Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಉತ್ತರಿಸಲ್ಪಟ್ಟ ಪ್ರಾರ್ಥನೆಗೆ ಶರತ್ತುಗಳು

    ದೇವರ ವಾಕ್ಯಗಳಿಗೆ ವಿಧೇಯರಾಗಿ ಜೀವಿಸಿದಲ್ಲಿ ಮಾತ್ರ ಆತನ ವಾಗ್ದಾನಗಳನೆರವೇರುವಿಕೆಗಾಗಿನಾವು ಹಕ್ಕಿನಿಂದ ಕೇಳಿಕೊಳ್ಳಬಹುದು. ನಾನು ಕೆಟ್ಟತನದ ಮೇಲೆ ಮನಸ್ಸಿಟ್ಟಿದ್ದರೆ, ಸ್ವಾಮಿಯು ನನ್ನ ವಿಜ್ಞಾಪನೆಯನ್ನು ಕೇಳುತ್ತಿದ್ದಲ್ಲ” ಎಂದು ಕೀರ್ತನೆಗಾರನುಹೇಳುತ್ತಾನೆ (66:18). ನಾವು ದೇವರಿಗೆ ಭಾಗಶಃ ಅಥವಾ ಅಪನಂಬಿಕೆಯಿಂದವಿಧೇಯರಾದಲ್ಲಿ, ಆತನ ವಾಗ್ದಾನಗಳು ನಮ್ಮಲ್ಲಿ ನೆರವೇರುವುದಿಲ್ಲ.KanCCh 378.3

    ರೋಗಿಗಳು ಚೇತರಿಸಿಕೊಳ್ಳುವುದಕ್ಕಾಗಿ ಅವರಿಗೆ ವಿಶೇಷ ಪ್ರಾರ್ಥನೆ ಮಾಡಬೇಕೆಂದುಸತ್ಯವೇದವು ನಮಗೆ ತಿಳಿಸುತ್ತದೆ. ಇಂತಹ ಪ್ರಾರ್ಥನೆಗಳು ಬಹಳ ಗಂಭೀರವಾದಹಾಗೂ ಭಯಭಕ್ತಿಯುಳ್ಳ ಕಾರ್ಯವಾಗಿರುವುದರಿಂದ, ಬಹಳ ಎಚ್ಚರಿಕೆಯಿಂದ ಅದನ್ನುಮಾಡಬೇಕು. ಅನೇಕ ಸಂದರ್ಭಗಳಲ್ಲಿ ರೋಗಿಗಳಿಗಾಗಿಮಾಡುವ ಪ್ರಾರ್ಥನೆಯುಅತಿಯಾದ ಆತ್ಮವಿಶ್ವಾಸದ ಸೊಕ್ಕಿನ ಮಾತುಗಳಾಗಿರುತ್ತವೆಯೇ ಹೊರತು, ನಂಬಿಕೆಯಿಂದಕೂಡಿರುವುದಿಲ್ಲ.KanCCh 379.1

    ಕೆಲವರು ತಮ್ಮ ಮನಸ್ಸಿನ ಇಚ್ಛೆಯಂತೆ ನಡೆದು ಸುಖಭೋಗಾಸಕ್ತಿಯಲ್ಲಿ ತೊಡಗಿತಾವೇ ಸ್ವತಃ ರೋಗ ತಂದುಕೊಳ್ಳುತ್ತಾರೆ. ಅವರು ನಿಸರ್ಗದ ನಿಯಮದ ಪ್ರಕಾರಅಥವಾ ಶುದ್ಧತೆಯ ಸಿದ್ಧಾಂತಗಳಿಗೆ ಅನುಸಾರವಾಗಿ ನಡೆದಿರುವುದಿಲ್ಲ. ಬೇರೆ ಕೆಲವರುತಿನ್ನುವ, ಕುಡಿಯುವ, ಮಿತಿಮೀರಿ ಕೆಲಸ ಮಾಡುವುದರಿಂದ ಹಾಗೂ ವೇಷಭೂಷಣದಿಂದಆರೋಗ್ಯದ ನಿಯಮಗಳನ್ನು ಅಲಕ್ಷಿಸಿದ್ದಾರೆ. ಅನೇಕವೇಳೆ ಕೆಲವುರೀತಿಯ ಕೆಟ್ಟಸ್ವಭಾವವುಮನಸ್ಸು ಅಥವಾ ಶರೀರದ ದೌರ್ಬಲ್ಯಕ್ಕೆಕಾರಣವಾಗಿರುತ್ತದೆ. ಇಂತವರು ಒಂದುವೇಳೆತಮ್ಮ ಆರೋಗ್ಯವನ್ನು ತಿರುಗಿ ಪಡೆದುಕೊಂಡರೆ, ಅವರಲ್ಲಿ ಅನೇಕರು ದೇವರನೈಸರ್ಗಿಕಹಾಗೂ ದೈವೀಕನಿಯಮಗಳನ್ನು ಯಾವುದೇ ಸಂಕೋಚವಿಲ್ಲದೆ ಉಲ್ಲಂಘಿಸುತ್ತಾರೆ.ದೇವರು ತಮ್ಮ ಪ್ರಾರ್ಥನೆ ಕೇಳಿದ್ದರಿಂದಲೇ ತಮಗೆ ಗುಣವಾಯಿತೆಂದು ಹೇಳಿಕೊಳ್ಳುತ್ತಾ,ತಮ್ಮ ಅನಾರೋಗ್ಯಕರ ಜೀವನಶೈಲಿ ಮುಂದುವರಿಸಲು ತಾವು ಸ್ವತಂತ್ರರಾಗಿದ್ದೇವೆಂದುತಿಳಿದು ಯಾವುದೇ ಹಿಂಜರಿಕೆಯಿಲ್ಲದೆ ತಮ್ಮ ದುರಭ್ಯಾಸ ಮುಂದುವರೆಸುತ್ತಾರೆ. ಇಂತವರಿಗೆಆರೋಗ್ಯನೀಡಲು ದೇವರು ಅದ್ಭುತ ಮಾಡಿದಲ್ಲಿ, ಆತನೇ ಪಾಪವನ್ನುಉತ್ತೇಜಿಸಿದಂತಾಗುತ್ತದೆ.KanCCh 379.2

    ಜನರು ತಮ್ಮ ಅನಾರೋಗ್ಯಕರವಾದ ಕೆಟ್ಟಅಭ್ಯಾಸಗಳನ್ನು ಬಿಡದೆ, ದೇವರಲ್ಲಿಭರವಸವಿದ್ದಲ್ಲಿ ಸಾಕು, ನಿಮ್ಮ ಕುಂದುಕೊರತೆಗಳು, ರೋಗರುಜಿನಗಳು ಗುಣವಾಗುತ್ತದೆಂದುಬೋಧಿಸುವುದರಲ್ಲಿ ಯಾವ ಪ್ರಯೋಜನವೂ ಇಲ್ಲ. ತಮ್ಮ ಪ್ರಾರ್ಥನೆಗೆ ಉತ್ತರವಾಗಿಆತನ ಆಶೀರ್ವಾದ ಪಡೆದುಕೊಳ್ಳಬೇಕಾದಲ್ಲಿ, ಅವರು ಕೆಟ್ಟದ್ದನ್ನು ಬಿಟ್ಟು ಒಳ್ಳೆಯದನ್ನುಮಾಡಬೇಕು. ಅವರ ಸುತ್ತಮುತ್ತಲ ಪರಿಸರವು ನೈರ್ಮಲ್ಯವಾಗಿರಬೇಕಲ್ಲದೆ, ಜೀವನದಅಭ್ಯಾಸಗಳು ಒಳ್ಳೆಯದಾಗಿರಬೇಕು. ಅವರು ದೇವರ ನೈಸರ್ಗಿಕ ಹಾಗೂ ಆತ್ಮೀಕನಿಯಮಗಳೆರಡಕ್ಕೂ ಸಾಮರಸ್ಯದಿಂದ ಜೀವಿಸಬೇಕು.KanCCh 379.3

    ತಮ್ಮ ಆರೋಗ್ಯಕ್ಕಾಗಿ ಪ್ರಾರ್ಥಿಸಬೇಕೆಂದು ಯಾರಾದರೂ ಕೇಳಿಕೊಳ್ಳಬಹುದು.ಅಂತವರಿಗೆ ದೇವರ ನೈಸರ್ಗಿಕ ಅಥವಾ ಆತ್ಮೀಕ ನಿಯಮಗಳನ್ನು ಮೀರಿ ನಡೆಯುವುದು’ಪಾಪ’ವಾಗಿದೆ ಎಂದು ತಿಳಿಸಿ ಹೇಳಬೇಕು. ಅಲ್ಲದೆ ದೇವರ ಆಶೀರ್ವಾದದೊರೆಯಬೇಕಾದಲ್ಲಿ ಪಾಪಗಳಿಗೆ ಪಶ್ಚಾತ್ತಾಪಪಟ್ಟು, ಅವುಗಳನ್ನು ಅರಿಕೆ ಮಾಡಿಕೊಂಡುಬಿಡಬೇಕೆಂದೂ ಸಹ ಅಂತವರಿಗೆ ಬುದ್ಧಿ ಹೇಳಬೇಕು. “ಹೀಗಿರಲು ನೀವುಸ್ವಸ್ಥವಾಗಬೇಕಾದರೆ, ನಿಮ್ಮ ಪಾಪಗಳನ್ನು ಒಬ್ಬರಿಗೊಬ್ಬರು ಅರಿಕೆ ಮಾಡಿ ಒಬ್ಬರಿಗೋಸ್ಕರಒಬ್ಬರು ದೇವರನ್ನು ಪ್ರಾರ್ಥಿಸಲಿ (ಯಾಕೋಬನು 5:16). ರೋಗಿಗಳಲ್ಲಿ ಯಾರಾದರೂನಿಮ್ಮನ್ನು ಪ್ರಾರ್ಥಿಸಬೇಕೆಂದು ಕೇಳಿಕೊಂಡಲ್ಲಿ, ನೀವು ಅವರಿಗೆ ನಾವು ನಿಮ್ಮ ಹೃದಯಗಳನ್ನುಓದಲುಸಾಧ್ಯವಿಲ್ಲ ಅಥವಾ ನಿಮ್ಮ ಜೀವನದ ರಹಸ್ಯಗಳನ್ನು ತಿಳಿಯಲಾಗದು. ಇದುನಿಮಗೂ ಮತ್ತು ದೇವರಿಗೂ ಮಾತ್ರ ತಿಳಿದಿದೆ. ನೀವು ನಿಮ್ಮ ಪಾಪಗಳಿಗೆ ಪಶ್ಚಾತ್ತಾಪಪಟ್ಟಲ್ಲಿ,ಅವುಗಳನ್ನು ದೇವರಮುಂದೆ ಒಪ್ಪಿ ಅರಿಕೆಮಾಡಬೇಕಾದದ್ದು ನಿಮ್ಮ ಕರ್ತವ್ಯವಾಗಿದೆ’ಎಂದು ತಿಳಿಸಿ ಹೇಳಬೇಕು. ಮನುಷ್ಯರಿಗೂ ದೇವರಿಗೂ ಏಕೈಕ ಮಧ್ಯಸ್ಥನಾಗಿರುವಯೇಸುಕ್ರಿಸ್ತನಿಗೆ ಮಾತ್ರ ನಿಮ್ಮಗುಪ್ತಪಾಪಗಳನ್ನು ಅರಿಕೆಮಾಡಬೇಕು. ಯಾಕೆಂದರೆ“ಯಾವನಾದರೂ ಪಾಪಮಾಡಿದರೆ, ತಂದೆಯ ಬಳಿಯಲ್ಲಿ ಯೇಸುಕ್ರಿಸ್ತನೆಂಬ ಸಹಾಯಕನುನಮಗಿದ್ದಾನೆ” (1 ಯೋಹಾನನು 2:1).KanCCh 380.1

