Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಅಧ್ಯಾಯ-54 — ಕ್ರೈಸ್ತರಲ್ಲದವರೊಂದಿಗೆ ನಮ್ಮ ಸಂಬಂಧ

    ಕ್ರೈಸ್ತರಾದ ನಾವು ಈ ಲೋಕದೊಂದಿಗೂ, ಇಲ್ಲಿನ ಜನರೊಂದಿಗೂ ಯಾವುದೇಐಕ್ಯತೆಹೊಂದಿರಬಾರದೇ? ಎಂಬ ಪ್ರಶ್ನೆಯನ್ನು ನೀವು ಕೇಳಬಹುದು. ಈ ವಿಷಯದಲ್ಲಿಕರ್ತನ ವಾಕ್ಯವೇ ನಮಗೆ ಮಾರ್ಗದರ್ಶನವಾಗಿದೆ. ದೇವರನ್ನು ನಂಬದವರು ಮತ್ತುಅವಿಶ್ವಾಸಿಗಳೊಂದಿಗೆ ನಾವು ಸೇರಬಾರದೆಂದು ಸತ್ಯವೇದವು ತಿಳಿಸುತ್ತವೆ. ಅವರಿಂದನಾವು ಹೊರಬಂದು ಪ್ರತ್ಯೇಕವಾಗಿರಬೇಕು. ಅವರ ಕಾರ್ಯಯೋಜನೆಯಲ್ಲಿ ನಾವುಎಂದಿಗೂ, ಯಾವ ಕಾರಣದಿಂದಲೂ ಅವರೊಂದಿಗೆ ಸಂಬಂಧ ಹೊಂದಬಾರದು.ಆದರೆ ನಾವು ಯಾರೊಂದಿಗೂ ಬೆರೆಯದೆ ಏಕಾಂತವಾಗಿರಬಾರದು. ಬದಲಾಗಿ ಲೌಕಿಕಜೀವನದಲ್ಲಿ ಆಸಕ್ತಿಯಿರುವವರಿಗೂ ಸಾಧ್ಯವಾದಷ್ಟು ಒಳ್ಳೆಯದನ್ನು ನಾವು ಮಾಡಬೇಕು.KanCCh 391.1

    ಈ ವಿಷಯದಲ್ಲಿ ಕ್ರಿಸ್ತನು ನಮಗೆ ಮಾದರಿ ತೋರಿಸಿದ್ದಾನೆ. ಪಾಪಿಗಳು ಮತ್ತುಸುಂಕದವರೊಂದಿಗೆ ಊಟಮಾಡಲು ಕರೆದಾಗ, ಆತನು ಅದನ್ನು ನಿರಾಕರಿಸಲಿಲ್ಲ.ಅವರೊಂದಿಗೆ ಹೊಕ್ಕುಬಳಕೆ ಮಾಡದೆ, ಬೇರೆಯಾವ ರೀತಿಯಿಂದಲೂ ಅವರಿಗೆಸುವಾರ್ತೆಸಾರಲು ಆಗುವುದಿಲ್ಲ. ಅವರೊಂದಿಗೆ ಸಂಭಾಷಿಸಿದ ಪ್ರತಿಯೊಂದುಸಮಯದಲ್ಲಿಯೂ ಕ್ರಿಸ್ತನು ಪರಲೋಕದ ಶಾಶ್ವತವಾದ ವಿಷಯಗಳ ಬಗ್ಗೆ ಅವರಗಮನಸೆಳೆದನು. “ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ; ಹೀಗಾದರೆ ಅವರುನಿಮ್ಮ ಒಳ್ಳೇಕ್ರಿಯೆಗಳನ್ನು ನೋಡಿ ಪರಲೋಕದಲ್ಲಿರುವ ನಿಮ್ಮ ತಂದೆಯನ್ನುಕೊಂಡಾಡುವರು” ಎಂದು ಕ್ರಿಸ್ತನು ನಮಗೆ ಕಟ್ಟಪ್ಪಣೆ ಮಾಡಿದ್ದಾನೆ (ಮತ್ತಾಯ 5:16).KanCCh 391.2

