Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ಅಧ್ಯಾಯ-5 — ಕ್ರಿಸ್ತನು ನಮ್ಮ ನೀತಿಯಾಗಿದ್ದಾನೆ

    “ನಮ್ಮ ಪಾಪಗಳನ್ನು ಒಪ್ಪಿಕೊಂಡು ಅರಿಕೆ ಮಾಡಿದರೆ, ಆತನು ನಂಬಿಗಸ್ತನೂ ನೀತಿವಂತನೂ ಆಗಿರುವುದರಿಂದ ನಮ್ಮ ಪಾಪಗಳನ್ನು ಕ್ಷಮಿಸಿಬಿಟ್ಟು ಸಕಲ ಅನೀತಿಯನ್ನು ಪರಿಹರಿಸಿ ನಮ್ಮನ್ನು ಶುದ್ಧಿಮಾಡುವನು” (1 ಯೋಹಾನನು 1:9).KanCCh 23.1

    ನಾವು ನಮ್ಮ ಪಾಪಗಳನ್ನು ಒಪ್ಪಿ ಅರಿಕೆಮಾಡಿಕೊಂಡು, ಆತನ ಮುಂದೆ ನಮ್ಮನ್ನು ದೀನಭಾವದಿಂದ ತಗ್ಗಿಸಿಕೊಳ್ಳಬೇಕೆಂದು ದೇವರು ಬಯಸುತ್ತಾನೆ. ಆದರೆ ಅದೇ ಸಮಯದಲ್ಲಿ ದೇವರು ಕರುಣೆಯುಳ್ಳ ತಂದೆಯಾಗಿದ್ದು, ತನ್ನಲ್ಲಿ ಭರವಸೆಯಿಟ್ಟವರನ್ನು ಆತನು ಎಂದಿಗೂ ತಳ್ಳಿಬಿಡುವುದಿಲ್ಲವೆಂಬ ವಿಶ್ವಾಸ ನಮ್ಮಲ್ಲಿರಬೇಕು. ನಮ್ಮಲ್ಲಿ ಅನೇಕರು ಕಣ್ಣಿಗೆ ಸರಿಬೀಳುವಂತೆ ನಡೆಯುತ್ತಾರೆಯೇ ಹೊರತು, ನಂಬಿಕೆಯಿಂದ ನಡೆಯುವುದಿಲ್ಲ. ನಾವು ಕಣ್ಣಿಗೆ ಕಾಣುವಂತವುಗಳನ್ನು ನಂಬುತ್ತೇವೆ. ಆದರೆ ಸತ್ಯವೇದದಲ್ಲಿ ಕೊಟ್ಟಿರುವ ಅಮೂಲ್ಯವಾದ ವಾಗ್ದಾನಗಳ ಮೇಲೆ ವಿಶ್ವಾಸವಿಡುವುದಿಲ್ಲ. ದೇವರಲ್ಲಿ ಅಪನಂಬಿಕೆ ಇಟ್ಟು, ಆತನು ಮನಃಪೂರ್ವಕವಾಗಿ ನಮ್ಮೊಂದಿಗಿದ್ದಾನೆಯೇ ಅಥವಾ ನಮ್ಮನ್ನು ಮೋಸಗೊಳಿಸುತ್ತಿದ್ದಾನೆಯೋ ಎಂದು ಸಂದೇಹಪಟ್ಟು ಆತನನ್ನು ಪ್ರಶ್ನಿಸುವುದರ ಮೂಲಕ ದೇವರನ್ನು ಅಗೌರವಿಸುತ್ತೇವೆ.KanCCh 23.2