    ನಾವು ಮಾಡುವ ಪ್ರತಿಯೊಂದು ಪಾಪವು ದೇವರಿಗೆ ವಿರುದ್ಧವಾದಅಪರಾಧವಾಗಿರುವುದರಿಂದ ಕ್ರಿಸ್ತನ ಮೂಲಕ ಅವುಗಳನ್ನು ದೇವರಿಗೆ ಪಶ್ಚಾತ್ತಾಪದಿಂದಅರಿಕೆ ಮಾಡಬೇಕು. ಬಹಿರಂಗವಾಗಿ ಮಾಡಿದ ಪಾಪವನ್ನು ಎಲ್ಲರ ಮುಂದೆಬಹಿರಂಗವಾಗಿಯೇ ಒಪ್ಪಿಕೊಳ್ಳಬೇಕು. ನಮ್ಮ ಸಹೋದರನಿಗೆ ಮಾಡಿದ ತಪ್ಪನ್ನು ಅವನಮುಂದೆ ಒಪ್ಪಿಕೊಂಡು ಕ್ಷಮೆ ಕೇಳಿ ಮುರಿದುಹೋದ ಸಂಬಂಧವನ್ನು ಸರಿಪಡಿಸಿಕೊಳ್ಳಬೇಕು.ಯಾವ ರೋಗಿಯಾದರೂ ಆರೋಗ್ಯಕ್ಕಾಗಿ ಬೇಡಿಕೊಂಡಲ್ಲಿ, ಅವನು ಕೆಟ್ಟಮಾತುಗಳನ್ನಾಡಿದ್ದಲ್ಲಿ ಅಥವಾ ಸಭೆ, ಸಮುದಾಯ, ಮನೆಯಲ್ಲಿ ಕಲಹ ಹುಟ್ಟಿಸಿದ್ದಲ್ಲಿಇಲ್ಲವೆ ತಪ್ಪಾದ ಆಚರಣೆಯಿಂದ ಇತರರು ಪಾಪ ಮಾಡುವುದಕ್ಕೆ ಕಾರಣವಾಗಿದ್ದಲ್ಲಿ,ಈ ವಿಷಯಗಳನ್ನು ಅವನುದೇವರ ಮತ್ತು ತನ್ನಿಂದ ಮನಸ್ಸಿನಲ್ಲಿ ನೋವುಅನುಭವಿಸಿದವರ ಮುಂದೆ ಪಶ್ಚಾತ್ತಾಪಪಟ್ಟು ಒಪ್ಪಿಕೊಂಡು ಅರಿಕೆ ಮಾಡಬೇಕು. ಆಗಅವನ ರೋಗವು ವಾಸಿಯಾಗುವುದು. ನಮ್ಮ ಪಾಪಗಳನ್ನು ಒಪ್ಪಿಕೊಂಡು ಅರಿಕೆಮಾಡಿದರೆ,ಆತನು ನಂಬಿಗಸ್ತ ನೀತಿವಂತನೂ ಆಗಿರುವುದರಿಂದ ನಮ್ಮ ಪಾಪಗಳನ್ನು ಕ್ಷಮಿಸಿಬಿಟ್ಟುಸಕಲ ಅನೀತಿಯನ್ನು ಪರಿಹರಿಸಿ ನಮ್ಮನ್ನು ಶುದ್ಧಿ ಮಾಡುವನು” (1 ಯೋಹಾನನು1:9).KanCCh 380.2

    ತಪ್ಪನ್ನು ಒಪ್ಪಿ ಸರಿಪಡಿಸಿಕೊಂಡಾಗ, ನಾವು ರೋಗಿಗಳ ಅಗತ್ಯಗಳನ್ನು ದೇವರಾತ್ಮನಪ್ರೇರಣೆಯ ಸೂಚನೆಯಂತೆ ಆತನ ಮುಂದೆ ಶಾಂತವಾದ ನಂಬಿಕೆಯಿಂದ ಅರಿಕೆಮಾಡಬೇಕು.ಆತನು ಪ್ರತಿಯೊಬ್ಬರ ಹೆಸರನ್ನು ಬಲ್ಲವನಾಗಿದ್ದು, ನಮಗಾಗಿಚಿಂತಿಸುತ್ತಾನೆ. ದೇವರ ಪ್ರೀತಿಂರು ಅಪಾರ ವಾಗಿದ್ದು ಎಂದಿಗೂವಿಫಲವಾಗುವುದಿಲ್ಲವಾದ್ದರಿಂದ, ಆತನಲ್ಲಿ ದೃಢ ವಾದ ಭರವಸವಿಟ್ಟುಸಂತೋಷವಾಗಿರುವಂತೆ ಉತ್ತೇಜಿಸಬೇಕು. ತಮ್ಮ ಬಗ್ಗೆ ಯಾವಾಗಲೂ ಚಿಂತಿಸುವುದರಿಂದಅನೇಕರು ಬಲಹೀನರಾಗಿ ಕಾಯಿಲೆಗೆ ತುತ್ತಾಗುತ್ತಾರೆ. ಅವರು ತಮ್ಮ ಮಾನಸಿಕ ಖಿನ್ನತೆಬಿಟ್ಟಲ್ಲಿ, ಗುಣಹೊಂದುವ ಅವಕಾಶ ಹೆಚ್ಚಾಗುತ್ತದೆ. ಯಾಕೆಂದರೆ “ಯೆಹೋವನುತನ್ನಲ್ಲಿ ಭಯಭಕ್ತಿಯುಳ್ಳವರನ್ನು ಕಟಾಕ್ಷಿಸುತ್ತಾನೆ. ತನ್ನ ಕೃಪೆಯನ್ನು ನಿರೀಕ್ಷಿಸುವವರನ್ನುಲಕ್ಷಿಸುತ್ತಾನೆ” (ಕೀರ್ತನೆ 33:18).KanCCh 380.3