    ಅನ್ಯಜನರ ಪ್ರಭಾವವನ್ನು ಎದುರಿಸುವಷ್ಟು ನಾವು ಆತ್ಮೀಕವಾಗಿ ದೃಢವಾಗಿದ್ದಲ್ಲಿಹಾಗೂ ಅವರನ್ನುಕ್ರಿಸ್ತನ ಮಾರ್ಗಕ್ಕೆ ತರಬೇಕೆಂಬ ಉದ್ದೇಶದಿಂದ ಅವರೊಂದಿಗೆಸೇರುವುದರಿಂದ ನಮಗೆ ಯಾವುದೇ ತೊಂದರೆಯಾಗದು. ಪಾಪದ ಕಾರಣದಿಂದದೇವರಿಂದ ದೂರವಾಗಿದ್ದ ಈ ಲೋಕವನ್ನು ರಕ್ಷಿಸಬೇಕೆಂದೂ ಹಾಗೂ ಪಾಪಿಯಾದಮಾನವರನ್ನು ಆದಿಯೂ, ಅಂತ್ಯವೂ ಇಲ್ಲದ ದೇವರೊಂದಿಗೆ ಒಂದು ಮಾಡಬೇಕೆಂಬಉದ್ದೇಶದಿಂದ ಕ್ರಿಸ್ತನು ಇಲ್ಲಿಗೆ ಬಂದನು. ಆತನ ಅನುಯಾಯಿಗಳು ಬೆಳಕಿನ ಸಾಧನವಾಗಿರಬೇಕು, ದೇವರೊಂದಿಗೆ ಸಂಪರ್ಕ ಹೊಂದಿರುವ ಅವರು ಕತ್ತಲೆಯಲ್ಲಿಯೂಹಾಗೂತಪ್ಪಾದ ಮಾರ್ಗದಲ್ಲಿಯೂ ಇರುವವರಿಗೆ ಪರಲೋಕದಿಂದ ಶ್ರೇಷ್ಟವಾದಆಶೀರ್ವಾದ ದೊರಕುವುದೆಂದು ಮನವರಿಕೆ ಮಾಡಬೇಕು. ಹನೋಕನು ಜೀವಿಸಿದ್ದಾಗ,ಆ ಕಾಲದ ಜನರ ದೋಷಫಲದಿಂದ ಅವನು ಕಳಂಕಿತನಾಗಲಿಲ್ಲ. ಅಂದಮೇಲೆಇಂದು ನಾವೇಕೆ ಲೋಕದ ಜನರ ಪಾಪದ ದೆಸೆಯಿಂದ ಕಳಂಕಿತರಾಗಬೇಕು? ಆದರೆನಾವು ನಮ್ಮ ಗುರುವಾದ ಕ್ರಿಸ್ತನಂತೆ ಬಾಧೆ ಕಷ್ಟದಲ್ಲಿರುವವರಿಗೆ ಅನುಕಂಪ ತೋರಿಸಬೇಕು; ವಿಧವೆಯರು, ದಿಕ್ಕಿಲ್ಲದವರು, ನಿರ್ಗತಿಕರು, ಅನಾಥರು ಮುಂತಾದ ನತದೃಷ್ಟರಿಗೆದಯೆ ತೋರಿಸಬೇಕು. ಅಲ್ಲದೆ ಹತಾಶೆಯಿಂದ ಕಷ್ಟದಲ್ಲಿರುವವರಿಗೆ ಉದಾರತೆ ತೋರಿಸಿಅವರ ಅಗತ್ಯಗಳನ್ನು ಪೂರೈಸಬೇಕು.KanCCh 391.3

    ಸೆವೆಂತ್ ಡೇ ಅಡ್ವೆಂಟಿಸ್ಪರಾದ ನಾವು ಮೂರನೇ ದೂತನ ವರ್ತಮಾನದ ನಿಜಅರ್ಥವನ್ನುಮನವರಿಕೆ ಮಾಡಿಕೊಳ್ಳಬೇಕು. ಏಳನೇ ದಿನದ ನಿಜ ಸಬ್ಬತ್ತನ್ನು ಕೈಕೊಂಡುನಡೆಯುವುದು ದೇವರನ್ನು ಸೇವಿಸುವವರನ್ನು ಸೇವಿಸದಿರುವವರಿಂದ ಪ್ರತ್ಯೇಕಿಸುವಒಂದು ಗುರುತಾಗಿದೆ ಎಂಬುದನ್ನು ನೀವು ಅರಿಯಬೇಕೆಂದು ಶ್ರೀಮತಿವೈಟಮ್ಮನವರುಅಡ್ವೆಂಟಿಸ್ಟ್ ಕ್ರೈಸ್ತರಾದ ನಮಗೆ ತಿಳಿಸುತ್ತಾರೆ.KanCCh 392.1