    ನಮ್ಮ ಪಾಪಗಳ ನಿಮಿತ್ತ ದೇವರು ನಮ್ಮನ್ನು ಕೈಬಿಡುವುದಿಲ್ಲ. ನಾವು ಪಾಪಮಾಡಿ ದೇವರಾತ್ಮನನ್ನು ದುಃಖಪಡಿಸಿದರೂ, ಪಾಪಗಳಿಗೆ ಪಶ್ಚಾತ್ತಾಪಪಟ್ಟು ಕುಗ್ಗಿದ ಹೃದಯದಿಂದ ಆತನ ಬಳಿಗೆ ಬಂದಾಗ, ಆತನು ನಮ್ಮನ್ನು ನಿರಾಕರಿಸುವುದಿಲ್ಲ. ಅನೇಕ ಅಡೆತಡೆಗಳನ್ನು ತೆಗೆದುಹಾಕಬೇಕಾಗಿದೆ. ಅಹಂಕಾರ, ದುರಭಿಮಾನ, ತಾಳ್ಮೆಯಿಲ್ಲದಿರುವುದು ಮತ್ತು ಗುಣಗುಟ್ಟುವುದು ಮೊದಲಾದ ಕೆಟ್ಟ ಭಾವನೆಗಳು ನಮ್ಮಲ್ಲಿವೆ. ಇವೆಲ್ಲವೂ ನಮ್ಮನ್ನು ದೇವರಿಂದ ಬೇರ್ಪಡಿಸುತ್ತವೆ. ನಮ್ಮ ಪಾಪಗಳನ್ನು ಒಪ್ಪಿ ಅರಿಕೆಮಾಡಬೇಕು ಮತ್ತು ಹೃದಯದಲ್ಲಿ ಕೃಪೆಯು ಬಹಳವಾಗಿ ಕಾರ್ಯ ಮಾಡಬೇಕು. ತಮ್ಮನ್ನು ಬಲಹೀನರೂ ಮತ್ತು ನಿರಾಶೆಗೊಳಗಾದವರೆಂದು ತಿಳುಕೊಂಡಿರುವವರು ದೇವರಲ್ಲಿ ಬಲಹೊಂದಿ, ಒಡೆಯನಿಗಾಗಿ ಉನ್ನತ ಕಾರ್ಯಮಾಡುವರು. ಆದರೆ ಅವರ ಉದ್ದೇಶವು ಉನ್ನತವಾಗಿರಬೇಕು ಹಾಗೂ ಅವರು ನಿಸ್ವಾರ್ಥಿಗಳಾಗಿರಬೇಕು.KanCCh 23.3

    ಕ್ರಿಸ್ತನು ನಮಗೆ ಮಾದರಿಯಾಗಿರಬೇಕು ಹಾಗೂ ಆತನಿಂದ ನಾವು ಕಲಿಯಬೇಕು. ಕೃಪೆಯ ಒಡಂಬಡಿಕೆಯ ಆಶೀರ್ವಾದವು ಆತನ ನೀತಿಯಿಂದ ಮಾತ್ರ ನಮಗೆ ದೊರೆಯುತ್ತದೆ. ಈ ಆಶೀರ್ವಾದಗಳನ್ನು ಪಡೆದುಕೊಳ್ಳಬೇಕೆಂದು ನಾವು ಬಹುಕಾಲದಿಂದ ಬಯಸಿ ಪ್ರಯತ್ನಪಟ್ಟರೂ, ಅವುಗಳನ್ನು ಪಡೆದುಕೊಳ್ಳಲು ಯೋಗ್ಯರಾಗುವಂತೆ ನಾವು ಏನಾದರೂ ಮಾಡಬಹುದೆಂಬ ಅಭಿಪ್ರಾಯ ನಮ್ಮಲ್ಲಿರುವುದರಿಂದ ಈ ಆಶೀರ್ವಾದಗಳನ್ನು ಇನ್ನೂ ಹೊಂದಿಕೊಳ್ಳಲಾಗಿಲ್ಲ. ಯೇಸುಕ್ರಿಸ್ತನು ಸದಾಕಾಲವೂ ಜೀವಿಸುವ ರಕ್ಷಕನೆಂದು ನಾವು ನಂಬದೆ, ನಮ್ಮನ್ನು ನಾವೇ ಯೋಗ್ಯರೆಂದೆಣಿಸಿಕೊಳ್ಳುತ್ತಿದ್ದೇವೆ. ನಮ್ಮದೇ ಆದ ಕೃಪೆ ಮತ್ತು ಒಳ್ಳೆಯ ಕಾರ್ಯಗಳು ನಮ್ಮನ್ನು ರಕ್ಷಿಸುತ್ತವೆಂದು ನಾವು ತಿಳಿದುಕೊಳ್ಳಬಾರದು. ಕ್ರಿಸ್ತನ ಕೃಪೆಯುಮಾತ್ರ ನಮ್ಮ ರಕ್ಷಣೆಯ ಏಕೈಕ ನಿರೀಕ್ಷೆಯಾಗಿದೆ. “ಕೆಡುಕನು