    ರೋಗಿಗಳಿಗೆ ಪ್ರಾರ್ಥಿಸುವಾಗ “.... ನಾವು ತಕ್ಕಪ್ರಕಾರ ಏನು ಬೇಡಿಕೊಳ್ಳಬೇಕೋನಮಗೆ ಗೊತ್ತಿಲ್ಲ...” ಎಂಬ ವಾಕ್ಯವನ್ನು ನೆನಪಿನಲ್ಲಿಡಬೇಕು (ರೋಮಾಯ 8:26).ನಾವು ಬಯಸುವ ಆಶೀರ್ವಾದವುಉತ್ತಮವಾದದ್ದೇ ಅಥವಾ ಇಲ್ಲವೋ ಎಂಬುದುನಮಗೆ ತಿಳಿಯದು. ಆದುದರಿಂದ ನಮ್ಮಪ್ರಾರ್ಥನೆಯಲ್ಲಿ ‘ಕರ್ತನೇ, ಮನಸ್ಸಿನ ಎಲ್ಲಾರಹಸ್ಯಗಳನ್ನು ನೀನು ಬಲ್ಲವನಾಗಿದ್ದೀ. ಈರೋಗಿಗಳನ್ನೆಲ್ಲಾ ನೀನು ಬಲ್ಲೆ. ಅವರಮಧ್ಯಸ್ಥನಾದ ಕ್ರಿಸ್ತನು ಅವರಿಗಾಗಿಯೂ ತನ್ನಪ್ರಾಣಕೊಟ್ಟಿದ್ದಾನೆ. ನಮಗಿಂತಲೂಕ್ರಿಸ್ತನಪ್ರೀತಿಯು ಅವರ ಮೇಲೆ ಅಪಾರವಾಗಿರುವ ಸಾಧ್ಯತೆಯಿದೆ.ಆದುದರಿಂದ ನಿನ್ನಮಹಿಮೆಗಾಗಿ ಅನಾರೋಗ್ಯದಲ್ಲಿರುವ ಇವರಿಗೆ ಆರೋಗ್ಯ ದಯಪಾಲಿಸೆಂದು ಕ್ರಿಸ್ತನಹೆಸರಿನಲ್ಲಿ ಬೇಡಿಕೊಳ್ಳುತ್ತೇವೆ. ಒಂದು ವೇಳೆ ಅವರಿಗೆ ಗುಣವಾಗಬಾರದೆಂಬುದು ನಿನ್ನಚಿತ್ತವಾಗಿದ್ದಲ್ಲಿ, ಅವರ ನರಳುವಿಕೆ, ಕಷ್ಟದಲ್ಲಿ ನಿನ್ನ ಕೃಪೆ ಹಾಗೂ ಪ್ರಸನ್ನತೆಯು ಅವರನ್ನುಸಾಂತ್ವನಗೊಳಿಸಲಿ” ಎಂದು ಬೇಡಿಕೊಳ್ಳಬೇಕು.KanCCh 381.1

    ದೇವರು ಆರಂಭದಲ್ಲಿಯೇ ಅಂತ್ಯವನ್ನು ಬಲ್ಲಾತನು. ಎಲ್ಲಾ ಮನುಷ್ಯರ ಹೃದಯಗಳುಆತನಿಗೆ ಚೆನ್ನಾಗಿ ತಿಳಿದಿದೆ. ನಾವು ಯಾರಿಗಾಗಿ ಪ್ರಾರ್ಥಿಸುತ್ತೇವೋ ಅವರ ಜೀವಉಳಿದಲ್ಲಿ ತಾವುಅನುಭವಿಸಬೇಕಾದ ಕಷ್ಟಸಂಕಟ ಶೋಧನೆಗಳನ್ನು ಅವರುತಾಳಿಕೊಳ್ಳುವರೋ ಅಥವಾ ಇಲ್ಲವೋ ಎಂದು ದೇವರಿಗೆ ಗೊತ್ತುಂಟು. ಅವರ ಜೀವನವುಈ ಜಗತ್ತಿಗೆ ಶಾಪವೋ ಅಥವಾ ಆಶೀರ್ವಾದಕರವೋ ಎಂಬುದು ಆತನಿಗೆ ಚೆನ್ನಾಗಿತಿಳಿದಿದೆ. ಆದುದರಿಂದಲೇ ನಾವು ನಮ್ಮ ಬೇಡಿಕೆಗಳನ್ನು ಪ್ರಾಮಾಣಿಕವಾಗಿಪ್ರಾರ್ಥನೆಮೂಲಕ ದೇವರಲ್ಲಿ “ಆದರೂ ನನ್ನಚಿತ್ತವಲ್ಲ: ನಿನ್ನ ಚಿತ್ತವೇ ನೆರವೇರಲಿ“ಎಂದು ಬೇಡಿಕೊಳ್ಳಬೇಕು (ಲೂಕ 22:42). ಕ್ರಿಸ್ತನು ಗೆಮನೆ ತೋಟದಲ್ಲಿ “ನನ್ನತಂದೆಯೇ, ಸಾಧ್ಯವಾಗಿದ್ದರೆ ಈ ಪಾತ್ರೆಯು ನನ್ನನ್ನು ಬಿಟ್ಟು ಹೋಗಲಿ...” ಎಂದುಬೇಡಿಕೊಳ್ಳುವಾಗ (ಮತ್ತಾಯ 26:39) ತನ್ನ ತಂದೆಯ ಚಿತ್ರಕ್ಕೆ ತನ್ನನ್ನು ಒಪ್ಪಿಸಿಕೊಟ್ಟು,ನಿನ್ನಚಿತ್ತವೇ ನೆರವೇರಲಿ ಎಂದು ಪ್ರಾರ್ಥಿಸಿದನು. ನಿನ್ನ ಚಿತ್ತವೇ ನೆರವೇರಲಿ ಎಂದು ಸೃಷ್ಟಿಕರ್ತನಾದ ಕ್ರಿಸ್ತನೇ ಬೇಡಿಕೊಂಡನು ಎಂದಮೇಲೆ ಪಾಪಿಗಳಾದ ಮಾನವರಾದನಾವು ಇನ್ನೂ ಎಷ್ಟೋಹೆಚ್ಚಾಗಿ ತಂದೆಯನ್ನು ಅದೇರೀತಿ ಬೇಡಿಕೊಳ್ಳಬೇಕಲ್ಲವೇ?KanCCh 381.2

