Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
 • Results
 • Related
 • Featured
No results found for: "".
 • Weighted Relevancy
 • Content Sequence
 • Relevancy
 • Earliest First
 • Latest First

  ಸಭೆಯ ಮತ್ತು ಕ್ರೈಸ್ತ ಸಂಸ್ಥೆಗಳ ನಾಯಕರನ್ನು ನಿಂದಿಸುವುದರ ಪರಿಣಾಮಗಳು.

  ಸುಳ್ಳು ಸುದ್ದಿ ಹರಡುವುದು, ಚಾಡಿ ಹೇಳುವುದರ ಮೂಲಕ ಭಿನ್ನಾಭಿಪ್ರಾಯ ಕಲಹ ಹುಟ್ಟಿಸುವುದು, ಸ್ನೇಹಿತರನ್ನು ದೂರಮಾಡುವುದು, ಅಧಿಕಾರಿಗಳ ಯಥಾರ್ಥತೆಯ ಬಗ್ಗೆ ಅನೇಕರ ನಂಬಿಕೆಗಳನ್ನು ದುರ್ಬಲಗೊಳಿಸುವುದು ಸೈತಾನನ ವಿಶೇಷವಾದ ತಂತ್ರಗಳಲ್ಲಿ ಒಂದಾಗಿದೆ. ಕ್ರೈಸ್ತಸಹೋದರ, ಸಹೋದರಿಯರು ಇತರರಲ್ಲಿ ಅದರಲ್ಲಿಯೂ ದೇವರ ಸೇವೆಮಾಡುವ ಹಾಗೂ ಸತ್ಯವೇದದ ಎಚ್ಚರಿಕೆಯ ಮೂಲಕ ಜನರನ್ನು ಗದರಿಸುವವರಲ್ಲಿ ಇದೆಯೆಂದು ಸಂಶಯ ಪಡುವ ತಪ್ಪುದೋಷಗಳನ್ನು ಎತ್ತಿ ಮಾತಾಡುವುದರಲ್ಲಿ ಆತುರಪಡುತ್ತಾರೆ.KanCCh 208.3

  ಇಂತಹ ಸುಳ್ಳು ಸುದ್ದಿಗಳನ್ನು ಹರಡುವವರ ಮಕ್ಕಳು ತಮ್ಮ ತಂದೆ ತಾಯಿಯರ ವಿಷಪೂರಿತನಾದ ಈ ಮಾತುಗಳನ್ನು ಕಿವಿದೆರೆದು ಕುತೂಹಲದಿಂದ ಕೇಳುತ್ತಾರೆ. ತಂದೆ- ತಾಯಿಯರು ಈ ರೀತಿಯಾಗಿ ದೇವರವಾಕ್ಯ ಕೇಳಬೇಕಾದ ತಮ್ಮ ಮಕ್ಕಳ ಮನಸ್ಸನ್ನು ಇಂತಹ ನಿರರ್ಥಕ ಮಾತುಗಳಿಂದ ದೂರ ಮಾಡುತ್ತಾರೆ. ಅವರು ತಮ್ಮ ಸ್ನೇಹಿತರ ಚಾರಿತ್ರ್ಯ ವಧೆಮಾಡಿ ಮಕ್ಕಳಿಗೆ ಇಂತಹ ರುಚಿಕರ ತುತ್ತನ್ನು ಉಣಬಡಿಸುತ್ತಾರೆ. ಈ ರೀತಿಯಲ್ಲಿ ದೇವರಿಗೆ ಅಗೌರವ ಉಂಟು ಮಾಡುತ್ತಾರೆ. “ಈ ನನ್ನ ಸಹೋದರರಲ್ಲಿ ಕೇವಲ ಅಲ್ಪನಾದವನೊಬ್ಬರಿಗೆ ಏನೇನು ಮಾಡಿದಿರೋ, ಅದನ್ನು ನನಗೂ ಮಾಡಿದ ಹಾಗಾಯಿತು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ” (ಮತ್ತಾಯ 25:40), ಇದು ಕ್ರಿಸ್ತನು ಹೇಳಿದ ಮಾತು. ಆದುದರಿಂದ ದೇವರಸೇವಕರ ಮೇಲೆ ಚಾಡಿ ಹೇಳುವವರು ಕ್ರಿಸ್ತನನ್ನು ಕಡೆಗಣಿಸಿ ದೂಷಿಸುತ್ತಾರೆ.KanCCh 208.4