ತನ್ನ ದುರಾಲೋಚನೆಗಳನ್ನು ತ್ಯಜಿಸಲಿ; ಯೆಹೋವನ ಕಡೆಗೆ ತಿರುಗಿಕೊಂಡು ಬರಲಿ, ಆತನು ಅವನನ್ನು ಕರುಣಿಸುವನು; ನಮ್ಮ ದೇವರನ್ನು ಆಶ್ರಯಿಸಲಿ, ಆತನು ಮಹಾಕೃಪೆಯಿಂದ ಕ್ಷಮಿಸುವನು” ಎಂದು ಕರ್ತನಾದ ಯೆಹೋವನು ತನ್ನ ಪ್ರವಾದಿಯ ಮೂಲಕ ವಾಗ್ದಾನ ಮಾಡಿದ್ದಾನೆ (ಯೆಶಾಯ 55:7). ಈ ವಾಗ್ದಾನವನ್ನು ನಾವು ನಂಬಬೇಕು. ದೇವರ ಮೇಲೆ ಸಂಪೂರ್ಣವಾಗಿ ಭರವಸೆಯಿಟ್ಟಾಗ ಹಾಗೂ ಕ್ರಿಸ್ತನು ಪಾಪಗಳನ್ನು ಕ್ಷಮಿಸುವ ರಕ್ಷಕನೆಂದು ಆತನ ಮೇಲೆ ಆತುಕೊಂಡಾಗ, ನಾವು ಬಯಸುವ ಎಲ್ಲಾ ಸಹಾಯಗಳು ನಮಗೆ ದೊರೆಯುತ್ತವೆ.KanCCh 23.4

    ನಮ್ಮನ್ನು ರಕ್ಷಿಸಿಕೊಳ್ಳುವ ಸಾಮರ್ಥ್ಯವು ನಮ್ಮಲ್ಲಿಯೇ ಇದೆ ಎಂಬಂತೆ, ನಾವು ನಮ್ಮಲ್ಲಿಯೇ ಭರವಸೆ ಹೊಂದಿದ್ದೇವೆ. ಆದರೆ ಇದನ್ನು ಮಾಡಲು ನಾವುಅಸಹಾಯಕರಾಗಿದ್ದರಿಂದಲೇ, ಕ್ರಿಸ್ತನು ನಮಗಾಗಿ ತನ್ನ ಪ್ರಾಣಕೊಟ್ಟನು. ಆತನಲ್ಲಿಯೇಪಾಪಪರಿಹಾರ ಉಂಟಾಗುತ್ತದೆ ಹಾಗೂ ಆತನು ನಮ್ಮ ನೀತಿಯೂ, ನಿರೀಕ್ಷೆಯೂಆಗಿದ್ದಾನೆ. ನಮಗೆ ಯಾವ ರಕ್ಷಕನೂ ಇಲ್ಲವೆಂದು ನಾವು ಭಯಪಡಬಾರದು ಅಥವಾಹತಾಶೆಗೊಳ್ಳಬಾರದು. ಇದೇ ಸಮಯದಲ್ಲಿ ನಮ್ಮ ಪರವಾಗಿ ಕ್ರಿಸ್ತನು ತನ್ನಸೇವೆಮಾಡುತ್ತಿದ್ದಾನೆ ಹಾಗೂ ಅಸಹಾಯಕರಾದ ನಾವು ಆತನ ಬಳಿಗೆ ಬಂದು ರಕ್ಷಣೆಹೊಂದಿಕೊಳ್ಳಬೇಕೆಂದು ಆಹ್ವಾನಿಸುತ್ತಿದ್ದಾನೆ. ನಮ್ಮ ಅಪನಂಬಿಕೆಯಿಂದ ನಾವು ದೇವರನ್ನುಅಗೌರವಿಸುತ್ತೇವೆ. ನಮ್ಮ ಅತ್ಯಂತ ಆತ್ಮೀಯ ಸ್ನೇಹಿತನಾದ ಕ್ರಿಸ್ತನನ್ನು ನಾವು ಹೇಗೆಕಾಣುತ್ತೇವೆಂಬುದು ವಿಸ್ಮಯ ಉಂಟುಮಾಡುತ್ತದೆ. ತನ್ನ ಮಹಾಪ್ರೀತಿಯ ಬಗ್ಗೆ ಸಾಕ್ಷ್ಯಾಧಾರನೀಡಿದವನು ಹಾಗೂ ನಮ್ಮನ್ನು ಪರಿಪೂರ್ಣವಾಗಿ ರಕ್ಷಿಸುವವನೂ ಆದ ಕ್ರಿಸ್ತನಲ್ಲಿನಾವು ಇಷ್ಟೊಂದು ಕಡಿಮೆ ಭರವಸೆ ಇಟ್ಟಿರುವುದು ಆಶ್ಚರ್ಯವಲ್ಲವೇ!KanCCh 24.1