    ನಮ್ಮೆಲ್ಲಾ ಬಯಕೆ, ಆಕಾಂಕ್ಷೆಗಳನ್ನು ಪರಮಜ್ಞಾನಿಯಾದ ಪರಲೋಕದ ತಂದೆಗೆಒಪ್ಪಿಸಿಕೊಟ್ಟು, ಅನಂತರ ಪರಿಪೂರ್ಣ ವಿಶ್ವಾಸದಿಂದ ಆತನಲ್ಲಿ ಭರವಸೆ ಇಡುವುದುಯೋಗ್ಯವಾದ ಮಾರ್ಗವಾಗಿದೆ. ಆತನ ಚಿತ್ತದಂತೆ ಬೇಡಿಕೊಂಡಾಗ, ದೇವರು ನಮ್ಮಪ್ರಾರ್ಥನೆ ಕೇಳುತ್ತಿದ್ದಾನೆಂದು ನಮಗೆ ತಿಳಿದಿದೆ. ಆದರೆ ನಮ್ರತೆಯಿಂದ ನಮ್ಮನ್ನುತಗ್ಗಿಸಿಕೊಳ್ಳದೆ, ನಮ್ಮ ಬೇಡಿಕೆಗಳಿಗಾಗಿ ದೇವರ ಮುಂದಿಡುವುದು ಸರಿಯಲ್ಲ: ನಮ್ಮಪ್ರಾರ್ಥನೆಗಳು ಅಧಿಕಾರಯುಕ್ತವಾಗಿರಬಾರದು, ಬದಲಾಗಿ ಮತ್ತೊಬ್ಬರಿಗಾಗಿ ಬೇಡಿಕೊಳ್ಳುವಬಿನ್ನಹದಂತಿರಬೇಕು.KanCCh 382.1

    ದೇವರು ತನ್ನ ಶಕ್ತಿಯಿಂದ ರೋಗಿಗೆ ಆರೋಗ್ಯವನ್ನು ಪುನಃಕೊಡುವ ವಿಷಯದಲ್ಲಿಖಚಿತವಾಗಿ ಮಾಡಿರುವ ಉದಾಹರಣೆಗಳೂ ಇವೆ. ಆದರೆ ಎಲ್ಲಾ ರೋಗಿಗಳೂ ಗುಣಹೊಂದುವುದಿಲ್ಲ. ಅನೇಕರು ಕ್ರಿಸ್ತನಲ್ಲಿ ಗುಣ ಹೊಂದದೆ ನಿದ್ರೆ ಹೋಗಿರುವುದುಂಟು.“ಇಂದಿನಿಂದ ಕರ್ತನ ಭಕ್ತರಾಗಿ ಸಾಯುವವರು ಧನ್ಯರು” ಎಂಬುದಾಗಿ ಬರೆ ಎಂದುನನಗೆ (ಅಂದರೆ ಯೋಹಾನನಿಗೆ) ಹೇಳಿತು. ಅದಕ್ಕೆ ಆತ್ಮನು- ಹೌದು, ಅವರುಧನ್ಯರೇ; ಅವರ ಕಷ್ಟವು ತೀರಿತು, ಅವರಿಗೆ ವಿಶ್ರಾಂತಿಯಾಗುವುದು; ಅವರ ಸುಕೃತ್ಯಗಳುಅವರೊಡನೆ ಬರುವವು” ಎಂದು ಯೋಹಾನನು ಪಕ್ಕೊಸ್ ದ್ವೀಪದಿಂದ ಬರೆದಿದ್ದಾನೆ(ಪ್ರಕಟನೆ 14:13). ಆದುದರಿಂದ ಕೆಲವರು ತಮ್ಮ ರೋಗದಿಂದ ಗುಣಹೊಂದದಿದ್ದಲ್ಲಿ,ಅವರಲ್ಲಿ ನಂಬಿಕೆ ಇಲ್ಲವೆಂಬ ನಿರ್ಧಾರಕ್ಕೆ ನಾವು ಬರಬಾರದು.KanCCh 382.2

