Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ಅಧ್ಯಾಯ-40 — ಮಾಂಸಾಹಾರ

    ಮಾನವಜನಾಂಗವು ಯಾವ ಆಹಾರ ತಿನ್ನಬೇಕೆಂದು ದೇವರು ನಮ್ಮ ಮೊದಲತಂದೆತಾಯಿಯರಾದ ಆದಾಮಹವ್ವಳಿಗೆ ಕೊಟ್ಟನು. ಯಾವುದೇ ಪ್ರಾಣಿಯಜೀವತೆಗೆಯುವುದು ದೇವರ ಯೋಜನೆಗೆ ವಿರೋಧವಾಗಿದೆ. ಏದೆ ತೋಟದಲ್ಲಿ ಯಾವುದೇಮರಣ ಇರಬಾರದಾಗಿತ್ತು. ಅದರಲ್ಲಿರುವ ಹಣ್ಣುಗಳು ಮಾನವರ ಆಹಾರದ ಅಗತ್ಯಗಳನ್ನುಪೂರೈಸುತ್ತಿತ್ತು. ಜಲಪ್ರಳಯದಿಂದ ಲೋಕವು ನಾಶವಾಗುವವರೆಗೆ ಮನುಷ್ಯನುಮಾಂಸಾಹಾರ ಸೇವಿಸಲು ದೇವರು ಅನುಮತಿ ಕೊಟ್ಟಿರಲಿಲ್ಲ. ಜಲಪ್ರಳಯದಲ್ಲಿ ಮಾನವನಆಹಾರವೆಲ್ಲವೂ ನಾಶವಾದ ಕಾರಣದಿಂದ ದೇವರು ನೋಹನು ನಾವೆಯಲ್ಲಿರಕ್ಷಿಸಿದ್ದಶುದ್ಧ ಪ್ರಾಣಿಗಳ ಮಾಂಸವನ್ನು ತಿನ್ನಲು ಅವನಿಗೆ ಅಪ್ಪಣೆಕೊಟ್ಟನು. ಆದರೆ ಮಾಂಸಾಹಾರವುಮಾನವರಿಗೆ ಅತ್ಯಂತ ಆರೋಗ್ಯಕರ ಆಹಾರವಲ್ಲ.KanCCh 282.1

    ಜಲಪ್ರಳಯದ ನಂತರ ಮನುಷ್ಯರು ಹೆಚ್ಚಾಗಿ ಮಾಂಸಾಹಾರ ಸೇವನೆ ಮಾಡಿದರು.ಮಾನವರ ಆಲೋಚನೆಗಳೆಲ್ಲವೂ ಕೆಟ್ಟದ್ದಾಗಿದ್ದು, ಅವರು ತಮ್ಮ ಸೃಷ್ಟಿಕರ್ತನ ವಿರುದ್ಧವಾಗಿಅಹಂಕಾರದಿಂದ ತಮ್ಮನ್ನೇ ಹೆಚ್ಚಿಸಿಕೊಂಡು, ತಮ್ಮ ಯೋಜನೆಯಂತೆ ನಡೆಯುತ್ತಾರೆಂದುದೇವರಿಗೆ ತಿಳಿದಿತ್ತು. ಆದುದರಿಂದ ದೇವರು ದೀರ್ಘಕಾಲ ಬದುಕುತ್ತಿದ್ದ ಮನುಷ್ಯರುತಮ್ಮ ಪಾಪಮಯ ಜೀವಿತವನ್ನು ಕಡಿಮೆ ಮಾಡಿಕೊಳ್ಳಲೆಂದು ಅವರಿಗೆ ಮಾಂಸಾಹಾರಸೇವಿಸಲು ಅನುಮತಿನೀಡಿದನು. ಜಲಪ್ರಳಯದನಂತರ ಮಾನವ ಜನಾಂಗದದೈಹಿಕ ಸಾಮರ್ಥ್ಯ ಮಾತ್ರವಲ್ಲದೆ ಅವರ ಆಯುಷ್ಯವೂ ಸಹ ಕಡಿಮೆಯಾಯಿತು.KanCCh 282.2

