Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಅಂತ್ಯವು ಸಮೀಪವಾಗಿದೆ

    ಕ್ರಿಸ್ತನ ಎರಡನೇಬರೋಣವು ಇನ್ನು ಹೆಚ್ಚು ತಡವಾಗುವುದಿಲ್ಲ. ಇದು ನಮ್ಮ ಪ್ರತಿಯೊಂದು ಸಂದೇಶದಲ್ಲಿಯೂ ಪ್ರಾಮುಖ್ಯವಾದ ವಿಷಯವಾಗಿರಬೇಕು.KanCCh 441.3

    ದೇವರ ಪರಿಶುದ್ಧಾತ್ಮನು ಈಗ ಲೋಕದಿಂದ ಹಿಂತೆಗೆಯಲ್ಪಡುತ್ತಿದ್ದಾನೆ. ಚಂಡಮಾರುತ, ಸುನಾಮಿ ಮತ್ತು ಗುಡುಗು, ಮಿಂಚು, ಸಿಡಿಲು, ಮಳೆ, ಹಿಮಪಾತ ಅಥವಾ ಆಲಿಕಲ್ಲುಗಳ ಸುರಿತದಿಂದ ಕೂಡಿದ ಬಿರುಗಾಳಿ, ಜಲಪ್ರವಾಹ, ಬೆಂಕಿ ಅನಾಹುತ, ಸಮುದ್ರ ಮತ್ತು ಭೂಮಿಯಲ್ಲಿ ನಡೆಯುತ್ತಿರುವ ವಿಪತ್ತುಗಳು, ನೈಸರ್ಗಿಕ ವಿಕೋಪ ಇವೆಲ್ಲವೂ ಒಂದಾದ ಮೇಲೊಂದರಂತೆ ಸಂಭವಿಸುತ್ತಲೇ ಇವೆ. ವಿಜ್ಞಾನವು ಇವುಗಳಿಗೆ ಕಾರಣ ಕೊಡಲು ಪ್ರಯತ್ನಿಸುತ್ತಿದೆ. ದೇವಕುಮಾರನ ಬರೋಣದ ಸೂಚನೆಗಳು ನಮ್ಮ ಕಣ್ಣುಮುಂದೆಯೇ ಸಂಭವಿಸುತ್ತಿವೆ. ಆದರೆ ಇವು ಕ್ರಿಸ್ತನಬರೋಣದ ಸೂಚನೆಗಳು ಎಂಬ ನಿಜವಾದ ಕಾರಣವನ್ನು ನಿರಾಕರಿಸಿ, ಇವೆಲ್ಲವೂ ನೈಸರ್ಗಿಕ ವಿಕೋಪಗಳು ಎಂಬ ಬೇರೆ ಕಾರಣವೆಂದು ಪ್ರಚಾರ ಪಡಿಸಲಾಗುತ್ತಿದೆ. ದೇವರ ಮಕ್ಕಳ ಹಣೆಯ ಮೇಲೆ ಮುದ್ರೆ ಒತ್ತುವವರೆಗೆ, ದೇವದೂತರು ಭೂಮಿಯಮೇಲಾಗಲಿ, ಸಮುದ್ರದಮೇಲಾಗಲಿ... ಗಾಳಿ ಬೀಸದಂತೆ ಭೂಮಿಯ ಚತುರ್ದಿಕ್ಕುಗಳ ಗಾಳಿಗಳನ್ನು ಹಿಡಿದಿರುವುದನ್ನು ಲೋಕದ ಜನರು ಗ್ರಹಿಸಿಕೊಳ್ಳಲಾರರು (ಪ್ರಕಟನೆ 7:1-3). ಆದರೆ ದೇವರು ತನ್ನ ಈ ದೇವದೂತರಿಗೆ ಗಾಳಿಬೀಸುವಂತೆ ಅದನ್ನು ಬಿಡಿ ಎಂದು ಆಜ್ಞಾಪಿಸಿದಾಗ, ಯಾರಿಂದಲೂ ವರ್ಣಿಸಲಾಗದಂತ ಭಯಂಕರವಾದ ಸಂಘರ್ಷವು ಆರಂಭವಾಗುತ್ತದೆ.KanCCh 441.4

    ದೇವರಉದ್ದೇಶಗಳು, ನಾಶವಾಗಲಿರುವ ಈ ಲೋಕಕ್ಕೆ ಬರುವ ನ್ಯಾಯತೀರ್ಪುಗಳ ಬಗ್ಗೆ ನಮ್ಮ ಮನೋಭಾವನೆ ಏನಾಗಿದೆ ಎಂಬುದನ್ನು ನಾವುನೋಡುವಾಗ ನಮ್ಮ ಹಾಗೂ ಇತರಜನರ ರಕ್ಷಣೆಯ ವಿಷಯದಲ್ಲಿ ನಾವು ಭಯದಿಂದ ನಡುಗಬೇಕಾಗಿದೆ. ಹೃದಯಾಂತರಾಳದ ಪ್ರಾಮಾಣಿಕವಾದ ಪ್ರಾರ್ಥನೆ ಪರಲೋಕಕ್ಕೆ ಹೋಗುವುದು, ನಮ್ಮ ಆತ್ಮೀಕಕುರುಡತನ ಹಾಗೂ ಧರ್ಮಭ್ರಷ್ಟತೆಯಿಂದ ತಿರುಗಿ ಪಾಪಕ್ಕೆಬೀಳದಂತೆ ನಾವು ಎಚ್ಚರಿಕೆವಹಿಸಿ ಪಶ್ಚಾತ್ತಾಪಪಟ್ಟು ದೇವರಮುಂದೆ ಕಣ್ಣೀರಿಡುತ್ತೇವೆ.KanCCh 442.1