    ನಮ್ಮ ಪ್ರಾರ್ಥನೆಗೆ ನೇರವಾದ ಉತ್ತರವು ತಕ್ಷಣದಲ್ಲಿಯೇ ದೊರಕಬೇಕೆಂದು ನಾವೆಲ್ಲರೂಬಯಸುತ್ತೇವೆ. ಆದರೆ ಉತ್ತರವು ನಿಧಾನವಾದಲ್ಲಿ ಇಲ್ಲವೆ ನಾವು ನಿರೀಕ್ಷಿಸಿದಂತೆ ಬಾರದಿದ್ದಲ್ಲಿಅಪನಂಬಿಕೆಯಿಂದ ನಿರಾಶರಾಗುವ ಸಾಧ್ಯತೆಯಿದೆ. ಆದರೆ ಆತನು ನಮ್ಮ ಸಮಯಕ್ಕೆತಕ್ಕಂತೆ ಅಥವಾ ನಾವು ಬಯಸಿದ ರೀತಿಯಲ್ಲಿ ಯಾವಾಗಲೂ ಪ್ರಾರ್ಥನೆಗೆಉತ್ತರಿಸುವುದಿಲ್ಲ. ಆದರೆ ನಮ್ಮ ಬೇಡಿಕೆಗಳಿಗಿಂತಲೂ ಹೆಚ್ಚಿನ ಹಾಗೂ ಅತ್ಯುತ್ತಮವಾದದ್ದನ್ನುಆತನು ತಕ್ಕಸಮಯದಲ್ಲಿ ದಯಪಾಲಿಸುತ್ತಾನೆ. ನಾವು ದೇವರ ವಿವೇಕ ಹಾಗೂಪ್ರೀತಿಯಲ್ಲಿ ಭರವಸ ಇಡಬಹುದಾದ್ದರಿಂದ, ನಮ್ಮ ಚಿತ್ತ ನೆರವೇರಿಸೆಂದು ಕೇಳಬಾರದು,ಆದರೆ ನಿನ್ನ ಉದ್ದೇಶವು ನಮ್ಮಲ್ಲಿ ನೆರವೇರಲೆಂದು ಬೇಡಿಕೊಳ್ಳಬೇಕು. ನಮ್ಮೆಲ್ಲಾ ಬಯಕೆಹಾಗೂ ಆಸಕ್ತಿಗಳು ದೇವರ ಚಿತ್ರದ ಮುಂದೆ ಕಳೆದುಹೋಗಬೇಕು. ನಮ್ಮ ನಂಬಿಕೆಯನ್ನುಪರೀಕ್ಷಿಸುವ ಈ ಅನುಭವಗಳು ನಮ್ಮ ಪ್ರಯೋಜನಕ್ಕಾಗಿಯೇ ಇವೆ. ಇದರ ಮೂಲಕನಮ್ಮ ನಂಬಿಕೆಯು ನಿಜವಾಗಿಯೂಪ್ರಾಮಾಣಿಕವಾಗಿ ದೇವರ ವಾಕ್ಯದ ಮೇಲೆಆಧಾರಗೊಂಡಿದೆಯೋ ಇಲ್ಲವೆ ಸನ್ನಿವೇಶಗಳ ಮೇಲೆ ಆತುಕೊಂಡಿದೆಯೋ ಎಂಬುದುವ್ಯಕ್ತವಾಗುವುದು. ನಂಬಿಕೆಯನ್ನು ಕಾರ್ಯದ ಮೂಲಕ ವ್ಯಕ್ತಪಡಿಸಿದಾಗ, ಅದುಬಲಗೊಳ್ಳುವುದು. ದೇವರನ್ನು ನಿರೀಕ್ಷಿಸುವವರಿಗೆ ಅಮೂಲ್ಯವಾದ ವಾಗ್ದಾನಗಳಿವೆ ಎಂಬಸತ್ಯವೇದದ ಮಾತನ್ನು ನೆನಪಿನಲ್ಲಿಟ್ಟುಕೊಂಡು ನಾವು ಯಾವಾಗಲೂ ತಾಳ್ಮೆಯಿಂದಆತನ ಚಿತ್ರಕ್ಕಾಗಿ ಕಾದುಕೊಂಡಿರಬೇಕು.KanCCh 382.3

    ಈ ಸಿದ್ಧಾಂತಗಳನ್ನು ಎಲ್ಲರೂ ಅರ್ಥಮಾಡಿಕೊಳ್ಳುವುದಿಲ್ಲ. ದೇವರ ಸ್ವಸ್ಥತೆಯಕರುಣೆಗಾಗಿ ಹುಡುಕುವವರು ತಮ್ಮ ಪ್ರಾರ್ಥನೆಗೆ ತಕ್ಷಣವೇ ನೇರವಾದ ಉತ್ತರದೊರೆಯಬೇಕೆಂದು ಆಲೋಚಿಸುತ್ತಾರೆ. ತಕ್ಷಣಕ್ಕೆ ಉತ್ತರ ದೊರೆಯದಿದ್ದಲ್ಲಿ, ತಮ್ಮನಂಬಿಕೆಯಲ್ಲಿ ದೋಷವಿದೆ ಎಂದು ತಿಳಿಯುತ್ತಾರೆ. ಈ ಕಾರಣದಿಂದಲೇ ರೋಗರುಜಿನಗಳಿಂದ ಬಲಹೀನರಾಗಿರುವವರಿಗೆ ಸ್ವಂತ ವಿವೇಚನೆಯಿಂದ ನಿರ್ಣಯತೆಗೆದುಕೊಳ್ಳುವಂತೆ ವಿವೇಕದಿಂದ ಸಲಹೆ ನೀಡಬೇಕು. ತಮ್ಮ ಸ್ನೇಹಿತರಿಗೆ ಮಾಡಬೇಕಾದಕರ್ತವ್ಯವನ್ನೂ ಅಲಕ್ಷ ಮಾಡಬಾರದು ಅಥವಾ ಆರೋಗ್ಯಕ್ಕೆ ಬೇಕಾದ ನೈಸರ್ಗಿಕವಾದಔಷಧೋಪಚಾರಗಳನ್ನು ತೆಗೆದುಕೊಳ್ಳುವುದನ್ನು ಮರೆಯಬಾರದು.KanCCh 383.1