    ನಮ್ಮ ಒಳ್ಳೆಯ ಕಾರ್ಯಗಳು ನಮ್ಮನ್ನು ದೇವರ ದಯೆಗೆ ಪಾತ್ರರಾಗುವಂತೆಮಾಡುತ್ತವೆಂದು ನೀವು ನಿರೀಕ್ಷಿಸುತ್ತಿರುವಿರಾ? ನಮ್ಮನ್ನು ರಕ್ಷಿಸಬಲ್ಲ ಕರ್ತನ ಸಾಮಥ್ರ್ಯದಲ್ಲಿವಿಶ್ವಾವಿಡುವುದಕ್ಕಿಂತ ಮೊದಲು ನಾವು ಪಾಪದಿಂದ ಬಿಡುಗಡೆ ಹೊಂದಿರಬೇಕೆಂದುನೀವು ಯೋಚಿಸುತ್ತಿರುವಿರಾ? ಇಂತಹ ಹೋರಾಟವು ನಿಮ್ಮ ಮನಸ್ಸಿನಲ್ಲಿ ಉಂಟಾಗುತ್ತಿದ್ದಲ್ಲಿ,ನಾವು ಯಾವುದೇ ಆತ್ಮೀಕ ಬಲ ಹೊಂದದೆ, ಅಂತಿಮವಾಗಿ ನಿರಾಶೆಗೊಳ್ಳುತ್ತೇವೆ.KanCCh 24.2

    ಅರಣ್ಯದಲ್ಲಿ ತನ್ನ ವಿರುದ್ಧ ದಂಗೆಯೆದ್ದ ಇಸ್ರಾಯೇಲ್ಯರನ್ನು ವಿಷಕಾರಕ ಸರ್ಪಗಳು ಕಚ್ಚುವಂತೆ ದೇವರು ಅನುಮತಿನೀಡಿದನು. ಆದರೆ ದೇವರು ಮೋಶೆಗೆ ತಾಮ್ರದ ಒಂದು ಸರ್ಪವನ್ನು ಮಾಡಿ ಧ್ವಜಸ್ಥಂಭದ ಮೇಲೆ ಎತ್ತಿ ನಿಲ್ಲಿಸುವಂತೆಯೂ, ಸರ್ಪಗಳಿಂದ ಗಾಯಪಟ್ಟವರು ಅದನ್ನು ನೋಡಿ ಬದುಕಿ ಕೊಳ್ಳುವರೆಂದೂ ಆದೇಶಿಸಿದನು. ಆದರೆ ಅನೇಕರು ಪರಲೋಕದಿಂದ ಬಂದ ಈ ಆಜ್ಞೆಯನ್ನು ನಿರಾಕರಿಸಿದರು. ಸರ್ಪಗಳಿಂದ ಕಚ್ಚಿಸಲ್ಪಟ್ಟವರು ಎಲ್ಲೆಲ್ಲಿಯೂ ಸಾಯುತ್ತಿದ್ದರು. ದೈವೀಕ ಸಹಾಯವಿಲ್ಲದೆ ತಮಗೆ ಸಾವು ಖಂಡಿತವೆಂದು ಅವರು ತಿಳಿದಿದ್ದರು. ಆದರೆ ಅನೇಕರು ತಕ್ಷಣದಲ್ಲಿ ತಮ್ಮನ್ನು ವಿಷದ ಬಾಧೆಯಿಂದ ಗುಣಪಡಿಸುವ ತಾಮ್ರದ ಸರ್ಪವನ್ನು ದೃಷ್ಟಿಸುವ ಬದಲಾಗಿ, ತಮ್ಮ ಗಾಯ, ನೋವುಗಳಿಂದ ತಮ್ಮ ಸಾವು ನಿಶ್ಚಿತವೆಂದು ನರಳುತ್ತಿದ್ದರು. KanCCh 24.3

