Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಸತ್ಯವೇದ ಅಧ್ಯಯನದ ಪ್ರೀತಿಯು ಸಹಜವಾಗಿಯೇ ಬರುವಂತದ್ದಲ್ಲ

    ದೊಡ್ಡವರು ಚಿಕ್ಕವರೆಲ್ಲರೂ ಸತ್ಯವೇದವನ್ನು ನಿರ್ಲಕ್ಷಿಸುತ್ತಾರೆ. ಅದರ ಅಧ್ಯಯನವನ್ನು ತಮ್ಮ ಜೀವನದ ನಿಯಮವನ್ನಾಗಿ ಮಾಡಿಕೊಳ್ಳುವುದಿಲ್ಲ. ಅದರಲ್ಲಿಯೂ ಯೌವನಸ್ಥರು ಸತ್ಯವೇದವನ್ನು ಅಲಕ್ಷಿಸುವುದರಲ್ಲಿ ತಪ್ಪಿತಸ್ಥರಾಗಿದ್ದಾರೆ. ಅವರಲ್ಲಿ ಅನೇಕರಿಗೆ ಇತರ ಪುಸ್ತಕಗಳನ್ನು ಓದುವುದಕ್ಕೆ ಸಮಯವಿದೆ. ಆದರೆ ನಿತ್ಯಜೀವದ ಮಾರ್ಗತೋರಿಸುವ ಸತ್ಯವೇದವನ್ನು ಅವರು ಪ್ರತಿದಿನವೂ ಅಧ್ಯಯನ ಮಾಡುವುದಿಲ್ಲ. ಕೆಲಸಕ್ಕೆ ಬಾರದ ಕತೆಗಳನ್ನು ಗಮನವಿಟ್ಟು ಓದುತ್ತಾರೆ, ಆದರೆ ದೇವರವಾಕ್ಯವನ್ನು ನಿರ್ಲಕ್ಷಿಸುತ್ತಾರೆ. ಆದರೆಇದು ನಮ್ಮ ಉನ್ನತವಾದ, ಪರಿಶುದ್ಧ ಜೀವನಕ್ಕೆ ದಾರಿದೀಪವಾಗಿದೆ. ಯೌವನಸ್ಥರಮನಸ್ಸು ಇತರ ಕಾಲ್ಪನಿಕ ಕತೆಗಳನ್ನು ಓದುವುದರಿಂದ ತಪ್ಪು ದಾರಿ ಹಿಡಿಯುತ್ತದೆ.ಇಲ್ಲದಿದ್ದಲ್ಲಿ ಸತ್ಯವೇದವು ತಾವು ಓದಿದ ಅತ್ಯಂತ ಆಸಕ್ತಿಕರವಾದ ಪುಸ್ತಕವೆಂದು ಅವರುಹೇಳುತ್ತಾರೆ.KanCCh 78.3

    ಪ್ರವಾದಿನಿಯಾದ ಶ್ರೀಮತಿ ವೈಟಮ್ಮನವರ ಪುಸ್ತಕಗಳ ಮೂಲಕ ಅಡ್ವೆಂಟಿಸ್ಟರಾದ ನಮಗೆ ಹೆಚ್ಚಿನ ಬೆಳಕು ಕೊಡಲ್ಪಟ್ಟಿದೆ. ಆದುದರಿಂದ ನಮ್ಮ ಅಭ್ಯಾಸಗಳು, ನಡೆ ನುಡಿ, ನಮ್ಮ ದಿನನಿತ್ಯದ ಜೀವನ ಹಾಗೂ ಇತರರೊಂದಿಗಿನ ಒಡನಾಟದಲ್ಲಿ ಉನ್ನತವಾಗಿರಬೇಕು. ಸತ್ಯವೇದವು ನಮಗೆ ಮಾರ್ಗದರ್ಶಕವಾಗಿದೆ ಎಂದು ಮನೆಯಲ್ಲಿ ಅದಕ್ಕೆ ಗೌರವಸ್ಥಾನ ಕೊಡಬೇಕು. ನಮ್ಮೆಲ್ಲಾ ಕಷ್ಟದ ಸಮಯದಲ್ಲಿ ಅದು ಸಲಹೆಗಾರನಾಗಿಯೂ ಹಾಗೂ ಪ್ರತಿಯೊಂದು ಅಭ್ಯಾಸದಲ್ಲಿ ಮಾನದಂಡವಾಗಿಯೂ ಇದೆಯೆಂದು ಪರಿಗಣಿಸಬೇಕು. ದೇವರಸತ್ಯ ಮತ್ತು ನೀತಿಯವಿವೇಕವು ನಮ್ಮ ಕುಟುಂಬದಲ್ಲಿ ಪ್ರಮುಖ ಸ್ಥಾನ ಹೊಂದಿರದಿದ್ದಲ್ಲಿ, ನಾವೂ ಎಂದಿಗೂ ಸಹ ಆತ್ಮೀಕವಾಗಿ ಬೆಳವಣಿಗೆ ಹೊಂದಲಾರದೆಂಬುದನ್ನು ಅಡ್ವೆಂಟಿಸ್ಟ್ ಸಹೋದರ, ಸಹೋದರಿಯರು ಗಮನಿಸಬೇಕೆಂದು ಶ್ರೀಮತಿವೈಟಮ್ಮನವರು ಎಚ್ಚರಿಸುತ್ತಾರೆ. ದೇವರಸೇವೆಯು ಒಂದು ಭಾರವೆಂದು ಪರಿಗಣಿಸುವ ಸೋಮಾರಿತನದ ಅಭ್ಯಾಸವನ್ನು ಬಿಡಲು ತಂದೆ-ತಾಯಿಯರು ಎಲ್ಲಾ ಪ್ರಯತ್ನ ಮಾಡಬೇಕು. ಸತ್ಯದ ಬಲವು ಕುಟುಂಬವನ್ನು ಪರಿಶುದ್ಧಗೊಳಿಸುವ ಸಾಧನವಾಗಿದೆ.KanCCh 79.1

    ಮಕ್ಕಳಿಗೆ ಚಿಕ್ಕಂದಿನಿಂದಲೇ ದೇವರಾಜ್ಞೆಗಳು ಹಾಗೂ ನಮ್ಮ ವಿಮೋಚಕನಾದ ಯೇಸುಕ್ರಿಸ್ತನ ಮೇಲಣ ನಂಬಿಕೆಯು ಪಾಪದ ಕಳಂಕವನ್ನು ಶುದ್ಧಿಗೊಳಿಸುತ್ತದೆಂದು ತಿಳಿಸಿಹೇಳಬೇಕು. ಈ ನಂಬಿಕೆಯನ್ನು ಪ್ರತಿದಿನವೂ ಉದಾಹರಣೆಗಳು ಮತ್ತು ಆಜ್ಞೆಗಳ ಮೂಲಕ ಬೋಧಿಸಬೇಕು.KanCCh 79.2