  ದೇವರಿಂದ ಆರಿಸಲ್ಪಟ್ಟ ನಾಯಕರನ್ನು ಗೌರವಿಸಬೇಕಾದ ಅನೇಕರು ಅವರಿಗೆ ಅಗೌರವ ತೋರಿಸುವುದಲ್ಲದೆ, ಕೆಲವು ಸಂದರ್ಭಗಳಲ್ಲಿ ಅವರನ್ನು ಸಂಪೂರ್ಣವಾಗಿ ತುಚೀಕರಿಸುತ್ತಾರೆ. ಮಕ್ಕಳು ದೇವರಸೇವಕರ ಬಗ್ಗೆ ತಂದೆ- ತಾಯಿಗಳು ನುಡಿದ ತಿರಸ್ಕಾರದ ಮಾತುಗಳನ್ನು ಗಮನವಿಟ್ಟು ಕೇಳುತ್ತಾರೆ. ಇದರಿಂದಾಗಿ ಮಕ್ಕಳಲ್ಲಿ ಪವಿತ್ರವಾದ ಹಾಗೂ ನಿತ್ಯವಾದ ಪರಲೋಕಕ್ಕೆ ಸಂಬಂಧಪಟ್ಟವುಗಳನ್ನೂ ಸಹ ಸಾಧಾರಣ ವಿಷಯಗಳೆಂದು ಎಣಿಸುವ ಪ್ರವೃತ್ತಿ ಬೆಳೆಯುತ್ತದೆ. ಬಾಲ್ಯದಲ್ಲಿಯೇ ತಮ್ಮ ಮಕ್ಕಳು ನಾಸ್ತಿಕರಾಗುವಂತೆ ಮಾಡುವಲ್ಲಿ ತಂದೆ-ತಾಯಿಯರು ಎಂತಹ ಪಾತ್ರವಹಿಸುತ್ತಾರಲ್ಲವೇ! ಈ ರೀತಿಯಲ್ಲಿ ಮಕ್ಕಳು ಪಾಪಕ್ಕೆ ವಿರುದ್ಧವಾಗಿ ಸತ್ಯವೇದದಲ್ಲಿ ತಿಳಿಸಿರುವ ಗದರಿಕೆಯನ್ನು ಗೌರವಿಸಿ ಎದುರು ಬೀಳುವುದನ್ನು ಕಲಿಯುತ್ತಾರೆ.KanCCh 209.1

  ಇಂತಹ ದುಷ್ಟತನವು ಇರುವಲ್ಲಿ ಆತ್ಮೀಕ ಅವನತಿ ಉಂಟಾಗುತ್ತದೆ. ಸೈತಾನನ ಅಂಧಕಾರದಿಂದ ಬಂಧಿಸಲ್ಪಟ್ಟ ಈ ತಂದೆ-ತಾಯಿಯರು ಯಾಕೆ ತಮ್ಮ ಮಕ್ಕಳು ಸತ್ಯವೇದದ ಸತ್ಯದ ಬಗ್ಗೆ ಸಂದೇಹ ಹಾಗೂ ಅಪನಂಬಿಕೆ ಹೊಂದಿದ್ದಾರೆಂದು ಆಶ್ಚರ್ಯಪಡುತ್ತಾರೆ. ನೈತಿಕ ಮತ್ತು ಧಾರ್ಮಿಕ ವಿಷಯಗಳನ್ನು ಮಕ್ಕಳು ಅನುಸರಿಸುವಂತೆ ಮಾಡುವುದು ಬಹಳ ಕಷ್ಟವೆಂದು ಅವರು ಬೆರಗಾಗುತ್ತಾರೆ. ಅವರು ತಮ್ಮ ಆತ್ಮೀಕ ದೃಷ್ಟಿಯಿಂದ ಅವಲೋಕಿಸಿ ನೋಡಿದಲ್ಲಿ, ತಮ್ಮ ಮಕ್ಕಳ ಈ ಪರಿಸ್ಥಿತಿಗೆ ತಮ್ಮ ಮನೆಯಲ್ಲಿ ತಾವು ದೇವರಸೇವಕರಿಗೆ ವಿರುದ್ಧವಾಗಿ ಮಾತಾಡಿದ ಮಾತುಗಳ ಪ್ರಭಾವ ಹಾಗೂ ವ್ಯಕ್ತಪಡಿಸಿದ ಹೊಟ್ಟೆಕಿಚ್ಚು ಮತ್ತು ಅಪವಿಶ್ವಾಸವು ಕಾರಣವೆಂದು ಅವರಿಗೆ ಮನವರಿಕೆಯಾಗುವುದು. ಈ ವಿಧದಲ್ಲಿ ಅನೇಕ ಕ್ರೈಸ್ತ ಕುಟುಂಬಗಳಲ್ಲಿ ಮಕ್ಕಳು ದೇವರಲ್ಲಿ ಭಕ್ತಿ ಕಳೆದುಕೊಂಡು ನಾಸ್ತಿಕರಾಗಿ ಬೆಳೆಯುತ್ತಾರೆ. ದೇವರಸೇವೆಯಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವವರ ಬಲಹೀನತೆಯ ಬಗ್ಗೆ ಕೆಲವರು ನಿಜವಾಗಿಯೋ ಅಥವಾ ಊಹಿಸಿಕೊಂಡು ವಿಶೇಷ ಸಂತೋಷ ಪಡುತ್ತಾರೆ. ಅಧಿಕಾರಿಗಳು ಮಾಡಿದ ಒಳ್ಳೆ ಕಾರ್ಯಗಳನ್ನು ಮತ್ತು ಅವರ ಸೇವೆಯಿಂದಲೂ ಹಾಗೂ ನಿಷ್ಠೆಯಿಂದಲೂ ಆದ ಪ್ರಯೋಜನಗಳನ್ನು ಕೆಲವರು ಕಡೆಗಣಿಸುತ್ತಾರೆ. ಬದಲಾಗಿ ಅವರು ಮಾಡಿದ ತಪ್ಪುಗಳನ್ನೇ ದೊಡ್ಡದುಮಾಡಿ ಒಂದುವೇಳೆ ಈ ಕಾರ್ಯವನ್ನು ನಮಗೆ ವಹಿಸಿದ್ದಲ್ಲಿ ನಾವು ಅಧಿಕಾರಿಗಳಿಗಿಂತ ಉತ್ತಮವಾಗಿ ಮಾಡುತ್ತಿದ್ದೇವೆಂದು ಹೇಳಿಕೊಳ್ಳುತ್ತಾರೆ. ಆದರೆ ಆ ಕೆಲಸವನ್ನು ಮಾಡುವಂತೆ ದೂಷಣೆ ಮಾಡುವವರಿಗೆ ಒಪ್ಪಿಸಿದಲ್ಲಿ ಅವರು ಅದನ್ನು ನಿರಾಕರಿಸುತ್ತಿದ್ದರು ಅಥವಾ ಅವಿವೇಕತನದಿಂದ ಮೊದಲಿನವರಿಗಿಂತ ಕೆಟ್ಟದ್ದಾಗಿ ಮಾಡಿರುತ್ತಿದ್ದರು.KanCCh 209.2