    “ಇದಲ್ಲದೆ ಜನರು ನೋಡಿ ಜೀವದಿಂದುಳಿಯಬೇಕೆಂದು ಮೋಶೆಯು ಅಡವಿಯಲ್ಲಿಆ ಸರ್ಪವನ್ನು ಎತ್ತರದಲ್ಲಿಟ್ಟ ಹಾಗೆಯೇ, ಮನುಷ್ಯಕುಮಾರನು ತನ್ನನ್ನು ನಂಬುವವರೆಲ್ಲರೂನಿತ್ಯಜೀವವನ್ನು ಪಡೆಯಬೇಕೆಂದು ಎತ್ತರದಲ್ಲಿಡಲ್ಪಡಬೇಕು” (ಯೋಹಾನ 3:14, 15).ನಿಮ್ಮ ಪಾಪಗಳ ಬಗ್ಗೆ ನಿಮಗೆ ಅರಿವಿದ್ದಲ್ಲಿ, ಅವುಗಳ ಬಗ್ಗೆಯೇ ಚಿಂತಿಸುತ್ತಾದುಃಖಪಡಬಾರದು. ಬದಲಾಗಿ ಕ್ರಿಸ್ತನನ್ನು ದೃಷ್ಟಿಸಿ ನೋಡಿ. ಆಗ ನೀವು ಬದುಕುವಿರಿ.ಕ್ರಿಸ್ತನೊಬ್ಬನೇ ನಮ್ಮ ರಕ್ಷಕನು. ಕೋಟ್ಯಾಂತರ ಜನರು ಪಾಪದಿಂದಬಿಡುಗಡೆಯಾಗಬೇಕಿದ್ದರೂ, ಆತನು ಕೊಡುವ ಕರುಣೆಯನ್ನು ತಿರಸ್ಕರಿಸುವರು. ಆದಾಗ್ಯೂಕ್ರಿಸ್ತನಲ್ಲಿ ಭರವಸವಿಟ್ಟ ಯಾರೂ ಸಹ ಎಂದಿಗೂ ನಾಶವಾಗುವುದಿಲ್ಲ. ಕ್ರಿಸ್ತನಿಲ್ಲದೆ ನಾವುಅಸಹಾಯಕರೆಂದು ತಿಳಿದುಕೊಂಡರೂ, ನಾವು ನಿರಾಶರಾಗಬಾರದು. ಶಿಲುಬೆಗೇರಿಸಲ್ಪಟ್ಟುಮೂರನೇ ದಿನದಲ್ಲಿ ಪುನರುತ್ಥಾನಗೊಂಡ ರಕ್ಷಕನ ಮೇಲೆ ನಾವು ಆತುಕೊಳ್ಳಬೇಕು.ತನ್ನ ಬಳಿಗೆ ಬರುವವರೆಲ್ಲರನ್ನೂ ರಕ್ಷಿಸುವೆನೆಂದು ಯೇಸುಕ್ರಿಸ್ತನು ವಾಗ್ದಾನ ಮಾಡಿದ್ದಾನೆ.KanCCh 25.1

    ಕ್ರಿಸ್ತನ ಬಳಿಗೆಬಂದು ಸಮಾಧಾನ ಹಾಗೂ ವಿಶ್ರಾಂತಿ ಹೊಂದಿಕೊಳ್ಳಿ. ಈಗಲೂ ಸಹಈ ಆಶೀರ್ವಾದವನ್ನು ನೀವು ಪಡೆಯಬಹುದು. ನಿಮಗೆ ಯಾವುದೇ ಭರವಸವಿಲ್ಲ.ನೀವು ನಿಸ್ಸಹಾಯಕರೆಂದು ಸೈತಾನನು ನಿಮ್ಮಲ್ಲಿ ನಿರಾಶೆ ಹುಟ್ಟಿಸಬಹುದು. ನಾವುಅಸಹಾಯಕರೆಂಬುದು ನಿಜ; ಆದರೆ ಸೈತಾನನ ಮುಂದೆ ಕ್ರಿಸ್ತನನ್ನು ಮೇಲೆತ್ತಿ ಹಿಡಿಯಿರಿ.