Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಅಧ್ಯಾಯ-23 — ಕ್ರೈಸ್ತ ತಂದೆ ತಾಯಿಯರು

    ಕ್ರೈಸ್ತ ತಂದೆ-ತಾಯಿಯರಾದ ನೀವು ಮನೆಯಲ್ಲಿ ಪ್ರಾಮಾಣಿಕವಾಗಿ ನಿಮ್ಮ ಕರ್ತವ್ಯಗಳನ್ನು ಮಾಡಬೇಕು. ತಂದೆಯು ಕುಟುಂಬದ ಯೋಜಕನೂ ಹಾಗೂ ತಾಯಿ ಮನೆಯಲ್ಲಿ ದೇವರ ಸೇವೆ ಮಾಡುವವಳಾಗಿದ್ದು, ಮನೆಯ ಹೊರಗೂ ಸಹ ಒಳ್ಳೆಯದನ್ನು ಮಾಡುವ ರಾಯಭಾರಿಗಳಾಗಿದ್ದಾರೆ. ನಿಮ್ಮ ಸಾಮರ್ಥ್ಯ ಹೆಚ್ಚಿದಾಗ, ನೀವು ಸಭೆ ಹಾಗೂ ನೆರೆಹೊರೆಯಲ್ಲಿ ಸೇವೆ ಮಾಡಲು ಯೋಗ್ಯರಾಗುವಿರಿ. ನಿಮ್ಮ ಮಕ್ಕಳು ಹಾಗೂ ನೀವು ದೇವರೊಂದಿಗೆ ಒಂದಾದಾಗ, ನೀವೆಲ್ಲರೂ ದೇವರೊಂದಿಗೆ ಸಹ ಕೆಲಸಗಾರರಾಗುವಿರಿ.KanCCh 163.1