Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ರಾಷ್ಟ್ರೀಯತೆಗೆ ಕ್ರಿಸ್ತನ ಸಂಬಂಧ

    ಜಾತಿ, ಜನಾಂಗ, ಕುಲ, ಭಾಷೆ, ದೇಶಗಳ ಬಗ್ಗೆ ಕ್ರಿಸ್ತನು ಯಾವುದೇ ವ್ಯತ್ಯಾಸತೋರಿಸುವುದಿಲ್ಲ. ಶಾಸ್ತ್ರಿಗಳು ಹಾಗೂ ಫರಿಸಾಯರು ಪರಲೋಕದ ಎಲ್ಲಾ ಆಶೀರ್ವಾದಗಳುತಮ್ಮ ದೇಶಕ್ಕೆ ಮಾತ್ರ ಬರಬೇಕೆಂದು ಇಚ್ಛಿಸಿ, ಜಗತ್ತಿನಲ್ಲಿರುವ ದೇವರ ಕುಟುಂಬಕ್ಕೆ ಸೇರಿದ ಇತರ ಕುಟುಂಬಗಳನ್ನು ಅದರಲ್ಲಿ ಸೇರಿಸಬಾರದೆಂದು ಉದ್ದೇಶಿಸಿದ್ದರು. ಆದರೆಕ್ರಿಸ್ತನು ಇಂತಹ ಭಿನ್ನಭೇದಗಳನ್ನು ತೆಗೆದುಹಾಕಲು ಈ ಲೋಕಕ್ಕೆ ಮನುಷ್ಯನಾಗಿಬಂದನು. ತನ್ನ ಕರುಣೆ, ಪ್ರೀತಿಯೆಂಬ ವರಗಳು ಗಾಳಿ, ಬೆಳಕು ಹಾಗೂ ಭೂಮಿಗೆಚೈತನ್ಯನೀಡಿ ತಂಪುಗೊಳಿಸುವ ಮಳೆಯಂತೆ ಯಾವುದೇ ಮಿತಿ ಇಲ್ಲವೆಂದು ತೋರಿಸಲುಕ್ರಿಸ್ತನು ಈ ಜಗತ್ತಿಗೆ ಬಂದನು.KanCCh 365.2

    ಕ್ರಿಸ್ತನ ಜೀವನವು ಯಾವುದೇ ಜಾತಿಯಿಲ್ಲದ ಧರ್ಮವನ್ನು ಸ್ಥಾಪಿಸಿತು. ಈ ಧರ್ಮದಲ್ಲಿಯೆಹೂದ್ಯರು, ಗ್ರೀಕರು ಅಥವಾ ಅನ್ಯರು ಸ್ವತಂತ್ರರು ಮತ್ತು ದಾಸರು ಎಂಬ ಭೇದವಿಲ್ಲದೆ,ಎಲ್ಲರೂ ಸೋದರರಾಗಿದ್ದು, ದೇವರ ಮುಂದೆ ಸರಿಸಮಾನರಾಗಿದ್ದಾರೆ. ಕ್ರಿಸ್ತನು ನೆರೆಯವರುಮತ್ತು ಅಪರಿಚಿತರು ಇಲ್ಲವೆ ಸ್ನೇಹಿತರು ಮತ್ತು ವೈರಿಗಳು ಎಂಬ ಯಾವುದೇವ್ಯತ್ಯಾಸಮಾಡಲಿಲ್ಲ.ಜೀವಜಲಕ್ಕಾಗಿ ಬಾಯಾರಿದವರು ಮಾತ್ರ ಆತನ ಹೃದಯಕ್ಕೆಪ್ರಿಯರಾಗುತ್ತಿದ್ದರು.KanCCh 366.1

    ಕ್ರಿಸ್ತನು ಯಾರನ್ನೂ ಸಹ ಅಯೋಗ್ಯರೆಂದು ತಳ್ಳಿಬಿಡಲಿಲ್ಲ. ಬದಲಾಗಿ ಅವರಮನಸ್ಸನ್ನು ಸಮಾಧಾನಗೊಳಿಸಿ, ಪರಿಹಾರ ನೀಡಲು ಪ್ರಯತ್ನಿಸಿದನು. ಆತನ ಪ್ರತಿಯೊಂದುಸಂದೇಶವೂ ಆಯಾ ಸಮಯ ಹಾಗೂ ಸಂದರ್ಭಕ್ಕೆ ಅನುಗುಣವಾಗಿತ್ತು. ನಾವುಇತರರನ್ನು ಅಲಕ್ಷ ಮಾಡಿದಾಗ ಅಥವಾ ಅವಮಾನಿಸಿದಾಗ, ಅಂತವರಿಗೆ ತನ್ನ ದೈವೀಕಹಾಗೂ ಮಾನವ ಅನುಕಂಪ, ಕರುಣೆಯ ಅಗತ್ಯ ಹೆಚ್ಚಾಗಿದೆ ಎಂದು ಕ್ರಿಸ್ತನು ತಿಳಿಯುತ್ತಾನೆ.ಕಠಿಣ ಹೃದಯಿಗಳು ಹಾಗೂ ಅತ್ಯಂತ ನಿರಾಶದಾಯಕರಾದವರುಕಳಂಕರಹಿತರಾಗಬಹುದೆಂಬ ಭರವಸೆ ಮತ್ತು ನಿರೀಕ್ಷೆಯಿಂದ ಆತನು ಅವರನ್ನುKanCCh 366.2

    ಉತ್ತೇಜಿಸುತ್ತಾನೆ. ಇದರಿಂದ ಅವರು ದೇವರಮಕ್ಕಳಾಗುವಂತೆ ಕ್ರಿಸ್ತನ ಸ್ವಭಾವವನ್ನುಹೊಂದಿಕೊಳ್ಳಬಹುದು.KanCCh 366.3

    ದೇವರಮಕ್ಕಳು ಕ್ರಿಸ್ತನಲ್ಲಿ ಒಂದಾಗಿರುವುದರಿಂದ, ಆತನು ಜಾತಿ, ಧರ್ಮ, ಬಣ್ಣ,ಜನಾಂಗ, ಕುಲ, ಭಾಷೆ, ಅಧಿಕಾರ, ಅಂತಸ್ತು- ಇವುಗಳಲ್ಲಿ ಹೇಗೆ ವ್ಯತ್ಯಾಸ ಮಾಡುತ್ತಾನೆ?ಕ್ರಿಸ್ತನಲ್ಲಿ ವಿಶ್ವಾಸಿಗಳು ಸರಿಸಮಾನರಾಗಿರುವುದೇ ಐಕ್ಯತೆಯ ರಹಸ್ಯವಾಗಿದೆ.KanCCh 366.4