    ಏದೆನ್‌ತೋಟದಲ್ಲಿ ಆದಾಮ ಹವ್ವಳಿಗೆ ಸಸ್ಯಾಹಾರ ನೀಡುವುದರ ಮೂಲಕ ಅವರಿಗೆಯಾವುದು ಉತ್ತಮ ಆಹಾರವೆಂದು ತೋರಿಸಿದನು. ಇಸ್ರಾಯೇಲ್ಯರಿಗೂ ಸಹ ಇದೇಮಾದರಿಯನ್ನು ತಿಳಿಸಿದನು. ಐಗುಪ್ತದೇಶದಿಂದ ಬಿಡುಗಡೆಗೊಳಿಸಿ, ಅವರು ತನ್ನಸ್ವಕೀಯ ಜನರಾಗಿರಬೇಕೆಂದು ಅವರನ್ನು ಆರಿಸಿಕೊಂಡು ತರಬೇತಿ ನೀಡಿದನು. ಅವರಮೂಲಕ ಲೋಕದ ಇತರ ಜನಾಂಗಗಳಿಗೆ ಬೋಧನೆ ನೀಡಿ ಅವರನ್ನುಆಶೀರ್ವದಿಸಬೇಕೆಂಬುದು ದೇವರ ಬಯಕೆಯಾಗಿತ್ತು. ಆತನು ಇಸ್ರಾಯೇಲ್ಯರಿಗೆಮಾಂಸಾಹಾರವನ್ನಲ್ಲ. ಬದಲಾಗಿ ಪರಲೋಕದ ಆಹಾರವಾದ ‘ಮನ್ನ’ವನ್ನು ಈ ಉತ್ತಮವಾದ ಉದ್ದೇಶಕ್ಕಾಗಿ 40ವರ್ಷಗಳಕಾಲ ಅರಣ್ಯದ ಅವರ ಪ್ರಯಾಣದಲ್ಲಿಕೊಟ್ಟನು. ಆದರೆ ಇಸ್ರಾಯೇಲ್ಯರು ತಮ್ಮ ಪ್ರಯಾಣದಲ್ಲಿ ಅತೃಪ್ತಿಯಿಂದ ಗುಣುಗುಟ್ಟಿದಕಾರಣದಿಂದ ಅವರಿಗೆ ಮಾಂಸಾಹಾರ ಕೊಟ್ಟನು, ಅದೂ ಅಲ್ಪ ಸಮಯಕ್ಕೆಮಾತ್ರ, ಈ ಮಾಂಸಾಹಾರವನ್ನು ತಿಂದ ಕಾರಣದಿಂದ ಅವರಿಗೆ ರೋಗ ಬಂದುಸಾವಿರಾರು ಜನರು ಸತ್ತರು. ಆದಾಗ್ಯೂ ಇಸ್ರಾಯೇಲ್ಯರು ಮಾಂಸವಿಲ್ಲದ ಸಸ್ಯಾಹಾರವನ್ನುಎಂದೂ ಸಹ ಮನಃಪೂರ್ವಕವಾಗಿ ಒಪ್ಪಿಕೊಳ್ಳಲಿಲ್ಲ.KanCCh 282.3

    ಇಸ್ರಾಯೇಲ್ಯರು ಕಾನಾನ್ ದೇಶದಲ್ಲಿ ವಾಸ ಮಾಡಲು ಆರಂಭಿಸಿದ ನಂತರ,ಮಾಂಸಾಹಾರ ತೆಗೆದುಕೊಳ್ಳಲು ಅವರಿಗೆ ಅನುಮತಿ ನೀಡಲಾಯಿತು. ಆದರೆ ಅದರಅನಾರೋಗ್ಯಕರ ಪರಿಣಾಮಗಳನ್ನು ಕಡಿಮೆ ಮಾಡುವ ಸಲುವಾಗಿ ಅವರು ಕೆಲವಾರುನಿರ್ಬಂಧಗಳನ್ನು ಬಹು ಎಚ್ಚರಿಕೆಯಿಂದ ಅನುಸರಿಸಬೇಕಾಗಿತ್ತು. ಹಂದಿಮಾಂಸ ಅವರಿಗೆನಿಷಿದ್ಧವಾಗಿತ್ತು. ಅಲ್ಲದೆ ಅಶುದ್ಧವೆಂದು ತಿಳಿಸಿದ ಪ್ರಾಣಿ, ಪಕ್ಷಿ ಮತ್ತು ಮೀನುಗಳನ್ನುಅವರು ತಿನ್ನಬಾರದಾಗಿತ್ತು. ಶುದ್ಧವಾದ ಪ್ರಾಣಿಗಳ ಮಾಂಸತಿನ್ನುವಾಗಲೂ, ರಕ್ತ ಹಾಗೂಕೊಬ್ಬನ್ನು ಖಂಡಿತವಾಗಿಯೂ ತಿನ್ನಬಾರದಾಗಿತ್ತು.KanCCh 283.1