“ಸಮಾಧಿಯಿಂದ ಎದ್ದು ಬಂದ ರಕ್ಷಕನು ನನಗಿದ್ದಾನೆ; ಆತನಲ್ಲಿ ನಾನು ಭರವಸಹೊಂದಿದ್ದೇನೆ,ಆತನು ನನ್ನನ್ನು ಎಂದಿಗೂ ಕೈಬಿಡುವುದಿಲ್ಲ. ರಕ್ಷಕನಾದಕ್ರಿಸ್ತನ ಹೆಸರಿನಲ್ಲಿ ನಾನುಜಯಹೊಂದುವೆನು. ಆತನೇ ನನ್ನ ನೀತಿಯೂ ಹಾಗೂ ಸಂತೋಷದ ಕಿರೀಟವೂಆಗಿದ್ದಾನೆ” ಎಂದು ಸೈತಾನನ ಮುಂದೆ ಧೈರ್ಯವಾಗಿ ಹೇಳಿರಿ. ನನ್ನ ಪರಿಸ್ಥಿತಿ ಬಹಳನಿರಾಶಾದಾಯಕವೆಂದು ಯಾರೂ ಭಾವಿಸಬಾರದು. ನಾವು ಪಾಪಿಗಳಾಗಿರುವುದರಿಂದಲೇ,ರಕ್ಷಕನ ಅಗತ್ಯ ನಮಗಿದೆ. ಈ ಕ್ಷಣದಲ್ಲಿಯೇ ನಿಮ್ಮ ಪಾಪಗಳನ್ನು ಆತನ ಮುಂದೆಒಪ್ಪಿಕೊಂಡು ಅರಿಕೆಮಾಡಿ. ಇದೇ ಸುಪ್ರಸನ್ನ ಕಾಲ. “ನಮ್ಮ ಪಾಪಗಳನ್ನು ಒಪ್ಪಿಕೊಂಡುಅರಿಕೆ ಮಾಡಿದರೆ, ಆತನು ನಂಬಿಗಸ್ತನೂ, ನೀತಿವಂತನೂ ಆಗಿರುವುದರಿಂದ ನಮ್ಮಪಾಪಗಳನ್ನು ಕ್ಷಮಿಸಿಬಿಟ್ಟು, ಸಕಲ ಅನೀತಿಯನ್ನು ಪರಿಹರಿಸಿ ನಮ್ಮನ್ನು ಶುದ್ಧ ಮಾಡುವನು” (1 ಯೋಹಾನನು 1:9). ದೇವರ ನೀತಿಗಾಗಿ ಹಸಿದು ಬಾಯಾರಿದವರು ತೃಪ್ತಿ ಹೊಂದುವರೆಂದು ಕ್ರಿಸ್ತನು ವಾಗ್ದಾನ ಮಾಡಿದ್ದಾನೆ. ಎಂತಹ ಅಮೂಲ್ಯ ರಕ್ಷಕನು ನಮಗಿದ್ದಾನೆ! ನಮ್ಮನ್ನು ಅಂಗೀಕರಿಸಲು ಆತನು ಸಿದ್ಧನಿದ್ದಾನೆ ಹಾಗೂ ಪ್ರೀತಿ ಸ್ವರೂಪನಾದ ಆತನು ನಮ್ಮನ್ನು ಆಶೀರ್ವದಿಸಲು ಕಾದುಕೊಂಡಿದ್ದಾನೆ.KanCCh 25.2

    ದೇವರ ಆಶೀರ್ವಾದವನ್ನು ಪಡೆದುಕೊಳ್ಳಲು ನಮ್ಮಲ್ಲಿ ಮೊದಲು ಸುಧಾರಣೆ ಕಂಡು ಬರಬೇಕೆಂದು ಕೆಲವರು ಭಾವಿಸಬಹುದು. ಆದರೆ ನೀವು ಈಗಲೇ ಆತನ ಆಶೀರ್ವಾದವನ್ನು ಪಡೆದುಕೊಳ್ಳಬಹುದು. ನಿಮ್ಮೆಲ್ಲಾ ದೋಷಾಪರಾಧಗಳನ್ನು ಹೋಗಲಾಡಿಸಲು ಕ್ರಿಸ್ತನ ಕೃಪೆಯ ಅಗತ್ಯವಿದೆ. ಇಲ್ಲದಿದ್ದಲ್ಲಿ ನಾವು ಕ್ರಿಸ್ತನ ಗುಣಸ್ವಭಾವ ಹೊಂದಿಕೊಳ್ಳಲಾಗದು. ನಾವು ಇದ್ದ ಹಾಗೆಯೇ ಅಂದರೆ ನಿಸ್ಸಹಾಯಕರೂ, ಪಾಪಿಗಳೂ ಆಗಿರುವಾಗಲೇ ತನ್ನ ಬಳಿಗೆ ಬರಬೇಕೆಂದು ದೇವರು ಬಯಸುತ್ತಾನೆ.KanCCh 26.1