    ಇಂತಹ ಅನೇಕ ಸಮಯಗಳಲ್ಲಿ ಕೆಲವರು ತಪ್ಪು ಮಾಡುವ ಅಪಾಯವಿದೆ. ತಮ್ಮಪ್ರಾರ್ಥನೆಗೆ ದೇವರು ಉತ್ತರನೀಡಿ ಗುಣಪಡಿಸುತ್ತಾನೆಂದು ಅವರು ವಿಶ್ವಾಸದಿಂದಿರುತ್ತಾರೆ.ಆದರೆ ವೈದ್ಯರ ಸಲಹೆ ತೆಗೆದುಕೊಂಡಲ್ಲಿ ತಮ್ಮ ನಂಬಿಕೆಯಲ್ಲಿ ಏನೋ ಕೊರತೆಯಿದೆಎಂದು ತಿಳಿದುಕೊಂಡು ಅವರು ಯಾವುದೇ ಔಷಧ ತೆಗೆದುಕೊಳ್ಳುವುದಿಲ್ಲ. ಅಲ್ಲದೆತಾವು ಸಾಯುವುದು ಖಚಿತವೆಂದು ಅವರಿಗೆ ತಿಳಿದುಬಂದಾಗ, ಮನೆಯ ಎಲ್ಲಾವ್ಯವಸ್ಥೆಯನ್ನು ಸರಿಪಡಿಸುವುದನ್ನು ಮರೆಯಬಾರದು (2 ಸಮುವೇಲನು 17:23, 2ಅರಸುಗಳು 20:1) ಹಾಗೂ ಮರಣಕ್ಕೆ ಮೊದಲು ತಮ್ಮ ಪ್ರಿಯರಾದವರಿಗೆ ಕೊನೆಯಲ್ಲಿಹೇಳಬೇಕಾದ ಉತ್ತೇಜನಕಾರಿ ಮಾತುಗಳನ್ನು ಹೇಳಲಿಕ್ಕೆ ಭಯಪಡಬಾರದು.KanCCh 383.2

    ಪ್ರಾರ್ಥನೆಯಿಂದ ಗುಣವಾಗುತ್ತೇವೆಂದು ನಿರೀಕ್ಷಿಸುವವರು ತಮ್ಮ ಕೈಗೆಟಕುವಔಷಧೋಪಚಾರ ತೆಗೆದುಕೊಳ್ಳಲು ಅಲಕ್ಷ ಮಾಡಬಾರದು. ನೋವನ್ನು ಕಡಿಮೆಮಾಡುವಂತ ಹಾಗೂ ನಿಸರ್ಗವು ರೋಗಿಯನ್ನು ಪುನಶ್ವೇತನ ಗೊಳಿಸುವಂತ ಕಾರ್ಯದಲ್ಲಿಸಹಾಯವಾಗುವಂತವುಗಳನ್ನು ದೇವರು ಉಪಯೋಗಿಸಲು ಆಸ್ಪದ ಮಾಡಿದ್ದಾನೆಇವುಗಳನ್ನು ಉಪಯೋಗಿಸಿದಾಗ ದೇವರಲ್ಲಿ ತಮ್ಮ ನಂಬಿಕೆಕುಂದಿಹೋಯಿತೆಂದುಯಾರೂ ಅಂದುಕೊಳ್ಳಬಾರದು. ದೇವರೊಂದಿಗೆ ಸಹಕರಿಸುವುದಲ್ಲದೆ, ಶೀಘ್ರವಾಗಿಗುಣಮುಖರಾಗುವಂತ ಅನುಕೂಲಕರವಾದ ಪರಿಸ್ಥಿತಿಯನ್ನು ತಾತ್ಸಾರ ಮಾಡಬಾರದು.ಜೀವದ ನಿಯಮಗಳ ಜ್ಞಾನಪಡೆದುಕೊಳ್ಳುವಂತ ಸಾಮರ್ಥ್ಯವನ್ನು ದೇವರು ನಮಗೆನೀಡಿದ್ದಾನೆ. ಈ ಜ್ಞಾನವನ್ನು ಉಪಯೋಗಿಸಿಕೊಳ್ಳುವುದು ನಮ್ಮ ಕೈಯಲ್ಲಿದೆ. ನೈಸರ್ಗಿಕನಿಯಮಗಳೊಂದಿಗೆ ಸಾಮರಸ್ಯದಿಂದ ರೋಗಿಗಳು ಹೊಂದಿಕೊಂಡು, ಸಾಧ್ಯವಾದ ಎಲ್ಲಾ ಅನುಕೂಲಗಳನ್ನು ಉಪಯೋಗಿಸಿಕೊಂಡು ಆರೋಗ್ಯದ ಪುನಶೈತನ್ಯಪಡೆದುಕೊಳ್ಳಬೇಕು. ರೋಗಿಗಳ ಸ್ವಚ್ಛತೆಗಾಗಿ ನಾವು ಪ್ರಾರ್ಥಿಸಿದಾಗ, ಇನ್ನೂ ಹೆಚ್ಚಿನ ಶಕ್ತಿಯಿಂದಕಾರ್ಯಮಾಡಿ ದೇವರೊಂದಿಗೆ ಸಹಕಾರನೀಡುವ ಅವಕಾಶಕ್ಕಾಗಿ ಆತನಿಗೆ ಕೃತಜ್ಞತೆಸಲ್ಲಿಸಬೇಕು. ಹಾಗೂ ರೋಗಿಯ ಸ್ವಚ್ಛತೆಗೆ ಆತನೇ ಒದಗಿಸಿದ ಸಂಪನ್ಮೂಲಗಳು ಹಾಗೂಸಾಧನಗಳ ಮೇಲೆ ಆತನ ಆಶೀರ್ವಾದಕ್ಕಾಗಿ ಬೇಡಿಕೊಳ್ಳಬೇಕು.KanCCh 383.3

