾನವಿಲ್ಲವೆಂದು ಹೇಳಬಹುದಾಗಿತ್ತು. ಅನೇಕ ಪುರುಷರು “ಹೆಂಡತಿಯರು ತಮ್ಮ ತಮ್ಮ ಗಂಡಂದಿರಿಗೆ ಅಧೀನರಾಗಿರಬೇಕು” ಎಂಬಲ್ಲಿಗೆ ನಿಲ್ಲಿಸುತ್ತಾರೆ. ಆದರೆ ದೇವರ ಈಆಜ್ಞೆಯ ಮೊದಲಿನ ಭಾಗವಾದ, “..... ಹಾಗೆಯೇ, ಸಭೆಯು ಕ್ರಿಸ್ತನಿಗೆ ಹೇಗೆ ಅಧೀನವಾಗಿದೆಯೇ” ಎಂಬ ವಾಕ್ಯವನ್ನು ನಾವು ಓದಬೇಕು (ಇಂಗ್ಲೀಷ್ ಬೈಬಲ್ಲಿನಲ್ಲಿ “ಕರ್ತನಿಗೆ ಯೋಗ್ಯವಾದ ರೀತಿಯಲ್ಲಿ” ಎಂದು ತಿಳಿಸಲಾಗಿದೆ).KanCCh 154.3

  ಹೆಂಡತಿಯು ದೇವರ ಮಹಿಮೆ ಹಾಗೂ ಭಯವನ್ನು ಯಾವಾಗಲೂ ನೆನಪಿನಲ್ಲಿಡಬೇಕೆಂದು ದೇವರು ಬಯಸುತ್ತಾನೆ. ತನ್ನ ಅಮೂಲ್ಯ ವಾದ ಪ್ರಾಣಕೊಟ್ಟು ತನ್ನ ರಕ್ತದಿಂದ ಕ್ರಯಕ್ಕೆ ಕೊಂಡುಕೊಂಡ ಕ್ರಿಸ್ತನಿಗೆ ಮಾತ್ರ ಅವಳು ಸಂಪೂರ್ಣವಾಗಿ ಅಧೀನದಲ್ಲಿರಬೇಕು. ದೇವರು ಆಕೆಗೆ ಮನಸ್ಸಾಕ್ಷಿ ಕೊಟ್ಟಿದ್ದಾನೆ. ಆಕೆಯು ಅದನ್ನು ಯಾವುದೇ ಭಯವಿಲ್ಲದೆ ಉಲ್ಲಂಘಿಸಬಾರದು. ಹೆಂಡತಿಯು ಕ್ರಿಸ್ತನಿಂದ ಕ್ರಯಕ್ಕೆ ಕೊಳ್ಳಲ್ಪಟ್ಟಿರುವುದರಿಂದ, ಆಕೆಯ ವ್ಯಕ್ತಿತ್ವವು ತನ್ನ ಗಂಡನ ವ್ಯಕ್ತಿತ್ವದೊಂದಿಗೆ ಸೇರಿಕೊಳ್ಳಬಾರದು. ಆಕೆಗೆ ತನ್ನದೇ ಆದ ಸ್ವತಂತ್ರ ವ್ಯಕ್ತಿತ್ವವಿರಬೇಕು. ಹೆಂಡತಿಯು ಕುರುಡು ಭಕ್ತಿಯಿಂದ ಎಲ್ಲಾ ವಿಷಯಗಳಲ್ಲಿಯೂ ಗಂಡನು ಹೇಳಿದಂತೆ ಕೇಳಿದಲ್ಲಿ, ಸೈತಾನನ ದಾಸತ್ವದಿಂದ ಈಡುಕೊಟ್ಟು ಬಿಡಿಸಿದ ನನ್ನ ಶರೀರ ಹಾಗೂ ಪ್ರಾಣಕ್ಕೆ ಹಾನಿಯಾಗುವುದೆಂದು ತಿಳಿದಿರಬೇಕು. ಆದುದರಿಂದ ಗಂಡನು ಹೇಳಿದ್ದನ್ನೆಲ್ಲಾ ಆಕೆಯು ಮಾಡಬೇಕೆಂದು ಭಾವಿಸುವುದು ತಪ್ಪು. ಹೆಂಡತಿಗೆ ಗಂಡನಿಗಿಂತಲೂ ಪ್ರಮುಖವಾದ ಒಬ್ಬನಿದ್ದಾನೆ, ಆತನೆಂದರೆ ವಿಮೋಚಕನಾದ ಯೇಸುಕ್ರಿಸ್ತನೇ. ಆದುದರಿಂದ ಆಕೆಯು ಗಂಡನಿಗೆ ಅಧೀನಳಾಗಿರುವುದೆಂದರೆ, ದೇವರ ವಾಕ್ಯವು ಹೇಳಿದಂತೆ, “ಕರ್ತನಿಗೆ ಯೋಗ್ಯವಾದ ರೀತಿಯಲ್ಲಿ ವಿಧೇಯತೆ ತೋರಿಸಬೇಕು. (ಇಂಗ್ಲೀಷ್ ‘As it is Fit in the Lord’ ಎಂದು ತಿಳಿಸುತ್ತದೆ).KanCCh 155.1