    ಪಶ್ಚಾತ್ತಾಪ ಹಾಗೂ ಪಾಪಕ್ಷಮೆ- ಇವೆರಡೂ ಸಹ ಕ್ರಿಸ್ತನ ಮೂಲಕ ದೇವರು ಕೊಡುವ ವರವಾಗಿದೆ. ಪರಿಶುದ್ಧಾತ್ಮನ ಪ್ರಭಾವದ ಕಾರಣದಿಂದ ನಾವು ಪಾಪಿಗಳೆಂಬ ಮನವರಿಕೆ ಹೊಂದಿ, ಕ್ಷಮೆಯ ಅಗತ್ಯವಿದೆ ಎಂದು ತಿಳಿದುಕೊಳ್ಳುತ್ತೇವೆ. ಪಶ್ಚಾತ್ತಾಪ ಪಟ್ಟವರು ಮಾತ್ರ ಕ್ಷಮೆ ಹೊಂದುವರು. ಆದರೆ ದೇವರ ಕೃಪೆಯು ಮಾತ್ರ ಹೃದಯದಲ್ಲಿ ಪಶ್ಚಾತ್ತಾಪ ಉಂಟು ಮಾಡುತ್ತದೆ. ನಮ್ಮೆಲ್ಲಾ ಬಲಹೀನತೆಗಳು. ಆತನಿಗೆ ತಿಳಿದಿವೆ ಹಾಗೂ ಆತನು ನಮಗೆ ಸಹಾಯ ಮಾಡುತ್ತಾನೆ.KanCCh 26.2

    ಕೆಲವರು ದೇವರಬಳಿಗೆ ಬಂದು ತಮ್ಮ ಪಾಪಗಳಿಗೆ ಪಶ್ಚಾತ್ತಾಪ ಪಟ್ಟು ಅವುಗಳನ್ನು ಒಪ್ಪಿ ಅರಿಕೆಮಾಡುವರು. ತಮ್ಮ ಪಾಪಿಗಳು ಕ್ಷಮಿಸಲ್ಪಟ್ಟಿವೆ ಎಂದು ಅವರು ನಂಬಬಹುದು. ಆದರೂ ದೇವರ ವಾಗ್ದಾನಗಳನ್ನು ಹೊಂದಿಕೊಳ್ಳಲು ಅವರು ವಿಫಲರಾಗಬಹುದು. ಯೇಸುಕ್ರಿಸ್ತನು ಸದಾಕಾಲವೂ ಇರುವ ರಕ್ಷಕನೆಂದು ನಂಬದೆ, ಆತನಲ್ಲಿ ಸಂಪೂರ್ಣ ಭರವಸೆ ಇಡುವುದಕ್ಕೆ ಸಿದ್ಧರಾಗಿರುವುದಿಲ್ಲ. ತಾವು ದೇವರಿಗೆ ತಮ್ಮನ್ನು ಒಪ್ಪಿಸಿಕೊಟ್ಟಿದ್ದೇವೆಂದು ಅವರು ಭಾವಿಸಬಹುದು. ಆದರೆ ಅವರು ಹೆಚ್ಚಾಗಿ ತಮ್ಮ ಮೇಲೆಯೇ ಆತುಕೊಂಡಿರುತ್ತಾರೆ. ಭಾಗಶಃ ದೇವರಲ್ಲಿ ಮತ್ತು ಭಾಗಶಃ ತಮ್ಮಲ್ಲಿಯೇ ಭರವಸವಿಡುವ ನಿಷ್ಠಾವಂತರೂ ಇದ್ದಾರೆ. ಅಂತಹವರು ದೇವರ ಸಾಮಥ್ರ್ಯದಲ್ಲಿ ನಂಬಿಕೆ ಇಡುವುದಿಲ್ಲ. ಬದಲಾಗಿ ಶೋಧನೆಗಳಿಗೆ ವಿರುದ್ಧವಾಗಿ ಬಹಳ ಎಚ್ಚರಿಕೆಯುಳ್ಳವರಾಗಿದ್ದು, ದೇವರಿಂದ ಅಂಗೀಕರಿಸಲ್ಪಡಲು ನಿರ್ದಿಷ್ಟವಾದ ಕಾರ್ಯಗಳನ್ನು ಮಾಡುವುದರಲ್ಲಿ ನಿರತರಾಗಿರುತ್ತಾರೆ. ಇಂತಹ ವಿಧವಾದ ನಂಬಿಕೆಯಲ್ಲಿ ಜಯ ದೊರೆಯದು. ಅವರ ಶ್ರಮವು ವ್ಯರ್ಥ, ಅವರು ನಿರಂತರವಾಗಿ ಸೈತಾನನ ಬಂಧನದಲ್ಲಿರುವರು. ಕ್ರಿಸ್ತನ ಬಳಿಗೆ ತಮ್ಮ ಹೊರೆಯನ್ನು ತರುವವರೆಗೆ ಅವರಿಗೆ ವಿಶ್ರಾಂತಿ ದೊರೆಯದು. ನಿರಂತರವಾಗಿ ಜಾಗರೂಕರಾಗಿಯೂ ಮತ್ತೂ ಪ್ರೀತಿಯುಳ್ಳ ಭಕ್ತಿಯಿಂದಲೂ ನಡೆದುಕೊಳ್ಳುವುದು ಅಗತ್ಯ. ಆದರೆ ನಂಬಿಕೆಯ ಮೂಲಕ ದೇವರ ಸಾಮರ್ಥ್ಯದಲ್ಲಿ ನಾವು ಆತುಕೊಂಡಾಗ, ಅವೆಲ್ಲವೂ ಸಹಜವಾಗಿಯೇ ನಮ್ಮಲ್ಲಿ ಕಂಡುಬರುವವು. ದೇವರ ದಯೆ ಪಡೆದುಕೊಳ್ಳಲು ನಾವು ಖಂಡಿತವಾಗಿಯೂ ಏನೂ ಮಾಡಲು ಸಾಧ್ಯವಿಲ್ಲ. ನಮ್ಮಮೇಲೆ ಆಗಲಿ ಅಥವಾ ನಮ್ಮ ಒಳ್ಳೇ ಕ್ರಿಯೆಗಳ ಮೇಲಾಗಲಿ ನಾವು ಎಂದಿಗೂ, ಭರವಸವಿಡಬಾರದು. ಆದರೆ ಪಾಪಿಗಳಾದ ನಾವು ಕ್ರಿಸ್ತನ ಬಳಿಗೆ ಬಂದಾಗ, ಆತನ ದೈವೀಕಪ್ರೀತಿಯಲ್ಲಿ ವಿಶ್ರಾಂತಿ ದೊರೆಯುವುದು. ಶಿಲುಬೆಗೇರಿದ ರಕ್ಷಕನಮೇಲೆ ಸಂಪೂರ್ಣವಾಗಿ ವಿಶ್ವಾಸಹೊಂದಿರುವ ಪ್ರತಿಯೊಬ್ಬರನ್ನೂ ದೇವರು ಅಂಗೀಕರಿಸುವನು. ಆಗ ನಮ್ಮ ಹೃದಯದಲ್ಲಿ ಪ್ರೀತಿ ಉಕ್ಕಿ ಹರಿಯುವುದು. ಎಲ್ಲಾ ಹೊರೆಯೂ ಹಗುರವಾಗುವುದು, ಯಾಕೆಂದರೆ ಕ್ರಿಸ್ತನನೊಗವು ಹೌರವಾದದ್ದು. ಆಗ ನಮ್ಮಕರ್ತವ್ಯವು ಹರ್ಷದಾಯಕವೂ ಮತ್ತು ನಮ್ಮತ್ಯಾಗವು ಸಂತೋಷದಾಯಕವೂ ಆಗುವುದು. ಹಿಂದೆ ಅಂಧಕಾರದಲ್ಲಿದ್ದ ನಮ್ಮ ಮಾರ್ಗವು ಈಗ ಕ್ರಿಸ್ತನೆಂಬ ನೀತಿ ಸೂರ್ಯನ ಕಿರಣಗಳಿಂದ ಪ್ರಕಾಶಗೊಳ್ಳುವುದು. ಇದು ತಾನೇ ಕ್ರಿಸ್ತನು ಬೆಳಕಿನಲ್ಲಿ ನಡೆದಂತೆ ನಾವೂ ಸಹ ಬೆಳಕಿನಲ್ಲಿ ನಡೆಯುವ ಅನುಭವವಾಗಿದೆ. KanCCh 26.3

    *****

    Larger font
    Smaller font
    Copy
    Print
    Contents