    ಕ್ರೈಸ್ತರಾದ ನಾವು ಪರಿಶುದ್ಧ ಜನಾಂಗವಾಗುವುದಕ್ಕಾಗಿ ಕರೆಯಲ್ಪಟ್ಟಿದ್ದೇವೆ. ನಮ್ಮನಂಬಿಕೆಯ ವಿಶೇಷ ಗುಣಲಕ್ಷಣಗಳನ್ನು ಉಳಿಸಿಕೊಳ್ಳುವುದೋ ಅಥವಾ ಬೇಡವೋ?ಎಂಬುದು ಅಷ್ಟೊಂದು ಪ್ರಾಮುಖ್ಯವಲ್ಲವೆಂಬ ಭಾವನೆ ಇತರರಲ್ಲಿ ಬಾರದಂತೆ ನಾವುಬಹಳ ಎಚ್ಚರಿಕೆ ವಹಿಸಬೇಕು. ಹಿಂದಿಗಿಂತಲೂ ಹೆಚ್ಚಾಗಿ ಈಗ ನಾವು ಸತ್ಯ ಹಾಗೂನೀತಿಗೋಸ್ಕರ ದೃಢವಾಗಿ ನಿಲ್ಲಬೇಕಾದಗಂಭೀರವಾದ ಜವಾಬ್ದಾರಿ ನಮ್ಮ ಮೇಲಿದೆ.ದೇವರಾಜ್ಞೆಗಳನ್ನು ಅನುಸರಿಸುವ ಮತ್ತುಅನುಸರಿಸದವರ ನಡುವಣ ವ್ಯತ್ಯಾಸವನ್ನುತಪ್ಪಿಲ್ಲದಂತೆ ಬಹಳ ಸ್ಪಷ್ಟವಾದ ರೀತಿಯಲ್ಲಿ ತಿಳಿಸಬೇಕು.KanCCh 392.2

    ನಮ್ಮ ನಂಬಿಕೆ ಹಾಗೂ ಧರ್ಮವು ನಮ್ಮ ಜೀವನದಲ್ಲಿ ಪ್ರಾಮುಖ್ಯವಾಗಿಲ್ಲವೆಂಬಭಾವನೆಯನ್ನು ಇತರರಲ್ಲಿ ಹುಟ್ಟಿಸುವುದು ನಾವು ದೇವರಿಗೆ ಮಾಡುವ ದೊಡ್ಡಅಗೌರವವಾಗಿದೆ. ಹೀಗಾಗಿ ನಾವು ನಮ್ಮ ಜೀವದಾಯಕವಾದ ಆತನ ಆಜ್ಞೆಗಳಿಂದದೂರವಾಗುತ್ತೇವೆ. ಅಲ್ಲದೆ ಆತನು ನಮ್ಮ ದೇವರೂ ಹಾಗೂ ನಾವು ಆತನು ಪಾಲಿಸುವಪ್ರಜೆಯೂ ಆಗಿದ್ದೇವೆಂಬುದನ್ನು ನಿರಾಕರಿಸಿದಂತಾಗುತ್ತದೆ.KanCCh 392.3

    ನಾವು ಆತ್ಮಸಾಕ್ಷಿಯಾಗಿಯೂ ಹಾಗೂ ನಿಷ್ಠೆಯಿಂದಲೂ ದೇವರನ್ನು ಗೌರವಿಸಬೇಕು.ಆತನ ಆಶೀರ್ವಾದಗಳನ್ನು ನಾವು ಪಡೆದುಕೊಳ್ಳುವಂತೆ ಆತನೊಂದಿಗೆ ಒಡಂಬಡಿಕೆಯಸಂಬಂಧವನ್ನುಉಳಿಸಿಕೊಳ್ಳುವಂತೆ ಶ್ರದ್ಧೆಯಿಂದ ಎಲ್ಲಾ ಅವಕಾಶಗಳನ್ನುಉಪಯೋಗಿಸಿಕೊಳ್ಳಬೇಕು.KanCCh 392.4