    ವೈದ್ಯರಸಲಹೆಯ ಮೇರೆಗೆ ರೋಗದಲ್ಲಿರುವಾಗ ಔಷಧೋಪಚಾರ ತೆಗೆದುಕೊಳ್ಳಲುದೇವರವಾಕ್ಯವು ಅನುಮತಿನೀಡಿದೆ. ಪ್ರವಾದಿಯಾದ ಯೆಶಾಯನು ಯೆಹೂದ್ಯರಅರಸನಾದಹಿಜೀಯನಿಗೆ ನೀನು ಸಾಯುತ್ತೀ ಎಂದು ಹೇಳಿದನು. ಆದರೆ ಹಿಜೀಯನು ಕಣ್ಣೀರಿಟ್ಟುದೇವರಿಗೆ ಮೊರೆಯಿಟ್ಟಾಗ, ಅವನ ಪ್ರಾರ್ಥನೆಕೇಳಿ ಅವನ ಆಯುಷ್ಯಕ್ಕೆ ಇನ್ನೂಹದಿನೈದುವರ್ಷ ಕೂಡಿಸಿದನು. ದೇವರ ಒಂದುಮಾತು ಹಿಜೀಯನನ್ನು ತಕ್ಷಣದಲ್ಲಿಯೇಗುಣಪಡಿಸುತ್ತಿತ್ತು. ಆದರೆ ದೇವರು ಪ್ರವಾದಿಯಾದ ಯೆಶಾಯನಿಗೆ ಒಂದು ವಿಶೇಷಸಲಹೆ ನೀಡಿದನು. ಅಂಜೂರದ ಹಣ್ಣುಗಳ ಅಡೆಯನ್ನು ತರಿಸಿ ಕುರುವಿನ ಮೇಲೆಇಟ್ಟರೆ ಅರಸನು ಗುಣಹೊಂದುವನು ಎಂದು ಯೆಶಾಯನು ಅಪ್ಪಣೆಕೊಟ್ಟನು (ಯೆಶಾಯ38:21).KanCCh 384.1

    ರೋಗವು ಗುಣವಾಗಬೇಕೆಂದು ಪ್ರಾರ್ಥಿಸಿದಾಗ, ಅದರ ಪರಿಣಾಮವು ಏನೇಇರಲಿ, ನಾವು ದೇವರಲ್ಲಿ ನಂಬಿಕೆ ಕಳೆದುಕೊಳ್ಳಬಾರದು. ಒಂದುವೇಳೆ ರೋಗಿಯುಮರಣಹೊಂದಿದಲ್ಲಿ, ಆದುಃಖವನ್ನು ಸಹಿಸಿಕೊಳ್ಳಬೇಕು. ತಂದೆಯಾದ ದೇವರುಕರುಣೆಯಿಂದಲೇ ರೋಗಿಯನ್ನು ಮರಣಕ್ಕೆ ಒಪ್ಪಿಸಿದನೆಂದು ನೆನಪಿಡಬೇಕು. ಒಂದುವೇಳೆ ರೋಗಿಯು ಗುಣಮುಖನಾಗಿ ಚೇತರಿಸಿಕೊಂಡಲ್ಲಿ ತನ್ನ ಸೃಷ್ಟಿಕರ್ತನಿಗೆ ಕೃತಜ್ಞತೆತೋರಿಸುವುದು ಅವನ ಜವಾಬ್ದಾರಿಯಾಗಿದೆ ಎಂಬುದನ್ನುಮರೆಯಬಾರದು. ಹತ್ತುಮಂದಿ ಕುಷ್ಠರೋಗಿಗಳು ಸ್ವಸ್ಥರಾದಾಗ, ಅವರಲ್ಲಿ ಅನ್ಯನಾದಸಮಾರ್ಯದವನುಮಾತ್ರ ಯೇಸುಸ್ವಾಮಿಗೆ ಕೃತಜ್ಞತೆ ಸಲ್ಲಿಸಿ ಮಹಿಮೆಪಡಿಸಿದನು (ಲೂಕ 17:11-19).ದೇವರ ಕರುಣೆಯನ್ನು ನಿರಾಕರಿಸಿದ ಉಳಿದ ಒಂಬತ್ತು ಮಂದಿಯಂತೆ ನಾವಿರಬಾರದು.“ಎಲ್ಲಾ ಒಳ್ಳೇ ದಾನಗಳೂ, ಕುಂದಿಲ್ಲದ ಎಲ್ಲಾ ವರಗಳೂ ಮೇಲಣಿಂದ ಸಕಲ ವಿಧವಾದಬೆಳಕಿಗೂ ಮೂಲಕಾರಣನಾದವನಿಂದ ಇಳಿದುಬರುತ್ತದೆ. ಆತನಲ್ಲಿ ಚಂಚಲತ್ವವೇನೂಇಲ್ಲ. ವ್ಯತ್ಯಾಸದ ಸೂಚನೆಯೂ ಇಲ್ಲ” (ಯಾಕೋಬನು 1:17).KanCCh 384.2

    *****