  ಆದರೆ ಅಂಕೆಮೀರಿ ಅಶಿಸ್ತು ತೋರಿಸುವ ಈ ಮಾತುಗಾರರು ಮಾಡಬೇಕಾದ ಕೆಲಸದ ಆಪ್ರಿಯ ವಿಷಯಗಳ ಬಗ್ಗೆ ಬಂಡೆಯ ಮೇಲೆ ಪಾಚಿ ಮತ್ತು ಶಿಲೀಂಧ್ರಗಳು (ಫಂಗಸ್) ಹಿಡಿದುಕೊಂಡಿರುವಂತೆ ಅಂಟಿಕೊಂಡಿರುತ್ತಾರೆ. ಇವರು ಇತರರ ತಪ್ಪುಗಳು ಮತ್ತು ವೈಫಲ್ಯಗಳ ಬಗ್ಗೆ ಯಾವಾಗಲೂ ಮಾತನಾಡುತ್ತಾ ಆತ್ಮೀಕವಾಗಿ ಬಲಹೀನರಾಗುತ್ತಾರೆ. ಅವರು ಒಳ್ಳೆಯದು ಮತ್ತು ಶ್ರೇಷ್ಠವಾದ ಕಾರ್ಯಗಳು, ನಿಸ್ವಾರ್ಥದ ಪ್ರಯತ್ನಗಳು, ತ್ಯಾಗ ಮನೋಭಾವವನ್ನು ಗ್ರಹಿಸಿಕೊಳ್ಳಲು ನೈತಿಕವಾಗಿ ಅಸಮರ್ಥರಾಗಿದ್ದಾರೆ. ಅವರು ತಮ್ಮ ಜೀವನದಲ್ಲಿ ಉನ್ನತವಾದ ಹಾಗೂ ಔದಾರ್ಯವುಳ್ಳ ವ್ಯಕ್ತಿತ್ವ ಬೆಳೆಸಿಕೊಳ್ಳುವುದಿಲ್ಲ. ಕ್ರೈಸ್ತರ ಜೀವನದಲ್ಲಿ ಕಂಡುಬರಬೇಕಾದ ಪ್ರೀತಿಯನ್ನು ಅವರು ಬೆಳೆಸಿಕೊಳ್ಳುವುದಿಲ್ಲ. ಅವರು ದಿನದಿಂದ ದಿನಕ್ಕೆ ತಮ್ಮ ಅಭಿಪ್ರಾಯ ಮತ್ತು ಪೂರ್ವಗ್ರಹ ಪೀಡಿತ ದ್ವೇಷದಿಂದ ನೈತಿಕವಾಗಿ ಕೆಳಮಟ್ಟ ತಲುಪುತ್ತಾರೆ. ಸಣ್ಣತನ ತೋರಿಸುವ ಇಂತವರು ಶಾಂತಿ ಮತ್ತು ಸಂತೋಷಕ್ಕೆ ವಿಷಹಿಂಡಿ ವಾತಾವರಣವನ್ನು ಕಲುಷಿತಗೊಳಿಸುತ್ತಾರೆ.KanCCh 210.1