    ಆರೋಗ್ಯಕರವಾದ ಪ್ರಾಣಿಗಳನ್ನು ಮಾತ್ರ ಇಸ್ರಾಯೇಲ್ಯರು ತಿನ್ನಬೇಕಾಗಿತ್ತು. ತಾನಾಗಿಸತ್ತುಬಿದ್ದಿರುವ, ಇತರ ಪ್ರಾಣಿಗಳಿಂದ ಕೊಲ್ಲಲ್ಪಟ್ಟ ಅಥವಾ ಸಂಪೂರ್ಣವಾಗಿ ರಕ್ತವನ್ನುಹೊರಚೆಲ್ಲಿರದ ಪ್ರಾಣಿಗಳನ್ನು ಆಹಾರವಾಗಿ ಉಪಯೋಗಿಸಬಾರದಾಗಿತ್ತು. ಆಹಾರಸೇವನೆಯವಿಷಯದಲ್ಲಿ ದೇವರು ನೇಮಿಸಿದ ಕ್ರಮವನ್ನು ಇಸ್ರಾಯೇಲ್ಯರು ಬಿಟ್ಟ ಪರಿಣಾಮವಾಗಿಅವರು ಬಹಳ ಕಷ್ಟನಷ್ಟ ಅನುಭವಿಸಿದರು. ಅವರು ಮಾಂಸಾಹಾರ ಬಯಸಿದರುಹಾಗೂ ಅದರಿಂದಾದ ಕೆಟ್ಟ ಪರಿಣಾಮಗಳನ್ನು ಅನುಭವಿಸಬೇಕಾಯಿತು. ಅವರುದೇವರು ಬಯಸಿದ ಮಾದರಿ ಸ್ವಭಾವದ ಮಟ್ಟವನ್ನು ಮುಟ್ಟಲಿಲ್ಲ ಅಥವಾ ಆತನಉದ್ದೇಶ ನೆರವೇರಿಸಲಿಲ್ಲ. “ಆತನು ಅವರ ಆಶೆಯನ್ನು ಪೂರೈಸಿದರೂ, ಅವರ ಪ್ರಾಣಕ್ಕೆಕ್ಷಯವನ್ನು ಬರಮಾಡಿದನು” (ಕೀರ್ತನೆ 106:15). ಅವರು ಆತ್ಮೀಕ ವಿಷಯಗಳಿಗಿಂತಹೆಚ್ಚಾಗಿ ಲೌಕಿಕವಿಷಯದ ಬಗ್ಗೆ ಗಮನನೀಡಿದರು. ಇತರ ಜನಾಂಗಗಳಿಗಿಂತಇಸ್ರಾಯೇಲ್ಯರು ಸರ್ವಶ್ರೇಷ್ಠರಾಗಿರಬೇಕೆಂಬ ದೇವರ ಪರಿಶುದ್ಧ ಉದ್ದೇಶವನ್ನು ಅವರುಪೂರೈಸಲಿಲ್ಲ.KanCCh 283.2

    ಪ್ರಾಣಿಗಳು ತಮ್ಮ ಬೆಳವಣಿಗೆಗಾಗಿ ಸಸ್ಯಾಹಾರದ ಮೂಲಕ ಪೋಷಕಾಂಶಪಡೆದುಕೊಳ್ಳುತ್ತವೆ. ಇಂತಹ ಪ್ರಾಣಿಗಳ ಮಾಂಸ ತಿನ್ನುವವರು ಪರೋಕ್ಷವಾಗಿ ಹಳತಾದಧಾನ್ಯಗಳನ್ನು ಮತ್ತು ತರಕಾರಿಗಳನ್ನು ತಿನ್ನುತ್ತಾರೆ. ಇವುಗಳಲ್ಲಿರುವ ಜೀವಾಧಾರವುಮಾಂಸಾಹಾರದ ಮೂಲಕ ತಿನ್ನುವವರಿಗೆಬರುತ್ತದೆ. ಅದಕ್ಕೆ ಬದಲಾಗಿ ದೇವರುನಮಗಾಗಿ ಕೊಟ್ಟಿರುವ ಸಸ್ಯಾಹಾರವನ್ನು ನೇರವಾಗಿ ತಿನ್ನುವುದು ಎಷ್ಟೋ ಒಳ್ಳೆಯದಲ್ಲವೇ!KanCCh 283.3

    Larger font
    Smaller font
    Copy
    Print
    Contents