  ದೇವರಾತ್ಮನು ನಮ್ಮಲ್ಲಿರಬೇಕು. ಇಲ್ಲದಿದ್ದಲ್ಲಿ ಕುಟುಂಬದಲ್ಲಿ ಎಂದಿಗೂ ಸಾಮರಸ್ಯ ಇರುವುದಿಲ್ಲ. ಹೆಂಡತಿಯಲ್ಲಿ ಕ್ರಿಸ್ತನಂತ ಮನಸ್ಸಿದ್ದಲ್ಲಿ ಅವಳು ತನ್ನ ಮಾತುಗಳಲ್ಲಿ ಎಚ್ಚರಿಕೆ ವಹಿಸುವಳು ಹಾಗೂ ತನ್ನ ಭಾವನೆಗಳನ್ನು ಹತೋಟಿಯಲ್ಲಿಟ್ಟು ಕೊಂಡು ಗಂಡನಿಗೆ ವಿಧೇಯಳಾಗುವಳು, ಆದರೂ ತಾನು ತನ್ನ ಗಂಡನಿಗೆ ಗುಲಾಮಳಲ್ಲ, ಬದಲಾಗಿ ಸಂಗಾತಿಯೆಂದು ಎಣಿಸುವಳು. ಗಂಡನು ದೇವರಿಗೆ ಸೇವಕನಾಗಿದ್ದಲ್ಲಿ, ಅವನು ತನ್ನ ಹೆಂಡತಿಯ ಮೇಲೆ ದರ್ಪ ತೋರಿಸಬಾರದು, ಅಲ್ಲದೆ ಸ್ವಚ್ಛಾನುಸಾರವಾಗಿ ನಡೆದು ಆಕೆಯನ್ನು ಬಲವಂತ ಪಡಿಸಬಾರದು. ಕುಟುಂಬದಲ್ಲಿ ದೇವರಾತ್ಮನು ನೆಲೆಗೊಂಡಿದ್ದಲ್ಲಿ ಅದು ಪರಲೋಕದ ಒಂದು ಮಾದರಿಯಂತಿರುತ್ತದೆ. ಮನೆಯಲ್ಲಿ ಯಾರಾದರೂ ಒಬ್ಬರು ತಪ್ಪು ಮಾಡಿದಲ್ಲಿ, ಇತರರು ಕ್ರಿಸ್ತನಂತ ತಾಳ್ಮೆಯನ್ನು ತೋರಿಸಬೇಕೇ ಹೊರತು, ನಿರುತ್ಸಾಹದಿಂದ ವರ್ತಿಸಬಾರದು.KanCCh 155.2

  Larger font
  Smaller font
  Copy
  Print
  Contents