  ದೇವಜನರ ಹೃದಯಗಳನ್ನು ಪರೀಕ್ಷಿಸಲು ಕಷ್ಟ ಶೋಧನೆಗಳು ಬರುವಂತೆ ದೇವರು ಅನುಮತಿ ನೀಡುತ್ತಾನೆ. ಸಂಕಟದ ಸಮಯಬಂದಾಗ, ನಾವು ದೇವರಲ್ಲಿಯೂ ಹಾಗೂ ಆತನ ಸೇವೆಯಲ್ಲಿಯೂ ಎಷ್ಟೊಂದು ಯಥಾರ್ಥ ವಿಶ್ವಾಸ ಹೊಂದಿದ್ದೇವೆಂದು ಕಂಡುಬರುವುದು. ಅಂತಹ ಸಮಯದಲ್ಲಿ ಪರಿಸ್ಥಿತಿಯು ಕೈಮೀರಿ ಹೋಗಿದೆ ಎಂದು ಯಾರೂಸಹ ಹೇಳಿ ಸಂದೇಹ ಮತ್ತು ಅಪನಂಬಿಕೆಗೆ ಆಸ್ಪದ ಮಾಡಿಕೊಡಬಾರದು. ಜವಾಬ್ದಾರಿ ಹೊಂದಿರುವವರನ್ನು ಯಾರೂಸಹ ನಿಂದಿಸಬಾರದು ಅಥವಾ ಟೀಕಿಸಬಾರದು. ನಿಮ್ಮ ಮನೆಯಲ್ಲಿ ದೇವರ ಸೇವಕರನ್ನು ದೂಷಿಸುವಂತ ಮಾತುಗಳನ್ನಾಡಬಾರದು.KanCCh 210.2

  ತಂದೆ-ತಾಯಿಯರು ಮನೆಯಲ್ಲಾಡುವ ಇಂತಹ ಮಾತುಗಳು ಮಕ್ಕಳಲ್ಲಿ ಮಾತ್ರವಲ್ಲ ದೊಡ್ಡವರಲ್ಲಿಯೂ ಅವರ ನಂಬಿಕೆ ಮತ್ತು ಭರವಸೆಯನ್ನು ಕುಂದಿಸುತ್ತದೆ.KanCCh 210.3

  ನಮ್ಮ ಶಾಲಾ ಕಾಲೇಜುಗಳಲ್ಲಿ ಅಧಿಕಾರ ಸ್ಥಾನದಲ್ಲಿರುವವರು ಯೌವನಸ್ಥರಲ್ಲಿ ವಿವೇಕಯುತವಾದ ಶಿಸ್ತು ಬೆಳೆಸಬೇಕಾದ ಅತ್ಯಂತ ಕಠಿಣ ಕಾರ್ಯನಿರ್ವಹಿಸುತ್ತಾರೆ. ಯೌವನಸ್ಥರು ಶಾಲಾ ಕಾಲೇಜುಗಳ ಶಿಸ್ತಿಗೆ ಒಳಪಡಲು ಇಷ್ಟಪಡದಿದ್ದಲ್ಲಿ ಅಥವಾ ಅಧಿಕಾರಿಗಳೊಂದಿಗೆ ಭಿನ್ನಾಭಿಪ್ರಾಯ ಹೊಂದಿ ತಮ್ಮದೇ ದಾರಿಯಲ್ಲಿ ನಡೆಯಲು ನಿರ್ಧರಿಸಿದಲ್ಲಿ, ತಂದೆ-ತಾಯಿಯರು ಮಕ್ಕಳ ಮೇಲಿನ ವ್ಯಾಮೋಹದಿಂದ ಅವರು ಹೇಳಿದಂತೆ ಮಾಡಲು ಬಿಡಬಾರದು. ನಿಷ್ಠೆಯ ಅಸ್ತಿವಾರವಾದ ಸತ್ಯ, ದೇವರು ಮತ್ತು ತಮ್ಮ ಸಹಪಾಠಿಗಳನ್ನು ಗೌರವಿಸುವ ತತ್ವಗಳಿಗೆ ಮಕ್ಕಳು ಅಗೌರವ ತೋರಿಸುವುದಕ್ಕೆ ಬದಲಾಗಿ ಅವರು ಕಷ್ಟಪಡುವುದು ಅಥವಾ ಸಾಯುವುದು ಎಷ್ಟೋ ಒಳ್ಳೆಯದು.KanCCh 210.4