Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    `ತಪ್ಪು’ ಸರಿಯೆಂದು ಕಂಡುಬಂದಾಗ

    ವಿಜ್ಞಾನವು ವೇಗವಾಗಿ ಮುಂದುವರಿಯುತ್ತಿರುವ ಕಾಲದಲ್ಲಿ ನಾವು ಜೀವಿಸುತ್ತಿದ್ದೇವೆ. ಆದರೆ ವಿಜ್ಞಾನವೆಂದು ಕರೆಯುವುದರಲ್ಲಿ ಹೆಚ್ಚಿನದು ಸೈತಾನನ ತಂತ್ರೋಪಾಯ ಮತ್ತು ಜ್ಞಾನಕ್ಕೆ ದಾರಿ ಮಾಡಿಕೊಡುತ್ತದೆ. ಸತ್ಯದಂತೆ ಕಂಡುಬರುವ ಅನೇಕ ವಿಷಯಗಳು ನಮಗೆ ಕಂಡುಬರುತ್ತಿವೆ. ಆದರೆ ಅವು ಶತ್ರುವಾದ ಸೈತಾನನ ಕಪಟಗಳಲ್ಲಿ ಒಂದಾಗಿರುವ ಸಾಧ್ಯತೆಯಿರುವುದರಿಂದ ಪ್ರಾರ್ಥನಾ ಪೂರ್ವಕವಾಗಿ ಅವುಗಳನ್ನು ಎಚ್ಚರಿಕೆಯಿಂದ ಪರಿಶೀಲಿಸುವ ಅಗತ್ಯವಿದೆ, ಹೆಚ್ಚಿನ ಸಂದರ್ಭಗಳಲ್ಲಿ ತಪ್ಪಾದ ಮಾರ್ಗವು ಹೆಚ್ಚು ಕಡಿಮೆ ಸತ್ಯದಮಾರ್ಗದಂತೆಯೇಕಂಡುಬರುತ್ತದೆ. ಇದನ್ನು ಗುರುತಿಸುವುದು ಬಹಳ ಕಷ್ಟ. ಆದರೆ ಪರಿಶುದ್ಧಾತ್ಮನ ಬೆಳಕಿನಿಂದ ಜ್ಞಾನ ಪಡೆದುಕೊಂಡವರು ಇದು ಸತ್ಯದ ಮಾರ್ಗದಿಂದ ದೂರವಾಗಿದೆ ಎಂಬುವ ವ್ಯತ್ಯಾಸವನ್ನು ಗ್ರಹಿಸಿಕೊಳ್ಳುವರು. ಕೆಲವುಸಮಯದ ನಂತರ ಇವೆರಡರ ನಡುವಿನಅಂತರವು ಬಹಳ ವಿಶಾಲವಾಗಿರುತ್ತದೆ.KanCCh 407.4

    ದೇವರ ಅಸ್ತಿತ್ವವು ಎಲ್ಲಾ ಪ್ರಕೃತಿಯಲ್ಲಿ ವ್ಯಾಪಿಸಿಕೊಂಡಿದೆ ಎಂಬ ಸಿದ್ಧಾಂತವು ಸೈತಾನನ ಅತ್ಯಂತ ಮೋಸಕರವಾದ ವಿಧಾನಗಳಲ್ಲಿ ಒಂದಾಗಿದೆ. ಇದು ದೇವರನ್ನು ತಪ್ಪಾಗಿ ನಿರೂಪಿಸುವಂತದ್ದಾಗಿದ್ದು, ಆತನ ಮಹಿಮೆ ಹಾಗೂ ಮಹೋನ್ನತೆಗೆ ಅಗೌರವ ತರುವಂತದ್ದಾಗಿದೆ. ಸರ್ವದೇವತಾರಾಧನೆ ಅಂದರೆ ದೇವರನ್ನು ನಿಸರ್ಗದ ಶಕ್ತಿಗಳೊಡನೆ ಮತ್ತು ವಸ್ತುಗಳೊಡನೆ ಒಂದಾಗಿಸುವ ಹಾಗೂ ಇವೆರಡೂ ಒಂದೇಎಂದು ತಿಳಿಸುವ ಸಿದ್ಧಾಂತಕ್ಕೆ (Pantheistic Theory) ದೇವರ ವಾಕ್ಯದಲ್ಲಿ ಯಾವುದೇ ಆಧಾರವಿಲ್ಲ. ಇಂತಹ ಸಿದ್ಧಾಂತಗಳು ಮನುಷ್ಯನ ರಕ್ಷಣೆಯನ್ನು ನಾಶಪಡಿಸುವಂತವುಗಳಾಗಿವೆ ಎಂದು ದೇವರ ಸತ್ಯವಾಕ್ಯವು ತಿಳಿಸುತ್ತದೆ. ನೈತಿಕ ಹಾಗೂ ದೈವೀಕಅಂಶಗಳಿಗೆ ಗಮನ ಕೊಡದಂತೆ ಪ್ರಪಂಚದ ಮೇಲಿನ ಆಸೆ ಹಾಗೂ ದೇವರವಾಕ್ಯದ ಸತ್ಯವನ್ನು ಮರೆಮಾಡುವುದೇ ಈ ಸಿದ್ಧಾಂತಗಳ ಮೂಲ ಉದ್ದೇಶವಾಗಿದೆ. ಇವು ಮನುಷ್ಯನ ಸುಖಭೋಗವನ್ನು ತೃಪ್ತಿಪಡಿಸುತ್ತವೆ ಮತ್ತು ತಮ್ಮ ಇಷ್ಟವನ್ನು ಯಾವುದೇ ಮಾರ್ಗದಲ್ಲಾದರೂ ಪೂರೈಸಿಕೊಳ್ಳುವುದಕ್ಕೆ ಅನುಮತಿ ನೀಡುತ್ತವೆ. ಇಂತ ಹಸಿದ್ಧಾಂತಗಳನ್ನು ಒಪ್ಪಿಕೊಳ್ಳುವುದು ದೇವರಿಂದ ನಮ್ಮನ್ನು ದೂರಮಾಡುತ್ತವೆ.KanCCh 408.1

    ಪಾಪದ ನಿಮಿತ್ತ ನಮ್ಮ ಪರಿಸ್ಥಿತಿಯು ಅಲೌಕಿಕವಾಗಿರುವುದರಿಂದ (Preter Natural) ಅದರಿಂದ ತಿರುಗಿ ನಮ್ಮನ್ನು ಪೂರ್ವಸ್ಥಿತಿಗೆ ಅಂದರೆ ಪಾಪರಹಿತ ಪರಿಸ್ಥಿತಿಗೆ ತರುವ ಶಕ್ತಿಯು ಅತಿಮಾನುಷವಾಗಿರಬೇಕು (Supernatural). ಇಲ್ಲದಿದ್ದರೆ ಅದರಿಂದ ಯಾವ ಪ್ರಯೋಜನವೂ ಇರುವುದಿಲ್ಲ. ಮಾನವರ ಹೃದಯದಿಂದ ದುಷ್ಟತನ ತೆಗೆದುಹಾಕುವ ಒಂದೇಒಂದು ಶಕ್ತಿಯಿದೆ, ಅದು ಕ್ರಿಸ್ತ ಯೇಸುವಿನಲ್ಲಿರುವ ದೇವರ ಶಕ್ತಿ. ಶಿಲುಬೆಗೇರಿಸಲ್ಪಟ್ಟ ಕ್ರಿಸ್ತನ ರಕ್ತದ ಮೂಲಕ ಮಾತ್ರ ಪಾಪವು ಶುದ್ಧೀಕರಿಸಲ್ಪಡುವುದು. ಆತನ ಕೃಪೆಯು ಮಾತ್ರ ನಮ್ಮ ಪಾಪದ ಸ್ವಭಾವವನ್ನು ಎದುರಿಸುವ ಹಾಗೂ ಜಯಿಸುವ ಸಾಮರ್ಥ್ಯ ಕೊಡುತ್ತದೆ. ದೇವರಅಸ್ತಿತ್ವವು ಪ್ರಕೃತಿಯ ಎಲ್ಲೆಡೆಯೂ ವ್ಯಾಪಿಸಿಕೊಂಡಿದ್ದಲ್ಲಿ, ಆತನು ಎಲ್ಲಾ ಮನುಷ್ಯರಲ್ಲಿಯೂ ವಾಸಿಸುತ್ತಾನೆ ಹಾಗೂ ಪರಿಶುದ್ಧತೆ ಹೊಂದಿಕೊಳ್ಳಲು, ಮನುಷ್ಯನು ತನ್ನಲ್ಲಿರುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವುದು ಮಾತ್ರ ಸಾಕು.KanCCh 408.2

    ಈ ಸಿದ್ಧಾಂತಗಳು ತರ್ಕಬದ್ಧವಾದ ಮುಕ್ತಾಯದಿಂದ ಸಂಪೂರ್ಣವಾಗಿ ಕ್ರೈಸ್ತ ಆರ್ಥಿಕ ಸ್ಥಿತಿಯನ್ನೇ ಬುಡಮೇಲು ಮಾಡುತ್ತಿದೆ. ಇದು ದೋಷಪರಿಹಾರಕ ಯಜ್ಞದ ಅಗತ್ಯವೇ ಇಲ್ಲವೆಂದು ಹೇಳುತ್ತಾ, ಮನುಷ್ಯನನ್ನೇ ಅವನ ರಕ್ಷಕನನ್ನಾಗಿ ಮಾಡುತ್ತದೆ. ದೇವರ ಬಗೆಗಿನ ಈ ಸಿದ್ಧಾಂತಗಳು ಆತನ ವಾಕ್ಯವನ್ನು ಯಾವುದೇ ಪರಿಣಾಮವಿಲ್ಲದಂತೆ ಮಾಡುತ್ತವೆ. ಇವುಗಳನ್ನು ಅಂಗೀಕರಿಸುವವರು ಅಂತಿಮವಾಗಿ ಸಂಪೂರ್ಣಸತ್ಯವೇದವು ಒಂದು ಕಾಲ್ಪನಿಕಕತೆಯೆಂದು ತಿಳಿಯುವ ಅಪಾಯಕ್ಕೆ ಒಳಗಾಗುತ್ತಾರೆ. ಅವರು ಸದ್ಗುಣವು ಕೆಟ್ಟ ಸ್ವಭಾವಕ್ಕಿಂತ ಉತ್ತಮವೆಂದು ಪರಿಗಣಿಸುತ್ತಾರೆ; ಆದರೆ ಅವರು ದೇವರ ಸರ್ವಶಕ್ತಿಯನ್ನು ಅಲ್ಲಗಳೆಯುತ್ತಾ, ಮಾನವ ಸಾಮಥ್ರ್ಯದಮೇಲೆ ಆತುಕೊಳ್ಳುತ್ತಾರೆ. ದೇವರಿಲ್ಲದಿದ್ದಲ್ಲಿ, ಇದು ನಿಷ್ಪ್ರಯೋಜಕವಾಗಿದೆ. ಪವಿತ್ರಾತ್ಮನ ಶಕ್ತಿಯಿಲ್ಲದ ಮಾನವನ ಮನೋಬಲವು ಕೆಟ್ಟತನ ಹಾಗೂ ಶೋಧನೆಗಳನ್ನು ಎದುರಿಸಲು ಅಥವಾ ಜಯಿಸಲು ನಿಜವಾದ ಶಕ್ತಿ ಹೊಂದಿರುವುದಿಲ್ಲ. ಮಾನವರಿಗೆ ಪವಿತ್ರಾತ್ಮನ ಬಲವಿಲ್ಲದಿರುವುದರಿಂದ, ಪಾಪಮಾಡಲು ಅವರಿಗೆ ಯಾವುದೇ ಅಡೆತಡೆ ಇರುವುದಿಲ್ಲ. ಒಂದುಸಾರಿ ದೇವರವಾಕ್ಯದ ಅಡೆತಡೆಗಳನ್ನು ಹಾಗೂ ಪವಿತ್ರಾತ್ಮನನ್ನು ತಿರಸ್ಕರಿಸಿದಾಗ, ಅಂತವರು ಎಂತಹ ಆಳವಾದ ಪಾಪದಲ್ಲಿ ಮುಳುಗುತ್ತಾರೆಂದು ನಮಗೆ ತಿಳಿಯಲು ಆಗುವುದಿಲ್ಲ. ಈ ರೀತಿಯಾದ ಪ್ರೇತಗಳೊಡನೆ ಸಂಪರ್ಕಿಸುವ (Spiritualistic) ಸಿದ್ಧಾಂತಗಳನ್ನು ಅನುಸರಿಸುವವರು ಖಂಡಿತವಾಗಿಯೂ ತಮ್ಮ ಕ್ರೈಸ್ತಅನುಭವವನ್ನು ನಾಶ ಮಾಡಿಕೊಳ್ಳುವುದ ಲ್ಲದೆದೇವರೊಂದಿಗೆ ಸಂಪರ್ಕ ಕಡಿದುಕೊಂಡು ನಿತ್ಯಜೀವ ಕಳೆದುಕೊಳ್ಳುವರು.KanCCh 408.3